ಭವಿಷ್ಯದ ಕನಸು ಸಂಸ್ಥೆ ಬೆಳವಣಿಗೆಗೆ ಕಾರಣ: ಪದ್ಮನಾಭ ಕೊಂಕೋಡಿ

ಪೆರಡಾಲ ಸೇವಾ ಸಹಕಾರಿ ಬ್ಯಾಂಕ್‌ನ ಶತಮಾನೋತ್ಸವ ಸಮಾರೋಪ ಸಮಾರಂಭ

Team Udayavani, Jun 4, 2019, 6:00 AM IST

02-VNRPIC-04

ವಿದ್ಯಾನಗರ: ಶತಮಾನವನ್ನು ಕಂಡ ಈ ಸಂಸ್ಥೆಯನ್ನು ಸಮಾಜಕ್ಕೆ ಅರ್ಪಿಸಿದ ಕೀರ್ತಿಯಲ್ಲಿ ಖಂಡಿಗೆ ಮನೆತನದವರ ಪಾಲು ಮಹತ್ತರವಾಗಿದ್ದು, ಪರಸ್ಪರ ಸಹಕಾರದಿಂದ ಅದೆಷ್ಟೋ ಕೆಲಸಗಳನ್ನು ಸಮಾಜಮುಖೀಯಾಗಿ ಮಾಡಬಹುದಾಗಿದೆ ಎಂಬುದಕ್ಕೆ ನೀರ್ಚಾಲು ಪರಿಸರವು ಸಾಕ್ಷಿಯಾಗಿದೆ. ಕನಸಿದ್ದವರು ಸಹಕಾರಿ ಕ್ಷೇತ್ರದ ನೇತೃತ್ವವನ್ನು ವಹಿಸಿಕೊಂಡಾಗ ಆ ಸಂಸ್ಥೆ ಬೆಳಗುತ್ತದೆ. ಈ ನಿಟ್ಟಿನಲ್ಲಿ ಹಿರಿಯರ ಶ್ರಮದಿಂದ ಬ್ಯಾಂಕ್‌ನ ಸಾಧನೆ ಅಪಾರ ಎಂದು ಸಹಕಾರ ಭಾರತಿಯ ಅಖೀಲ ಭಾರತ ಸಹ ಸಂಘಟನಾ ಕಾರ್ಯದರ್ಶಿ ಕೊಂಕೋಡಿ ಪದ್ಮನಾಭ ತಿಳಿಸಿದರು.

ಶನಿವಾರ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ನಡೆದ ಪೆರಡಾಲ ಸೇವಾ ಸಹಕಾರಿ ಬ್ಯಾಂಕ್‌ನ ಶತಮಾನೋತ್ಸವ ಸಮಾರಂಭದ ಸಮಾರೋಪ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಸಹಕಾರಿ ಕ್ಷೇತ್ರಕ್ಕೆ ಯಾವುದೇ ರಾಜ್ಯ ಸರಕಾರವಾಗಲಿ, ಕೇಂದ್ರ ಸರಕಾರವಾಗಲಿ ಬೆಂಬಲವನ್ನು ನೀಡುತ್ತಿಲ್ಲ. ಆದುದರಿಂದ ಸಹಕಾರಿ ಕ್ಷೇತ್ರವು ಸಂಕಷ್ಟದ ಮಧ್ಯೆ ಬೆಳೆಯಬೇಕಾಗಿದೆ. ಸಹಕಾರ ಭಾರತಿಯ ಸದಸ್ಯರ ನೇತƒತ್ವದಲ್ಲಿ ಈ ಎಲ್ಲ ಅಡೆತಡೆಗಳನ್ನು ಪೆರಡಾಲ ಸೇವಾ ಸಹಕಾರಿ ಬ್ಯಾಂಕ್‌ ಮೀರಿ ನಿಂತಿದೆ ಎಂದು ಅಭಿಮಾನದಿಂದ ಹೇಳಬಹುದಾಗಿದೆ. ದೇಶದಲ್ಲಿರುವ ಒಂದೇ ಒಂದು ಸ್ವಯಂಸೇವಾ ಸಂಘಟನೆ ಸಹಕಾರ ಭಾರತಿಯಾಗಿದೆ ಎಂದರು.

ಸಹಕಾರ ಭಾರತಿಯ ಅಖೀಲ ಭಾರತ ಕಾರ್ಯದರ್ಶಿ ನ್ಯಾಯವಾದಿ ಕರುಣಾಕರನ್‌ ನಂಬ್ಯಾರ್‌ ಮಾತನಾಡಿದರು.ಬ್ಯಾಂಕ್‌ನ ಸದಸ್ಯರಿಗಿರುವ ಗ್ರೂಪ್‌ ಇನ್ಶೂರೆನ್ಸ್‌ ಯೋಜನೆಯನ್ನು ಯುನೈಟೆಡ್‌ ಇಂಡಿಯಾ ಇನ್ಶೂರೆನ್ಸ್‌ನ ವಿಭಾಗ ಪ್ರಬಂಧಕ ಹರೀಶ್‌ ಕುಮಾರ್‌ ಅವರು ಪೆರುಮುಂಡ ಶಂಕರನಾರಾಯಣ ಭಟ್ಟರಿಗೆ ನೀಡಿ ಉದ್ಘಾಟಿಸಿ ದರು. ಸಹಕಾರ ಭಾರತಿಯ ಕಾಸರಗೋಡು ಜಿಲ್ಲಾ ಅಧ್ಯಕ್ಷ ಗಣಪತಿ ಕೋಟೆಕಣಿ ಶುಭಾಶಂಸನೆಗೆ„ದು ಮಾತನಾಡಿದರು.

