ಕರಾವಳಿ ಕಮಲ ಪಾಳಯದಲ್ಲಿ ಹೆಚ್ಚಿದ ಜೋಶ್‌

ಮಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಜಯಸಂಕಲ್ಪ ಯಾತ್ರೆ

Team Udayavani, Apr 15, 2019, 6:30 AM IST

modi

ಮಂಗಳೂರು: ನಗರದ ಕೇಂದ್ರ ಮೈದಾನದಲ್ಲಿ ಶನಿವಾರ ನಡೆದ ವಿಜಯ ಸಂಕಲ್ಪ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಭಾಷಣ ಕರಾವಳಿ ಕಮಲ ಪಾಳೆಯ ದಲ್ಲಿ ಹೊಸ ಹುಮ್ಮಸ್ಸು ತುಂಬಿದೆ.

ದ.ಕ. ಹಾಗೂ ಉಡುಪಿ -ಚಿಕ್ಕಮಗಳೂರು ಕ್ಷೇತ್ರದಿಂದ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಹಾಗೂ ಸಾರ್ವಜ ನಿಕರು ಸಮಾವೇಶದಲ್ಲಿ ಭಾಗವಹಿಸಿದ್ದರು. ಸಭೆಗೆ ವ್ಯಕ್ತವಾದ ಭಾರೀ ಜನಸ್ಪಂದನೆಯು ಕರಾವಳಿಯಲ್ಲಿ ಮೋದಿ ಅಲೆಗೆ ಇನ್ನಷ್ಟು ಅಬ್ಬರ ತಂದುಕೊಡುವುದರ ಜತೆಗೆ ಬಿಜೆಪಿಯ ಚುನಾವಣ ಪ್ರಚಾರಕ್ಕೆ ಮತ್ತಷ್ಟು ಹುರುಪು ತಂದಿದೆ.

ಬಜಪೆ ವಿಮಾನ ನಿಲ್ದಾಣದಿಂದ ಕೇಂದ್ರ ಮೈದಾನಕ್ಕೆ ಆಗಮಿಸುವ ಸಂದರ್ಭ ಹಾದಿಯುದ್ದಕ್ಕೂ ಸೇರಿದ ಜನಸ್ತೋಮ, ಮೈದಾನದಲ್ಲಿ ಬಹಿರಂಗ ಸಭೆಯಲ್ಲಿ ನೆರೆದ ಜನಸಮೂಹವನ್ನು ಕಂಡು ಸ್ವತಃ ಮೋದಿಯವರೇ ಉಲ್ಲಸಿತ ರಾಗಿದ್ದರು. ಪಕ್ಷದ ಮೂಲಗಳ ಪ್ರಕಾರ ರಾಜ್ಯ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ 2018ರ ಮೇ 5ರಂದು ಇದೇ ಮೈದಾನದಲ್ಲಿ ಮೋದಿ ಭಾಗವಹಿಸಿದ್ದ ಪ್ರಚಾರ ಸಭೆಗೆ ಸೇರಿದ್ದಕ್ಕಿಂತಲೂ ಅಧಿಕ ಜನಸಮೂಹ ಈ ಬಾರಿ ಸೇರಿತ್ತು.

ಸಂತಸ ವ್ಯಕ್ತಪಡಿಸಿದ ಮೋದಿ
ಸಭೆ ಮುಕ್ತಾಯವಾಗಿ ವಿಮಾನ ನಿಲ್ದಾಣಕ್ಕೆ ಹಿಂದಿರುಗುವಾಗ ಹಂಪನ ಕಟ್ಟೆ ಪ್ರದೇಶದಲ್ಲಿ ಮೋದಿಯವರು ಭದ್ರತೆಯ ಕಟ್ಟುಪಾಡು ಲೆಕ್ಕಿಸದೆ ಕಾರಿನಲ್ಲಿ ನಿಂತು ದೇಹವನ್ನು ಹೊರ ಚಾಚಿ ರಸ್ತೆಬದಿಯಲ್ಲಿ ಕಾದಿದ್ದ ಸಾವಿರಾರು ಜನರತ್ತ ಕೈಬೀಸಿ ಹರ್ಷ ವ್ಯಕ್ತಪಡಿಸಿದರು.

