“ಮಿಯಾವಾಕಿ’ ಸೃಷ್ಟಿಸುತ್ತಿದೆ ಗ್ರೀನ್‌ ಮಂಗಳೂರು!

ನಗರದ ಹಸುರೀಕರಣದಲ್ಲಿ ಮಹತ್ವದ ಪಾತ್ರ

Team Udayavani, Jan 16, 2022, 5:08 PM IST

“ಮಿಯಾವಾಕಿ’ ಸೃಷ್ಟಿಸುತ್ತಿದೆ ಗ್ರೀನ್‌ ಮಂಗಳೂರು!

ಮಹಾನಗರ: ನಗರ ಬೆಳೆಯುತ್ತಿರುವಂತೆಯೇ ಹಸುರು ಮಾಯವಾಗುತ್ತದೆ ಎಂಬ ಆಕ್ಷೇಪ ಸಾಮಾನ್ಯ. ಇಂತಹ ಅಪವಾದ ದೂರ ಮಾಡುವ ನಿಟ್ಟಿನಲ್ಲಿ ಮಿಯಾವಾಕಿ ಮುಖೇನ “ಗ್ರೀನ್‌ ಮಂಗಳೂರು’ ಪರಿಕಲ್ಪನೆ ನಗರದಲ್ಲಿ ಸದ್ದಿಲ್ಲದೆ ಅನುಷ್ಠಾನ ಪಡೆಯುತ್ತಿರುವುದು ನಗರದ ಹಸುರೀಕರಣದಲ್ಲಿ ಮಹತ್ವದ ಪಾತ್ರ ವಹಿಸಿದೆ.

ಕಡಿಮೆ ಜಾಗ ದಲ್ಲಿ ದಟ್ಟವಾಗಿ ಕಾಡು ಬೆಳೆಸುವ ಜಪಾನ್‌ನ “ಮಿಯಾವಾಕಿ’ ಮಾದರಿ ಸದ್ಯ ಮಂಗಳೂರಿನ ವಿವಿಧ ಭಾಗಗಳಲ್ಲಿ ಅನುಷ್ಠಾನ ಪಡೆಯುತ್ತಿದೆ. ಈ ಮೂಲಕ ನಗರದಲ್ಲಿ ಹಸುರಿನ ಜಾಗೃತಿ ಅಲ್ಲಲ್ಲಿ ಕೇಳಿಬರುತ್ತಿದೆ.

ದೇಶವೇ ಕೊಂಡಾಡುವ ಸ್ವರೂಪದಲ್ಲಿ ನಗರ ಸ್ವತ್ಛತೆಯ ಕಾರ್ಯ ನಡೆಸಿದ ಮಂಗಳೂರಿನ ಶ್ರೀ ರಾಮಕೃಷ್ಣ ಮಠ ಈಗಾಗಲೇ ಮೂರು ಇಂತಹ ಮಿಯಾವಾಕಿ ಪರಿಕಲ್ಪನೆಯನ್ನು ಮಂಗಳೂರಿನಲ್ಲಿ ಜಾರಿಗೆ ತಂದಿದೆ. 2019ರ ಅಕ್ಟೋಬರ್‌ 2ರಂದು ಕೊಟ್ಟಾರದ ಜಿಲ್ಲಾ ಪಂಚಾಯತ್‌ ಮುಂಭಾಗದಲ್ಲಿ ಮಿಯಾವಾಕಿ ಆರಂಭವಾಯಿತು. ಇಲ್ಲಿ 4 ಸೆಂಟ್ಸ್‌ ಜಾಗದಲ್ಲಿ 103 ಜಾತಿಯ 238 ಗಿಡಗಳನ್ನು ನೆಡಲಾಗಿದ್ದು ಈಗ ಅವು ಸೊಂಪಾಗಿ ಬೆಳೆಯುತ್ತಿವೆ. ಸಾಮಾನ್ಯವಾಗಿ ಇಷ್ಟು ಜಾಗದಲ್ಲಿ 10-12 ಗಿಡಗಳನ್ನು ನೆಡಲಾಗುತ್ತದೆ. ಆದರೆ ಮಿಯಾವಾಕಿ ಮಾದರಿಯಲ್ಲಿ 600 ಗಿಡಗಳನ್ನು ಬೆಳೆಸಬಹುದಾಗಿದೆ. ಸದ್ಯ ಇಲ್ಲಿ 238 ಗಿಡಗಳನ್ನು ಬೆಳೆಸಲಾಗಿದೆ. ಇಲ್ಲಿ ಅರ್ತಿ, ಶ್ರೀಗಂಧ, ರಕ್ತಚಂದನ, ಪೇರಳೆ, ಮಾವು, ಹಲಸು, ಪುನರ್ಪುಳಿ, ನೇರಳೆ ಸೇರಿದಂತೆ ಹಣ್ಣು ಹಾಗೂ ಇತರ ಜಾತಿಯ ಮರಗಳಿವೆ. ಸಹಜವಾದ ಕಾಡಿನಲ್ಲಿ ಇರಬೇಕಾದ ವಿವಿಧ ಜಾತಿಯ ಗಿಡಗಳನ್ನು ಬೆಳೆಸಲಾಗಿದೆ. ಬಳಿಕ ರಾಮಕೃಷ್ಣ ಮಠದಲ್ಲಿ 2020ರ ಅ.2ರಂದು ಹಾಗೂ 2022ರ ಜ.1ರಂದು ಮಿಯಾವಾಕಿಯ ಎರಡು ಅವತರಣಿಕೆ ಆರಂಭವಾಯಿತು. ಈ ಮೂಲಕ ನಗರದಲ್ಲಿ ಮಿಯಾವಾಕಿ ಪರಿಕಲ್ಪನೆ ಬಹು ಆಯಾಮದಿಂದ ಸುದ್ದಿಯಾಗುವಲ್ಲಿ ಕಾರಣವಾಯಿತು.

