ಕಾರ್ಮಿಕರಿಂದ ದೇಶ ನಿರ್ಮಾಣದ ಕೆಲಸ: ಸುಕುಮಾರ ಕೊಜಪ್ಪೆ
Team Udayavani, Sep 22, 2020, 7:36 PM IST
ಬಾಯಾರು: ದೇಶ ನಿರ್ಮಾಣದ ಕೆಲಸವು ಕೂಡ ಕಾರ್ಮಿಕರಿಂದ ಸಾಧ್ಯ. ಇದಕ್ಕಾಗಿ ತ್ಯಾಗ ಹಾಗೂ ಸಮರ್ಪಣ ಮನೋಭಾವ ನಮ್ಮಲ್ಲಿರಬೇಕು ಎಂಬುದಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ಗ್ರಾಮಾಂತರ ಜಿಲ್ಲಾ ಸಹಕಾರ್ಯವಾಹ ಸುಕುಮಾರ ಕೊಜಪ್ಪೆ ಹೇಳಿದರು.
ಭಾರತೀಯ ಮಜ್ದೂರ್ ಸಂಘ (ಬಿಎಂಎಸ್) ಪೈವಳಿಕೆ ಘಟಕದ ವತಿಯಿಂದ ವಿಶ್ವಕರ್ಮ ಜಯಂತಿಯ ಪ್ರಯುಕ್ತ ನಡೆದ ರಾಷ್ಟ್ರೀಯ ಕಾರ್ಮಿಕ ದಿನಾಚರಣೆಯಲ್ಲಿ ಮಾತನಾಡಿದರು. ಒಬ್ಬ ಸಾಮಾನ್ಯ ಕಾರ್ಮಿಕನಾಗಿದ್ದರು ತನ್ನ ಸಂಘಟನ ಚಾತುರ್ಯದಿಂದ ಸಂಘಟನೆಯ ಕೆಲಸಗಳನ್ನು ಮಾಡುತ್ತಾ ಸಮಾಜದ ಕೆಲಸ ಮಾಡಲು ಸಾಧ್ಯವಿದೆ ಎಂದರು.
ಬಿ.ಎಂ.ಎಸ್.ನ ಪೈವಳಿಕೆ ಘಟಕದ ಅಧ್ಯಕ್ಷ ದೇವಿಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಐತ್ತಪ್ಪ ನಾರಾಯಣ ಮಂಗಲ, ಸದಾಶಿವ ಚೇರಾಲು, ರಾಜೇಶ್ ಪೆರ್ಮುದೆ ಉಪಸ್ಥಿತರಿದ್ದರು. ಕೃಷ್ಣ ಕೆ. ನಿರೂಪಿಸಿದರು. ಸಂಧ್ಯಾ ಪ್ರಾರ್ಥಿಸಿದರು. ಶ್ರೀಲತಾ ಮದ್ದೂರ್ ಗೀತೆ ಹಾಡಿದರು. ಪುಷ್ಪ ಕಲಾ ವಂದಿಸಿದರು.