ತೀವ್ರ ಆರ್ಥಿಕ ಬಿಕ್ಕಟ್ಟು: ಸಾಲದ ಕೂಪದಲ್ಲಿ ಕೇರಳರಾಜ್ಯ ರಸ್ತೆ ಸಾರಿಗೆ

Team Udayavani, Feb 9, 2018, 8:23 PM IST

Kerala-KSRTC-9-2.jpg

ಕಾಸರಗೋಡು: ಕೇರಳ ರಾಜ್ಯ ರಸ್ತೆ  ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ)ದ ಪ್ರತಿ ಬಸ್‌ ತಲಾ ಒಂದು ಕೋಟಿ ರೂಪಾಯಿಗಿಂತಲೂ ಹೆಚ್ಚು ಸಾಲದ ಹೊರೆ ಹೊತ್ತಿದೆೆ. ಕಳೆದ ಅನೇಕ ವರ್ಷಗಳಿಂದ ಕೇರಳ ಸರಕಾರಿ ಬಸ್‌ಗಳ ಲಾಭಾಂಶ ಕಡಿಮೆಯಾಗುತ್ತಿದ್ದು, ವೆಚ್ಚದ ಪ್ರಮಾಣ ಅಧಿಕವಾಗುತ್ತಿದೆ. ಆದ್ದರಿಂದ ಸಾಲದ ಮೊತ್ತ  ಹೆಚ್ಚುತ್ತಾ ಹೋಗುತ್ತಿದೆ. ಕೇರಳ ಎಸ್‌ಆರ್‌ಟಿಸಿ ವಿಭಾಗವು ಒಟ್ಟು ಆರು ಸಾವಿರ ಬಸ್‌ಗಳನ್ನು ಹೊಂದಿದ್ದು, ಆ ಪೈಕಿ ಐದು ಸಾವಿರ ಬಸ್‌ಗಳು ಇದೀಗ ದಿನಂಪ್ರತಿ ಸರ್ವೀಸ್‌ ನಡೆಸುತ್ತಿವೆ. ಇದನ್ನೆಲ್ಲ ಅವಲೋಕಿಸುವಾಗ ಕೆಎಸ್‌ಆರ್‌ಟಿಸಿ ಸದ್ಯ 5,079.59 ಕೋಟಿ ರೂ.ಗಳ ಸಾಲ ಹೊಂದಿದೆ. ಅಂದರೆ ಪ್ರತಿ ಬಸ್‌ ತಲಾ ಒಂದು ಕೋಟಿ ರೂ. ಗಿಂತಲೂ ಹೆಚ್ಚು ಸಾಲದ ಹೊರೆಯಲ್ಲಿ ಸಿಲುಕಿಕೊಂಡಿದೆ. ಇದು ಕೆಎಸ್‌ಆರ್‌ಟಿಸಿ ವಿಭಾಗದ ಅಧಿಕೃತ ಲೆಕ್ಕಾಚಾರವಾಗಿದೆ.

ಆದಾಯ ಮತ್ತು  ಖರ್ಚುಗಳ ನಡುವಿನ ಅಂತರ ಹೆಚ್ಚಾಗಿರುವುದೇ ಕೆಎಸ್‌ಆರ್‌ಟಿಸಿ ನಷ್ಟದ ಕೂಪದಲ್ಲಿ  ಬೀಳಲು ಪ್ರಧಾನ ಕಾರಣವಾಗಿದೆ. ಕೆಎಸ್‌ಆರ್‌ಟಿಸಿ ವಿಭಾಗದ ಅಂಕಿ ಅಂಶಗಳನ್ನು ಲೆಕ್ಕಹಾಕಿದಾಗ ಈ ವಲಯವು ಹೊಂದಿರುವ ಸಾಲದ ಹೊರೆಯಿಂದ ಸದ್ಯ ಹೊರಬರಲು ಸಾಧ್ಯವೇ ಇಲ್ಲ  ಎಂಬುದು ಸಾಬೀತಾಗುತ್ತಿದೆ. ಕೆಎಸ್‌ಆರ್‌ಟಿಸಿ ಬ್ಯಾಂಕ್‌ಗಳ ಒಕ್ಕೂಟ 1,246.40 ಕೋಟಿ ರೂ., ಪಾಲ್ಗಾಟ್‌ ಜಿಲ್ಲಾ  ಸಹಕಾರಿ ಬ್ಯಾಂಕ್‌ 372.57 ಕೋಟಿ ರೂ., ಹುಡ್ಕೋ 255.36 ಕೋಟಿ ರೂ., ಕೆಡಿಡಿಎಫ್‌ಸಿ 885.38 ಕೋಟಿ ರೂ. ಸಾಲ ನೀಡಿದೆ.