ಕುಂಬಾxಜೆ ಸೇವಾ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಎಂ. ಸಂಜೀವ ಶೆಟ್ಟಿ, ನೀರ್ಚಾಲು ಕೆ.ಎ.ಸಿ.ಯಂ. ಸೊಸೆ„ಟಿಯ ಅಧ್ಯಕ್ಷ ಪದ್ಮರಾಜ ಪಟ್ಟಾಜೆ, ನೀರ್ಚಾಲು ಕ್ಷೀರೋತ್ಪಾದಕ ಸಹಕಾರಿ ಸಂಘದ ಅಧ್ಯಕ್ಷ ಉದನೇಶ ವೀರ, ಕೆ.ವಿ.ವಿ.ಇ.ಎಸ್‌.ಬದಿಯಡ್ಕ ಘಟಕ ಅಧ್ಯಕ್ಷ ಮುಹಮ್ಮದ್‌ ಹಾಜಿ ಕುಂಜಾರು, ಕೆ.ವಿ.ವಿ.ಇ.ಎಸ್‌. ನೀರ್ಚಾಲು ಘಟಕದ ಅಧ್ಯಕ್ಷ ಸುಬ್ರಹ್ಮಣ್ಯ ಭಟ್‌ ಎಂ., ಬ್ಯಾಂಕ್‌ನ ಕಾರ್ಯದರ್ಶಿ ಅಜಿತ ಕುಮಾರಿ ಶುಭಕೋರಿದರು.

ನೂತನ ಕಟ್ಟಡ ವಾಸ್ತುಶಿಲ್ಪಿ, ಸಿವಿಲ್‌ ಇಂಜಿನಿಯರ್‌ ಕೆ.ಎನ್‌.ಭಟ್‌ ಬದಿಯಡ್ಕ, ಕಟ್ಟಡದ ಗುತ್ತಿಗೆದಾರ ರಾಜು ಸ್ಟೀಫನ್‌ ಕ್ರಾಸ್ತ ಬೇಳ ಅವರಿಗೆ ಗೌರವಾರ್ಪಣೆ ನೀಡಲಾಯಿತು.

ಸಂಸ್ಥೆಯ ಅಭಿವೃದ್ಧಿಗೆ ಪೂರಕವಾಗಿ ದುಡಿದ ಜಯರಾಮ ಶಾನುಭೋಗ್‌, ಮಾಜಿ ಅಧ್ಯಕ್ಷರಾದ ವಾಶೆ ಶ್ರೀಕೃಷ್ಣ ಭಟ್‌ ಹಾಗೂ ಕೋರಿಕ್ಕಾರು ವಿಷ್ಣು ಭಟ್‌, ಸಿಬ್ಬಂದಿ ವರ್ಗದವರಾದ ಸುಬ್ರಹ್ಮಣ್ಯ ಭಟ್‌ ಪುದುಕೋಳಿ, ವಿಶ್ವನಾಥ ಭಟ್‌ ಕೆ., ಶ್ರೀಕೃಷ್ಣ ಭಟ್‌ ವಳಕ್ಕುಂಜ, ವೆಂಕಟ್ರಮಣ ಭಟ್‌ ಬರ್ಲ, ಶಂಕರ ಭಟ್‌ ಬೊಳುಂಬು, ರಾಮನಾಯ್ಕ ಸರಳಿ ಕುಂಟಿಕಾನ ಹಾಗೂ ಕರ್ನಾಟಕ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಪ್ರಥಮ ರ್‍ಯಾಂಕ್‌ ವಿಜೇತ ವಿದ್ಯಾರ್ಥಿ ಶ್ರೀಕೃಷ್ಣ ಶರ್ಮ ಕಡಪ್ಪು ಅವರನ್ನು ಸಮ್ಮಾನಿಸಲಾಯಿತು.

ಕರಿಂಬಿಲ ಲಕ್ಷ್ಮಣ ಪ್ರಭು ಸ್ವಾಗತಿಸಿ, ಶಂಕರನಾರಾಯಣ ಶರ್ಮ ನಿಡುಗಳ ವಂದಿಸಿದರು. ಪ್ರಾರಂಭದಲ್ಲಿ ಶ್ರೀಪತಿ ಪೆರ್ವ ಪ್ರಾರ್ಥಿಸಿದರು. ರವಿಕಾಂತ ಕೇಸರಿ ಕಡಾರು ನಿರೂಪಿಸಿದರು.

ಸಹಕಾರದಿಂದ ಹೆಮ್ಮೆ
ಸದಸ್ಯರು, ನೌಕರರು, ಗ್ರಾಹಕರು ಪರಸ್ಪರ ಸಹಕಾರ ಮನೋಭಾವದಿಂದ ಮುಂದುವರಿದರೆ ಸಹಕಾರಿ ಸಂಸ್ಥೆಗಳು ಪ್ರಗತಿಯನ್ನು ಕಾಣುತ್ತದೆ. ನೀರ್ಚಾಲು ಪರಿಸರದಲ್ಲಿ ಪರಸ್ಪರ ಸಹಕಾರೀ ಮನೋಭಾವದೊಂದಿಗೆ ಮುಂದುವರಿಯುವ ಉತ್ತಮ ಮನಸ್ಸುಗಳಿವೆ ಎಂಬುದು ನಮಗೆ ಹೆಮ್ಮೆಯಾಗಿದೆ.
-ಜಯದೇವ ಖಂಡಿಗೆ
ಅಧ್ಯಕ್ಷ ಪೆರಡಾಲ ಸೇವಾ ಸಹಕಾರಿ ಬ್ಯಾಂಕ್‌

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.