ಸದ್ಯ ರಾಮಕೃಷ್ಣ ಮಠ ಕೈಗೊಂಡ ಮಿಯಾವಾಕಿಯನ್ನು ಬಹುಮಂದಿ ಕಂಡು ಇಂತಹುದೇ ಪರಿಕಲ್ಪನೆ ಜಾರಿಗೊಳಿಸುವಂತೆ ಕೇಳಿಕೊಂಡಿದ್ದಾರೆ. 20 ಮಂದಿ ಇದರ ಬಗ್ಗೆ ವಿಚಾರಿಸಿದ್ದು ತಮ್ಮ ವ್ಯಾಪ್ತಿಯ ಸ್ಥಳದಲ್ಲಿ ಗಿಡ ನೆಡಲು ಕೋರಿದ್ದಾರೆ. ಜತೆಗೆ ರಾಮಕೃಷ್ಣ ಮಠವು ನಗರದ 100 ಕಡೆಗಳಲ್ಲಿ ಮಿಯಾವಾಕಿ ಅನುಷ್ಠಾನಕ್ಕೆ ಇಚ್ಚಾಶಕ್ತಿ ಪ್ರದರ್ಶಿಸಿದೆ.

ಈ ಮಧ್ಯೆ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರವು ಮಿಯಾವಾಕಿ ಆರಂಭದ ಬಗ್ಗೆ ಒಲವು ಹೊಂದಿದ್ದು, ಸ್ಥಳ ಸಮೀಕ್ಷೆಗೆ ಮುಂದಾಗಿದೆ. ಶಾಸಕ ವೇದವ್ಯಾಸ್‌ ಕಾಮತ್‌ ಅವರು ಕೂಡ ಮಿಯಾವಾಕಿ ಬಗ್ಗೆ ಪೂರಕವಾಗಿ ಸ್ಪಂದಿಸಿದ್ದು, ಮಂಗಳೂರು ಪಾಲಿಕೆ ವತಿಯಿಂದ ಇಂತಹ ಪರಿಕಲ್ಪನೆ ಜಾರಿಗೆ ಮುಂದಡಿ ಇಟ್ಟಿದ್ದಾರೆ.

ಪರಿಸರ ಕಾರ್ಯಕರ್ತ ಜೀತ್‌ ಮಿಲನ್‌ ರೋಚ್‌ ಅವರ ಮೂಲಕ ಪಡೀಲ್‌ ರೈಲ್ವೆ ಸೇತುವೆಯ ಇಕ್ಕೆಲಗಳಲ್ಲಿ ಮಿಯಾವಾಕಿ ಶುರುವಾಗಿದೆ.ಇನ್ನು ಅರಣ್ಯ ಇಲಾಖೆ ಮೂಲಕವೂ ಈ ಪ್ರಯತ್ನ ನಡೆದಿದೆ.

