ಚಾರಣ ಪ್ರಿಯ ಪ್ರವಾಸಿಗರಿಗೆ ಸಂಕಷ್ಟ

ರಾಣಿಪುರಂನಲ್ಲಿ ಲ್ಯಾಂಡ್‌ ಫೋನ್‌ ನಿಶ್ಚಲ

Team Udayavani, Oct 12, 2019, 5:03 AM IST

11KSDE7

ಕಾಸರಗೋಡು: ಚಾರಣ ಪ್ರಿಯರ ಸ್ವರ್ಗ ಎಂದೇ ಪ್ರಸಿದ್ಧವಾದ ರಾಣಿಪುರಂ “ಕೇರಳದ ಊಟಿ’ ಎಂದು ಗುರುತಿಸಿಕೊಂಡಿದೆ. ಈ ಕಾರಣದಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕೃತಿ ಸೌಂದರ್ಯ ಆಸ್ವಾದಿಸಲು ಬರುತ್ತಿದ್ದಾರೆ. ಆದರೆ ಇಲ್ಲಿ ಕೆಲವು ದಿನಗಳಿಂದ ಲ್ಯಾಂಡ್‌ ಫೋನ್‌ ನಿಶ್ಚಲಗೊಂಡಿರುವುದರಿಂದ ಪ್ರವಾಸಿಗರು ಯಾರೊಂದಿಗೂ ಸಂಪರ್ಕ ಸಾಧಿಸಲು ಸಾಧ್ಯವಾಗದೆ ಸಂಕಷ್ಟ ಎದುರಿಸುತ್ತಿದ್ದಾರೆ.

ಹರಿದ್ವರ್ಣದಿಂದ ಕಂಗೊಳಿಸುವ ರಾಣಿಪುರಂ ಪ್ರವಾಸಿ ಕೇಂದ್ರದಲ್ಲಿ ಕಳೆದ ಹತ್ತು ದಿನಗಳಿಂದ ದೂರವಾಣಿ ಸಂಪರ್ಕ ಕಡಿದಿದೆ. ಕಡಿದು ಹೋಗಿರುವ ದೂರವಾಣಿ ಸಂಪರ್ಕವನ್ನು ದುರಸ್ತಿ ಗೊಳಿಸಲು ಸಂಬಂಧಪಟ್ಟವರು ಮುಂದಾ ಗದಿರುವುದರಿಂದ ಜನರು ಆಕ್ರೋಶಿತ ರಾಗಿದ್ದಾರೆ. ಇಲಾಖೆ ಅಧಿಕಾರಿಗಳ ಅವಗಣನೆಯನ್ನು ಪ್ರತಿಭಟಿಸಿದ್ದಾರೆ.

ಮೊದಲೇ ರಾಣಿಪುರಂನಲ್ಲಿ ಮೊಬೈಲ್‌ ರೇಂಜ್‌ ಇಲ್ಲ. ಇಂತಹ ಸಂದರ್ಭದಲ್ಲಿ ರಾಣಿಪುರಂಗೆ ಬರುವ ಪ್ರವಾಸಿಗರಿಗೆ ಸಂಪರ್ಕಿಸಬೇಕಾಗಿದ್ದಲ್ಲಿ ಬಿ.ಎಸ್‌.ಎನ್‌.ಎಲ್‌.ನ ಲ್ಯಾಂಡ್‌ ಫೋನ್‌ ಮಾತ್ರವೇ ಏಕೈಕ ಆಶ್ರಯವಾಗಿತ್ತು. ಆದರೆ ಇದೀಗ ಇದೂ ಕೈಕೊಟ್ಟಿದೆ. ನಿಶ್ಚಲಗೊಂಡ ಲ್ಯಾಂಡ್‌ ಫೋನ್‌ ದುರಸ್ತಿಗೊಳಿಸದಿರುವುದರಿಂದ ಇಲ್ಲಿಗೆ ಬರುವ ಪ್ರವಾಸಿಗರಿಗೆ ಸಮಸ್ಯೆ ಸೃಷ್ಟಿಯಾಗಿದೆ. ಪ್ರವಾಸಿಗರಿಗೆ ತಮ್ಮ ಮನೆಯವರೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗದ ಸ್ಥಿತಿ ಉಂಟಾಗಿದೆ.

ದಿನಗಳ ಹಿಂದೆ ರಾಣಿಪುರಂಗೆ ಬಂದಿದ್ದ ವ್ಯಕ್ತಿಯೋರ್ವರ ಮನೆಯಲ್ಲಿ ಸಂಭವಿಸಿದ ನಿಧನದ ಮಾಹಿತಿಯನ್ನು ರವಾನಿ ಸಲು ಸಾಧ್ಯವಾಗದಿದ್ದುದರಿಂದ ಭಾರೀ ಪ್ರತಿಭಟನೆಗೆ ಕಾರಣವಾಗಿತ್ತು.

