6ವರ್ಷ ಕಳೆದರೂ ನನಸಾಗದ ಕನಸು

ಸರಕಾರಿ ಮೆಡಿಕಲ್‌ ಕಾಲೇಜು ಆಗ್ರಹ: ಹೋರಾಟಕ್ಕೆ ಚಾಲನೆ

Team Udayavani, Nov 24, 2019, 5:30 AM IST

22-BDK-02

ಬದಿಯಡ್ಕ: ಶಿಲಾನ್ಯಾಸಗೈದು ವರುಷ 6 ಸಂದರೂ ಸರಕಾರಿ ಮೆಡಿಕಲ್‌ ಕಾಲೇಜಿನ ಕಾಮಗಾರಿ ಪೂರ್ತಿಯಾಗದ ಹಿನ್ನೆಲೆ ಪ್ರತಿಭಟಿಸಿ ಹೋರಾಟ ಚಳುವಳಿಗೆ ಜನಪರ ಸಮರ ಸಮಿತಿಯ ನೇತೃತ್ವದಲ್ಲಿ ಚಾಲನೆ ನೀಡಲಾಯಿತು.

ನವೆಂಬರ್‌ 20ರಿಂದ ಡಿಸೆಂಬರ್‌ 14ರ ವರೆಗೆ ನಡೆಯುವ ಚಳುವಳಿಯನ್ನು ಕಾಸರಗೋಡು ಹೊಸ ಬಸ್ಸು ನಿಲ್ದಾಣ ಸಮೀಪದ ಸಹಿಮರದಡಿಯಲ್ಲಿ ಲೇಖಕ ರಹ್ಮಾನ್‌ ತಾಯಲಂಗಾಡಿ ನಿರ್ವಹಿಸಿ ಮಾತನಾಡಿ ಅಭಿವೃದ್ಧಿಯತ್ತ ದಾಪುಗಾಲಿಡುತ್ತಿರುವ ಕಾಸರಗೋಡಿನ ಅಭಿಮಾನವಾಗಿರುವ ಮೆಡಿಕಲ್‌ ಕಾಲೇಜನ್ನು ಕೇವಲ ಪ್ರದರ್ಶನದ ವಸ್ತುವಾಗಿಸುವ ಪ್ರಯತ್ನ ಖಂಡನೀಯ. 6ವರ್ಷಗಳಲ್ಲಿ ನಿರ್ಮಾಣ ಕಾರ್ಯ ಅರ್ಧದಷ್ಟೂ ಪೂರ್ತಿಯಾಗಿಲ್ಲ ಎನ್ನುವುದು ವಿಷಾಧನೀಯ. ಮಾತ್ರವಲ್ಲದೆ ಕಾಸರಗೋಡಿನ ಕಡೆಗಿನ ಕಡೆಗಣನೆಗೆ ಸಾಕ್ಷಿ. ಆದುದರಿಂದ ಜನರು ಒಟ್ಟಾಗಿ ಸರಕಾರವನ್ನು ಹಾಗೂ ಸಂಬಂಧಿಸಿದ ಅಧಿಕಾರಿಗಳನ್ನು ಒತ್ತಾಯಿಸಿ ಆದಷ್ಟು ಬೇಗ ನಿರ್ಮಾಣಕಾರ್ಯ ಪೂರ್ಣಗೊಂಡು ಜನರಿಗೆ ಅದರ ಪ್ರಯೋಜನ ದೊರಕುವಂತಾಗಬೇಕು ಎಂದರು.

ಈ ಹಿಂದೆ ಉಮ್ಮನ್‌ ಚಾಂಡಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅವರೇ ಶಿಲಾನ್ಯಾಸಗೆ„ಯುವ ಮೂಲಕ ಚಾಲನೆ ನೀಡಿದ ಪದ್ಧತಿಯ ಕೆಲಸ ಪೂರ್ತಿಯಾಗದಿದ್ದರೂ ಈಗಿನ ಸರಕಾರ ತನ್ನ ಬಜೆಟ್‌ನಲ್ಲಿ ಯಾವುದೇ ಮೊತ್ತವನ್ನು ಈ ಕಾರ್ಯಕ್ಕಾಗಿ ಮೀಸಲಿರಿಸದೇ ಇರುವುದು ಮೆಡಿಕಲ್‌ ಕಾಲೇಜಿನ ಕನಸನ್ನು ಸಂಧಿಗ್ಧತೆಗೆ ಸಿಲುಕಿಸಿದೆ. ಹಿಂದಿನ ಸರಕಾರ ಜ್ಯಾರಿಗೊಳಿಸಿದ ಮೊತ್ತಕ್ಕೆ ರಿವೈಸ್ಡ್ ಮೊತ್ತವನ್ನು ಮಾತ್ರವೇ ನೀಡಿರುವ ಈಗಿನ ಸರಕಾರ ಉಳಿದಂತೆ ಮೌನವಹಿಸಿರುವುದು ಜನರ ಅಸಾಮಾಧಾನಕ್ಕೆ ಕಾರಣವಾಗಿದೆ.