ಕೆಎಸ್‌ಆರ್‌ಟಿಸಿಯ ತಿಂಗಳ ಆದಾಯ 165 ಕೋಟಿ ರೂ. ಆಗಿದ್ದರೆ, ವೆಚ್ಚ 354 ಕೋಟಿ ರೂ. (ಅಂದರೆ ಆದಾಯಕ್ಕಿಂತ ಇಮ್ಮಡಿ ವೆಚ್ಚ) ಆಗಿದೆ. ವೇತನಕ್ಕಾಗಿ 84.5 ಕೋಟಿ ರೂ., ಪಿಂಚಣಿಗಾಗಿ 60 ಕೋಟಿ ರೂ., ಡೀಸೆಲ್‌ಗೆ 90 ಕೋಟಿ ರೂ. ಮತ್ತಿತರ ಖರ್ಚುಗಳಿಗಾಗಿ ಪ್ರತಿ ತಿಂಗಳು ತಲಾ 120.50 ಕೋಟಿ ರೂ. ಮೀಸಲಿರಿಸಬೇಕಾಗಿದೆ. ಡೀಸೆಲ್‌ ಖರೀದಿಸಿದ ವತಿಯಿಂದ ತೈಲ ಸಂಸ್ಥೆಗಳಿಗೆ 128 ಕೋಟಿ ರೂ. ಮತ್ತು ಬಿಡಿಭಾಗಗಳು ಖರೀದಿಸಿದ ವತಿಯಿಂದ 25 ಕೋಟಿ ರೂ. ನೀಡಲು ಬಾಕಿಯಿದೆ. ಇದನ್ನೆಲ್ಲಾ  ಅವಲೋಕಿಸಿದಾಗ ಕೇರಳ ಕೆಎಸ್‌ಆರ್‌ಟಿಸಿ ಸಂಸ್ಥೆಯ ಉಳಿವು ಯಕ್ಷಪ್ರಶ್ನೆಯಾಗಿಯೇ ಮುಂದುವರಿಯುತ್ತಿದೆ.