ಇನ್ಸ್‌ಸ್ಟಾಗ್ರಾಂನಲ್ಲಿ ಮೋದಿಯವರು, “ಮಂಗಳೂರಿಗರ ಪ್ರೀತಿಗೆ ವಿನೀತನಾಗಿದ್ದೇನೆ’ (ಹಂಬಲ್ಡ್‌ ಬೈ ದ ಅಫೆಕ್ಷನ್‌) ಎಂದು ಉಲ್ಲೇಖೀಸಿರು ವುದು ವಿಶೇಷ. ಜನರು ನೆರೆ ದಿರುವ ವೀಡಿಯೊ ಅಪ್‌ಲೋಡ್‌ ಮಾಡಿದ್ದಾರೆ. “ಇದು ಮಂಗಳೂರಿಗರು ನನ್ನನ್ನು ಸ್ವಾಗತಿಸಿದ ರೀತಿ’ (ದಿಸ್‌ ಇಸ್‌ ಹೌ ಮಂಗಳೂರು ವೆಲ್‌ಕಮ್ಡ್ ಮಿ ಟುಡೇ) ಎಂದು ಅಡಿಟಿಪ್ಪಣಿ ಬರೆದಿದ್ದಾರೆ. ಟ್ವಿಟರ್‌ನಲ್ಲಿ, “ಮಂಗಳೂರಿನ ರ್ಯಾಲಿಯಲ್ಲಿ ಉತ್ಸಾಹಭರಿತ ವಾತಾವರಣ (ಲೈವಿÉà ಆಟಾ¾ಸ್ಪಿಯರ್‌ ಆಟ್‌ ದ ರ್ಯಾಲಿ ಇನ್‌ ಮಂಗಳೂರು)’ ಎಂದು ಬರೆದು ಸಭೆಯ ವೀಡಿಯೋ ಅಪ್‌ಲೋಡ್‌ ಮಾಡಿ ಮಂಗಳೂರಿನಲ್ಲಿ ತನಗೆ ದೊರಕಿದ ಸ್ವಾಗತವನ್ನು ಹಂಚಿಕೊಂ ಡಿದ್ದಾರೆ. ಸಭೆಯಲ್ಲೂ ಇದೇ ಬಗೆಯ ಹರ್ಷವನ್ನು ಅವರು ವ್ಯಕ್ತಪಡಿಸಿದ್ದರು.

ಹೆಚ್ಚಿದ ಹುರುಪು
2014ರ ಚುನಾವಣೆಯಲ್ಲಿ ದೇಶಾದ್ಯಂತ ಇದ್ದ ರೀತಿಯಲ್ಲೇ ಕರಾವಳಿಯಲ್ಲೂ ಮೋದಿ ಅಲೆ ಕೆಲಸ ಮಾಡಿತ್ತು ಮತ್ತು ಈ ಭಾಗದ 3 ಕ್ಷೇತ್ರಗಳಲ್ಲೂ ಬಿಜೆಪಿ ಜಯ ಭೇರಿ ಬಾರಿಸಿತ್ತು. ಈ ಬಾರಿಯ ಚುನಾವಣೆಯಲ್ಲಿ ದೇಶದಲ್ಲಿರುವುದು ಮೋದಿ ಅಲೆ ಅಲ್ಲ; ಸುನಾಮಿ ಎಂದು ಬಿಜೆಪಿ ಹೇಳಿಕೊಳ್ಳುತ್ತಿದೆ.

