ವೇಸ್ಟ್‌ ವೇಸ್ಟ್‌ ವೇಸ್ಟ್‌…! ಇದು ಮುಗಿಯದ ವ್ಯಥೆ.


Team Udayavani, May 10, 2019, 11:43 AM IST

watse

ವಿದ್ಯಾನಗರ :ದೇಶದ ಬೆಳವಣಿಗೆಗೆ ಪೂರಕವಾದ ವಸ್ತುಗಳೊಂದಿಗೆ ಅವುಗಳ ಉಪಉತ್ಪನ್ನ ಎಂದೇ ಕರೆಯಬಹುದಾದ ತ್ಯಾಜ್ಯಗಳ ಸಮಸ್ಯೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಸವಾಲಾಗಿ ಪರಿಣಮಿಸಿದೆ. ಸ್ವಚ್ಛ ಭಾರತ ಯಜ್ಞ ಕಳೆದ ಕೆಲವು ವರ್ಷಗಳಿಂದ ನಡೆಯುತ್ತಿದೆಯಾದರೂ ಭಾರತ ಇನ್ನೂ ಸ್ವಚ್ಛವಾಗಿಲ್ಲ ಎಂಬುವುದು ಖೇಧಕರ. ದೇಶದಾದ್ಯಂತ ಬೀದಿ ಬೀದಿಗಳಲ್ಲಿ, ಹಳ್ಳಿ ಗಲ್ಲಿಗಳಲ್ಲಿ ತ್ಯಾಜ್ಯದ ರಾಶಿ ಹಿಮಾಲಯದೆತ್ತರಕ್ಕೆ ಬೆಳೆದು ನಿಂತಿದೆ.

ಎಲ್ಲೆಲ್ಲೂ ತ್ಯಾಜ್ಯ ತ್ಯಾಜ್ಯ…
ಮನೆಗಳ, ವ್ಯಾಪಾರಿ ಮಳಿಗೆಗಳ, ಕಸಾಯಿಖಾನೆಗಳ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯುವ ಹವ್ಯಾಸ ನಮ್ಮ ದೇಶದ ದೊಡ್ಡ ಶಾಪ. ನಮ್ಮದೇ ಊರಿನ ರಸ್ತೆಗಳ ಪಕ್ಕದಲ್ಲಿ, ನಿರ್ಜನ ಪ್ರದೇಶದಲ್ಲಿ, ಬೆಳೆದು ನಿಂತ ಪೊದೆಗಳ ಬಳಿ, ಪಾಳು ಬಾವಿಯಲ್ಲಿ ಮಾತ್ರವಲ್ಲದೆ ರಾಷ್ಟ್ರೀಯ ಹೆದ್ದಾರಿಯ ಬದಿಗಳಲ್ಲಿಯೂ ತ್ಯಾಜ್ಯ ಶೇಖರಣೆಯಾಗಿ ಜನ ಸಾಮಾನ್ಯರು ಮೂಗು ಮುಚ್ಚಿಕೊಂಡು ನಡೆದಾಡಬೇಕಾದ ದುಃಸ್ಥಿತಿ ಬಂದೊದಗಿದೆ. ರಾತ್ರಿ ವೇಳೆ ವಾಹನಗಳಲ್ಲಿ ತಂದಿಳಿಸುವ ತ್ಯಾಜ್ಯಗಳನ್ನು ಹಗಲು ನಾಯಿ ಕಾಗೆಗಳು ಎಳೆದುಹಾಕಿ ಹರಡುವುದಲ್ಲದೆ ಕಚ್ಚಿಕೊಂದು ಹೋಗಿ ಸಮೀಪದ ಮನೆಗಳ ಬಾವಿಗಳಿಗೆ, ನೀರಿನ ಟ್ಯಾಂಕಿಗಳಿಗೆ, ಜಲಾಶಯಗಳಿಗೆ ಹಾಕುವ ಮೂಲಕ ಕಲುಶಿತಗೊಳಿಸುತ್ತವೆ. ಮಾತ್ರವಲ್ಲದೆ ತ್ಯಾಜ್ಯ ಕೊಳೆತು ಉಂಟಾದ ದುರ್ವಾಸನೆ ಒಂದೆಡೆಯಾದರೆ ರೋಗಭೀತಿ ಇನ್ನೊಂದೆಡೆ ಜನಸಾಮಾನ್ಯರನ್ನು ಕಂಗೆಡಿಸುತ್ತದೆ.

