ಮಂಗಳೂರು : 354 kg ಮಾದಕ ವಸ್ತುಗಳನ್ನು ನಾಶ ಮಾಡಿದ ಪೊಲೀಸರು
Team Udayavani, Jun 26, 2021, 1:23 PM IST
ಮಂಗಳೂರು : ಮಂಗಳೂರು ಪೊಲೀಸ್ ಕಮಿಷನರೆಟ್ ಹಾಗೂ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ವಿವಿಧ ಡ್ರಗ್ಸ್ ಪ್ರಕರಣಗಳಿಗೆ ಸಂಬಂಧಿಸಿದಂತೆ ವಶಪಡಿಸಿಕೊಳ್ಳಲಾಗಿದ್ದ 354 kg ಮಾದಕ ವಸ್ತುಗಳನ್ನು ಇಂದು ಮುಲ್ಕಿಯ ಬಯೋ ಮೆಡಿಕಲ್ ಪ್ಲಾಂಟ್ ನಲ್ಲಿ ನಾಶಪಡಿಸಲಾಯಿತು.
ಇದರಲ್ಲಿ ಗಾಂಜಾ, ಎಂಡಿಎಂಎ, ಕೊಕೇನ್, ಬ್ರೌನ್ ಶುಗರ್ ಮೊದಲಾದ ಡ್ರಗ್ಸ್ ಸೇರಿವೆ. ಈ ವೇಳೆ ಕಮಿಷನರ್ ಎನ್.ಶಶಿಕುಮಾರ್, ಎಸ್ ಪಿ ಋಷಿಕೇಶ್ ಸೋನಾವಣೆ ಮತ್ತಿತರ ಅಧಿಕಾರಿಗಳು ಹಾಜರಿದ್ದರು.
ವಿಶ್ವ ಮಾದಕ ದ್ರವ್ಯ ಸೇವನೆ ಹಾಗೂ ಕಳ್ಳಸಾಗಣೆ ವಿರೋಧಿ ದಿನದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಪೊಲೀಸರು ಡ್ರಗ್ಸ್ ನಾಶ ಮಾಡಿದ್ದಾರೆ ಎಂದು ಆಯುಕ್ತರು ತಿಳಿಸಿದ್ದಾರೆ. ಒಟ್ಟು ಸುಮಾರು 50 ಲಕ್ಷ ರೂ. ಮೌಲ್ಯದ ಮಾದಕ ವಸ್ತುವನ್ನು ನಾಶ ಮಾಡಲಾಗಿದೆ.