ಬಿಗ್ ಬಾಸ್ ವಿಜೇತ, ನಟ ಸಿದ್ದಾರ್ಥ್ ಶುಕ್ಲಾ ಸಾವಿಗೂ ಮುನ್ನ ರಾತ್ರಿ ನಡೆದಿದ್ದೇನು?

ಸಿದ್ದಾರ್ಥ್ ಕುಟುಂಬ ಸದಸ್ಯರು ಹಾಗೂ ಪೊಲೀಸರು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ.

Team Udayavani, Sep 2, 2021, 4:48 PM IST

ಬಿಗ್ ಬಾಸ್ ವಿಜೇತ, ನಟ ಸಿದ್ದಾರ್ಥ್ ಶುಕ್ಲಾ ಸಾವಿಗೂ ಮುನ್ನ ರಾತ್ರಿ ನಡೆದಿದ್ದೇನು?

ಮುಂಬಯಿ:ಕಿರುತೆರೆ ಖ್ಯಾತ ನಟ, ಬಾಲಿಕಾ ವಧು ಧಾರವಾಹಿಯ ಮೂಲಕ ಜನಪ್ರಿಯತೆ ಗಳಿಸಿದ್ದ ಸಿದ್ದಾರ್ಥ್ ಶುಕ್ಲಾ ಗುರುವಾರ ಮುಂಬಯಿ ನಿವಾಸದಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಕರೆ ತರುವ ಮುನ್ನವೇ ಶುಕ್ಲಾ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದರು.

ಶುಕ್ಲಾ ಸಾವಿಗೂ ಮುನ್ನ ಮನೆಯಲ್ಲಿ ಏನಾಗಿತ್ತು?

ಕೆಲವು ವರದಿಗಳ ಪ್ರಕಾರ ಸಿದ್ದಾರ್ಥ್ ಶುಕ್ಲಾ ಮಲಗುವ ಮುನ್ನ ಕೆಲವೊಂದು ಔಷಧಗಳನ್ನು ಸೇವಿಸಿದ್ದರು. ಬಳಿಕ ಬೆಳಿಗ್ಗೆ ಅವರು ಎದ್ದೇಳಲೇ ಇಲ್ಲ ಎಂದು ತಿಳಿಸಿದೆ.

ಪೊಲೀಸ್ ಮೂಲಗಳ ಪ್ರಕಾರ ಬೆಳಗ್ಗಿನ ಜಾವ 3.3.30ರ ಹೊತ್ತಿಗೆ ಸಿದ್ದಾರ್ಥ್ ಶುಕ್ಲಾ ಎದ್ದು ಕುಳಿತಾಗ ತುಂಬಾ ಸುಸ್ತಾದ ಅನುಭವವಾಗಿದ್ದು, ತನಗೆ ಎದೆ ನೋವು ಇರುವುದಾಗಿ ಶುಕ್ಲಾ ತಾಯಿಗೆ ತಿಳಿಸಿದ್ದರು. ತಾಯಿ ಸ್ವಲ್ಪ ನೀರು ಕುಡಿಯಲು ಕೊಟ್ಟು, ನಂತರ ಮಲಗಲು ಹೇಳಿದ್ದರು. ಬೆಳಗ್ಗೆ ತಾಯಿ ಮಗನನ್ನು ಎಬ್ಬಿಸಲು ಎಷ್ಟೇ ಪ್ರಯತ್ನಿಸಿದರೂ ಅವರು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲವಾಗಿತ್ತು. ಕೂಡಲೇ ತಾಯಿ ತಮ್ಮ ಸಹೋದರಿಗೆ ವಿಷಯ ತಿಳಿಸಿದ್ದರು, ನಂತರ ವೈದ್ಯರಿಗೆ ಕರೆ ಮಾಡಿದ್ದರು.