ತ್ಯಾಜ್ಯ ನಿರ್ವಹಣೆ ಎಲ್ಲರ ಹೊಣೆ
ಸ್ವಚ್ಛತೆ ಕೇವಲ ಎನ್‌ಎಸೆಸ್‌, ಕುಟುಂಬಶ್ರೀ, ಎಸ್‌.ಪಿ.ಸಿ, ಮುಂತಾದ ಸಂಘಟನೆಗಳ ಸದಸ್ಯರ ಹೊಣೆ ಎಂಬ ಪರಿಸ್ಥಿತಿ ನಮ್ಮ ನಡುವೆ ತುಂಬಿ ಹೋಗಿದೆ. ನಾವು ಮಾಡುವ ಅನ್ಯಾಯಕ್ಕೆ, ನಮ್ಮ ಬೇಜವಾಬ್ದಾರಿತನಕ್ಕೆ ಅವರು ಕೈಗೆ ಕೈಚೀಲ ಹಾಕಿ, ಕೈಯಲ್ಲಿ ಕೋಲು, ಹಿಡಿಸೂಡಿ ಹಿಡಿದು ಮಳೆ ಬಿಸಿಲಿಗೆ ಕಷ್ಟ ಪಡುವುದನ್ನು ಕಂಡು ಸೆಲ್ಫಿ ತೆಗೆದು ವಾಟ್ಸಪ್‌ ಸ್ಟೇಟಸ್‌ ಹಾಕುವ ಮಟ್ಟಕ್ಕೆ ತಲುಪಿದೆ. ಆದರೆ ಅವರು ಮಾಡುವ ಸ್ವಚ್ಛತಾ ಅಭಿಯಾನಕ್ಕೆ ಕೈಜೋಡಿಸಲು ಮುಂದಾಗುವವರು ಅತೀ ವಿರಳ. ದೇಶದಲ್ಲಿ ಅದೆಷ್ಟೋ ಸಂಘ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ಆದರೆ ಅವುಗಳು ಕೇವಲ ಕ್ರೀಡೆ, ಮನರಂಜನೆಗೆ ಆದ್ಯತೆ ನೀಡುತ್ತವೆಯೇ ಹೊರತು ಇಂತಹ ಕಾರ್ಯಗಳೆಡೆಗೆ ಅದೆಷ್ಟು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುತ್ತವೆ ಎನ್ನುವುದು ಕೂಡಾ ಪ್ರಶ್ನಾತೀತ.

ಕ್ರಿಕೆಟ್‌, ಕಬಡ್ಡಿ ಮುಂತಾದ ಪಂದ್ಯಾವಳಿಗಳ ಬಳಿಕ ತುಂಬಿ ತುಳುಕುವ ಪ್ಲಾಸ್ಟಿಕ್‌ ಬಾಟಲಿಗಳು, ಗ್ಲಾಸುಗಳು, ತಿಂಡಿಗಳ ಪೊಟ್ಟಣಗಳು ಗಾಳಿಯಲ್ಲಿ ಊರೆಲ್ಲ ಹರಡುತ್ತದೆ. ಆದರೆ ತ್ಯಾಜ್ಯ ನಿರ್ವಹಣೆ ನಮ್ಮ ಹೊಣೆ ಎಂಬುವುದನ್ನು ಇಂತಹ ಸಂಘಟನೆಗಳ ಸದಸ್ಯರಿಗೆ ತಿಳಿಯಪಡಿಸಿ ಸ್ವಚ್ಛತಾ ಆಂದೋಲನದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬೇಕಾಗಿದೆ. ಒಂದೊಂದು ಪ್ರದೇಶದ ಜವಾಬ್ದಾರಿಯನ್ನು ನೀಡಿದಲ್ಲಿ ಸಮರ್ಥವಾಗಿ ನಿರ್ವಹಿಸಬಲ್ಲರು ಎಂಬ ವಿಶ್ವಾಸ ಇರಬೇಕಷ್ಟೇ. ಉತ್ತಮವಾಗಿ ಶುಚಿತ್ವ ಕಾಪಾಡಿದವರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಬೇಕು.