ಅಭ್ಯರ್ಥಿಗಳಿಗಿಂತಲೂ ಹೆಚ್ಚಾಗಿ ಮೋದಿಯವರನ್ನೇ ಮುಂದಿಟ್ಟು ಕೊಂಡು ಮತ ಯಾಚಿಸುತ್ತಿರುವ ಬಿಜೆಪಿಗೆ ಮೋದಿ ಮಂಗಳೂರು ಸಭೆ ಇನ್ನಷ್ಟು ಹುರುಪು ತುಂಬಿದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಮೋದಿಯವರು ಮೇ 1ರಂದು ಉಡುಪಿಯಲ್ಲಿ ಮತ್ತು ಮೇ 5 ರಂದು ಮಂಗಳೂರಿನಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿದ್ದರು. ಆ ಸಲ ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ಕ್ಲೀನ್‌ಸಿÌàಪ್‌ ಸಾಧನೆ ಮಾಡಿದ್ದರೆ ದಕ್ಷಿಣ ಕನ್ನಡದ 8ರಲ್ಲಿ 7 ಸ್ಥಾನ ಗೆದ್ದುಕೊಂಡಿತ್ತು. ಈ ಚುನಾವಣೆಯಲ್ಲಿ ಇತಿಹಾಸ ಪುನರಾವರ್ತನೆಯಾಗಲಿದೆ ಎಂಬುದು ಬಿಜೆಪಿ ಲೆಕ್ಕಾಚಾರ. ಮೋದಿ ಅಲೆಯನ್ನು ಮತವಾಗಿ ಪರಿವರ್ತಿಸಲು ಬಿಜೆಪಿ ಮನೆ ಭೇಟಿ ಕಾರ್ಯಕ್ರಮವನ್ನು ಇನ್ನಷ್ಟು ಬಿರುಸುಗೊಳಿಸಲಿದೆ.

- ಅಂದು ಚಾಯ್‌ವಾಲಾ; ಇಂದು ಚೌಕಿದಾರ್‌
2014ರಲ್ಲಿ ಮೋದಿಯವರು ಮಂಗಳೂರಿನಲ್ಲಿ ಚುನಾವಣ ಪ್ರಚಾರ ಸಭೆಯನ್ನುದ್ದೇಶಿಸಿ ಭಾಷಣ ಮಾಡಿದ ಸಂದರ್ಭದಲ್ಲಿ ಚಾಯ್‌ವಾಲಾ ಚರ್ಚೆ ಪ್ರಚಲಿತದಲ್ಲಿತ್ತು. ಭಾಷಣದಲ್ಲೂ ಪ್ರಧಾನ ಅಂಶವಾಗಿ ಪ್ರಸ್ತಾವವಾಗಿತ್ತು. ಕ್ಷೇತ್ರದೆಲ್ಲೆಡೆ ಚಾಯ್‌ಪೇ ಚರ್ಚಾ ಆಯೋಜಿಸಲಾಗಿತ್ತು. ಈ ಚುನಾವಣೆಯಲ್ಲಿ ಚೌಕಿದಾರ್‌ ಚರ್ಚೆ ಪ್ರಚಲಿತದಲ್ಲಿದೆ. ಮೋದಿ ಭಾಷಣದಲ್ಲಿ ಮತ್ತು ಸಭೆಯಲ್ಲಿ ಮೈ ಭೀ ಚೌಕಿದಾರ್‌ ಘೋಷಣೆ ಮೊಳಗುತ್ತಿತ್ತು. ಬಿಜೆಪಿ ಕಾರ್ಯಕರ್ತರು ಬಹುಸಂಖ್ಯೆಯಲ್ಲಿ ಚೌಕಿದಾರ್‌ ದಿರಿಸು, ಟೊಪ್ಪಿಗೆ ಧರಿಸಿ ಭಾಗವಹಿಸಿದ್ದರು.

