ಸಾಲಗಾರರಿಂದ ತಪ್ಪಿಸಲು ಆತ್ಮಹತ್ಯೆ ಕಥೆ ಕಟ್ಟಿ ಶಿವಮೊಗ್ಗಕ್ಕೆ ಪರಾರಿಯಾದ ಯುವಕ

Team Udayavani, Jun 10, 2020, 3:11 PM IST

ಸಾಲಗಾರರಿಂದ ತಪ್ಪಿಸಲು ಆತ್ಮಹತ್ಯೆ ಕಥೆ ಕಟ್ಟಿ ಶಿವಮೊಗ್ಗಕ್ಕೆ ಪರಾರಿಯಾದ ಯುವಕ

ಉಳ್ಳಾಲ: ಇಲ್ಲಿಗೆ ಸಮೀಪದ ನೇತ್ರಾವತಿ ಸೇತುವೆಯಲ್ಲಿ ಬೈಕ್ ಇಟ್ಟು ನಾಪತ್ತೆಯಾಗಿದ್ದ ಯುವಕ ಶಿವಮೊಗ್ಗದಲ್ಲಿ ಪತ್ತೆಯಾಗಿದ್ದು, ಸಾಲಗಾರರಿಂದ ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ಆತ್ಮಹತ್ಯೆಯ ನಾಟಕವಾಡಿರುವ ಸಾಧ್ಯತೆಯ ಕುರಿತು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ

ಕುರ್ನಾಡು ನಿವಾಸಿ ಪ್ರವೀಣ್ ಸಪಲ್ಯ (28) ತನ್ನ ಬೈಕ್ ಅನ್ನು ನೇತ್ರಾವತಿ ಸೇತುವೆಯಲ್ಲಿ ಇಟ್ಟು ನಾಪತ್ತೆಯಾಗಿದ್ದ. ಆರ್ಥಿಕ ಸಮಸ್ಯೆಯಲ್ಲಿ ಸಿಲುಕಿದ್ದ ಪ್ರವೀಣ್ ಸಾಲಗಾರರಿಂದ ಮುಕ್ತಿ ಪಡೆಯಲು ಆತ್ಮಹತ್ಯೆಯ ನಾಟಕವಾಡಿ ಶಿವಮೊಗ್ಗಕ್ಕೆ ತಲುಪಿದ್ದ. ಆದರೆ ಅನಾಥ ಬೈಕ್ ಕಂಡು ಬಂದ ಹಿನ್ನಲೆಯಲ್ಲಿ ಈತ ನೇತ್ರಾವತಿ ಸೇತುವೆಯಿಂದ ಹಾರಿ ಆತ್ಮಹತ್ಯೆಗೈದಿರುವ ಸಾಧ್ಯತೆಯ ಹಿನ್ಬಲೆಯಲ್ಲಿ ಹುಡುಕಾಟ ಆರಂಭವಾಗಿತ್ತು. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾದ ಬಳಿಕ ಮಾಹಿತಿ ತಿಳಿದು ತನ್ನ ಸ್ನೇಹಿತನಿಗೆ ದೂರವಾಣಿ ಕರೆ ಮಾಡಿ ತಾನು ಸತ್ತಿಲ್ಲ ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ಇದ್ದೇನೆ. ಆರ್ಥಿಕ ಸಮಸ್ಯೆಯಿಂದ ಮನೆಗೆ ಬರಲಾಗುತ್ತಿಲ್ಲ ಎಂದು ತಿಳಿಸಿದ್ದ ಎನ್ನಲಾಗಿದೆ.

ಈ ಸಂದರ್ಭದಲ್ಲಿ ಕಂಕನಾಡಿ ನಗರ ಪೊಲೀಸರಿಗೆ ಪ್ರವೀಣ್ ಬದುಕಿರುವ ಮಾಹಿತಿಯನ್ಬು ಆತನ ಸ್ನೇಹಿತರು ನೀಡಿದ್ದು ಇನ್ಸ್ ಪೆಕ್ಟರ್ ಅಶೋಕ್ ಅವರು  ಶಿವಮೊಗ್ಗ ದೊಡ್ಡಪೇಟೆ ಪೊಲೀಸರಿಗೆ ಮಾಹಿತಿ ನೀಡಿ ಬಸ್ ನಿಲ್ದಾಣದಲ್ಲಿದ್ದ ಪ್ರವೀಣ್ ನನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲು ವ್ಯವಸ್ಥೆ ಮಾಡಿದರು.