ಹೀಗೂ ಮಾಡಬಹುದಲ್ಲವೇ ?
ಮದುವೆ ಮೊದಲಾದ ಸಮಾರಂಭಗಳ ಸಂದರ್ಭದಲ್ಲಿ ತ್ಯಾಜ್ಯ ಒಂದು ಸಮಸ್ಯೆಯೆ ಸರಿ. ಹೆಚ್ಚಾಗಿ ಈ ತ್ಯಾಜ್ಯಗಳನ್ನು ನಿರ್ಜನ ಪ್ರದೇಶದಲ್ಲಿ ಎಸೆಯುತ್ತಾರೆ. ಇಲ್ಲವೇ ಹಳ್ಳ ತೋಡಿಗೆ ಹಾಕಿ ಸುಮ್ಮನಾಗುತ್ತಾರೆ. ಆದರೆ ಆಹಾರ ತ್ಯಾಜ್ಯಗಳನ್ನು ವಿಲೇವಾರಿ ಮಾಡಲು ಇರುವ ಸಾಧ್ಯತಗಳ ಕಡೆ ಗಮನ ಹರಿಸುವವರಿಲ್ಲ. ಪ್ರತಿಯೊಂದು ಪಂಚಾಯತುಗಳು, ಮುನಿಸಿಪಾಲಿಟಿಗಳು ಈ ಬಗ್ಗೆ ಜಾಗರೂಕತೆ ವಹಿಸಬೇಕು. ಸಮಾರಂಭ ನಡೆಯುವ ಮನೆ, ಸಭಾಂಗಣಗಳ ಮಾಹಿತಿ ಸಂಗ್ರಹಿಸಿ ವಾರದ ಮೊದಲೇ ನೋಟೀಸು ನೀಡಿ ತ್ಯಾಜ್ಯ ವಿಲೇವಾರಿಯ ಬಗ್ಗೆ ವಿಚಾರಿಸಬಹುದು. ಹಾಗೆಯೇ ಪಂಚಾಯತಿನ ವತಿಯಿಂದ ಅದಕ್ಕಾಗಿ ಆಳುಗಳನ್ನು ನಿಯಮಿಸಿ ತ್ಯಾಜ್ಯ ಸಂಗ್ರಹಿಸಿ ಸರಿಯಾದ ರೀತಿಯಲ್ಲಿ ಸಂಸ್ಕರಣೆ ಮಾಡಬಹುದು. ಇದಕ್ಕೆ ಅಗತ್ಯವಿರುವ ಮೊತ್ತವನ್ನೂ ಆ ಮನೆ ಅಥವಾ ಸಭಾಂಗಣದಿಂದ ಸಂಗ್ರಹಿಸಬೇಕು. ಆದರೆ ಯಾರೂ ಕೂಡ ಇ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸದಿರುವುದು ವಿಪರ್ಯಾಸ. ನಮ್ಮ ಸುತ್ತು ಮುತ್ತಿಲಿನ ಪರಿಸರ ಶುದ್ಧ ಸುಂದರವಾಗಿರಬೇಕಾದರೆ ತ್ಯಾಜ್ಯ ನಿರ್ವಹಣೆ ಎಲ್ಲರ ಹೊಣೆಯಾಗಿರಬೇಕು. ಮನೆ ಪರಿಸರದೊಂದಿಗೆ ಮನೆಮುಂದಿನ ರಸ್ತೆ, ಚರಂಡಿ, ಅಕ್ಕ-ಪಕ್ಕದ ಜಾಗವನ್ನು ನಿರ್ಮಲವಾಗಿಟ್ಟುಕೊಳ್ಳಬೇಕು. ಸಾಮಾನ್ಯವಾಗಿ ಶುಚಿತ್ವದ ವಿಷಯ ಬಂದಾಗ ಹಿಂದೆ ನಿಲ್ಲುವವರ ಸಂಖ್ಯೆಯೇ ಹೆಚ್ಚು. ನಮ್ಮ ಮನೆಯ ತ್ಯಾಜ್ಯವನ್ನು ಕಂಡ ಕಂಡಲ್ಲಿ ಎಸೆದು ಆ ದಾರಿಯಲ್ಲಿ ಸಾಗಿಹೋಗುವಾಗ ಕೆಟ್ಟ ವಾಸನೆಗೆ ಪಂಚಾಯತು, ಮುನಿಸಿಪಾಲಿಟಿಯನ್ನು ದೂರುತ್ತಾರೆಯೇ ಹೊರತು ಮನೆಯ ತ್ಯಾಜ್ಯವನ್ನು ಹೇಗೆ ಸುಲಭವಾಗಿ ಸಂಸ್ಕರಿಸಬಹುದು ಎಂಬ ಬಗ್ಗೆ ಚಿಂತಿಸುವುದಿಲ್ಲ. ತ್ಯಾಜ್ಯ ಮುಕ್ತವಾದ ಪರಿಸರದಿಂದ ಆರೋಗ್ಯವಂತ ಸಮಾಜ ಎಂಬ ಸತ್ಯದ ಅರಿವು ಜನರನ್ನುಜಾಗ್ರತೆಗೊಳಿಸಬೇಕು. ಸ್ವಚ್ಛತೆ ಎನ್ನುವುದು ನಮ್ಮ ಜವಾಬ್ದಾರಿ ಎಂಬ ಪ್ರಜ್ಞೆ ಮೂಡಬೇಕು.

