ಆಸೀಸ್ ಸರಣಿಗೆ ಸೂರ್ಯ ಕುಮಾರ್ ಬೇಕಿತ್ತು: ಬ್ರಿಯಾನ್ ಲಾರ
Team Udayavani, Nov 23, 2020, 11:39 PM IST
ಹೊಸದಿಲ್ಲಿ : ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಗಮನ ಸೆಳೆದ ಸೂರ್ಯಕುಮಾರ್ ಯಾದವ್ ಆಸೀಸ್ ವಿರುದ್ಧದ ಸರಣಿಗೆ ಆಯ್ಕೆಯಾಗಬೇಕಿತ್ತು ಎಂದು ವಿಂಡೀಸ್ ದಿಗ್ಗಜ ಬ್ರಿಯಾನ್ ಲಾರ ಅಭಿಪ್ರಾಯಪಟ್ಟಿದ್ದಾರೆ.
ಸೂರ್ಯ ಈ ಬಾರಿ ಆಸ್ಟ್ರೆಲಿಯ ವಿರುದ್ಧದ ಚುಟುಕು ಸರಣಿಗೆ ಆಯ್ಕೆಯಾಗಬಹುದು ಎಂಬ ನಿರೀಕ್ಷೆ ಹೆಚ್ಚಿನ ಕ್ರಿಕೆಟ್ ಪ್ರೇಮಿಗಳದ್ದಾಗಿತ್ತು. ಆದರೆ ಅವರು ಆಯ್ಕೆಯಾಗಲಿಲ್ಲ. 30ರ ಹರೆಯದ ಮುಂಬೈ ಬ್ಯಾಟ್ಸ್ ಮನ್ ಸೂರ್ಯಕುಮಾರ್ ಓರ್ವ ಅತ್ಯುತ್ತಮ ಆಟಗಾರ ಆತನಲ್ಲಿ ಎಲ್ಲ ಅರ್ಹತೆಗಳೂ ಇದೆ. ಆತ ಭಾರತೀಯ ತಂಡದ ಕರೆಗೆ ಸಂಪೂರ್ಣವಾಗಿ ಅರ್ಹನಾಗಿದ್ದಾನೆ ಎಂದು ಲಾರಾ ಹೇಳಿದ್ದಾರೆ.
“ಸೂರ್ಯಕುಮಾರ್ ಖಂಡಿತವಾಗಿಯೂ ಶಾಸ್ತ್ರೀಯ ಆಟಗಾರ. ಯಾದವ್ ಐಪಿಎಲ್‌ನಲ್ಲಿ ಗಳಿಸಿದ ರನ್‌ಗಳನ್ನು ಪರಿಗಣಿಸಿ ಈ ಮಾತನ್ನು ಹೇಳುತ್ತಿಲ್ಲ ಆತನಲ್ಲಿನ ಕೌಶಲ, ಒತ್ತಡದ ಸಂದರ್ಭದಲ್ಲಿ ಆತನ ಸಾಮರ್ಥ್ಯ ಇದನ್ನು ಗಮನಿಸಿ ಹೇಳುತ್ತಿದ್ದೇನೆ.
ಮುಂಬೈ ಇಂಡಿಯನ್ಸ್ ಪರವಾಗಿ ಅದ್ಭುತವಾದ ಪ್ರದರ್ಶನ ನೀಡಿದ್ದಾರೆ. ಆತ ಹೆಚ್ಚಾಗಿ ಬ್ಯಾಟಿಂಗಿಗೆ ಇಳಿದಾಗ ತಂಡ ಯಾವಾಗಲೂ ಒತ್ತಡದಲ್ಲಿರುತ್ತಿತ್ತು. ಅದನ್ನು ಸಮರ್ಥವಾಗಿ ನಿಭಾಯಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ’ ಎಂದು ಲಾರಾ ಹೇಳಿದ್ದಾರೆ.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444