ಮಂಗಲ್ಪಾಡಿ ಕುಕ್ಕಾರು ಸೇತುವೆ ಬಿರುಕು: ಅಪಾಯಕ್ಕೆ ಆಹ್ವಾನ !

Team Udayavani, May 24, 2018, 6:00 AM IST

23-kbl-2a.jpg

ಕುಂಬಳೆ: ಮಂಗಳೂರು ಕಾಸರಗೋಡು ಹೆದ್ದಾರಿಯ ಮಂಗಲ್ಪಾಡಿಯ ಕುಕ್ಕಾರು ಸೇತುವೆ ಬಿರುಕು ಬಿಟ್ಟು ಶಿಥಿಲಗೊಂಡಿದೆ. ಸ್ವರ್ಣಗಿರಿ ತೋಡಿಗೆ ನಿರ್ಮಿಸಿದ ಈ ಸೇತುವೆಗೆ ಸುವರ್ಣ ವರ್ಷ ಸಂದಿದೆ. ಕಳಪೆ ಸೇತುವೆಗೆ ಕೆಲವು ಬಾರಿ ಲೋಕೋಪಯೋಗಿ ಇಲಾಖೆ ಯಿಂದ ಕಾಯಕಲ್ಪ ಮಾಡಲಾಗಿದೆ.ಇದೀಗ ಸೇತುವೆ ಮತ್ತು ರಸ್ತೆ ಕೂಡುವ ಭಾಗ ಒಡೆದಿದೆ. ಅಗಲ ಕಿರಿದಾದ ಈ ಸೇತುವೆಯಲ್ಲಿ ಹಲವಾರು ವರ್ಷಗಳಿಂದ ಅಪಘಾತಗಳು ಸಂಭವಿಸುತ್ತಿವೆ. ಕಳೆದ ವರ್ಷ ಲಾರಿಯೊಂದು ಸೇತುವೆಯ ತಡೆಗೋಡೆಗೆ ಬಡಿದು ತಡೆಗೋಡೆ ಆಂಶಿಕವಾಗಿ ಕುಸಿದಿದೆ.ಮೇಲೋ°ಟಕ್ಕೆ ಸೇತುವೆ ರಸ್ತೆಯ ಮೇಲೆ ಡಾಮರೀಕಣವಾಗಿದ್ದು ಅಡಿಭಾಗ ಕೆಲವೆಡೆ ಒಡೆದಿದೆ.

ಸೇತುವೆ ಸಮಸ್ಯೆ ಮಾತ್ರ ಪರಿಹಾರವಾಗಿಲ್ಲ 
ಆದರೆ ಬಿರುಕು ಬಿಟ್ಟ ಶಿಥಿಲ ಸೇತುವೆಯ ಸಮಸ್ಯೆಗೆ ಮಾತ್ರ ಪರಿಹಾರ ವಾಗಿಲ್ಲ. ದಿನದಿಂದ ದಿನಕ್ಕೆ ಸೇತುವೆ ಕುಸಿಯುವ ಹಂತದಲ್ಲಿದೆ.ಹೆದ್ದಾರಿ ಚತುಷ್ಪಥ ಯೋಜನೆ ಇನ್ನೂ ರಾಜ್ಯದಲ್ಲಿ  ಆರಂಭಗೊಂಡಿಲ್ಲ. ನಿಧಾನವೇ ಪ್ರಧಾನ ವಾಗಿ ನಡೆಯುವ ರಾಜ್ಯದ ಯೋಜನೆ ಪ್ರಕ್ರಿಯೆಯಲ್ಲಿ ಕುಕ್ಕಾರು, ಉಪ್ಪಳ, ಮೊಗ್ರಾಲ್‌ ಮುಂತಾದ ಸೇತುವೆ ಗಳು ಶಿಥಿಲಗೊಳ್ಳುತ್ತಿವೆ. ಆದರೆ ಗುತ್ತಿಗೆದಾರ ರಿಗಾಗಿ ರಸ್ತೆ ಪಕ್ಕದಲ್ಲಿ ಎತ್ತರ ಪ್ರದೇಶವಲ್ಲದ ಸ್ಥಳದಲ್ಲಿ ಕಬ್ಬಿಣ ತಡೆಬೇಲಿ, ಕಾಂಕ್ರಿಟ್‌ ತಡೆಗೋಡೆ,ನೀರು ಹರಿಯದಲ್ಲಿ ಕಾಂಕ್ರಿಟ್‌ ತೋಡು ನಿರ್ಮಾಣ ಮುಂತಾದ ಅನಗತ್ಯ ಕಾಮಗಾರಿಗಳು ಹೇರಳ ನಿಧಿ ದುರ್ವಿವಿನಿಯೋಗದ ಮೂಲಕ ನಡೆಯುತ್ತಲೇ ಇದೆ. ಆದರೆ ಅಗತ್ಯದ ಕಾಮಗಾರಿ ಮಾತ್ರ ನಡೆಯುತ್ತಿಲ್ಲವೆಂಬ ಆರೋಪ ಸಾರ್ವಜನಿಕರದು. ಕುಸಿಯಲು ಮುಂದಾದ ಕುಕ್ಕಾರು ಸೇತುವೆಗೆ ತುರ್ತು ಕಾಯಕಲ್ಪ ಮಾಡದಿದ್ದಲ್ಲಿ ಮುಂದೊಂದು ದಿನ ದುರಂತ ಸಂಭವಿಸಲಿದೆ. ಸಂಭಾವ್ಯ ದುರಂತ ಘಟಿಸುವ ಮುನ್ನ ಲೋಕೋಪಯೋಗಿ ಇಲಾಖೆ ಶಿಥಿಲ ಸೇತುವೆಯತ್ತ ಕಣ್ಣು ಹಾಯಿಸಬೇಕಾಗಿದೆ.

ಅಪಘಾತವೂ .. ಪರಿಹಾರವೂ..
ಕುಕ್ಕಾರು ಸೇತುವೆ ಪರಿಸರ ಪ್ರದೇಶದ ರಸ್ತೆಯಲ್ಲಿ ಅನೇಕ ವರ್ಷಗಳಿಂದ ಅಪಘಾತಗಳು ಸಂಭವಿಸುತ್ತಲೇ ಇವೆ. ಕೆಲವು ಸಾವು-ನೋವುಗಳೂ ಸಂಭವಿಸಿವೆ. ಯಾವುದೋ ಅಗೋಚರ ಶಕ್ತಿಯಿಂದಾಗಿ ಈ ರೀತಿಯಾಗು ವುದಾಗಿ ಸ್ಥಳೀಯರ ಅಭಿಪ್ರಾಯ.  ಇದರಂತೆ ಸ್ಥಳೀಯ ಮನೆಯವ ರೋರ್ವರು ಪರಿಹಾರ ಕ್ರಿಯಾದಿ ಯನ್ನೂ ಮಾಡಿಸಿದ್ದಾರಂತೆ. ಆ ಬಳಿಕ ಈ ಪ್ರದೇಶದಲ್ಲಿ ಅಪಘಾತ ನಡೆದಿಲ್ಲವಂತೆ.

– ಅಚ್ಯುತ ಚೇವಾರ್‌

ಟಾಪ್ ನ್ಯೂಸ್

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Electric shock: ಯುವಕನ ಸಾವು

Electric shock: ಯುವಕನ ಸಾವು

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Perla, Kasaragod; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

Perla; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

ಚನ್ನಮ್ಮನ ಕಿತ್ತೂರು: ಮಹಾನ್‌ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ

ಚನ್ನಮ್ಮನ ಕಿತ್ತೂರು: ಮಹಾನ್‌ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.