ದ.ಕ. ಜಿಲ್ಲೆಯಿಂದ 21,888 ಕಾರ್ಮಿಕರು ಸ್ವಂತ ರಾಜ್ಯಕ್ಕೆ

ಊರಿಗೆ ಕಳುಹಿಸುವಂತೆ ಮತ್ತಷ್ಟು ಕಾರ್ಮಿಕರಿಂದ ಬೇಡಿಕೆ

Team Udayavani, May 20, 2020, 1:07 PM IST

ದ.ಕ. ಜಿಲ್ಲೆಯಿಂದ 21,888 ಕಾರ್ಮಿಕರು ಸ್ವಂತ ರಾಜ್ಯಕ್ಕೆ

ಸೋಮವಾರ ಮಂಗಳೂರಿನಿಂದ ಝಾರ್ಖಂಡ್‌ಗೆ ಹೊರಟ "ಶ್ರಮಿಕ್‌ ಎಕ್ಸ್‌ಪ್ರೆಸ್‌' ರೈಲಿನಲ್ಲಿ 1,464 ಕಾರ್ಮಿಕರನ್ನು ಕಳುಹಿಸಿ ಕೊಡಲಾಯಿತು.

ಮಂಗಳೂರು: ಲಾಕ್‌ಡೌನ್‌ ಅವಧಿಯಲ್ಲಿ ಇದುವರೆಗೆ ದ.ಕ. ಜಿಲ್ಲೆಯಿಂದ ತಮ್ಮ ಊರಿಗೆ ತೆರಳಲು ಬಯಸಿದ ವಿವಿಧ ರಾಜ್ಯಗಳ 21,888 ಮಂದಿ ವಲಸೆ ಕಾರ್ಮಿಕರನ್ನು 16 ರೈಲುಗಳ ಮೂಲಕ ಕಳುಹಿಸಿ ಕೊಡಲಾಗಿದೆ. ಜಿಲ್ಲೆಯಿಂದ ಬಿಹಾರಕ್ಕೆ 5, ಜಾರ್ಖಂಡ್‌ ಮತ್ತು ಉ. ಪ್ರದೇಶಕ್ಕೆ ತಲಾ 5 ಹಾಗೂ ರಾಜಸ್ತಾನಕ್ಕೆ ಒಂದು ರೈಲು ಸಂಚರಿಸಿದೆ.  ಪ್ರತೀ ರೈಲಿನಲ್ಲಿ ಸರಾಸರಿ 1,400ರಷ್ಟು ಪ್ರಯಾಣಿಕರು ತೆರಳಿದ್ದಾರೆ. ಮಂಗಳೂರು ಜಂಕ್ಷನ್‌ ಹಾಗೂ ಪುತ್ತೂರು ರೈಲ್ವೇ ನಿಲ್ದಾಣಗಳಿಂದ ರೈಲುಗಳು ಹೊರಟಿದ್ದು ರೈಲ್ವೇ ಇಲಾಖೆ ನಿಗದಿಪಡಿಸಿದ ದರ ವನ್ನು ಪ್ರಯಾಣಿಕರಿಂದ ಪಡೆದು ಕೊಳ್ಳಲಾಗಿದೆ.

ಉಚಿತ ಊಟ
ಕಾರ್ಮಿಕರಿಗೆ ಉಚಿತ ಊಟದ ಪೊಟ್ಟಣ ಹಾಗೂ ನೀರಿನ ಬಾಟಲ್‌ ವಿತರಿಸಲಾಗಿದೆ. ಪ್ರಯಾಣಿಕರು ರೈಲಿನಲ್ಲಿ ತಮ್ಮ ನಿಗದಿತ ಸ್ಥಳ ತಲುಪಲು 2-3 ದಿನ ತಗಲುವುದರಿಂದ ಪ್ರಯಾಣ ಹಾದಿಯ ಪ್ರಮುಖ ಜಂಕ್ಷನ್‌ಗಳಲ್ಲಿ ಊಟೋಪಚಾರ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಮಂಗಳೂರು ಪೊಲೀಸ್‌ ಕಮಿಷನರ್‌ ಡಾ| ಹರ್ಷ ಅವರು ಕಾರ್ಮಿಕರ ಮನವೊಲಿಸಿ, ಅವರಿಗೆ ಸೂಕ್ತ ಊಟ, ತಿಂಡಿಯ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಊರಿಗೆ ಕಳುಹಿಸಿ ಕೊಡಲು ಆಗ್ರಹ
ಜಿಲ್ಲೆಯ ವಿವಿಧೆಡೆ ಇನ್ನೂ ಕೂಡ ಕೆಲವು ರಾಜ್ಯಗಳ ವಲಸೆ ಕಾರ್ಮಿಕರು ಬಾಕಿಯಾಗಿದ್ದಾರೆ. ಅವರಿಗೆ ಜಿಲ್ಲಾಡಳಿತ ಹಾಗೂ ಸಂಘ-ಸಂಸ್ಥೆಗಳ ಮೂಲಕ ಆಶ್ರಯ, ಊಟ ಒದಗಿಸಲಾಗುತ್ತಿದೆ. ಮಂಗಳೂರಿನ ಮಿಲಾಗ್ರಿಸ್‌ ಶಾಲಾ ಕಟ್ಟಡದಲ್ಲಿರುವ ಉತ್ತರ ಪ್ರದೇಶದ ಸುಮಾರು 300 ಮಂದಿ ಕಾರ್ಮಿಕರು ತಮ್ಮ ಊರಿಗೆ ಕಳುಹಿಸಿಕೊಡಲು ವ್ಯವಸ್ಥೆ ಮಾಡುವಂತೆ ಒತ್ತಾಯಿಸಿ ಮಂಗಳವಾರ ಪ್ರತಿಭಟನೆ ಕೂಡ ನಡೆಸಿದರು. ಸರಿಯಾದ ಊಟ, ತಿಂಡಿ ಒದಗಿಸಿ ಕೊಡುವಂತೆಯೂ ಒತ್ತಾಯಿಸಿದರು.

ಕಡಬ: ತವರಿಗೆ ತೆರಳಲು ಕಾರ್ಮಿಕರ ಪಟ್ಟು
ಕಡಬ: ಕಡಬ ಭಾಗದಿಂದ ಮೇ 19ರಂದು ಅಧಿಕಾರಿಗಳ ಸೂಚನೆ ಮೇರೆಗೆ ಊರಿಗೆ ತೆರಳಲು ತಯಾರಾಗಿದ್ದ ಜಾರ್ಖಂಡ್‌ ಮೂಲದ ಸುಮಾರು 148 ಕಾರ್ಮಿಕರ ಪ್ರಯಾಣ ಕೊನೆಯ ಕ್ಷಣದಲ್ಲಿ ರದ್ದುಗೊಂಡಿದ್ದು, ಅವರು ಕಡಬ ತಹಶೀಲ್ದಾರ್‌ ಕಚೇರಿ ಎದುರು ಜಮಾಯಿಸಿ ತಮ್ಮನ್ನು ಊರಿಗೆ ಕಳುಹಿಸಿಕೊಡುವಂತೆ ಆಗ್ರಹಿಸಿ ಘಟನೆ ನಡೆದಿದೆ. ಬಳಿಕ ಪುತ್ತೂರು ವಿಭಾಗದ ಡಿವೈಎಸ್ಪಿ ದಿನಕರ ಶೆಟ್ಟಿ ಆಗಮಿಸಿ, ವಲಸೆ ಕಾರ್ಮಿಕರನ್ನು ಸಮಾಧಾನಪಡಿಸಿ ಬಳಿಕ ಅವರಿಗೆ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಿದರು. ಈ ವೇಳೆ ಕಡಬ ಎಸ್‌,ಐ, ರುಕ್ಮ ನಾೖಕ್‌, ಡಿವೈಎಸ್ಪಿ ದಿನಕರ ಶೆಟ್ಟಿ ಹಾಗೂ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ನಾಗೇಶ್‌ ಕದ್ರಿ, ದಿನಕರ ಶೆಟ್ಟಿ ಕಾರ್ಮಿಕರಿಗೆ ರೈಲು ಸ್ಥಗಿತಗೊಂಡಿರುವ ಬಗ್ಗೆ ಮನವರಿಕೆ ಮಾಡಿದರು.
ಪ್ರಯಾಣ ವ್ಯವಸ್ಥೆ ಆಗುವ ವರೆಗೆ ಕಡಬ ಗೌಡ ಸಮುದಾಯ ಭವನದಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡಲಾಯಿತು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಊಟದ ವ್ಯವಸ್ಥೆ ಮಾಡಲಾಯಿತು. ಕಡಬ ಕಂದಾಯ ನಿರೀಕ್ಷಕ ಅವಿನ್‌ ರಂಗತ್‌ಮಲೆ, ಕಡಬ ತಹಶೀಲ್ದಾರ್‌ ಜಾನ್‌ ಪ್ರಕಾಶ್‌, ಪೊಲೀಸ್‌ ಸಿಬಂದಿ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

bgfjfg

ರಾಜ್ಯೋತ್ಸವ ಹತ್ತಿರಕ್ಕೆ ಬಂದ ವೇಳೆ ಎಂಇಎಸ್ ಪುಂಡಾಟಿಕೆ ಶುರು ಮಾಡಿದೆ : HDK

rwytju11111111111

ಬುಧವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ವೇತನ ಮೂರ್‍ನಾಲ್ಕು ತಿಂಗಳು ವಿಳಂಬ; ಜೀವನಕ್ಕೆ ಪರದಾಡುವ ಸ್ಥಿತಿ

ವೇತನ ಮೂರ್‍ನಾಲ್ಕು ತಿಂಗಳು ವಿಳಂಬ; ಜೀವನಕ್ಕೆ ಪರದಾಡುವ ಸ್ಥಿತಿ

ಆತಂಕ ಬೇಡ; ಆದರೆ ಎಚ್ಚರಿಕೆಯಂತೂ ಬೇಕು

ಆತಂಕ ಬೇಡ; ಆದರೆ ಎಚ್ಚರಿಕೆಯಂತೂ ಬೇಕು

“ಫೈರಿಂಗ್‌ ರೇಂಜ್‌’ ಇಲ್ಲದೆ ಪೊಲೀಸರ ಪರದಾಟ

“ಫೈರಿಂಗ್‌ ರೇಂಜ್‌’ ಇಲ್ಲದೆ ಪೊಲೀಸರ ಪರದಾಟ

ಇಂದು ಉಪಚುನಾವಣೆಯ ಬಹಿರಂಗ ಪ್ರಚಾರ ಅಂತ್ಯ

ಇಂದು ಉಪಚುನಾವಣೆಯ ಬಹಿರಂಗ ಪ್ರಚಾರ ಅಂತ್ಯ

100 ಶಾಸಕರಿಗಿಲ್ಲ ಟಿಕೆಟ್‌? ಬಿಜೆಪಿಯಲ್ಲೂ ಆಮೂಲಾಗ್ರ ಬದಲಾವಣೆ ಸಾಧ್ಯತೆ

100 ಶಾಸಕರಿಗಿಲ್ಲ ಟಿಕೆಟ್‌? ಬಿಜೆಪಿಯಲ್ಲೂ ಆಮೂಲಾಗ್ರ ಬದಲಾವಣೆ ಸಾಧ್ಯತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“ಫೈರಿಂಗ್‌ ರೇಂಜ್‌’ ಇಲ್ಲದೆ ಪೊಲೀಸರ ಪರದಾಟ

“ಫೈರಿಂಗ್‌ ರೇಂಜ್‌’ ಇಲ್ಲದೆ ಪೊಲೀಸರ ಪರದಾಟ

ವೆನ್ಲಾಕ್ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯ ಆರೋಪ

ವೆನ್ಲಾಕ್ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯ ಆರೋಪ

ಲಾಡ್ಜ್ ಗೆ ಕರೆದೊಯ್ದು ಆತ್ಯಾಚಾರ: ಬಂಧನ

ಲಾಡ್ಜ್ ಗೆ ಕರೆದೊಯ್ದು ಆತ್ಯಾಚಾರ: ಆರೋಪಿಸಿ ಬಂಧನ

ಮಂಗಳೂರಿನಲ್ಲಿ ಮೂರು ದಿನ ನೀರಿಲ್ಲ

ಮಂಗಳೂರಿನಲ್ಲಿ ಮೂರು ದಿನ ನೀರು ಸರಬರಾಜಿನಲ್ಲಿ ವ್ಯತ್ಯಯ

ಮಂಗಳೂರು: ಬಲೆಗೆ ಬಿತ್ತು ಭಾರೀ ಗಾತ್ರದ ಶಾರ್ಕ್ ಮೀನು; ಮರಳಿ ಸಮುದ್ರಕ್ಕೆ ಬಿಟ್ಟ ಮೀನುಗಾರರು

ಮಂಗಳೂರು: ಬಲೆಗೆ ಬಿತ್ತು ಭಾರೀ ಗಾತ್ರದ ಶಾರ್ಕ್ ಮೀನು; ಮರಳಿ ಸಮುದ್ರಕ್ಕೆ ಬಿಟ್ಟ ಮೀನುಗಾರರು

MUST WATCH

udayavani youtube

ಆಧುನಿಕ ಪದ್ಧತಿಯೊಂದಿಗೆ ಬ್ಯಾಡಗಿ ಮೆಣಸಿನಕಾಯಿ ಕೃಷಿಗೆ ಮುಂದಾದ ಅಡಕೆ ಕೃಷಿಕ

udayavani youtube

ಬಸ್ ಕಂಡಕ್ಟರ್‌ನಿಂದ ಸೂಪರ್ ಸ್ಟಾರ್ ಆದ ರಜನಿಕಾಂತ್ ಕಥೆ

udayavani youtube

ಈ ಪ್ರೌಢ ಶಾಲೆಯಲ್ಲಿ ಒಂದಲ್ಲ, ಎರಡಲ್ಲ ಹಲವಾರು ಸಮಸ್ಯೆಗಳು!

udayavani youtube

ಪಾಕಿಸ್ಥಾನದ ವಿಜಯವನ್ನು ಸಂಭ್ರಮಿಸಿದ ರಾಜಸ್ಥಾನದ ಟೀಚರ್

udayavani youtube

ಸಾಮಾಜಿಕ ಸಂದೇಶ ಹೊತ್ತು 3500 ಕಿ.ಮೀ ಸೈಕಲ್ ಪ್ರಯಾಣ!

ಹೊಸ ಸೇರ್ಪಡೆ

bgfjfg

ರಾಜ್ಯೋತ್ಸವ ಹತ್ತಿರಕ್ಕೆ ಬಂದ ವೇಳೆ ಎಂಇಎಸ್ ಪುಂಡಾಟಿಕೆ ಶುರು ಮಾಡಿದೆ : HDK

rwytju11111111111

ಬುಧವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ವೇತನ ಮೂರ್‍ನಾಲ್ಕು ತಿಂಗಳು ವಿಳಂಬ; ಜೀವನಕ್ಕೆ ಪರದಾಡುವ ಸ್ಥಿತಿ

ವೇತನ ಮೂರ್‍ನಾಲ್ಕು ತಿಂಗಳು ವಿಳಂಬ; ಜೀವನಕ್ಕೆ ಪರದಾಡುವ ಸ್ಥಿತಿ

ಆತಂಕ ಬೇಡ; ಆದರೆ ಎಚ್ಚರಿಕೆಯಂತೂ ಬೇಕು

ಆತಂಕ ಬೇಡ; ಆದರೆ ಎಚ್ಚರಿಕೆಯಂತೂ ಬೇಕು

ಬೈಕಲ್ಲಿ ಮಕ್ಕಳ ಬೆಲ್ಟ್ ಕಡ್ಡಾಯ? ಹೊಸ ನಿಯಮ ಸಾಧ್ಯತೆ

ಬೈಕಲ್ಲಿ ಮಕ್ಕಳ ಬೆಲ್ಟ್ ಕಡ್ಡಾಯ? ಹೊಸ ನಿಯಮ ಸಾಧ್ಯತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.