ಇ-ತ್ಯಾಜ್ಯ
ನಾವು ಬಳಸುವ ಸ್ಮಾರ್ಟ್‌ಫೋನ್, ಡೆಸ್ಕ್ಟಾಪ್‌ ಮುಂತಾದವುಗಳ ಆಯುಷ್ಯ ಮುಗಿದಾಗ ಅವುಗಳಿಂದ ಆಗುವ ಅಪಾಯದ ಬಗ್ಗೆ ಹೆಚ್ಚಿನ ಜನರಿಗೆ ಸಾಮಾನ್ಯ ಅರಿವು ಇಲ್ಲ ಎನ್ನುವುದು ಕಹಿ ವಾಸ್ತವ. ಆರ್ಥಿಕ ಉದಾರಿಕರಣದಿಂದ ಉಂಟಾದ ವಿದ್ಯುಚ್ಚಾಲಿತ ಉಪಕರಣಗಳ ಬಳಕೆಯಲ್ಲಾದ ಹೆಚ್ಚಳ ಇ-ತ್ಯಾಜ್ಯಗಳ ಉತ್ಪಾದನೆಯನ್ನೂ ಕೂಡ ಗಣನೀಯವಾಗಿ ಹೆಚ್ಚಿಸಿದೆ ಎಂಬುದು ಸತ್ಯ. ಇದು ಅಪಾಯದ ಮಟ್ಟ ತಲುಪಿದರೂ ಸೂಕ್ತ ಪರಿಹಾರ ಕ್ರಮ ಕೈಗೊಂಡಂತಿಲ್ಲ. ವಿಶ್ವದ ಆತಿ ದೊಡ್ಡ ಸಮಸ್ಯೆಗಳಲ್ಲಿ ಇದೂ ಒಂದು.

ಆಸ್ಪತ್ರೆಗಳ ತ್ಯಾಜ್ಯ ಎಲ್ಲಿ ಹೋಗುತ್ತದೆ.
ಅತ್ಯಂತ ಅಪಾಯಕಾರಿಯಾದ ತ್ಯಾಜ್ಯ ಉತ್ಪತ್ತಿಯಾಗುವ ಆಸ್ಪತ್ರೆಗಳ ಕೆಲವು ವಸ್ತುಗಳು ರಿಸೈಕ್ಲಿಂಗ್ ಗಾಗಿ ಕಳಿಸಲಾಗುತ್ತದೆಯಾದರೂ ಹತ್ತಿ, ಬಟ್ಟೆ ಸೇರಿದಂತೆ ಸೇರಿದಂತೆ ಇನ್ನಿತರ ವಸ್ತುಗಳನ್ನು ಕೆಲವು ನಿರ್ಜನ ಪ್ರದೇಶಗಳಲ್ಲಿ, ಜನವಾಸವಿಲ್ಲದ ಪ್ರದೇಶದ ತೋಡುಗಳಲ್ಲಿ ತ್ಯಜಿಸಲಾಗುತ್ತದೆ ಎಂಬ ಮಾತು ಕೇಳಿಬರುತ್ತಿದೆ. ಆದರೆ ಆಸ್ಪತ್ರೆಗಳು ತಾವು ಸರಿಯಾದ ರೀತಿಯಲ್ಲಿಯೇ ತ್ಯಾಜ್ಯ ಸಂಸ್ಕರಣೆ ಮಾಡುತ್ತೇವೆ ಎನ್ನುತ್ತಾರಾದರೂ ಪೂರ್ಣವಾಗಿ ಅಂಗೀಕರಿಸುವಂತಿಲ್ಲ.