ರಾಣಿಪುರಂ ಶಿಖರ
ಕಾಸರಗೋಡು ಜಿಲ್ಲೆಯ ಪ್ರಮುಖ ಪ್ರವಾಸೋದ್ಯಮ ಕೇಂದ್ರವಾಗಿರುವ ರಾಣಿಪುರಂ ಸಮುದ್ರ ಮಟ್ಟದಿಂದ 700 ಮೀ. ಎತ್ತರದಲ್ಲಿದೆ. ರಾಣಿಪುರಂ ಕೇರಳದ ಊಟಿ ಎಂದೂ ಜನಪ್ರಿಯವಾಗಿದೆ. ಮುಖ್ಯ ವಾಗಿ ರಾಣಿಪುರಂ ಪರಿಸರ ಪ್ರವಾಸೋ ದ್ಯಮಕ್ಕೆ ಹೆಸರುವಾಸಿ. ನಿತ್ಯ ಹರಿದ್ವರ್ಣ ಕಾಡುಗಳು, ಮನ್ಸೂನ್‌ ಕಾಡುಗಳನ್ನು ಹೊಂದಿರುವ ರಾಣಿಪುರಂ ಶೋಲಾ ಮರಗಳು, ಇನ್ನಿತರ ವಿಶೇಷ ಅರಣ್ಯ ಸಂಪತ್ತನ್ನು ಹೊಂದಿದೆ. ಈ ಗಿರಿಶಿಖರ ಹಲವಾರು ಪ್ರಾಣಿಪಕ್ಷಿ ಗಳಿಗೆ ವಾಸಸ್ಥಾನವಾಗಿದೆ. ಜಿಂಕೆ, ಆನೆಗಳು, ವಿವಿಧ ರೀತಿಯ ಮಂಗಗಳು, ಪಕ್ಷಿ ಪ್ರಭೇದಗಳು ಇಲ್ಲಿ ಕಾಣ ಸಿಗುತ್ತವೆ. ಕರ್ನಾಟಕದ ತಲಕಾವೇರಿ ಅಭಯಾ ರಣ್ಯದೊಂದಿಗೆ ರಾಣಿಪುರಂ ತನ್ನ ಗಡಿ ಯನ್ನು ವಿಲೀನಗೊಳಿಸುತ್ತದೆ. ಕೇರಳದ ಇತರ ಗಿರಿಧಾಮಗಳಂತೆ ರಾಣಿಪುರಂ ಅತ್ಯಂತ ಜನಪ್ರಿಯ ಚಾರಣ ಸ್ಥಳವಾಗಿದೆ. ಎತ್ತರದ ಟ್ರೆಕ್ಕಿಂಗ್‌ ಪಾಯಿಂಟ್‌ನ್ನು “ಮಣಿಮಾಲಾ’ ಎಂದು ಕರೆಯಲ್ಪಡುತ್ತದೆ. ಇಲ್ಲಿನ ಹಸಿರ ಸೌಂದರ್ಯ, ಸ್ವತ್ಛವಾದ ತಂಪು ಗಾಳಿ ಚಾರಣದ ದಣಿವು ನಿವಾರಿಸು ವಂತೆ ಮಾಡುತ್ತದೆ. ಪ್ರಕೃತಿಯ ಮಡಿಲ ಸೌಂದರ್ಯದಲ್ಲಿ ಆಯಾಸ ಮರೆಯಾ ಗುತ್ತದೆ. ಚಾರಣ ಮಾಡುವ ವೇಳೆ ಅಪರೂಪದ ಔಷ ಧೀಯ ಸಸ್ಯಗಳನ್ನು ಕಾಣ ಬಹುದು. ವಿವಿಧ ರೀತಿಯ ಜೀವಿ ಗಳು, ಹಲವು ಪ್ರಭೇದಗಳ ಪಕ್ಷಿ ಗಳನ್ನೂ ಗುರುತಿಸ ಬಹುದು. ರಾಣಿ ಪುರಂ ಚಾರಣವು ರೋಮಾಂಚನಕಾರಿ ಅನುಭವವನ್ನೂ ನೀಡುತ್ತದೆ.

ಉತ್ತರ ಲಭಿಸುತ್ತಿಲ್ಲ
ರಾಣಿಪುರಂ ಪ್ರದೇಶದಲ್ಲಿ ಪದೇ ಪದೇ ದೂರವಾಣಿ ಸಂಪರ್ಕ ಕಡಿಯುವುದರಿಂದ ತೀವ್ರ ಸಂಕಷ್ಟಕ್ಕೆ ಕಾರಣವಾಗುತ್ತಿದೆ. ರೋಗಿಗಳನ್ನು ಆಸ್ಪತ್ರೆಗೆ ಕೊಂಡೊಯ್ಯಲು ಆ್ಯಂಬುಲೆನ್ಸ್‌ ಕರೆಸಲು ಸಾಧ್ಯವಾಗದ ದುಸ್ಥಿತಿ ಇದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ದೂರವಾಣಿ ಇಲಾಖೆಯನ್ನು ಸಂಪರ್ಕಿಸಿದಾಗ ಸಂಬಂಧಪಟ್ಟವರಿಂದ ತೃಪ್ತಿಕರವಾದ ಉತ್ತರ ಲಭಿಸುತ್ತಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಟಾಪ್ ನ್ಯೂಸ್

