ಅರ್ಸ್ಲಾನ್ ಗೋನಿ ಜತೆ ಮತ್ತೆ ಕಾಣಿಸಿಕೊಂಡ ಹೃತಿಕ್ ಮಾಜಿ ಪತ್ನಿ
Team Udayavani, Dec 5, 2021, 11:56 AM IST
ಹೊಸದಿಲ್ಲಿ: ಬಾಲಿವುಡ್ ನಟ ಹೃತಿಕ್ ರೋಷನ್ ಅವರ ಮಾಜಿ ಪತ್ನಿ ಇಂಟೀರಿಯರ್ ಡಿಸೈನರ್ ಸುಸೇನ್ ಖಾನ್ ಅವರು ಗೋವಾದಿಂದ ವಾಪಸಾಗುತ್ತಿದ್ದಂತೆ ಮುಂಬೈ ವಿಮಾನ ನಿಲ್ದಾಣದ ಹೊರಗೆ ಹಲವರ ಗಮನ ಸೆಳೆದು ಸುದಿಯಾಗಿದ್ದಾರೆ.
ವದಂತಿಗೆ ಕಾರಣವಾಗಿರುವ ಸುಸೇನ್ ಅವರ ಗೆಳೆಯ ನಟ ಅರ್ಸ್ಲಾನ್ ಗೋನಿ ಕೂಡ ವಿಮಾನ ನಿಲ್ದಾಣದಲ್ಲಿ ಒಂದೇ ವೇಳೆ ಕಾಣಿಸಿಕೊಂಡಿದ್ದು ಸುದ್ದಿಗಾರರಿಗೆ ಆಹಾರ ವಾಗಿದೆ.
ಇಬ್ಬರೂ ಪ್ರತ್ಯೇಕವಾಗಿ ನಿರ್ಗಮಿಸಿದ್ದಾರೆ. ಸುಸೇನ್ ಮತ್ತು ಆರ್ಸ್ಲಾನ್ ಇಬ್ಬರೂ ಕಪ್ಪು ಬಟ್ಟೆಯನ್ನು ಧರಿಸಿದ್ದರು.
ಸುಸೇನ್ ಅವರು ಅವಸರದಲ್ಲಿ ತನ್ನ ಕಾರಿನತ್ತ ವೇಗವಾಗಿ ನಡೆಯುತ್ತಾ, ಧನ್ಯವಾದ. ತುಂಬಾ ಚೆನ್ನಾಗಿದೆ” ಎಂದು ಹೇಳಿದಳು. ಮತ್ತೊಂದೆಡೆ, ಆರ್ಸ್ಲಾನ್ ಆರಾಮವಾಗಿ ಹೊರಬರುತ್ತಾ, ಮಾಸ್ಕ್ ತೆಗೆದು ಪೋಸ್ ನೀಡಿದರು. ಗೋವಾ ಪ್ರವಾಸದ ಬಗ್ಗೆ ಕೇಳಿದಾಗ ಅವರು ಯಾವುದೇ ಉತ್ತರ ನೀಡಲಿಲ್ಲ.
ಈ ಹಿಂದೆ, ಅನುಷ್ಕಾ ರಂಜನ್ ಮತ್ತು ಆದಿತ್ಯ ಸೀಲ್ ಅವರ ಮದುವೆಯಲ್ಲಿ ಸುಸೇನ್ ಮತ್ತು ಅರ್ಸ್ಲಾನ್ ಭಾಗವಹಿಸಿದ್ದರು. ಅವರು ಮತ್ತೆ ಜತೆಯಾಗಿ ಕಾಣಿಸಿಕೊಂಡಿರಲಿಲ್ಲ.
View this post on Instagram
ಆರ್ಸ್ಲಾನ್ ತನ್ನ ಇನ್ಸ್ಟಾಗ್ರಾಮ್ನಲ್ಲಿ ಸುಸೇನ್ ಜೊತೆಗಿನ ಫೋಟೋವನ್ನು ಪೋಸ್ಟ್ ಮಾಡಿದಾಗ ಇಬ್ಬರು ಡೇಟಿಂಗ್ ಮಾಡುತ್ತಿರುವ ಬಗ್ಗೆ ಸುದ್ದಿಯಾಗಿತ್ತು.
ಹೃತಿಕ್ ಅವರನ್ನು ಮದುವೆಯಾಗಿ ಹೃದಾನ್ ರೋಶನ್ ಮತ್ತು ಹ್ರೇಹಾನ್ ರೋಶನ್ ಎಂಬ ಇಬ್ಬರು ಮಕ್ಕಳನ್ನು ಪಡೆದಿದ್ದರು, ವಿಚ್ಛೇದನದ ಬಳಿಕವೂ, ಮಾಜಿ ದಂಪತಿಗಳು ಪರಸ್ಪರ ಉತ್ತಮ ಸಂಬಂಧವನ್ನು ಹೊಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Deepfake video ವಿರುದ್ಧ ನಟ ರಣ್ವೀರ್ ಸಿಂಗ್ ದೂರು
Ranveer Singh: ಮತಯಾಚನೆಯ ಡೀಪ್ ಫೇಕ್ ವಿಡಿಯೋ ವೈರಲ್; FIR ದಾಖಲಿಸಿದ ನಟ ರಣ್ವೀರ್