ಟಾಪ್ ನ್ಯೂಸ್

 ಪರ್ಯಾಯ ಮಹೋತ್ಸವ: 5ಡಿವೈಎಸ್‌ಪಿ, 62 ಮಂದಿ ಎಎಸ್‌ಐ; ಭದ್ರತೆಗೆ ಸಿಸಿಟಿವಿ ಕಣ್ಗಾವಲು

 ಪರ್ಯಾಯ ಮಹೋತ್ಸವ: 5ಡಿವೈಎಸ್‌ಪಿ, 62 ಮಂದಿ ಎಎಸ್‌ಐ; ಭದ್ರತೆಗೆ ಸಿಸಿಟಿವಿ ಕಣ್ಗಾವಲು

ಪರ್ಯಾಯದ ಸುಗ್ರಾಸ ಭೋಜನಕ್ಕೆ ಮಟ್ಟುಗುಳ್ಳ

ಪರ್ಯಾಯದ ಸುಗ್ರಾಸ ಭೋಜನಕ್ಕೆ ಮಟ್ಟುಗುಳ್ಳ

ಪರ್ಯಾಯ ಶ್ರೀಗಳಿಂದ ಉಗ್ರಾಣ ವೀಕ್ಷಣೆ

ಪರ್ಯಾಯ ಶ್ರೀಗಳಿಂದ ಉಗ್ರಾಣ ವೀಕ್ಷಣೆ

ದಂಡತೀರ್ಥ ಮಠ: ಕೃಷ್ಣಾಪುರ ಶ್ರೀಗಳ ತೀರ್ಥಸ್ನಾನಕ್ಕೆ ಸಜ್ಜು

ದಂಡತೀರ್ಥ ಮಠ: ಕೃಷ್ಣಾಪುರ ಶ್ರೀಗಳ ತೀರ್ಥಸ್ನಾನಕ್ಕೆ ಸಜ್ಜು

ನೊವಾಕ್‌ ಜೊಕೋವಿಕ್‌ ಇಲ್ಲದ ಆಸ್ಟ್ರೇಲಿಯನ್‌ ಓಪನ್‌

ನೊವಾಕ್‌ ಜೊಕೋವಿಕ್‌ ಇಲ್ಲದ ಆಸ್ಟ್ರೇಲಿಯನ್‌ ಓಪನ್‌

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ ಮೇಲೆ ಸವಾರಿ ಮಾಡಿದ ಪಾಟ್ನಾ ಪೈರೇಟ್ಸ್‌

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ ಮೇಲೆ ಸವಾರಿ ಮಾಡಿದ ಪಾಟ್ನಾ ಪೈರೇಟ್ಸ್‌

ಮಣಿಪಾಲ: ಮಂಚಿಯ ರಾಜೀವನಗರದ ಮೀಸಲು ಅರಣ್ಯದಲ್ಲಿ ಬೆಂಕಿ ಅವಘಡ; ತಪ್ಪಿದ ಭಾರೀ ದುರಂತ

ಮಣಿಪಾಲ: ಮಂಚಿ ರಾಜೀವನಗರದ ಮೀಸಲು ಅರಣ್ಯದಲ್ಲಿ ಬೆಂಕಿ ಅವಘಡ; ತಪ್ಪಿದ ಭಾರೀ ದುರಂತಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asdsad

30 ಗಂಟೆ ಸಮುದ್ರದಲ್ಲಿ ಈಜಿ ದಡ ಸೇರಿದ ಮೀನುಗಾರ : ಪೊಲೀಸರ ತನಿಖೆ ಆರಂಭ

ಡೀಸೆಲ್‌ಗೆ ಹಣವಿಲ್ಲ; ರೋಗಿಗಳಿಗೆ ಲಭ್ಯವಾಗದ ಆ್ಯಂಬುಲೆನ್ಸ್‌ ಸೇವೆ

ಡೀಸೆಲ್‌ಗೆ ಹಣವಿಲ್ಲ; ರೋಗಿಗಳಿಗೆ ಲಭ್ಯವಾಗದ ಆ್ಯಂಬುಲೆನ್ಸ್‌ ಸೇವೆ

ವೃದ್ಧರ ಮನೆಯನ್ನೇ ಗುರಿಯಾಗಿಸಿ ದರೋಡೆ ಮಾಡುವ ಆಗಂತುಕ!

ವೃದ್ಧರ ಮನೆಯನ್ನೇ ಗುರಿಯಾಗಿಸಿ ದರೋಡೆ ಮಾಡುವ ಆಗಂತುಕ!

crime (2)