16

Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್‌ ಮೈಂಡ್; ಗೋಲ್ಡಿ ಬ್ರಾರ್‌ ಶೂಟೌಟ್ – ವರದಿ

ಸತ್ಯ ಆದಷ್ಟು ಬೇಗ ಹೊರಬರಲಿದೆ… ವಿಚಾರಣೆಗೆ ಕಾಲಾವಕಾಶ ಕೋರಿದ ಪ್ರಜ್ವಲ್ ರೇವಣ್ಣ

ಸತ್ಯ ಆದಷ್ಟು ಬೇಗ ಹೊರಬರಲಿದೆ… ವಿಚಾರಣೆಗೆ ಕಾಲಾವಕಾಶ ಕೋರಿದ ಪ್ರಜ್ವಲ್ ರೇವಣ್ಣ

Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್‌ಗೆ ಮತಹಾಕಲಿ: ಯೋಗೇಂದ್ರ ಯಾದವ್

Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್‌ಗೆ ಮತಹಾಕಲಿ: ಯೋಗೇಂದ್ರ ಯಾದವ್

ರಜಿನಿಕಾಂತ್‌ ʼಕೂಲಿʼಯಲ್ಲಿ ಅನುಮತಿಯಿಲ್ಲದೆ ಹಾಡು ಬಳಕೆ: ಲೀಗಲ್‌ ನೋಟಿಸ್‌ ಕಳುಹಿಸಿದ ಇಳಯರಾಜ

ರಜಿನಿಕಾಂತ್‌ ʼಕೂಲಿʼಯಲ್ಲಿ ಅನುಮತಿಯಿಲ್ಲದೆ ಹಾಡು ಬಳಕೆ: ಲೀಗಲ್‌ ನೋಟಿಸ್‌ ಕಳುಹಿಸಿದ ಇಳಯರಾಜ

Viral: ಮದುವೆಯ ದಿನ ವಧುವಿಗೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಭಾವಚಿತ್ರ ಉಡುಗೊರೆ ನೀಡಿದ ವರ

Viral: ಮದುವೆಯ ದಿನ ವಧುವಿಗೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಭಾವಚಿತ್ರ ಉಡುಗೊರೆ ನೀಡಿದ ವರ

15-1

ಖಡಕ್ ಬಿಸಿಲು- ಪೊಲೀಸ್ ತಳ್ಳಾಟದಿಂದ ಸಂಸದ ಡಾ.‌ಜಾಧವ್ ಅಸ್ವಸ್ಥ: ಆಸ್ಪತ್ರೆಗೆ ದಾಖಲು

14-bidar

Prajwal Pendrive Case: ವಿಶ್ವದ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಘಟನೆ ಇದು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

16

Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್‌ ಮೈಂಡ್; ಗೋಲ್ಡಿ ಬ್ರಾರ್‌ ಶೂಟೌಟ್ – ವರದಿ

Gangolli: ಸ್ವಯಂ ಪ್ರೇರಣೆಯಿಂದ ಚಿತ್ರ ಕಲಾವಿದೆಯಾದ ತುಳಸಿ

Gangolli: ಸ್ವಯಂ ಪ್ರೇರಣೆಯಿಂದ ಚಿತ್ರ ಕಲಾವಿದೆಯಾದ ತುಳಸಿ

ಸತ್ಯ ಆದಷ್ಟು ಬೇಗ ಹೊರಬರಲಿದೆ… ವಿಚಾರಣೆಗೆ ಕಾಲಾವಕಾಶ ಕೋರಿದ ಪ್ರಜ್ವಲ್ ರೇವಣ್ಣ

ಸತ್ಯ ಆದಷ್ಟು ಬೇಗ ಹೊರಬರಲಿದೆ… ವಿಚಾರಣೆಗೆ ಕಾಲಾವಕಾಶ ಕೋರಿದ ಪ್ರಜ್ವಲ್ ರೇವಣ್ಣ

ಗುಲ್ವಾಡಿ: ಗುಜಿರಿ ಅಂಗಡಿಯಲ್ಲಿ ಅರಳಿದ ಗ್ರಂಥಾಲಯ-ತರಂಗ ವಾರಪತ್ರಿಕೆ ಪ್ರೇರಣೆ

ಗುಲ್ವಾಡಿ: ಗುಜಿರಿ ಅಂಗಡಿಯಲ್ಲಿ ಅರಳಿದ ಗ್ರಂಥಾಲಯ-ತರಂಗ ವಾರಪತ್ರಿಕೆ ಪ್ರೇರಣೆ

Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್‌ಗೆ ಮತಹಾಕಲಿ: ಯೋಗೇಂದ್ರ ಯಾದವ್

Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್‌ಗೆ ಮತಹಾಕಲಿ: ಯೋಗೇಂದ್ರ ಯಾದವ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.