ಅಕಾಡೆಮಿಕ್‌ ಕಟ್ಟಡದ ಕೆಲಸ ಪೂರ್ತಿಯಾಗಿದ್ದರೂ ಆಸ್ಪತ್ರೆ ಕೆಲಸ ಆಮೆಗತಿಯಲ್ಲಿ ಸಾಗುತ್ತಿದ್ದು ಸ್ಟಾಫì ಕ್ವಾರ್ಟರ್ಸ್‌, ಹೋಸ್ಟೆಲ್‌, ಪುಸ್ತಕಾಲಯ, ಮೀಟಿಂಗ್‌ ಹಾಲ್‌, ಮಾಲಿನ್ಯ ಸಂಸ್ಕರಣಾ ಕೇಂದ್ರ, ವಿದ್ಯುತ್‌ ಸಂಪರ್ಕ ಮೊದಲಾದವುಗಳ ನಿರ್ಮಾಣಕ್ಕೆ ಇನ್ನೂ ಪೂರ್ಣ ಅನುಮತಿ ಲಭಿಸಿಲ್ಲ. ನಿರ್ಮಾಣ ಜವಾಬಾœರಿ ಹೊತ್ತಿರುವ ಕಿಸ್ಕೋ ಈಗಾಗಲೇ 135 ಕೋಟಿ ರೂಪಾಯಿಗಳ ಎಸ್ಟಿಮೇಟ್‌ ತಯಾರಿಸಿ ಸರಕಾರಕ್ಕೆ ಸಲ್ಲಿಸಿದೆ.

ಶಾಸಕ ನೆಲ್ಲಿಕುನ್ನು ನೇತೃತ್ವ ದಲ್ಲಿ ಸಚಿವರು ಹಾಗೂ ಅಧಿಕಾರಿ ಗಳಿಗೆ ujಟs ಸಲ್ಲಿಸಲಾಗಿದೆ ಯಾದರೂ ಇದುವರೆಗೆ ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ. ಈ ವರ್ಷದ ಬಜೆಟ್‌ನಲ್ಲಿ ಅಗತ್ಯ ಮೊತ್ತವನ್ನು ಮೀಸಲಿಡಬೇಕು ಹಾಗೂ ಮೆಡಿಕಲ್‌ ಕಾಲೇಜಿಗಿರುವ ರಸ್ತೆಯ ಕಾಮಗಾರಿಯೂ ಅರ್ಧದಲ್ಲೇ ಮೊಟಕುಗೊಂಡಿದ್ದು ಅದನ್ನೂ ಪೂರ್ತಿಗೊಳಿಸುವಂತೆ ಒತ್ತಾಯಿಸಿ ಈ ಸಮರಕ್ಕೆ ಚಾಲನೆ ನೀಡಲಾಗಿದೆ.

