ಹಲಸಿನ ಹಣ್ಣಿನ ಖಾದ್ಯ ಕಜ್ಜಾಯ ಸಮರ್ಪಣೆ

ಏತಡ್ಕ ಸದಾಶಿವ ದೇವರಿಗೆ ನಾಳೆ ಊರವರ ಸೇವೆ

Team Udayavani, Jun 29, 2019, 5:23 AM IST

28KSDE5

ಏತಡ್ಕ: ದೈವ ದೇವರು ಈ ನೆಲದ ಆರಾಧನೀಯ ಶಕ್ತಿಗಳು. ನಾಲ್ಕೂವರೆ ಶತಮಾನ ಹಿಂದೆ ಹೈಗನಾಡಿನಿಂದ (ಈಗಿನ ಹೊನ್ನಾವರ ಪ್ರದೇಶ) ತುಳುನಾಡಿಗೆ ಬಂದ ಹವ್ಯಕರು ತಾವು ಆರಾಧಿಸುವ ದೇವರ ಜತೆ ಸ್ಥಳೀಯ ದೈವ ದೇವರುಗಳನ್ನೂ ಪರಿವಾರಕ್ಕೆ ಸೇರಿಸಿಕೊಂಡುದು ಒಂದು ಕುತೂಹಲದ ಮತ್ತು ಅಧ್ಯಯನ ಯೋಗ್ಯ ವಿಷಯ. ಮನುಷ್ಯರ ಹಾಗೆ ದೇವರುಗಳನ್ನೂ ಒಂದು ಕುಟುಂಬ ಮಾಡಿ ಅವಕ್ಕೆ ವ್ಯವಸ್ಥೆ ಕಲ್ಪಿಸಲಾಯಿತು. ಆ ವ್ಯವಸ್ಥೆಯನ್ನು “ದೇವರಗಳ ಗ್ರಾಮ’ ಎಂದು ಹೇಳಬಹುದು.

ತುಳುನಾಡಿನ ಬದುಕಿಲ್ಲಿ – ಆರಾಧನೆಗೆ ದೈವದೇವರುಗಳು; ಮಳೆಗಾಲದ ಕಷ್ಟದ ದಿನಗಳಲ್ಲಿ ಆಹಾರಕ್ಕೆ ಹಲಸಿನಕಾಯಿ ಎಂಬ ಎರಡು ವಿಷಯಗಳು ಒಂದಕ್ಕೊಂದು ತಳುಕು ಹಾಕಿಕೊಂಡಿರುವುದು ಪರಿಶೀಲನೆ ಮಾಡಬೇಕಾದ ವಿಷಯ. ಹಲಸಿನಕಾಯಿ ತುಳುನಾಡಿನ ಜನರ ಹೊಟ್ಟೆ ತುಂಬಿಸಿದ ಒಂದು ಆಹಾರ. ವಿಶೇಷ ಎಂದರೆ ದೈವ ದೇವರುಗಳ ಜೊತೆಗೆ ಹಲಸಿನಕಾಯಿಯ ಬಳಕೆಗೆ ಸಂಬಂಧಿಸಿದ ನಂಬಿಕೆ.

ಧಾರಾಕಾರ ಮಳೆಸುರಿಯುವ ಮಳೆಗಾಲದ ಮೂರು ತಿಂಗಳು ದಾರಿದ್ರÂದ ಕಷ್ಟಕಾರ್ಪಣ್ಯದ ಕಾಲ. ಒಂದೆಡೆ ಕೈಗಳಿಗೆ ಕೆಲಸವಿಲ್ಲ. ಕೆಲಸ ಇದ್ದರೂ ಮಳೆ ಸುರಿಯುವಾಗ ಕೆಲಸ ಮಾಡಲು ಸಾಧ್ಯವಿಲ್ಲ. ಇನ್ನೊಂದೆಡೆ ಹೊಟ್ಟೆಗೆ ಆಹಾರವಿಲ್ಲ. ಬಡತನ, ರೋಗರುಜಿನಗಳ ಜೊತೆಗೆ ಮನುಷ್ಯನ ಅಸಹಾಯಕತೆಯ ದಿನಗಳವು. ಆ ಕಾರ (ಕಾರ್ತೆಲ್‌) ತಿಂಗಳಲ್ಲಿ ಹಲಸಿನಕಾಯಿ ಬೆಳೆದು ಸಿಗುತ್ತಿತ್ತು. ದೇವರ ವರಪ್ರಸಾದದಂತೆ ಒದಗಿ ಬರುತ್ತಿದ್ದ ಹಲಸಿನ ಕಾಯಿಯ ಖಾದ್ಯ ಕಜ್ಜಾಯಗಳನ್ನು ದೈವದೇವರುಗಳಿಗರ್ಪಿಸಿ ಅನಂತರ ತಾವು ಉಪಯೋಗಿಸುವ ಪರಿಪಾಠ ಬೆಳೆದು ಬಂತು. ದೇವರಿಗೆ ಅರ್ಪಣೆ ಮಾಡಿದ ಮೇಲೆ ತಾನೇ ನಾವು ಪ್ರಸಾದ ಸ್ವೀಕರಿಸುವುದು?ಇದೊಂದು ಜನಪದ ನಂಬಿಕೆ ಆಗಿರಬಹುದು; ಆದರೆ ದೈವದೇವರು ನೆಲೆಸಿದ ಪ್ರದೇಶದಲ್ಲಿ ಸ್ಥಳೀಯ ಜನರು ಆ ದೈವಗಳಿಗೆ ಸಲ್ಲಿಸಿದ ಅತ್ಯುನ್ನತ ಭಕ್ತಿ ಗೌರವ. ಆ ಪದ್ಧತಿ ಇಂದಿಗೂ ಮುಂದುವರಿದುಕೊಂಡು ಬರುತ್ತಿದೆ.

