ಬಿಜೆಪಿಯವರು ನನ್ನಷ್ಟು ಬಾರಿ ವಿಧಾನಸಭೆಗೆ ಆಯ್ಕೆಯಾಗಿಲ್ಲ: ಮಲ್ಲಿಕಾರ್ಜುನ ಖರ್ಗೆ
Team Udayavani, Jun 12, 2020, 9:58 PM IST
ಬೆಂಗಳೂರು: ನಾನು ವಿಧಾನಸಭೆಗೆ ಆಯ್ಕೆಯಾದಷ್ಟು ಬಾರಿ ಬಿಜೆಪಿಯಲ್ಲಿ ಯಾರೂ ಆಯ್ಕೆಯಾಗಿಲ್ಲ.ಬಿಜೆಪಿಯವರು ನನ್ನಷ್ಟು ಸುದೀರ್ಘ ರಾಜಕಾರಣ ಮಾಡಲಿ ನೋಡೋಣ ಎಂದು ರಾಜ್ಯಸಭಾ ಕಾಂಗ್ರೆಸ್ ನೂತನ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಸವಾಲು ಹಾಕಿದ್ದಾರೆ.
ರಾಜ್ಯಸಭೆ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾದ ನಂತರ ಪ್ರಮಾಣ ಪತ್ರ ಪಡೆದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿಂಬಾಗಿಲಿನ ಮೂಲಕ ರಾಜ್ಯಸಭೆಗೆ ಪ್ರವೇಶಿಸಿದ್ದಾರೆ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ತಿರುಗೇಟು ನೀಡಿದ ಅವರು, ರಾಜ್ಯದ ದೇಶದ ಸಮಸ್ಯೆಗಳನ್ನು ಸಮರ್ಥವಾಗಿ ಸಂಸತ್ತಿನಲ್ಲಿ ಪ್ರಸ್ತಾಪಿಸುತ್ತೇನೆ. ಇದಕ್ಕೆ ಅವರ ಪಕ್ಷ ಅವಕಾಶ ನೀಡುತ್ತದೆಯೋ ಇಲ್ಲವೋ ಗೊತ್ತಿಲ್ಲ. ಅನಗತ್ಯವಾಗಿ ಒಬ್ಬರ ಮೇಲೊಬ್ಬರು ರಾಜಕಾರಣ ಮಾಡುವುದು ಬೇಡ ಎಂದು ಬಿಜೆಪಿ ನಾಯಕರಿಗೆ ಸಲಹೆ ನೀಡಿದರು.
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ನಂಬಿಕೆ ಇಟ್ಟು ರಾಜ್ಯಸಭೆಗೆ ಕಳುಹಿಸಿದ್ದಾರೆ. ಅವರಿಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುವುದಾಗಿ ಹೇಳಿದರು.