ಸಂಸ್ಕೃತಿ ಉಳಿವು ಮಹಿಳೆಯ ಜವಾಬ್ದಾರಿ: ಭಟ್‌


Team Udayavani, Apr 7, 2017, 2:34 PM IST

07-KSRGOD-3.jpg

ಕಾಸರಗೋಡು: ಎಲ್ಲ ವೃಕ್ಷಗಳ ಮೂಲ ಬೇರುವಿಗೆ “ತಾಯಿ ಬೇರು’ ಎನ್ನುತ್ತಾರೆ. ತಾಯಿ ಬೇರು ಗಟ್ಟಿಯಾಗಿದ್ದರೆ ಮರವೂ ಗಟ್ಟಿಯಾಗಿರುತ್ತದೆ. ಹಾಗೇನೇ ಭಾಷೆ, ಸಂಸ್ಕೃತಿ ಎಳವೆಯಲ್ಲಿಯೇ ಗಟ್ಟಿಯಾಗಿದ್ದರೆ ಮಕ್ಕಳು ಕೂಡ ಸಮಾಜದಲ್ಲಿ ಗಟ್ಟಿಯಾಗಿ ನೆಲೆವೂರಲು ಸಾಧ್ಯ ಎಂದು ವೇದಮೂರ್ತಿ ಚೇಂಪಿ ರಾಮಚಂದ್ರ ಭಟ್‌ ಹೇಳಿದರು.

ಅವರು ಕಾಸರಗೋಡಿನ ಸಾಹಿತ್ಯಿಕ ಸಾಂಸ್ಕೃತಿಕ ಸಂಸ್ಥೆ ರಂಗಚಿನ್ನಾರಿಯ ದಶಮಾನೋತ್ಸವ ಸಂಭ್ರಮದ ಪ್ರಯುಕ್ತ ಏರ್ಪಡಿಸಿದ ಕೊಂಕಣಿ ಮಾತೃದೇವೋ ಭವದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ನಾವು ಮಾತನಾಡುವ ಭಾಷೆಗೆ ಮಾತೃ ಭಾಷೆ ಎನ್ನುತ್ತೇವೆ. ತಾಯಿಯೇ ಸರ್ವಶ್ರೇಷ್ಠ. ಆಕೆಯ ಆಶೀರ್ವಾದವಿದ್ದರೆ ಉನ್ನತಿ ಪಡೆಯಲು ಸಾಧ್ಯ. ಸಂಸ್ಕೃತಿ ಉಳಿಸುವ ಬಹುದೊಡ್ಡ ಜವಾಬ್ದಾರಿ ಆಕೆಯ ಮೇಲಿದೆ ಎಂದರು.

ಉದ್ಯಮಿ ನಿರ್ಮಲಾ ಟ್ರಾವೆಲ್ಸ್‌ನ ಒಡತಿ ನಿರ್ಮಲಾ ಕಾಮತ್‌ ಮಾತನಾಡಿ ಅಡುಗೆ ಕೋಣೆಯಿಂದ ಹೊರ ಬಂದು ಸ್ವಾಭಿಮಾನದಿಂದ ತನ್ನ ಸಂಸ್ಥೆಯನ್ನು ಬೆಳೆಸಿದ ಬಗ್ಗೆ ವಿವರಿಸಿ ಪ್ರತಿಯೊಬ್ಬ ಮಹಿಳೆಯು ಸ್ವಾಭಿಮಾನದಿಂದ, ಉದ್ಯಮ ನಡೆಸಲು ಮುಂದೆ ಬರಬೇಕೆಂದರು. ಮಣಿಪಾಲದ ಸಮಾಜ ಸೇವಕಿ ಲಕ್ಷ್ಮೀ ಎಸ್‌.ರಾವ್‌, ರಾಜಾಪುರ ಸ್ವಾರಸ್ವತ ಸಮಾಜ ಮುಖ್ಯಸ್ಥೆ, ನಿವೃತ್ತ ಮುಖ್ಯೋಪಾಧ್ಯಾಯಿನಿ ಶಾರದಾ ಜೆ.ನಾಯಕ್‌, ಮಂಗಳೂರು ಆಕಾಶವಾಣಿಯ ನಿವೃತ್ತ ಉದ್ಘೋಷಕಿ ಶಕುಂತಳಾ ಆರ್‌.ಕಿಣಿ, ಖ್ಯಾತ ತಬಲಾ ವಾದಕಿ ಶ್ರೀಲತಾ ಪ್ರಭು, ಲೇಖಕಿ ಜ್ಯೋತಿಪ್ರಭಾ ಎಸ್‌.ರಾವ್‌, ನಟಿ ದೀಪಾಲಿ ಕಂಬದಕೋಣೆ, ನಗರದ ಮುನ್ಸಿಪಲ್‌ ಹಾಲ್‌ನ ಪುಷ್ಪಲತಾ ನಟರಾಜ್‌  ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀ ಅನಂತೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಡಾ|ಅನಂತ ಕಾಮತ್‌ ಅವರು ಕೊಂಕಣಿ ಮಾತನಾಡುವ 42 ಪಂಗಡಗಳಿದ್ದು, ಅವುಗಳೆಲ್ಲವೂ ಒಂದೇ ವೇದಿಕೆಗೆ ಬಂದಾಗ ಭಾಷೆ ಮತ್ತಷ್ಟು ಗಟ್ಟಿಯಾಗುತ್ತದೆ. ಇದೇ ಪ್ರಥಮಬಾರಿಗೆ ಕುಂದಾಪುರದಿಂದ ಕಾಂಞಂಗಾಡ್‌ವರೆಗಿನ 11 ಊರುಗಳಿಂದ ಮಹಿಳೆಯರು ಬಂದು ತಮ್ಮ ಪ್ರತಿಭೆಯನ್ನು ಪ್ರದರ್ಶಿದನ್ನು ಶ್ಲಾಘಿಸಿದರು. ಮುಂದಿನ ದಿನಗಳಲ್ಲಿ ರಂಗಚಿನ್ನಾರಿ ಏರ್ಪಡಿಸುವ ಎಲ್ಲಾ ಕಾರ್ಯಕ್ರಮಗಳ ಜೊತೆ ತಾನೂ ಇರುವುದಾಗಿ ತಿಳಿಸಿದರು. 