ಯೇತಡ್ಕದಲ್ಲಿರುವ ಸದಾಶಿವ ದೇವರಿಗೆ “ಕಾರ’ (ಕಾರ್ತೆಲ್‌) ತಿಂಗಳಲ್ಲಿ ಹಲಸಿನ ಹಣ್ಣಿನ ಕಜ್ಜಾಯ (ಅಪ್ಪ) ಮಾಡಿ ಸಮರ್ಪಿಸುವ ವಿಶೇಷವಾದೊಂದು “ಅಪ್ಪಸೇವೆ’ ಹಿಂದಿನಿಂದಲೂ ನಡೆದುಕೊಂಡು ಬಂದಿದೆ (ಕಾರ ತಿಂಗಳು ಸಾಮಾನ್ಯವಾಗಿ ಜೂನ್‌ ಮಧ್ಯಭಾಗದಿಂದ ಜುಲೈ ಮಧ್ಯಭಾಗದ ಅವಧಿಯಲ್ಲಿ ಬರುತ್ತದೆ). ಅಂದು ಗ್ರಾಮಸ್ಥರಿಗೆಲ್ಲ ಒಂದು ಹಬ್ಬ. ನಿಸರ್ಗದಿಂದ ತಮಗೆ ಸಿಗುವ ಅಮೂಲ್ಯವಾದ ಆಹಾರ ವಸ್ತುವನ್ನು ದೇವರಿಗೆ ಸಮರ್ಪಿಸಿ ಅನಂತರ ತಾವು ಸ್ವೀಕರಿಸುವ ಈ ಸೇವೆಯ ಹಿಂದೆ ಬದುಕು ಕೊಟ್ಟ ದೇವರಿಗೆ ಕೃತಜ್ಞತೆ ಸಲ್ಲಿಸುವ ಆರಾಧನಾ ಮನೋಭಾವವನ್ನು ಕಾಣಬಹುದು. ನೈವೇದ್ಯ ಮಾಡಿದ ಮೇಲೆಯೇ ಹಲಸಿನ ಕಾಯಿ ದೋಸೆ, ಹಣ್ಣಿನ ಕೊಟ್ಟಿಗೆ, ಕಜ್ಜಾಯ (ಅಪ್ಪ ಅಥವಾ ಸುಟ್ಟವು) ಅಥವಾ ಪಾಯಸ ಮಾಡಿ ಉಣ್ಣ ಬೇಕೆಂಬ ಕಟ್ಟಳೆ ಅಲ್ಲಿನ ಕೆಲವು ಮನೆತನದಲ್ಲಿದೆ. ಇಂತಹ ನಂಬಿಕೆ- ಕಟ್ಟುಕಟ್ಟಳೆ ಗ್ರಾಮ ಬದುಕಿನ ಮೌಲ್ಯಗಳಿಗೆ ಕನ್ನಡಿಯಾಗಿದೆ.

ದೈವ/ಭೂತಗಳು
ಕುಂಬಳೆ ಸೀಮೆಯಲ್ಲಿ ಮಡ್ವ, ಕಾನ ಮೊದಲಾದ ಕಡೆ ಹವ್ಯಕ ಕುಟುಂಬಗಳಿಗೆ ಸಂಬಂಧಿಸಿದ ದೈವ/ಭೂತಗಳಿವೆ. ಮಡ್ವದ ಮತ್ತು ಕಾನದ ಧೂಮಾವತಿ ಇಂತಹ ದೈವಗಳು. ಸುಮಾರು ಮುನ್ನೂರೈವತ್ತು ವರ್ಷಗಳ ಹಿಂದೆ ದೈವಗಳ ಆರಾಧನೆಯ ಉದ್ದೇಶಕ್ಕೆ ಆಸ್ತಿಯನ್ನು ಉಂಬಳಿ ಬಿಟ್ಟು, ಕಟ್ಟುಕಟ್ಟಳೆ ಮಾಡಿಕೊಂಡ ನಿದರ್ಶನ ಕುಂಬಳೆ ಸೀಮೆಯಲ್ಲಿದೆ. ಇಂದಿಗೂ ಮಡ್ವ ಮತ್ತು ಕಾನದಲ್ಲಿ ಧೂಮಾವತಿಗೆ ನಿರ್ದಿಷ್ಟ ಹವ್ಯಕ ಮನೆತನದವರು ವಾರ್ಷಿಕ ನೇಮ ಆರಾಧನೆಗಳನ್ನು ನಡೆಸಿಕೊಂಡು ಬರುತ್ತಿರುವುದನ್ನು ಕಾಣಬಹುದು.

ಹನ್ನೆರಡು- ಹದಿಮೂರು ತಲೆಮಾರುಗಳ ನಂತರವೂ ಈ ವ್ಯವಸ್ಥೆ ನಡೆದುಕೊಂಡು ಬರುತ್ತಿರುವುದು ತುಳುನಾಡಿನ ದೈವದೇವರುಗಳ ಪಾರಮ್ಯಕ್ಕೆ ಒಂದು ಉದಾಹರಣೆ. ತುಳುನಾಡಿನಲ್ಲಿ ಇನ್ನೂ ಕೆಲವು ಕಡೆ ಇಂತಹ ರೂಢಿ-ರಿವಾಜುಗಳಿವೆ.

-ಡಾ| ವಸಂತಕುಮಾರ ಪೆರ್ಲ

ಟಾಪ್ ನ್ಯೂಸ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.