ಮಡಿಕೇರಿ: ದಂಪತಿಯ ಸಮಯ ಪ್ರಜ್ಞೆ; ತಪ್ಪಿತು ಅನಾಹುತ

ಭಗವದ್ಗೀತೆ ಕಂಠಪಾಠ ಸ್ಪರ್ಧೆ: ಸಂವೃತಾ ಪ್ರಥಮ

ಭಗವದ್ಗೀತೆ ಕಂಠಪಾಠ ಸ್ಪರ್ಧೆ: ಸಂವೃತಾ ಪ್ರಥಮ

MUST WATCH

udayavani youtube

ಸಾಲಿಗ್ರಾಮ ಗುರುನರಸಿಂಹ, ಆಂಜನೇಯ ರಥೋತ್ಸವ ಸಂಪನ್ನ

udayavani youtube

ನನ್ನಮ್ಮ ಸೂಪರ್ ಸ್ಟಾರ್ ‘ಸಮನ್ವಿ’ ಅಸ್ತಿ ಕಾವೇರಿ ನದಿಯಲ್ಲಿ ವಿಸರ್ಜನೆ

udayavani youtube

ಮೈಸೂರು ಮೃಗಾಲಯದಲ್ಲಿ ಹುಟ್ಟುಹಬ್ಬ ಆಚರಣೆಗೊರಿಲ್ಲಾ ‘Demba’ ಗೆ ಖುಷಿಯೋ ಖುಷಿ

udayavani youtube

ವಿವಿಧ ಮುಹೂರ್ತಗಳು ಪರ್ಯಾಯದ ವಿಶೇಷತೆ

udayavani youtube

ಮೂಡಿಗೆರೆ : ಇಡೀ ಹಳ್ಳಿಯ ಜನರಿಗೆ ಕೆಮ್ಮು! ಇದು ಹೆದ್ದಾರಿ ಪ್ರಾಧಿಕಾರದ ಕಾಮಗಾರಿಯ ಫಲ

ಹೊಸ ಸೇರ್ಪಡೆ

 ಪರ್ಯಾಯ ಮಹೋತ್ಸವ: 5ಡಿವೈಎಸ್‌ಪಿ, 62 ಮಂದಿ ಎಎಸ್‌ಐ; ಭದ್ರತೆಗೆ ಸಿಸಿಟಿವಿ ಕಣ್ಗಾವಲು

 ಪರ್ಯಾಯ ಮಹೋತ್ಸವ: 5ಡಿವೈಎಸ್‌ಪಿ, 62 ಮಂದಿ ಎಎಸ್‌ಐ; ಭದ್ರತೆಗೆ ಸಿಸಿಟಿವಿ ಕಣ್ಗಾವಲು

ಪರ್ಯಾಯೋತ್ಸವಕ್ಕೆ ಸ್ವಚ್ಛತೆಯ ಸ್ಪರ್ಶ: ಮೊಬೈಲ್‌ ಶೌಚಾಲಯ ಬಳಕೆಗೆ ಸಿದ್ಧ

ಪರ್ಯಾಯೋತ್ಸವಕ್ಕೆ ಸ್ವಚ್ಛತೆಯ ಸ್ಪರ್ಶ: ಮೊಬೈಲ್‌ ಶೌಚಾಲಯ ಬಳಕೆಗೆ ಸಿದ್ಧ

“ಸಂಸ್ಕೃತದಲ್ಲಿ ಅಭಿನಂದನೆ ಹೆಮ್ಮೆಯ ವಿಚಾರ’

“ಸಂಸ್ಕೃತದಲ್ಲಿ ಅಭಿನಂದನೆ ಹೆಮ್ಮೆಯ ವಿಚಾರ’

ಪರ್ಯಾಯದ ಸುಗ್ರಾಸ ಭೋಜನಕ್ಕೆ ಮಟ್ಟುಗುಳ್ಳ

ಪರ್ಯಾಯದ ಸುಗ್ರಾಸ ಭೋಜನಕ್ಕೆ ಮಟ್ಟುಗುಳ್ಳ

ಅಶ್ವತ್ಥ ಎಲೆಯಲ್ಲಿ ಮೂಡಿಬಂದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು

ಅಶ್ವತ್ಥ ಎಲೆಯಲ್ಲಿ ಮೂಡಿಬಂದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.