ಸಮುದ್ರ, ನದಿ ತಟದಲ್ಲಿ ಹುಡುಕಾಟ

ಸಮುದ್ರ, ನದಿ ತಟದಲ್ಲಿ ಹುಡುಕಾಟ

ಮಂಗಳೂರಿನ ಆಪ್ಟಿಕಲ್ ಶಾಪ್ ನಲ್ಲಿ ಕೆಲಸಕ್ಕಿದ್ದ ಪ್ರವೀಣ್ ನಿನ್ನೆ ರಾತ್ರಿ 7.30ಕ್ಕೆ ಕೆಲಸ ಮುಗಿಸಿ ಮನೆಗೆ ಹೊರಟಿದ್ದು, ನೇತ್ರಾವತಿ ಸೇತುವೆ ದಾಟಿ ಬಂದು ವಾಪಾಸ್ ಮಂಗಳುರು ಕಡೆ ಸಂಚರಿಸಿದ್ದು ನೇತ್ರಾವತಿ ಸೇತುವೆ ಬಳಿ ಬೈಕ್ ನಿಲ್ಲಿಸಿ ಬೈಕ್ ನ ಇಂಡಿಕೇಟರ್ ಸೂಚನೆಯನ್ನ ಚಾಲನೆಯಲ್ಲಿಟ್ಟು ನಾಪತ್ತೆಯಾಗಿದ್ದ. ರಾತ್ರಿ ಸುಮಾರು ಎಂಟು ಗಂಟೆಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು ಬೈಕ್ ಸಂಖ್ಯೆಯ ಆಧಾರದಲ್ಲಿ ವಿಳಾಸ ಪತ್ತೆ ಹಚ್ಚಲಾಗಿತ್ತು. ಪೊಲೀಸರು, ಅಗ್ನಿಶಾಮಕ ಸಿಬಂದಿಗಳು, ಸ್ಥಳೀಯ ಈಜುಗಾರರು, ಪ್ರವೀಣ್ ಕುಟುಂಬದ ಸದಸ್ಯರು, ಸ್ನೇಹಿತರು ಸೇರಿದಂತೆ ಸುಮಾರು ನೂರಕ್ಕೂ ಹೆಚ್ಚುಜನರು ರಾತ್ರಿ ಎರಡು ಗಂಟೆಯವರೆಗೆ ಸಮುದ್ರ ಸೇರಿದಂತೆ ನದಿ ತಟದಲ್ಲಿ ಹುಡುಕಾಡಿದ್ದು, ಇಂದೂ ಮದ್ಯಾಹ್ನ 11 ಗಂಟೆಯವರೆಗೆ ಹುಡುಕಾಡಿದ್ದು ಪ್ರವೀಣ್ ಪತ್ತೆಯಾಗಿರಲಿಲ್ಲ. ಇದೀಗ ಪ್ರವೀಣ್ ಜೀವಂತವಾಗಿರುವ ಸುದ್ದಿ ತಿಳಿದು ಎಲ್ಲರೂ ನಿರಾಳರಾಗಿದ್ದು ಆತನ ಸ್ನೇಹಿತರು ಸೇರಿದಂತೆ ಕುಟುಂಬದ ಸದಸ್ಯರು ಶಿವಮೊಗ್ಗಕ್ಕೆ ತೆರಳಿದ್ದಾರೆ.

ಸ್ಥಳದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸಂತೋಷ್ ಕುಮಾರ್ ರೈ ಬೋಳಿಯಾರ್, ಬಿಜೆಪಿ ಕ್ಷೇತ್ರಾಧ್ಯಕ್ಷ ಚಂದ್ರಹಾಸ ಪಂಡಿತ್ ಹೌಸ್ ಹುಡುಕಾಟದ ಸಂದರ್ಭದಲ್ಲಿ ಸ್ಥಳದಲ್ಲಿದ್ದರು.

ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.

