ಬಿಳಿನೆಲೆ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ, ಅಪಾಯದಿಂದ ಪಾರಾದ ಯಾತ್ರಾರ್ಥಿಗಳು !
Team Udayavani, Nov 18, 2020, 1:03 PM IST
ಸುಬ್ರಹ್ಮಣ್ಯ: ವಿದ್ಯುತ್ ಕಂಬಕ್ಕೆ ಕಾರೊಂದು ಢಿಕ್ಕಿಯಾದ ಘಟನೆ ಕಡಬ ತಾಲೂಕಿನ ಧರ್ಮಸ್ಥಳ-ಸುಬ್ರಹ್ಮಣ್ಯ ರಾಜ್ಯಹೆದ್ದಾರಿಯ ಬಿಳಿನೆಲೆಯಲ್ಲಿ ಇಂದು (ನ.18) ಬೆಳಗ್ಗೆ ನಡೆದಿದೆ.
ಧರ್ಮಸ್ಥಳದಿಂದ ಸುಬ್ರಹ್ಮಣ್ಯಕ್ಕೆ ಬರುತ್ತಿದ್ದ ಯಾತ್ರಾರ್ಥಿಗಳಿದ್ದ ಕಾರು ಬಿಳಿನೆಲೆಯಲ್ಲಿ ವಿದ್ಯುತ್ ಕಂಬಕ್ಕೆ ಗುದ್ದಿದೆ. ಕಾರಿನ ಚಾಲಕ ನಿದ್ರೆಯ ಮಂಪರಿನಲ್ಲಿದ್ದದ್ದೇ ಘಟನೆಗೆ ಕಾರಣ ಎನ್ನಲಾಗಿದೆ.
ಢಿಕ್ಕಿಯ ರಭಸಕ್ಕೆ ಸುಮಾರು 10 ಮೀಟರ್ ರಿಗೂ ಹೆಚ್ಚು ದೂರ ವಿದ್ಯುತ್ ಕಂಬವನ್ನು ಕಾರು ಎಳೆದು ಕೊಂಡು ಹೋಗಿದೆ. ಅದೃಷ್ಟವಶಾತ್ ಗುದ್ದಿದ ರಭಸಕ್ಕೆ ವಿದ್ಯುತ್ ಕಡಿತಗೊಂಡಿದ್ದರಿಂದ ಯಾವುದೇ ಅಪಾಯವಿಲ್ಲದೆ ಪ್ರಯಾಣಿಕರು ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಕಾಶ್ಮೀರದ ಕುಪ್ವಾರದಲ್ಲಿ ಭಾರೀ ಹಿಮಪಾತ: ಓರ್ವ ಯೋಧ ಸಾವು, ಇಬ್ಬರಿಗೆ ಗಾಯ