- ”ಟೆಲಿ ಪ್ರಾಮrರ್‌’ಬಳಕೆ!
ಪ್ರಧಾನಿ ಮೋದಿ ಅವರು ಈ ಬಾರಿಯ ಲೋಕಸಭಾ ಚುನಾವಣ ಪ್ರಚಾರದ ಸಂದರ್ಭದಲ್ಲಿ ತಮ್ಮ ಭಾಷಣಕ್ಕೆ ನೆರವಾಗುವ ಉದ್ದೇಶದಿಂದ ಟೆಲಿಪ್ರಾಮrರ್‌ ಬಳಸುತ್ತಿದ್ದಾರೆ. ಬೇರೆ ಬೇರೆ ರಾಜ್ಯಗಳಿಗೆ ಹೋಗುವ ಸಂದರ್ಭದಲ್ಲಿ ಅಲ್ಲಿನ ಜನರ ಜತೆಗೆ ಕೆಲವೊಮ್ಮೆ ಸ್ಥಳೀಯ ಭಾಷೆಯಲ್ಲಿ ಮಾತನಾಡಲು ಸುಲಭವಾಗಲು ಪದಗಳ ಬಳಕೆಗೆ ಟೆಲಿ ಪ್ರಾಮrರ್‌ ಬಳಸಲಾಗುತ್ತದೆ.

ಮಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಮೋದಿ ಅವರು ಟೆಲಿ ಪ್ರಾಮrರ್‌ ಸಹಾಯದಿಂದ ಕನ್ನಡದಲ್ಲಿ ಭಾಷಣ ಮಾಡಿದರು. ಪ್ರಧಾನಿ ಭಾಷಣ ಮಾಡುವ ಮುಂಭಾಗದಲ್ಲಿ ಇದಕ್ಕಾಗಿ ಎರಡು ಪ್ರಾಮrರ್‌ಗಳನ್ನು ಇಡಲಾಗಿತ್ತು. ಕನ್ನಡದ ಶಬ್ದಗಳು ಪ್ರಧಾನಿ ಅವರಿಗೆ ಅನುಕೂಲವಾಗುವ ಭಾಷೆಯಲ್ಲಿ (ಬಹುತೇಕ ಹಿಂದಿ) ಟೆಲಿ ಪ್ರಾಮrರ್‌ನಲ್ಲಿ ಮೂಡಿಬರುತ್ತವೆ. ಅದನ್ನು ನೋಡಿಕೊಂಡು ಭಾಷಣ ಮಾಡಲು ಸುಲಭವಾಗುತ್ತದೆ.

-  ಅನುವಾದ ಬೇಡ ಎಂದ ಕಾರ್ಯಕರ್ತರು!
ಮೋದಿ ಅವರ ಭಾಷಣದ ಧಾಟಿ ಮತ್ತು ಗಟ್ಟಿ ಧ್ವನಿಯಲ್ಲಿನ ಹುಮ್ಮಸ್ಸು ಹಾಗೆಯೇ ಕೇಳಿ ಅನುಭವಿಸುವುದೇ ಒಂದು ಸೊಗಸು. ಆ ದನಿಯಲ್ಲಿನ ಏರಿಳಿತ ಎಲ್ಲವೂ. ಹಾಗಾಗಿ ಈ ಬಾರಿ ಮೋದಿಯವರ ಭಾಷಣ ಅನುವಾದ ಬೇಡ ಎಂದುಬಿಟ್ಟರು ಕಾರ್ಯಕರ್ತರು ಮತ್ತು ಸಾರ್ವಜನಿಕರು.

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Congress 1.20 ಲಕ್ಷಕ್ಕೂ ಅಧಿಕ ಮತಗಳ ಗೆಲುವು: ಪದ್ಮರಾಜ್‌ ಆರ್‌.

Congress 1.20 ಲಕ್ಷಕ್ಕೂ ಅಧಿಕ ಮತಗಳ ಗೆಲುವು: ಪದ್ಮರಾಜ್‌ ಆರ್‌.

BJP ಅಭೂತಪೂರ್ವ ವಿಜಯದ ವಿಶ್ವಾಸ: ಕಾ| ಬೃಜೇಶ್‌ ಚೌಟ

BJP ಅಭೂತಪೂರ್ವ ವಿಜಯದ ವಿಶ್ವಾಸ: ಕಾ| ಬೃಜೇಶ್‌ ಚೌಟ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.