ಟಾಪ್ ನ್ಯೂಸ್

ರಾಜ್ಯದಲ್ಲಿಂದು 41,457 ಕೋವಿಡ್ ಪ್ರಕರಣಗಳು ಪತ್ತೆ : ಪಾಸಿಟಿವಿಟಿ ದರ 22.30% ಕ್ಕೆ ಏರಿಕೆ

ರಾಜ್ಯದಲ್ಲಿಂದು 41,457 ಕೋವಿಡ್ ಪ್ರಕರಣಗಳು ಪತ್ತೆ : ಪಾಸಿಟಿವಿಟಿ ದರ 22.30% ಕ್ಕೆ ಏರಿಕೆ

ರಾಷ್ಟ್ರೀಯ ಹಬ್ಬಗಳಲ್ಲಿ ಸ್ವಯಃ ಪ್ರೇರಣೆಯಿಂದ ಭಾಗವಹಿಸಿ : ಶಾಸಕ ಸಿದ್ದು ಸವದಿ

ರಾಷ್ಟ್ರೀಯ ಹಬ್ಬಗಳಲ್ಲಿ ಸ್ವಯಃ ಪ್ರೇರಣೆಯಿಂದ ಭಾಗವಹಿಸಿ : ಶಾಸಕ ಸಿದ್ದು ಸವದಿ

ಸೋಂಕು ನಿಯಂತ್ರಣಕ್ಕೆ 15-20 ದಿನ ಶಾಲಾ-ಕಾಲೇಜು ಮುಚ್ಚಿ;ರಾಜ್ಯ ಸರಕಾರಕ್ಕೆ ಹೆಚ್.ಡಿ.ಕೆ ಸಲಹೆ

ಸೋಂಕು ನಿಯಂತ್ರಣಕ್ಕೆ 15-20 ದಿನ ಶಾಲಾ-ಕಾಲೇಜು ಮುಚ್ಚಿ;ರಾಜ್ಯ ಸರಕಾರಕ್ಕೆ ಹೆಚ್.ಡಿ.ಕೆ ಸಲಹೆ

30 ದಿನದೊಳಗೆ ಗಂಗಾ ಕಲ್ಯಾಣ ಸಂಪರ್ಕ: ಸಚಿವ ವಿ.ಸುನೀಲ್ ಕುಮಾರ್

30 ದಿನದೊಳಗೆ ಗಂಗಾ ಕಲ್ಯಾಣ ಸಂಪರ್ಕ: ಸಚಿವ ವಿ.ಸುನೀಲ್ ಕುಮಾರ್

ವ್ಯವಸ್ಥೆಯ ಸುಧಾರಣೆ ಮುಖ್ಯವೇ ವಿನಾ ವೈಯಕ್ತಿಕ ಪ್ರತಿಷ್ಠೆಯಲ್ಲ; ಅಶ್ವತ್ಥನಾರಾಯಣ

ವ್ಯವಸ್ಥೆಯ ಸುಧಾರಣೆ ಮುಖ್ಯವೇ ವಿನಾ ವೈಯಕ್ತಿಕ ಪ್ರತಿಷ್ಠೆಯಲ್ಲ; ಅಶ್ವತ್ಥನಾರಾಯಣ

ನಾನೊಬ್ಬ ಯೋಧ, ಪಂಜಾಬ್ ಗತ ವೈಭವ ಮರು ಸ್ಥಾಪಿಸುತ್ತೇನೆ; ಭಗವಂತ ಮಾನ್

ನಾನೊಬ್ಬ ಯೋಧ, ಪಂಜಾಬ್ ಗತ ವೈಭವ ಮರು ಸ್ಥಾಪಿಸುತ್ತೇನೆ; ಭಗವಂತ ಮಾನ್

ಪಂಜಾಬ್ ಸಿಎಂ ಚನ್ನಿ ಸಂಬಂಧಿಗಳ ಮನೆ ಮೇಲೆ ಜಾರಿ ನಿರ್ದೇಶನಾಲಯ ದಾಳಿ

ಪಂಜಾಬ್ ಸಿಎಂ ಚನ್ನಿ ಸಂಬಂಧಿಗಳ ಮನೆ ಮೇಲೆ ಜಾರಿ ನಿರ್ದೇಶನಾಲಯ ದಾಳಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಿರ್ವಹಣೆ ಇಲ್ಲದೆ ಪಾಳು ಕೊಂಪೆಯಾದ ಅತ್ತಾವರ ಕಟ್ಟೆ ಉದ್ಯಾನವನ!

ನಿರ್ವಹಣೆ ಇಲ್ಲದೆ ಪಾಳು ಕೊಂಪೆಯಾದ ಅತ್ತಾವರ ಕಟ್ಟೆ ಉದ್ಯಾನವನ!

ಪಿಲಿಕುಳ ಜೈವಿಕ ಉದ್ಯಾನವನ: ಬಾಹುಬಲಿ-ಅನುಷ್ಕಾಗೆ ಎರಡನೇ ಕರು!

ಪಿಲಿಕುಳ ಜೈವಿಕ ಉದ್ಯಾನವನ: ಬಾಹುಬಲಿ-ಅನುಷ್ಕಾಗೆ ಎರಡನೇ ಕರು!

Untitled-1

ಹಳೆಯಂಗಡಿ: ನದಿಯಲ್ಲಿ ಶವ ಪತ್ತೆ

ಎಂಡೋ ಸಂತ್ರಸ್ತರಿಗೆ ಅಗತ್ಯ ಸೌಕರ್ಯ: ದ.ಕ. ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ.

ಎಂಡೋ ಸಂತ್ರಸ್ತರಿಗೆ ಅಗತ್ಯ ಸೌಕರ್ಯ: ದ.ಕ. ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ.

