ಕುಮಾರಸ್ವಾಮಿ ವಿರುದ್ಧ ಹಿಂದೆಯೇ ಜಂಗಿ ಕುಸ್ತಿ ಮಾಡಿಯಾಗಿದೆ : ಡಿಕೆಶಿ
ಕೈ ಮೇಲೆತ್ತಿಯೂ ಆಗಿದೆ ಎಂದು ವ್ಯಂಗ್ಯ !, ನನ್ನನ್ನ7 ಬಾರಿ ಕುಮಾರಸ್ವಾಮಿ ಗೆಲ್ಲಿಸಿದ್ರಾ?
Team Udayavani, Jul 20, 2022, 5:27 PM IST
ಬೆಂಗಳೂರು : ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಡಿ.ಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದು, ಕುಮಾರಸ್ವಾಮಿ ವಿರುದ್ಧ ಹಿಂದೆಯೂ ಜಂಗಿ ಕುಸ್ತಿ ಮಾಡಿಯಾಗಿದೆ, ಕೈ ಮೇಲೆತ್ತಿಯೂ ಆಗಿದೆ ಎಂದು ವ್ಯಂಗ್ಯವಾಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಪಾಪ ಅವರು ಕನಸು ಕಾಣಲಿ. ಆದರೆ ನನಗೆ ನನ್ನ ಪಾರ್ಟಿ ಮುಖ್ಯ.ನಾನು ನನ್ನ ಪಾರ್ಟಿಗೆ ಒತ್ತು ಕೊಡುತ್ತೇನೆ.ಸೋನಿಯಾ ಗಾಂಧಿ ಅಧ್ಯಕ್ಷ ಸ್ಥಾನ ಕೊಟ್ಟಿದ್ದಾರೆ.ಅದೇ ಕಾರಣಕ್ಕೆ ರಾಮನಗರದಲ್ಲೂ ಸಮುದಾಯದ ಬೆಂಬಲ ಕೇಳಿದ್ದೇನೆ. ಹೆಚ್ಡಿಕೋಟೆಯಲ್ಲೂ ಕೇಳಿದ್ದೇನೆ ಎಂದರು.
ನೂರು ಜನ ಡಿಕೆಶಿ ಬಂದರೂ ಹೆದರೋದಿಲ್ಲ ಎಂಬ ಹೆಚ್ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿ,ನಾನು ಕುಮಾರಸ್ವಾಮಿಗೆ ಉತ್ತರ ಕೊಡಬೇಕಿಲ್ಲ.ರಾಜ್ಯದ ಜನರಿಗೆ ನಾನು ಉತ್ತರ ಕೊಡ್ತೇನೆ. ನನ್ನನ್ನ7 ಬಾರಿ ಕುಮಾರಸ್ವಾಮಿ ಗೆಲ್ಲಿಸಿದ್ರಾ? ನಾನು ಅವರಿಗಿಂತ ಬೆಟರ್ ಇದ್ದಿದ್ದಕ್ಕೆ ತಾನೇ ಗೆಲ್ಲಿಸಿದ್ದು ? ಪಾಪ ಅವರಿಗೆ ಆಸೆ.ಅವರು ಏನು ಬೇಕಾದರೂ ಮಾಡಿಕೊಳ್ಳಲಿ ಎಂದರು.
ರಾಮನಗರದಿಂದ ಸ್ಪರ್ಧೆ ಮಾಡಲಿ ಎಂಬ ಹೆಚ್ಡಿಕೆ ಆಹ್ವಾನಕ್ಕೆ ತಿರುಗೇಟು ಕೊಟ್ಟ ಅವರು, ಕುಮಾರಸ್ವಾಮಿ ಜತೆ ಹಿಂದೆಯೆ ಜಂಗಿಕುಸ್ತಿ ಮಾಡಿಯಾಗಿದೆ.ಫಲಿತಾಂಶವೂ ಬಂದಿದೆ.ಜಂಗಿಕುಸ್ತಿ ಮಾಡಿ ಕೈ ಮೇಲೆ ಎತ್ತಿಯಾ ಗಿದೆ.ಈಗ ನೀವುಗಳು ಜಂಗಿ ಕುಸ್ತಿ ಮಾಡಿಸುತ್ತಿದ್ದೀರಿ ,ಹಿಂದೆ ನನ್ನ ತಮ್ಮನ ವಿರುದ್ಧ ಅವರ ಶ್ರೀಮತಿಯವರು ಸ್ಪರ್ಧೆ ಮಾಡಿದ್ದರು .ಫಲಿತಾಂಶ ಬಂದಿದೆಯಲ್ಲ, ಏನಾಯ್ತು ? ಎಂದು ಪ್ರಶ್ನಿಸಿದರು.