ಉಪ್ಪಳ ನಯಾಬಜಾರ್‌ನಲ್ಲಿ  ಭೀಕರ ಅಪಘಾತ ನಾಲ್ವರ ಸಾವು


Team Udayavani, Jan 5, 2017, 3:45 AM IST

acc.jpg

- ಒಂದೇ ಕುಟುಂಬದ ಮೂವರ ಸಹಿತ ನಾಲ್ವರ ಸಾವು  
- ಮಗನನ್ನು ಕಾಲೇಜಿಗೆ ಬಿಡಲು ತೆರಳುತ್ತಿದ್ದರು

ಉಪ್ಪಳ: ಕೆಲವು ದಿನಗಳ ಹಿಂದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ವಾಹನ ಅಪಘಾತ ಮರೆಯುವ ಮುನ್ನವೇ ಮತ್ತೆ ಬುಧವಾರ ಮುಂಜಾನೆ ಉಪ್ಪಳ ನಯಾಬಜಾರ್‌ನಲ್ಲಿ ಸಂಭವಿಸಿದ ಭೀಕರ ವಾಹನ ಅಪಘಾತದಲ್ಲಿ ಒಂದೇ ಕುಟುಂಬದ ಮೂವರ ಸಹಿತ ನಾಲ್ವರು ಸಾವಿಗೀಡಾಗಿದ್ದಾರೆ.

ಡಿಸೈರ್‌ ಸ್ವಿಫ್ಟ್‌ ಕಾರು ಹಾಗೂ ಕಂಟೈನರ್‌ ಲಾರಿ ಪರಸ್ಪರ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ದಂಪತಿ, ಪುತ್ರ ಹಾಗೂ ಸ್ನೇಹಿತ ಘಟನಾ ಸ್ಥಳದಲ್ಲೇ ಮೃತಪಟ್ಟರು. ತೃಶ್ಶೂರ್‌ ಚೇಳಕ್ಕರ ನಿವಾಸಿಗಳಾದ ಡಾ| ರಾಮನಾರಾಯಣ (52), ಪತ್ನಿ ವತ್ಸಲಾ (48), ಪುತ್ರ ರಂಜಿತ್‌ (20) ಮತ್ತು ರಂಜಿತ್‌ನ ಸ್ನೇಹಿತ ನಿತಿನ್‌ (20) ಮೃತಪಟ್ಟವರು.

ಉಪ್ಪಳ ಸಮೀಪದ ನಯಾ ಬಜಾರ್‌ ಎ.ಜೆ. ಆಂಗ್ಲ ಮಾಧ್ಯಮ ಶಾಲೆಯ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಮುಂಜಾನೆ 5.30ರ ಸುಮಾರಿಗೆ ಭೀಕರ ಅಪಘಾತ ಸಂಭವಿಸಿತು.

ತೃಶ್ಶೂರ್‌ನಿಂದ ಮಂಗಳೂರು ಕಡೆ ಸಾಗುತ್ತಿದ್ದ ಕಾರಿಗೆ ಎದುರಿನಿಂದ ಬಂದ ಕಂಟೈನರ್‌ ಲಾರಿ ಢಿಕ್ಕಿ ಹೊಡೆಯಿತು. ಚೇಳಕ್ಕರದ ಪ್ರಸಿದ್ಧ ವೈದ್ಯರಾದ ಡಾ| ರಾಮನಾರಾಯಣ ಅವರ ಪುತ್ರ ರಂಜಿತ್‌ ಚಿಕ್ಕಮಗಳೂರಿನ ಕೊಪ್ಪ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಕ್ರಿಸ್ಮಸ್‌ ರಜೆಯ ಕಾರಣ ಊರಿಗೆ ಆಗಮಿಸಿದ್ದರು. ರಜೆಯ ಬಳಿಕ ಮತ್ತೆ ಕಾಲೇಜಿಗೆ ಮಂಗಳವಾರ ಹಾಜಧಿರಾಗಬೇಕಾಗಿದ್ದು, ಅನಿವಾರ್ಯ ಕಾರಣಗಳಿಂದ ತೆರಳಲಾಗದ್ದರಿಂದ ಮಂಗಳಧಿವಾರ ರಾತ್ರಿ ತಂದೆ, ತಾಯಿ ಮತ್ತು ಸ್ನೇಹಿತನೊಂದಿಗೆ ತೆರಳುವಾಗ  ಅಪಧಿಘಾತ ಸಂಭವಿಸಿತು. ಕಂಟೈನರ್‌ ಲಾರಿ ಮಂಗಳೂರಿನಿಂದ ಕಣ್ಣೂರಿಗೆ ಸರಕುಗಳನ್ನು ಹೇರಿ ಸಾಗುತ್ತಿತ್ತು.