1-sdsad

ಮಂಗಳೂರು: ಎಂಬಿಬಿಎಸ್‌ ವಿದ್ಯಾರ್ಥಿನಿಯ ಫೋಟೋ ಅನ್ಯ ಧರ್ಮೀಯನೊಂದಿಗೆ ಎಡಿಟ್‌ ಮಾಡಿ ವೈರಲ್‌

MUST WATCH

udayavani youtube

ಕೃಷ್ಣಾಪುರ ಪರ್ಯಾಯ – 2022 Highlights

udayavani youtube

18 ವರ್ಷಗಳ ವೈವಾಹಿಕ ಜೀವನಕ್ಕೆ ಅಂತ್ಯ ಹಾಡಿದ ಧನುಷ್ – ಐಶ್ವರ್ಯಾ

udayavani youtube

ಪರ್ಯಾಯ ಮಹೋತ್ಸವ : ದಂಡ ತೀರ್ಥದಲ್ಲಿ ಶ್ರೀ ಕೃಷ್ಣಾಪುರ ಮಠಾಧೀಶರಿಂದ ಪವಿತ್ರ ಸ್ನಾನ

udayavani youtube

ನಿಷೇಧದ ನಡುವೆಯೂ ರಥೋತ್ಸವ : ಜನರನ್ನು ನಿಯಂತ್ರಿಸಲು ಪೊಲೀಸರು ವಿಫಲ

udayavani youtube

ಉಡುಪಿ : ಇಂದು (ಜ.17) ರಾತ್ರಿ 10 ಗಂಟೆ ಒಳಗೆ ಅಂಗಡಿ ಮುಂಗಟ್ಟು ಮುಚ್ಚಲು ನಗರ ಸಭೆ ಆದೇಶ

ಹೊಸ ಸೇರ್ಪಡೆ

ವಕಾರ ಸಾಲು ಮಾರಾಟ ಪ್ರಕ್ರಿಯೆಗೆ ಚಾಲನೆ! ನಗರಸಭೆ ಕೋಟ್ಯಂತರ ರೂ. ಆಸ್ತಿ ಕೈತಪುವ ಆತಂಕ

ವಕಾರ ಸಾಲು ಮಾರಾಟ ಪ್ರಕ್ರಿಯೆಗೆ ಚಾಲನೆ! ನಗರಸಭೆ ಕೋಟ್ಯಂತರ ರೂ. ಆಸ್ತಿ ಕೈತಪುವ ಆತಂಕ

ಕೊರಟಗೆರೆ: ಕ್ಯಾಮೇನಹಳ್ಳಿ ರಾಸುಗಳ ಜಾತ್ರೆ ರದ್ದಾಗಿದ್ದರೂ ನೂರಾರು ರೈತರ ಆಗಮನ

ಕೊರಟಗೆರೆ: ಕ್ಯಾಮೇನಹಳ್ಳಿ ರಾಸುಗಳ ಜಾತ್ರೆ ರದ್ದಾಗಿದ್ದರೂ ನೂರಾರು ರೈತರ ಆಗಮನ

ಬೋಗಸ್ ಹಾಜರಿ ಹಾಕಲು ಗ್ರಾಪಂ ಸದಸ್ಯರಿಂದಲೇ ಒತ್ತಡ: ಆಕ್ರೋಶ

ಬೋಗಸ್ ಹಾಜರಿ ಹಾಕಲು ಗ್ರಾಪಂ ಸದಸ್ಯರಿಂದಲೇ ಒತ್ತಡ: ಆಕ್ರೋಶ

ರಾಜ್ಯದಲ್ಲಿಂದು 41,457 ಕೋವಿಡ್ ಪ್ರಕರಣಗಳು ಪತ್ತೆ : ಪಾಸಿಟಿವಿಟಿ ದರ 22.30% ಕ್ಕೆ ಏರಿಕೆ

ರಾಜ್ಯದಲ್ಲಿಂದು 41,457 ಕೋವಿಡ್ ಪ್ರಕರಣಗಳು ಪತ್ತೆ : ಪಾಸಿಟಿವಿಟಿ ದರ 22.30% ಕ್ಕೆ ಏರಿಕೆ

ಪ್ರಧಾನಿ ಮೋದಿಯಿಂದ ಕಾಶಿ ಕ್ಷೇತ್ರಕ್ಕೆ ವಿಶ್ವ ಪ್ರಸಿದ್ಧಿ: ಶಿವಾಚಾರ್ಯ ಮಹಾಸ್ವಾಮೀಜಿ

ಪ್ರಧಾನಿ ಮೋದಿಯಿಂದ ಕಾಶಿ ಕ್ಷೇತ್ರಕ್ಕೆ ವಿಶ್ವ ಪ್ರಸಿದ್ಧಿ: ಶಿವಾಚಾರ್ಯ ಮಹಾಸ್ವಾಮೀಜಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.