ಪಾಳು ಬಿದ್ದ ಮರಳು ದಾಸ್ತಾನು ಘಟಕ : ನಿರ್ವಹಣೆ ಕೊರತೆಯಿಂದ ಇದ್ದೂ ಇಲ್ಲವಾದ ಘಟಕ
Team Udayavani, Nov 25, 2020, 2:31 PM IST
ದೇವದುರ್ಗ: ತಾಲೂಕಿನ ಅಮರಾಪುರು ಕ್ರಾಸ್ ಹತ್ತಿರದಲ್ಲಿರುವ ಮರಳು ದಾಸ್ತಾನು ಘಟಕ ನಿರ್ವಹಣೆ ಕೊರತೆ ಹಿನ್ನೆಲೆ ಪಾಳು
ಬಿದ್ದಿದೆ. ಆದರೆ, ದಾಸ್ತಾನ ಘಟಕದಿಂದಲೇ ಮರಳು ಸಾಗಣೆ ಮಾಡಬೇಕು ಎಂಬ ನಿಯಮ ಪಾಲನೆ ಆಗದ ಹಿನ್ನೆಲೆಯಲ್ಲಿ ಕೃಷ್ಣಾ ನದಿಯಿಂದಲೇ ಅಕ್ರಮ ಮರಳು ಸಾಗಣೆ ದಂಧೆ ಎಗ್ಗಿಲ್ಲದೇ ಸಾಗಿದೆ.
ಆರ್‌ಟಿಐ ಕಾರ್ಯಕರ್ತಯೊಬ್ಬರು ಅಕ್ರಮ ಮರಳು ಸಾಗಣೆ ಕುರಿತು ಕೋರ್ಟ್‌ನಲ್ಲಿ ಪ್ರಕರಣ ದಾವೆ ಹೊಡಿದ ಹಿನ್ನೆಲೆ ಅಧಿಕೃತ
ರಾಯಲ್ಟಿ ಪಡೆದು ಮರಳು ಸಾಗಣಿಕೆಗೆ ನಿರ್ಬಂಧ ಹೇರಲಾಗಿದೆ. ಹೀಗಾಗಿ ಕೃಷ್ಣಾನದಿ ತೀರದ ವ್ಯಾಪ್ತಿಯಿಂದ ಟ್ರಾಕ್ಟರ್
ಮೂಲಕ ಅಕ್ರಮ ಮರಳು ಸಾಗಣೆ ಅವ್ಯಾಹತವಾಗಿದೆ.
ನಿಯಮ ಉಲ್ಲಂಘನೆ: ತಾಲೂಕಿನ ಹೇರುಂಡಿ, ನಿಲವಂಜಿ, ಲಿಂಗದಹಳ್ಳಿ ಗ್ರಾಮದ ಕೃಷ್ಣಾ ನದಿಯಿಂದ ಮರಳು ಸಾಗಣಿಕೆ ಮಾಡದೇ ಅಮರಾಪುರು ಕ್ರಾಸ್ ಹತ್ತಿರದ ಮರಳು ದಾಸ್ತಾನು ಘಟಕದಿಂದ ಪರವಾನಗಿ ಪಡೆದು ಮರಳು ಸಾಗಣೆ ಮಾಡಬೇಕು ಎಂದು ಜಿಲ್ಲಾಡಳಿತ ನಿಯಮ ಜಾರಿಗೆ ತರಲಾಗಿದೆ. ಹಿಂದಿನ ಜಿಲ್ಲಾಧಿಕಾರಿ ದಾಸ್ತಾನ ಘಟಕದಿಂದಲೇ ಮರಳು ಸಾಗಣೆ
ಮಾಡಬೇಕು ಎಂದು ಎಚ್ಚರಿಕೆ ನೀಡಿದರು.
ಬದಲಾದ ಅಧಿಕಾರಿಗಳ ನಡೆಯಿಂದಾಗಿ ಮರಳು ದಾಸ್ತಾನು ಘಟಕ ಕೇಳುವವರು ಇಲ್ಲದೇ ಕಾರಣ ಪಾಳು ಬಿದ್ದಿದೆ.
ಎಗ್ಗಿಲ್ಲದೇ ಮರಳು: ಅಕ್ರಮ ಮರಳು ಸಾಗಣೆ ಕುರಿತು ಆರ್‌ಟಿಐ ಕಾರ್ಯಕರ್ತಯೊಬ್ಬರು ಕೋರ್ಟ್‌ನಲ್ಲಿ ಪ್ರಕರಣ ದಾವೆ ಹೊಡಿದ ಹಿನ್ನೆಲೆ ಅಧಿಕೃತ ಮರಳು ಸಾಗಣಿಕೆ ಮಾಡಲು ರಾಯಲ್ಟಿ ಪರವಾನಿ ಬಂದ್ ಆಗಿದೆ. ಹೀಗಾಗಿ ಕೋಟ್ಯಂತರ ರೂ.
ವೆಚ್ಚದ ಅಭಿವೃದ್ಧಿ ಕಾಮಗಾರಿ, ಮನೆಗಳ ನಿರ್ಮಾಣಕ್ಕೆ ಮರಳು ಬೇಡಿಕೆ ಹೆಚ್ಚಿದೆ.
ನದಿತೀರದ ಗ್ರಾಮದಲ್ಲಿ ಎಲ್ಲೆಂದರಲ್ಲಿ ಜಮೀನಿನಲ್ಲಿ ಸಂಗ್ರಹಿಸಿದ ಅಕ್ರಮ ಮರಳು ಹಗಲು ರಾತ್ರಿ ಎನ್ನದೇ ಎಗ್ಗಿಲ್ಲದೇ ಸಾಗಣಿಕೆ
ನಡೆದಿದೆ.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಷ್ಟ್ರಪತಿ ಪೊಲೀಸ್ ಪದಕ
ಪದ್ಮ ಪ್ರಶಸ್ತಿ ಪ್ರಕಟ : ಬಿ.ಎಂ.ಹೆಗ್ಡೆ, ಎಸ್.ಪಿಬಿಗೆ ಪದ್ಮವಿಭೂಷಣ, ಕಂಬಾರರಿಗೆ ಪದ್ಮಭೂಷಣ
ಯಾವ ಖಾತೆ ಕೊಟ್ಟರೂ ಸಮರ್ಥವಾಗಿ ನಿಭಾಯಿಸಿ, ಯಶಸ್ಸು ಸಾಧಿಸಬೇಕು: ಡಿಸಿಎಂ ಅಶ್ವಥ್ನಾರಾಯಣ
ಹುಣಸೋಡು ಸ್ಫೋಟ ಪ್ರಕರಣ :ಕ್ರಷರ್ ಮಾಲೀಕ ಸೇರಿ ನಾಲ್ವರನ್ನು ಬಂಧಿಸಿದ ಪೊಲೀಸರು
ಮೇಲುಕೋಟೆ ವಜ್ರಾಂಗಿ ಆಭರಣ ಅವ್ಯವಹಾರ ಪ್ರಕರಣ: ಅರ್ಚಕ ನರಸರಾಜಭಟ್ ನೇಮಕಕ್ಕೆ ಹೈಕೋರ್ಟ್ ತಡೆ