ಮತ್ತೆ 60,000 ಗಡಿ ದಾಟಿದ ಮುಂಬಯಿ ಷೇರುಪೇಟೆ ಸೆನ್ಸೆಕ್ಸ್, 18,000 ಸನಿಹಕ್ಕೆ ನಿಫ್ಟಿ
ಇನ್ಫೋಸಿಸ್, ಎಚ್ ಸಿಎಲ್ ಟೆಕ್, ವಿಪ್ರೋ, ಪವರ್ ಗ್ರಿಡ್ ಷೇರುಗಳು ನಷ್ಟ ಕಂಡಿದೆ.
Team Udayavani, Jan 5, 2022, 5:33 PM IST
ಮುಂಬಯಿ: ಜಾಗತಿಕ ಷೇರುಮಾರುಕಟ್ಟೆಯ ಭರ್ಜರಿ ವಹಿವಾಟಿನ ಪರಿಣಾಮ ಬುಧವಾರ (ಜನವರಿ 05) ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 370 ಅಂಕಗಳಷ್ಟು ಏರಿಕೆಯೊಂದಿಗೆ ಮತ್ತೆ 60,000 ಅಂಕಗಳ ಗಡಿ ದಾಟುವುದರೊಂದಿಗೆ ದಿನಾಂತ್ಯದ ವಹಿವಾಟು ಮುಕ್ತಾಯಗೊಂಡಿದೆ.
ಇದನ್ನೂ ಓದಿ:ಜೀವಂತವಾಗಿ ಬಂದಿದ್ದೇನೆ…ನಿಮ್ಮ ಸಿಎಂಗೆ ಧನ್ಯವಾದ ತಿಳಿಸಿ-ಮೋದಿ;ಪಂಜಾಬ್ ನಲ್ಲಿ ನಡೆದಿದ್ದೇನು?
ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 367.22 ಅಂಕಗಳಷ್ಟು ಏರಿಕೆಯೊಂದಿಗೆ 60,223.15 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಮುಕ್ತಾಯಗೊಂಡಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 120 ಅಂಕ ಏರಿಕೆಯಾಗಿದ್ದು, 17,925.25 ಅಂಕಗಳ ಮಟ್ಟ ತಲುಪಿದೆ.
ಬಜಾಜ್ ಫಿನ್ ಸರ್ವ್, ಬಜಾಜ್ ಫೈನಾನ್ಸ್, ಕೋಟಕ್ ಬ್ಯಾಂಕ್, ಆ್ಯಕ್ಸಿಸ್ ಬ್ಯಾಂಕ್, ಟಾಟಾ ಸ್ಟೀಲ್, ಎಚ್ ಡಿಎಫ್ ಸಿ ಬ್ಯಾಂಕ್, ಏಷ್ಯನ್ ಪೇಂಟ್ಸ್, ಐಸಿಐಸಿಐ ಬ್ಯಾಂಕ್ ಷೇರುಗಳು ಲಾಭಗಳಿಸಿದೆ. ಮತ್ತೊಂದೆಡೆ ಟೆಕ್ ಮಹೀಂದ್ರ, ಇನ್ಫೋಸಿಸ್, ಎಚ್ ಸಿಎಲ್ ಟೆಕ್, ವಿಪ್ರೋ, ಪವರ್ ಗ್ರಿಡ್ ಷೇರುಗಳು ನಷ್ಟ ಕಂಡಿದೆ.
ಶಾಂಘೈ, ಹಾಂಗ್ ಕಾಂಗ್, ಸಿಯೋಲ್ ಷೇರುಮಾರುಕಟ್ಟೆ ವಹಿವಾಟು ನಷ್ಟ ಕಂಡಿದ್ದು, ಟೋಕಿಯೋ ಷೇರುಪೇಟೆ ಸೆನ್ಸೆಕ್ಸ್ ಏರಿಕೆಯ ಹಾದಿಯಲ್ಲಿದೆ. ಯುರೋಪ್ ಮಾರುಕಟ್ಟೆಯಲ್ಲಿಯೂ ಧನಾತ್ಮಕ ವಹಿವಾಟು ನಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
215 ಉತ್ಪನ್ನಗಳ ತೆರಿಗೆ ಬದಲಿಲ್ಲ? ಚಂಡೀಗಢದಲ್ಲಿ ನಡೆವ ಸಭೆಯಲ್ಲಿ ಚರ್ಚೆ ಸಾಧ್ಯತೆ
ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 462 ಅಂಕ ಜಿಗಿತ; ವಾರಾಂತ್ಯದ ವಹಿವಾಟು ಅಂತ್ಯ
ಆರ್ಥಿಕ ಹಿಂಜರಿಕೆ ಭೀತಿ: ಷೇರುಪೇಟೆ ಸೆನ್ಸೆಕ್ಸ್ 709 ಅಂಕ ಕುಸಿತ; ಲಾಭ ಕಂಡ ಷೇರು ಯಾವುದು
400ಕ್ಕೂ ಅಧಿಕ ಅಂಕ ಕುಸಿತ ಕಂಡ ಬಾಂಬೆ ಷೇರುಪೇಟೆ ಸೆನ್ಸೆಕ್ಸ್; ನಿಫ್ಟಿಯೂ ಇಳಿಕೆ
ಸಾವಿರದ ಸನಿಹಕ್ಕೆ ಏರಿಕೆ ಕಂಡ ಬಾಂಬೆ ಷೇರುಪೇಟೆ ಸೆನ್ಸೆಕ್ಸ್; ಲಾಭ ಗಳಿಸಿದ ಷೇರು ಯಾವುದು