ಸಿದ್ದಾರ್ಥ್ ಶುಕ್ಲಾ ದೇಹದಲ್ಲಿ ಯಾವುದೇ ಗಾಯದ ಕಲೆಗಳಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಶುಕ್ಲಾ ಅವರ ಬಾವ ಹಾಗೂ ಸಂಬಂಧಿಕರು ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಶುಕ್ಲಾ ಸಾವನ್ನಪ್ಪಿರುವುದಾಗಿ ತಿಳಿಸಿದ್ದರು. ಸಿದ್ದಾರ್ಥ್ ಕುಟುಂಬ ಸದಸ್ಯರು ಹಾಗೂ ಪೊಲೀಸರು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ. ಸಿದ್ದಾರ್ಥ್ ಸಾವಿನ ಬಗ್ಗೆ ಕುಟುಂಬ ಸದಸ್ಯರು ಯಾವುದೇ ಅನುಮಾನ ವ್ಯಕ್ತಪಡಿಸಿಲ್ಲ ಎಂದು ವರದಿ ಹೇಳಿದೆ.

ಸಿದ್ದಾರ್ಥ್ ಸಾವಿನ ಬಗ್ಗೆ ವೈದ್ಯರು ಹೇಳಿದ್ದೇನು?

ನಟ ಸಿದ್ದಾರ್ಥ ಶುಕ್ಲಾ ದೇಹದಲ್ಲಿ ಯಾವುದೇ ಗಾಯದ ಕಲೆಗಳು ಕಂಡುಬಂದಿಲ್ಲ. ಶುಕ್ಲಾ ಸಾವಿನ ಬಗ್ಗೆ ಆರಂಭಿಕವಾಗಿ ಪೊಲೀಸರಿಗೆ ಮಾಹಿತಿ ನೀಡಿರಲಿಲ್ಲವಾಗಿತ್ತು. ಶುಕ್ಲಾ ಅವರನ್ನು ಬಾವ ಹಾಗೂ ಸಂಬಂಧಿಕರು ಮತ್ತು ಮೂವರು ಸ್ನೇಹಿತರು ಕೂಪರ್ ಆಸ್ಪತ್ರೆಗೆ ಆ್ಯಂಬುಲೆನ್ಸ್ ನಲ್ಲಿ ತಂದಿದ್ದು, ಅದಾಗಲೇ ಅವರು ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದರು.

ಶುಕ್ಲಾ ಅವರು ಶೋಬಿಜ್ ನಲ್ಲಿ ರೂಪದರ್ಶಿಯಾಗಿ ವೃತ್ತಿಜೀವನ ಆರಂಭಿಸಿದ್ದರು. ಬಳಿಕ ಬಬುಲ್ ಕಾ ಆಂಗನ್ ಚೂಟೇ ನಾ ಟಿವಿ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು. ನಂತರ ಜಾನೇ ಪೆಹಜಾನೇ ಸೆ ಯೇ ಅಜ್ನನಬಿ, ಲವ್ ಯೂ ಜಿಂದಗಿ ಧಾರವಾಹಿಯಲ್ಲಿ ನಟಿಸಿದ್ದರೂ ಕೂಡಾ ಬಾಲಿಕಾ ವಧು ಮೂಲಕ ಸಿದ್ದಾರ್ಥ್ ಜನಪ್ರಿಯರಾಗಿದ್ದರು.

ಝಲಕ್ ದಿಖ್ಲಾ ಜಾ 6, ಫಿಯರ್ ಫ್ಯಾಕ್ಟರ್; ಖತ್ರೋನ್ ಕೆ ಕಿಲಾಡಿ 7 ಹಾಗೂ ಬಿಗ್ ಬಾಸ್ 13 ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ಅಲ್ಲದೇ ಬಿಗ್ ಬಾಸ್ 13ನೇ ಸೀಸನ್ ನಲ್ಲಿ ವಿನ್ನರ್ ಆಗಿ ಹೊರಹೊಮ್ಮಿದ್ದರು.