ಕೊನೆಯಲ್ಲಿ ಪ್ರತಿಭಾನ್ವೇಷಣೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿದ ಅಲೆವೂರಿನ ಕುಸುಮಾ ಕಾಮತ್‌ ಮತ್ತು ಪಂಗಡ, ದ್ವಿತೀಯ ಸ್ಥಾನಗಳಿಸಿದ ಮಂಜೇಶ್ವರದ ಪ್ರಭಾ ಎಂ.ನಾಯಕ್‌ ಮತ್ತು ಪಂಗಡ, ತೃತೀಯ ಸ್ಥಾನಗಳಿಸಿದ ಉಡುಪಿಯ ಮಂಜುಳಾ ವಿ.ನಾಯಕ್‌ ಮತ್ತು ಪಂಗಡದವರಿಗೆ ಪ್ರಶಸ್ತಿ ನೀಡಿ ಗೌರವಿಸಿದ್ದಲ್ಲದೆ ವೈಯಕ್ತಿಕವಾಗಿ ಪ್ರಶಸ್ತಿಗಳಿಸಿದವರನ್ನು ನಗದು ಬಹುಮಾನ ನೀಡಿ ಗೌರವಿಸಲಾಯಿತು.

ಪ್ರಾಸ್ತಾವಿಕ ಮಾತನಾಡಿದ ರಂಗಚಿನ್ನಾರಿಯ ನಿರ್ದೇಶಕ ಕಾಸರಗೋಡು ಚಿನ್ನಾ ಅವರು ಮುಂಬರುವ ದಿನಗಳಲ್ಲಿ ರಂಗಚಿನ್ನಾರಿ ಮತ್ತಷ್ಟು ಕಾರ್ಯಕ್ರಮಗಳನ್ನು ನೀಡುವುದಾಗಿ ತಿಳಿಸಿದರು. ಮಾಯಾ ಮುಕುಂದರಾಜ ನಾಯಕ್‌, ತಾರಾ ಜಿ.ಕಾಮತ್‌ ಪ್ರಾರ್ಥನೆ ಹಾಡಿದರು. ಡಾ|ಸುದೇಶ್‌ ರಾವ್‌, ಜ್ಯೋತಿಪ್ರಭಾ ರಾವ್‌, ಶ್ರೀ ವರದರಾಜ ವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿ, ಜಿ.ಎಸ್‌.ಬಿ. ಸೇವಾ ಸಂಘ, ಜಿ.ಎಸ್‌.ಬಿ. ಮಹಿಳಾ ಸಂಘ, ವಜ್ರಗೋಲ್ಡ್‌ ಆ್ಯಂಡ್‌ ಡೈಮಂಡ್ಸ್‌, ಕೆನರಾ ಐಸ್‌ಕ್ರೀಮ್‌ ಪಾರ್ಲರ್‌(ಕೆ.ಎಸ್‌.ಗ್ರೂಪ್‌), ರವೀಂದ್ರ ಶೆಣೈ ಮುಂತಾದವರು ಮಾತೃದೇವೋ ಭವ ಕಾರ್ಯಕ್ರಮಕ್ಕೆ ಸಹಕಾರ ನೀಡಿದರು.

ಕೊನೆಯಲ್ಲಿ ರಂಗಚಿನ್ನಾರಿಯ ಸತ್ಯನಾರಾಯಣ ಕೆ. ವಂದಿಸಿದರು.

ಟಾಪ್ ನ್ಯೂಸ್

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Electric shock: ಯುವಕನ ಸಾವು

Electric shock: ಯುವಕನ ಸಾವು

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Perla, Kasaragod; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

Perla; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.