ಅಪಘಾತದಿಂದ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ವಿಷಯ ತಿಳಿದು ಸ್ಥಳೀಯರು, ಮಂಜೇಶ್ವರ, ಕುಂಬಳೆ ಪೊಲೀಸರು, ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಕಾರಿನ ಬಾಗಿಲಿನ ಗಾಜನ್ನು ಪುಡಿಧಿಗೈದು ಒಳಗೆ ಸಿಲುಕಿಕೊಂಡಿದ್ದವರನ್ನು ಹೊರ ತೆಗೆದು ಹತ್ತಿರದ ಆಸ್ಪತ್ರೆಗೆ ಸಾಗಿಸಿದ್ದರೂ ಅಷ್ಟರಲ್ಲೇ ಸಾವು ಸಂಭವಿಸಿತ್ತು. ಮೃತದೇಹಧಿಗಳನ್ನು ಮಂಗಲ್ಪಾಡಿ ಶವಾಗಾರದಲ್ಲಿ ಮಹಜರು ನಡೆಸಿ ಸಂಬಂಧಿಕರಿಗೆ ಬಿಟ್ಟುಕೊಡಲಾಯಿತು.

ಅಪಘಾತ ವಲಯ
ರಾಷ್ಟ್ರೀಯ ಹೆದ್ದಾರಿ ಸಾಗುವ ಉಪ್ಪಳ ನಯಾ ಬಜಾರ್‌ ಪ್ರದೇಶ ಈಗಾಗಲೇ ಹಲವು ಅಪಘಾತಗಳು ಸಂಭವಿಸಿದ ತಾಣ. ಈ ಕಾರಣದಿಂದ ಈ ಪ್ರದೇಶದ ಬಗ್ಗೆ ಸ್ಥಳೀಯರಿಗೆ ಭೀತಿ ಹುಟ್ಟಿಸಿತ್ತು. ಈ ಪ್ರದೇಶಧಿದಲ್ಲಿ ಪದೇ ಪದೇ ಸಂಭವಿಸುತ್ತಿರುವ ವಾಹನ ಅಪಘಾತಗಳನ್ನು ನಿಯಂತ್ರಿಸಲು ವೇಗ ನಿಯಂತ್ರಕ ಸಹಿತ ಇತರ ಕ್ರಮಗಳನ್ನು ಅಳವಡಿಸಬೇಕೆಂಬ ಹಲವು ವರ್ಷಗಳ ಬೇಡಿಕೆ ಇದುವರೆಗೆ ಈಡೇರಿಲ್ಲ. ಘಟನಾ ಸ್ಥಳಕ್ಕೆ ಕುಂಬಳೆ ಸಿ.ಐ., ಮಂಜೇಶ್ವರ ಎಸ್‌ಧಿಐ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಿದ್ದೆಯ ಮಂಪರು
ಕಾರನ್ನು ರಾಮನಾರಾಯಣ ಅವರು ಚಲಾಯಿಸುತ್ತಿದ್ದರೆಂದೂ ಅವರಿಗೆ ನಿದ್ದೆಯ ಮಂಪರು ಆವರಿಸಿರುವುದೇ ಅಪಘಾತಕ್ಕೆ ಕಾರಣವೆಂದು ಶಂಕಿಸಲಾಗಿದೆ. ಅಪಘಾತದಲ್ಲಿ ಕಂಟೈನರ್‌ ಲಾರಿಗೂ ಹಾನಿಯಾಗಿದೆ. ಕಂಟೈನರ್‌ ಲಾರಿಯನ್ನು ಮಂಜೇಶ್ವರ ಪೊಲೀಸರು ವಶಪಡಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ಅಪಘಾತದಿಂದ ರಸ್ತೆಯಲ್ಲಿ ರಕ್ತ ಮಡುಗಟ್ಟಿ ನಿಂತಿದ್ದು ಅಗ್ನಿಶಾಮಕ ದಳದವರು ನೀರನ್ನು ಹಾಯಿಸಿ ರಸ್ತೆ ತೊಳೆದರು.