ಟಾಪ್ ನ್ಯೂಸ್

1-wi

T20 World Cup;ಸೋಲಿನೊಂದಿಗೆ ನ್ಯೂಜಿಲ್ಯಾಂಡ್‌ ಹೊರಕ್ಕೆ:ವೆಸ್ಟ್‌ ಇಂಡೀಸ್‌ ಸೂಪರ್‌ 8ಕ್ಕೆ

CT Ravi: ಸುರ್ಜೇವಾಲ ನಿರ್ದೇಶನದನ್ವಯ ಬಿಎಸ್‌ವೈ ವಿರುದ್ಧ ಷಡ್ಯಂತ್ರ: ಸಿ.ಟಿ.ರವಿ

CT Ravi: ಸುರ್ಜೇವಾಲ ನಿರ್ದೇಶನದನ್ವಯ ಬಿಎಸ್‌ವೈ ವಿರುದ್ಧ ಷಡ್ಯಂತ್ರ: ಸಿ.ಟಿ.ರವಿ

33

ನರ್ಸಿಂಗ್‌ ಕಾಲೇಜುಗಳ ಶುಲ್ಕ ಪರಿಷ್ಕರಣೆ ಇಲ್ಲ, ಸೌಲಭ್ಯ ನೀಡದ ಕಾಲೇಜಿಗೆ ಬೀಗ ಹಾಕಿ: ಸಚಿವ

Actor Darshan: ನ್ಯಾಯ ಕೇಳಲು ಹೋಗಿದ್ದಕ್ಕೆ ನಾಯಿಗಳನ್ನು ಛೂ ಬಿಟ್ಟಿದ್ದ ದರ್ಶನ್‌!

Actor Darshan: ನ್ಯಾಯ ಕೇಳಲು ಹೋಗಿದ್ದಕ್ಕೆ ನಾಯಿಗಳನ್ನು ಛೂ ಬಿಟ್ಟಿದ್ದ ದರ್ಶನ್‌!

24

Namma clinic: ಸಾರ್ವಜನಿಕ ಸ್ಥಳದಲ್ಲಿ ಹೊಸದಾಗಿ 254 ನಮ್ಮ ಕ್ಲಿನಿಕ್‌ ಪ್ರಾರಂಭ; ದಿನೇಶ್‌

ಬಿತ್ತನೆ ಬೀಜ, ರಸಗೊಬ್ಬರ ಕೊರತೆ ಉಂಟಾದರೆ ಅಧಿಕಾರಿಗಳ ಮೇಲೆ ಕ್ರಮ: ಸಚಿವ

ಬಿತ್ತನೆ ಬೀಜ, ರಸಗೊಬ್ಬರ ಕೊರತೆ ಉಂಟಾದರೆ ಅಧಿಕಾರಿಗಳ ಮೇಲೆ ಕ್ರಮ: ಸಚಿವ

18

Nikhil kumaraswamy: ಸಿನೆಮಾಕ್ಕೆ ವಿರಾಮ ನೀಡಿ ಪಕ್ಷದ ಸಂಘಟನೆಗೆ ದುಡಿಯುವೆ; ನಿಖಿಲ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಓ….ಸರ್ಕಾರಿ ಶಾಲೆಯಾ? …ಇದು ಕೇವಲ ಬಡವರ ಶಾಲೆಯಾ!

ಓ….ಸರ್ಕಾರಿ ಶಾಲೆಯಾ? …ಇದು ಕೇವಲ ಬಡವರ ಶಾಲೆಯಾ!

8

ಪತ್ನಿ ಮೇಲೆ ಹಲ್ಲೆ To ನಿರ್ಮಾಪಕರ ಜೊತೆ ತಗಾದೆ.. ದರ್ಶನ್‌ ವಿವಾದದ ಸುತ್ತ ಒಂದು ಸುತ್ತು..