ಹಸಿರು ಕೇರಳ ಪ್ಲಾಸ್ಟಿಕ್‌ಮಯ
ಎಲ್ಲೆಂದರಲ್ಲಿ ಪ್ಲಾಸ್ಟಿಕ್‌ ಚೀಲಗಳು, ಹಾಗೂ ಪ್ಲಾಸ್ಟಿಕ್‌ ಉತ್ಪನ್ನಗಳೇ ತುಂಬಿ ಹೋಗಿ ಪ್ರಕೃತಿಯಲ್ಲಿ ಕಾಣುವ ಗಿಡ ಮರ ಬಳ್ಳಿಗಳಂತೆ ಪ್ಲಾಸಿಕ್‌ ಕೂಡಾ ಸಾಮಾನ್ಯ ವಸ್ತು ಎಂಬಂತಾಗಿದೆ. ಮಕ್ಕಳಿಗೆ ನೀಡುವ ಐಸ್‌ ಕ್ರೀಂ, ಕುರುಕುರು ತಿಂಡಿಗಳು, ಆಟಿಕೆಗಳು ಎಲ್ಲವೂ ಪ್ಲಾಟಿಕ್‌ಮಯ. ಈ ಪೊಟ್ಟಣಗಳನ್ನಾಗಲಿ, ಬಾಟಲಿ, ಆಟಿಕೆಗಳನ್ನಾಗಲಿ ಉರಿಸುವಂತಿಲ್ಲ. ಮಣ್ಣಲ್ಲಿ ಹೂತು ಹಾಕುವಂತೆಯೂ ಇಲ್ಲ. ಮರುಬಳಕೆಯ ವಸ್ತುಗಳನ್ನು ಪರಿಷ್ಕರಿಸಲು ಅಗತ್ಯದ ಯೋಜನೆಗಳನ್ನು ರೂಪಿಸಬೇಕು. ಆದಷ್ಟು ಮಾರುಕಟ್ಟೆಗಳಲ್ಲಿ ಪ್ಲಾಸ್ಟಿಕ್‌ ಚೀಲಗಳ ಬಳಕೆಯನ್ನು ಕಡಿಮೆಗೊಳಿಸುವಂತೆ ಒತ್ತಾಯಿಸಬೇಕು.

ಮಳೆಗಾಲ ಪ್ರಾರಂಭವಾದರೆ…
ಮಳೆ ಪ್ರಾರಂಭವಾಗುತ್ತಿದ್ದಂತೆ ಮಳೆನೀರಲ್ಲಿ ಕೊಚ್ಚಿಕೊಂಡು ಬರುವ ವಸ್ತ್ರ, ಪ್ಲಾಸ್ಟಿಕ್‌, ಆಹಾರ ತ್ಯಾಜ್ಯಗಳು ಎಲ್ಲೆಲ್ಲೂ ದುರ್ಗಂಧ ಬೀರುವುದಲ್ಲದೆ ಹಲವಾರು ರೋಗಗಳಿಗೆ ಕಾರಣವಾಗಲಿದೆ. ಹಾಗೆಯೇ ಭೂಮಿಗೆ ಇಂಗುವ ನೀರಿನ ಮಟ್ಟದಲ್ಲಿ ಉಂಟಾಗಬಹುದಾದ ಕುಸಿತ ಅಂತರ್ಜಲಮಟ್ಟ ಕುಸಿಯಲು ಕಾರಣವಾಗುತ್ತದೆ. ಇನ್ನೊಂದೆಡೆ ಚರಂಡಿಗಳಲ್ಲಿ ಈಗಾಗಲೇ ತುಂಬಿರುವ ಬೇಡದ ವಸ್ತುಗಳೊಂದಿಗೆ ಮಳೆನೀರಲ್ಲಿ ಹರಿದು ಬಂದ ವಸ್ತುಗಳೂ ಸೇರಿ ಉಂಟಾಗುವ ಸಮಸ್ಯೆಯಿಂದ ಚರಂಡಿ ನೀರು ರಸ್ತೆಯಲ್ಲಿ ಹರಿಯುವ ಸಾಧ್ಯೆತೆಯೂ ಧಾರಾಳ.