ನೆನಪು ಮಾಸುವ ಮುನ್ನ
ಕಾಸರಗೋಡು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪದೇ ಪದೇ ವಾಹನ ಅಪಘಾತ ಸಂಭವಿಸುತ್ತಿದ್ದು, ಒಂದು ವಾರದ ಹಿಂದೆ ಅಂದರೆ ಡಿ. 28ರಂದು ಮುಂಜಾನೆ ವಾಹನ ಅಪಘಾತ ಸಂಭವಿಸಿ ಇಬ್ಬರು ಯುವಕರು ಸಾವಿಗೀಡಾಗಿದ್ದರು. ಮೊಗ್ರಾಲ್‌ ಪುತ್ತೂರು ಕೊಪ್ಪರ ಬಜಾರ್‌ನಲ್ಲಿ ಮುಂಜಾನೆ ಟೂರಿಸ್ಟ್‌ ಬಸ್‌ ಹಾಗೂ ಕೋಳಿ ಸಾಗಿಸುತ್ತಿದ್ದ ವ್ಯಾನ್‌ ಢಿಕ್ಕಿ ಹೊಡೆದು ಇಬ್ಬರು ಸಾವಿಗೀಡಾಗಿದ್ದರು. ಈ ವಾಹನ ಅಪಘಾತದ ಭೀಕರತೆ ಮರೆಯುವ ಮುನ್ನವೇ ಇನ್ನೊಂದು ವಾಹನ ಅಪಘಾತ ಸಂಭವಿಸಿದೆ.

ಟಾಪ್ ನ್ಯೂಸ್

6-kushtagi

Kushtagi: ಕಾರ್ಮಿಕ ದಿನಾಚರಣೆ ದಿನದಂದೇ ಪುರಸಭೆ ಪೌರ ಕಾರ್ಮಿಕ ಕಾಣೆ

4-by-ragh

LS Polls: ಮೋದಿ ಆಡಳಿತದಲ್ಲಿ ಭಾರತ 3ನೇ ಆರ್ಥಿಕ ಶಕ್ತಿ

3-huliyaru

Huliyar: ಮರದ ಕೊಂಬೆ ಬಿದ್ದು ಕಾರು ಜಖಂ

2-

LS Polls: ಸಂಸದರ ಅಭಿವೃದ್ಧಿ ಕಾರ್ಯದಿಂದ ಕಾಂಗ್ರೆಸ್‌ಗೆ ನಡುಕ: ಗಾಯತ್ರಿ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

ಕುಂಬಳೆ: ಚಿನ್ನದ ಸರ ಸೆಳೆದು ಪರಾರಿ; ದೂರು ದಾಖಲು

ಕುಂಬಳೆ: ಚಿನ್ನದ ಸರ ಸೆಳೆದು ಪರಾರಿ; ದೂರು ದಾಖಲು

Kasaragod ಸುದ್ದಿಗಾರರಿಗೆ ಹಲ್ಲೆ: ಕೇಸು ದಾಖಲು

Kasaragod ಸುದ್ದಿಗಾರರಿಗೆ ಹಲ್ಲೆ: ಕೇಸು ದಾಖಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

6-kushtagi

Kushtagi: ಕಾರ್ಮಿಕ ದಿನಾಚರಣೆ ದಿನದಂದೇ ಪುರಸಭೆ ಪೌರ ಕಾರ್ಮಿಕ ಕಾಣೆ

5-belagavi

Belagavi: ಗಡಿ ಹೋರಾಟದಲ್ಲಿ‌ ಯಶಸ್ವಿಯಾಗಲು ಒಂದಾಗಿ: ಮನೋಜ್‌ ಜರಾಂಗೆ ಪಾಟೀಲ

4-by-ragh

LS Polls: ಮೋದಿ ಆಡಳಿತದಲ್ಲಿ ಭಾರತ 3ನೇ ಆರ್ಥಿಕ ಶಕ್ತಿ

3-huliyaru

Huliyar: ಮರದ ಕೊಂಬೆ ಬಿದ್ದು ಕಾರು ಜಖಂ

2-

LS Polls: ಸಂಸದರ ಅಭಿವೃದ್ಧಿ ಕಾರ್ಯದಿಂದ ಕಾಂಗ್ರೆಸ್‌ಗೆ ನಡುಕ: ಗಾಯತ್ರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.