ಕಾಸರಗೋಡು, ಬದಿಯಡ್ಕ, ಪೆರ್ಲ, ಸೀತಾಂಗೋಳಿ, ಕುಂಬಾxಜೆ ಮೊದಲಾದ ಕಡೆಗಳಲ್ಲಿ ಸಮರ ನಡೆಯಲಿದೆ. ಜನಕೀಯ ಸಮಿತಿ ಅಧ್ಯಕ್ಷ ಮಾಹಿನ್‌ ಕೇಳ್ಳೋಟ್‌ ಅಧ್ಯಕ್ಷತೆಯಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಜೀವನ್‌ ಥೋಮಸ್‌, ಅಬ್ದುಲ್‌ ನಾಸಿರ್‌, ಸಿ.ಎನ್‌.ಹಮೀದ್‌, ಶ್ಯಾಮ ಪ್ರಸಾದ್‌ ಮಾನ್ಯ ಜಲೀಲ್‌, ಟಿ.ಎ.ಶಾಫಿ, ರಹೀಮ್‌, ಹಿರಿಯ ಸಾಹಿತಿಗಳಾದ ರಾಧಾಕೃಷ್ಣ ಉಳಿಯತ್ತಡ್ಕ, ಕೆ.ನಾಗೇಶ್‌, ಪೊÅ.ಗೋಪಿನಾಥನ್‌, ಪ್ರೋ.ಶ್ರೀನಾಥ್‌, ನಾರಾಯಣನ್‌ ಪುಷ್ಪರಾಜನ್‌ ಬಂಡಿಚ್ಚಾಲ್‌, ಕುಂಜಾರ್‌ ಮುಹಮ್ಮದ್‌, ಗಿರೀಶ್‌, ರಾಜಗೋಪಾಲ ಕೈಪಂಗಳ, ರವೀಂದ್ರನ್‌ ಪಾಡಿ, ಅಜಯನ್‌, ಕರುಣಾಕರನ್‌, ನಾರಾಯಣನ್‌ ನಾಯರ್‌, ನಾಯರ್‌, ಪ್ರಭ, ಅಶೋಕ, ರವಿ, ದಿನಕರ ಭಟ್‌, ಮಧು, ಅಶ್ರಫಾಲಿ ಚೇರಂಗೆ„, ಉಷಾ ಟೀಚರ್‌, ಎ.ಬಂಡಿಚ್ಚಾಲ್‌. ಪಿ.ವಿಕೆ.ಅರಮಂಗಾನ, ರೌಫ್‌, ನಜೀಬ್‌, ಮೊಯೀªನ್‌ ಕುಟ್ಟಿ, ಮುಂತಾದವರು ಮಾತನಾಡಿದರು. ಶ್ಯಾಮ ಪ್ರಸಾದ್‌ ಸ್ವಾಗತಿಸಿ ವಂದಿಸಿದರು.ಚಿತ್ರಗಾರರಾದ ರವಿ ಪಿಲಿಕ್ಕೋಡ್‌, ಆಶೋಕನ್‌ ಚಿತ್ರಲೇಖ, ಪ್ರಭನ್‌ ಪಿಲಿಕ್ಕೋಡ್‌, ದಿನಕರಲಾಲ್‌ ಪಿಲಿಕ್ಕೋಡ್‌, ಮಧು ಪಿಲಿಕ್ಕೋಡ್‌ ಚಿತ್ರಗಳನ್ನು ರಚಿಸಿ ಸೂಚಿಸಿದರು.

ಹೆಚ್ಚಿನ ಹೋರಾಟ
2013 ನ.30. ಉಮ್ಮನ್‌ ಚಾಂಡಿ (ಅಂದಿನ ಮುಖ್ಯಮಂತ್ರಿ) ಶಿಲಾನ್ಯಾಸಗೈದ ಮೆಡಿಕಲ್‌ ಕಾಲೇಜು ನಿರ್ಮಾಣ ಕಾಮಗಾರಿಯು ಆರಂಭದಿಂದಲೇ ಆಮೆಗತಿಯಲ್ಲಿ ಸಾಗುತ್ತಿದ್ದು 6ವರ್ಷಗಳ ಬಳಿಕವೂ ಅರ್ಧದಷ್ಟೂ ಕೆಲಸ ಪೂರ್ತಿಯಾಗದೆ ಜನರನ್ನು ಅಣಕಿಸುತ್ತಿದೆ. ಕಾಸರಗೋಡಿನ ಜನತೆ ಉತ್ತಮ ಚಿಕಿತ್ಸೆಗಾಗಿ ನೆರೆರಾಜ್ಯವನ್ನೋ, ಇತರ ಜಿಲ್ಲೆಗಳನ್ನೋ ಅವಲಂಭಿಸಬೇಕಾದ ಅನಿಒವಾರ್ಯತೆ ಇದೆ. ಈ ಸಮಸ್ಯೆಗೆ ಪರಿಹಾರವಾಗಿ ಆದಷ್ಟು ಬೇಗ ಮೆಡಿಕಲ್‌ ಕಾಲೇಜಿನ ಕೆಲಸ ಪೂರ್ತಿಗೊಳಿಸುವಂತೆ ಒತ್ತಾಯಿಸಿ ಈ ಚಳುವಳಿಗೆ ಮುಂದಾಗಿದ್ದೇವೆ. ಕಡೆಗಣನೆ ಕೊನೆಯಾಗಬೇಕು.
– ಮಾಹಿನ್‌ ಕೇಳ್ಳೋಟ್‌,
ಜನಪರ ಸಮರ ಸಮಿತಿ ಅಧ್ಯಕ್ಷ

  -ಅಖೀಲೇಶ್‌ ನಗುಮುಗಂ

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.