ಚಾಲನೆ ಪರವಾನಿಗೆ ಸಹಿತ ವಾಹನ ದಾಖಲೆ ಮಾನ್ಯತೆ ಮಾ. 31ರ ವರೆಗೆ ವಿಸ್ತರಣೆ
Team Udayavani, Dec 28, 2020, 2:15 AM IST
ಹೊಸದಿಲ್ಲಿ: ಚಾಲನೆ ಪರವಾನಿಗೆ ಸಹಿತ ವಾಹನಗಳಿಗೆ ಸಂಬಂಧಿಸಿದ ದಾಖಲೆಗಳ ಮಾನ್ಯತೆಯ ಅವಧಿಯನ್ನು 2021ರ ಮಾರ್ಚ್ ವರೆಗೆ ವಿಸ್ತರಿಸಲಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
2020ರ ಫೆ. 1ರಿಂದ ಮಾನ್ಯತೆಯ ಅವಧಿ ಮುಗಿದಿರುವ ದಾಖಲೆಗಳಿಗೆ ಮತ್ತು ಡಿ. 31ರ ವೇಳೆಗೆ ಅವಧಿ ಮುಗಿಯಲಿರುವ ವಾಹನ ಸಂಬಂಧಿ ದಾಖಲೆಗಳಿಗೆ ಇದು ಅನ್ವಯವಾಗಲಿದೆ. ಲಾಕ್ ಡೌನ್ ಕಾರಣ ವಾಹನ ಮಾಲಕರು ಅವಧಿ ಮುಗಿದಿದ್ದರೂ ಚಾಲನೆ ಪರವಾನಿಗೆ, ಫಿಟ್ನೆಸ್ ಸರ್ಟಿಫಿಕೆಟ್, ಪರ್ಮಿಟ್ ನವೀಕರಿಸಲು ಪರದಾಡುವಂತಾಗಿತ್ತು. ಹೀಗಾಗಿ ಸರಕಾರ ಅವುಗಳ ಮಾನ್ಯತೆಯನ್ನು ಎರಡನೇ ಬಾರಿ ವಿಸ್ತರಿಸಿದೆ. ಜನ ಜಂಗುಳಿಯಿಂದಾಗಿ ಸಾಂಕ್ರಾಮಿಕ ಪ್ರಸರಣದ ಅಪಾಯವಿದೆ ಎನ್ನುವ ಹಿನ್ನೆಲೆಯಲ್ಲಿ ಕೇಂದ್ರವು ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು