ಮೂಲ್ಕಿ ಪೊಲೀಸ್ ಠಾಣಾ ಸಿಬ್ಬಂದಿಗೆ ಸೋಂಕು ದೃಢ: ಠಾಣೆ ಸೀಲ್ ಡೌನ್
Team Udayavani, Jul 11, 2020, 12:09 PM IST
ಮೂಲ್ಕಿ: ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಪೊಲೀಸ್ ಠಾಣಾ ಸಿಬ್ಬಂದಿಯೋರ್ವರಿಗೆ ಕೋವಿಡ್ -19 ಸೋಂಕು ತಾಗಿರುವುದು ದೃಢವಾಗಿದೆ. ಈ ಕಾರಣದಿಂದ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದೆ.
ಮೂಲ್ಕಿ ಠಾಣೆಯ 46 ವರ್ಷ ಪ್ರಾಯದ ಹೆಡ್ ಕಾನ್ಸ್ಟೇಬಲ್ ಓರ್ವರಿಗೆ ಸೋಂಕು ದೃಢವಾಗಿದೆ. ಹೀಗಾಗಿ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದೆ. ಇಲ್ಲಿನ ಹಳೆಯ ಪೊಲೀಸ್ ಕೊಠಡಿಗಳಲ್ಲಿ ಕರ್ತವ್ಯ ನಿರ್ವಹಣೆ ಮಾಡಲು ವ್ಯವಸ್ಥೆ ಮಾಡಲಾಗಿದೆ.
ಬಪ್ಪನಾಡು ಮಹಿಳೆಗೆ ಸೋಂಕು; ಇಲ್ಲಿನ ಬಪ್ಪನಾಡಿನ ವಸತಿ ಸಂಕೀರ್ಣವೊಂದರಲ್ಲಿ ವಾಸವಿದ್ದ ವ್ಯಕ್ತಿಗೆ ಕೆಲವು ದಿನಗಳ ಹಿಂದೆ ಸೋಂಕು ದೃಢವಾಗಿತ್ತು. ಇಂದು ಆತನ ಪತ್ನಿಗೂ ಕೋವಿಡ್ ಸೋಂಕು ತಾಗಿರುವುದು ಪತ್ತೆಯಾಗಿದೆ. ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.