ಉದ್ಯೋಗ ಸಾಧ್ಯತೆ
ತ್ಯಾಜ್ಯ ನಿರ್ವಹಣೆಗಾಗಿ ಕೈಗೊಳ್ಳುವ ಯೋಜನೆಗಳು ಹಲವಾರು ಉದ್ಯೋಗಗಳ ಸೃಷ್ಟಿಗೆ ಕಾರಣವಾಗುತ್ತದೆ. ಆ ಮೂಲಕ ಕೆಲವರಿಗಾದರೂ ಜೀವನ ಮಾರ್ಗವನ್ನೂ ತೋರಬಲ್ಲುದು. ಈಗಾಗಲೇ ಹರಿತ ಕೇರಳ ಎಂಬ ಹೆಸರಲ್ಲಿ ಕೇರಳ ಸರಕಾರ ತ್ಯಾಜ್ಯ ಸಂಗ್ರಹಕ್ಕಾಗಿ ಮಹಿಳಾ ಸೇನೆಯನ್ನು ಆಯೋಜಿಸಿದ್ದು ಪ್ರತಿ ತಿಂಗಳು ಮನೆಮನೆಗೆ ಭೇಟಿ ನೀಡಿ ಪ್ಲಾಸ್ಟಿಕ್‌ ತ್ಯಾಜ್ಯಗಳನ್ನು ಸಂಗ್ರಹಿಸಿ ಕೊಂಡೊಯ್ಯುತ್ತಾರೆ. ಪಂಚಾಯತಿಗೊಳಪಟ್ಟ ಪ್ರತಿಮನೆಯಿಂದ ತಿಂಗಳಿಗೆ 30 ರೂ ಹಾಗೂ ಮುನಿಸಿಪಾಲಿಟಿಗೊಳಪಟ್ಟ ಪ್ರದೇಶದಿಂದ 50 ರೂ ಸಂಗ್ರಹಿಸಲಾಗುತ್ತದೆ. ಇದು ಹಲವಾರು ಮಹಿಳೆಯರಿಗೆ ಆಶಾದಾಯಕವಾಗಿದೆ.

ಮೇ.11 ಮತ್ತು 12ರಂದು ಮಳೆಗಾಲದ ಪೂರ್ವಭಾವಿಯಾಗಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತು, ನಗರಸಭೆ ವಾರ್ಡ್‌ಗಳಲ್ಲಿ ತ್ವರಿತ ಶುಚೀಕರಣ ಯಜ್ಞ ಕೈಗೊಳ್ಳಲಾಗಿದೆ ಎಂಬ ಸುದ್ಧಿ ಕೇಳಿ ಬರುತ್ತಿದೆಯಾದರೂ ಅದು ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗ ನಡೆಯಲಿದೆ ಎಂದು ಕಾದುನೋಡಬೇಕು. ಒಟ್ಟಿನಲ್ಲಿ ಅಧೀಕೃತರು ಶಿಸ್ತಿನ ಕಠಿಣ ಕ್ರಮ ಕೈಗೊಳ್ಳದಿದ್ದಲ್ಲಿ, ಸಮಸ್ಯೆಯ ನಿಜವಾದ ಗಾಂಭೀರ್ಯತೆಯನ್ನು ಮನಗಂಡು ಕಾರ್ಯ ನಿರ್ವಹಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಇಳೆಯೇ ಎಲ್ಲದಕ್ಕೂ ಉತ್ತರಿಸುವ ದಿನ ದೂರವಿಲ್ಲ.

ವಿದ್ಯಾಗಣೇಶ್‌ ಆಣಂಗೂರು

ಟಾಪ್ ನ್ಯೂಸ್

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.