Hawaiian Islands; ಅಸಾಧಾರಣ ಹವಾ “ಹವಾಯಿ’ ಐಲ್ಯಾಂಡ್‌

Hawaiian Islands; ಅಸಾಧಾರಣ ಹವಾ “ಹವಾಯಿ’ ಐಲ್ಯಾಂಡ್‌

Election Results Out: ಸಂಸದರಿಗೆ ಸಂಬಳ ಎಷ್ಟಿದೆ, ಏನೇನು ಸೌಲಭ್ಯ ಸಿಗುತ್ತೆ ಗೊತ್ತಾ?!

Election Results Out: ಸಂಸದರಿಗೆ ಸಂಬಳ ಎಷ್ಟಿದೆ, ಏನೇನು ಸೌಲಭ್ಯ ಸಿಗುತ್ತೆ ಗೊತ್ತಾ?!

netravathi trek

Netravathi Peak.. ಚಾರಣ ಪ್ರಿಯರ ಹೊಸ ತಾಣ; ಹೋಗುವ ಮುನ್ನ ಈ ಅಂಶಗಳು ನೆನಪಿರಲಿ

MUST WATCH

udayavani youtube

ಕಾಂಗ್ರೆಸ್ ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

udayavani youtube

ಇಳಿಕೆಯಾದ ಘಟಪ್ರಭಾ ನದಿ

udayavani youtube

ಕಾಪು ಹೊಸ ಮಾರಿಗುಡಿ: ಮಾರಿಯಮ್ಮ, ಉಚ್ಚಂಗಿ ದೇವಿಗೆ ಸ್ವರ್ಣ ಗದ್ದುಗೆ ಸಮರ್ಪಣೆ ಸಂಕಲ್ಪ

udayavani youtube

ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ… 4 ಭಾರತೀಯರು ಸೇರಿ 41 ಮಂದಿ ದುರ್ಮರಣ

udayavani youtube

ಲಾಭದಾಯಕ ಮಲ್ಲಿಗೆ ಕೃಷಿ ಮಾಡುವುದು ಹೇಗೆ? | ಶಂಕರಪುರ ಮಲ್ಲಿಗೆ

ಹೊಸ ಸೇರ್ಪಡೆ

tennis

Australian Open: ಪ್ರಣಯ್‌, ಸಮೀರ್‌ ಕ್ವಾರ್ಟರ್‌ ಫೈನಲಿಗೆ

Rohan Bopanna

ಪ್ಯಾರಿಸ್‌ ಒಲಿಂಪಿಕ್ಸ್‌  ಡಬಲ್ಸ್‌ ನಲ್ಲಿ ಬೋಪಣ್ಣ-ಬಾಲಾಜಿ

1-wi

T20 World Cup;ಸೋಲಿನೊಂದಿಗೆ ನ್ಯೂಜಿಲ್ಯಾಂಡ್‌ ಹೊರಕ್ಕೆ:ವೆಸ್ಟ್‌ ಇಂಡೀಸ್‌ ಸೂಪರ್‌ 8ಕ್ಕೆ

1-bbb

Kuwait ಭೀಕರ ಅಗ್ನಿ ದುರಂತದಲ್ಲಿ ಕಲಬುರಗಿಯ ವ್ಯಕ್ತಿ ಸಾವು

CT Ravi: ಸುರ್ಜೇವಾಲ ನಿರ್ದೇಶನದನ್ವಯ ಬಿಎಸ್‌ವೈ ವಿರುದ್ಧ ಷಡ್ಯಂತ್ರ: ಸಿ.ಟಿ.ರವಿ

CT Ravi: ಸುರ್ಜೇವಾಲ ನಿರ್ದೇಶನದನ್ವಯ ಬಿಎಸ್‌ವೈ ವಿರುದ್ಧ ಷಡ್ಯಂತ್ರ: ಸಿ.ಟಿ.ರವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.