ಮಿಯಾವಾಕಿ ಪರಿಹಾರ
ವಿವಿಧ ಕಾರಣಗಳಿಂದ ಹಸುರು ಮಾಯವಾಗುತ್ತಿದೆ. ಮಂಗಳೂರು ನಗರದಲ್ಲಿಯೂ ಶುದ್ಧ ಗಾಳಿಯ ಕೊರತೆ ಉದ್ಭವಿಸದಿರಲು ಹಸುರು ಅನಿವಾರ್ಯ ವಾಗಿದೆ. ಇದೆಲ್ಲದಕ್ಕೆ ಸದ್ಯದ ಸ್ಥಿತಿಯಲ್ಲಿ ಮಿಯಾವಾಕಿ ಕಾಡುಗಳೇ ಪರಿಹಾರ. ಕೊಟ್ಟಾರಚೌಕಿಯಲ್ಲಿ ಆರಂಭಿಸಿದ ಮಿಯಾವಾಕಿ ಕಾಡು ನಿರೀಕ್ಷಿತ ರೀತಿಯಲ್ಲಿ ಬೆಳೆಯುತ್ತಿದೆ. ಇದೇ ಮಾದರಿಯಲ್ಲಿ ನಗರದ 100 ಕಡೆ ಬೆಳೆಸುವ ಚಿಂತನೆಯಿದೆ. ಸ್ವತ್ಛತೆಯಂತೆ ಹಸುರಿಗೂ ಆದ್ಯತೆ ಈ ಸಮಯದ ಅಗತ್ಯ.
– ಶ್ರೀ ಏಕಗಮ್ಯಾನಂದ ಸ್ವಾಮೀಜಿ, ಶ್ರೀ ರಾಮಕೃಷ್ಣ ಮಠ, ಮಂಗಳೂರು

-ದಿನೇಶ್‌ ಇರಾ

ಟಾಪ್ ನ್ಯೂಸ್

2024ರ ಚುನಾವಣೆ “ಕೈ”ಗೆ ದುಬಾರಿಯಾಗಲಿದೆಯೇ: ಐದು ತಿಂಗಳಲ್ಲಿ ಘಟಾನುಘಟಿಗಳ ರಾಜೀನಾಮೆ

2024ರ ಚುನಾವಣೆ “ಕೈ”ಗೆ ದುಬಾರಿಯಾಗಲಿದೆಯೇ: ಐದು ತಿಂಗಳಲ್ಲಿ ಘಟಾನುಘಟಿಗಳ ರಾಜೀನಾಮೆ

1-d-s-sfsf

ಬೆಂಗಳೂರಿನಲ್ಲಿ ಐಕಿಯ ಸ್ಟೋರ್:ಸಿಇಓ ಜೆಸ್ಪರ್ ಬ್ರಾಡಿನ್ ಜತೆ ಸಿಎಂ ಚರ್ಚೆ

ಲವ್‌ ಬರ್ಡ್ಸ್‌ನಲ್ಲಿ ಲವ್‌ ಮಾಕ್ಟೇಲ್‌ ಜೋಡಿ: ಹೊಸ ಚಿತ್ರದಲ್ಲಿ ಕೃಷ್ಣ-ಮಿಲನಾ

ಲವ್‌ ಬರ್ಡ್ಸ್‌ನಲ್ಲಿ ಲವ್‌ ಮಾಕ್ಟೇಲ್‌ ಜೋಡಿ: ಹೊಸ ಚಿತ್ರದಲ್ಲಿ ಕೃಷ್ಣ-ಮಿಲನಾ

1-fsfdf

ಹೆಚ್ಚುತ್ತಿರುವ ಮಂಕಿ ಪಾಕ್ಸ್ ಸೋಂಕಿನ ಪ್ರಮಾಣ : ಸಲಿಂಗಕಾಮಿಗಳಿಗೆ ಎಚ್ಚರಿಕೆ

1-dfdffds

ಬಿಜೆಪಿ ನಿಷ್ಠಾವಂತನಾದ ನನ್ನ ಸಚಿವ ಸ್ಥಾನ ಭದ್ರ: ಸಚಿವ ಪ್ರಭು ಚವ್ಹಾಣ್

ಜಮ್ಮು-ಕಾಶ್ಮೀರ: ಎನ್ ಕೌಂಟರ್ ನಲ್ಲಿ 3 ಪಾಕಿಸ್ತಾನಿ ಉಗ್ರರ ಹತ್ಯೆ, ಓರ್ವ ಪೊಲೀಸ್ ಹುತಾತ್ಮ

ಜಮ್ಮು-ಕಾಶ್ಮೀರ: ಎನ್ ಕೌಂಟರ್ ನಲ್ಲಿ 3 ಪಾಕಿಸ್ತಾನಿ ಉಗ್ರರ ಹತ್ಯೆ, ಓರ್ವ ಪೊಲೀಸ್ ಹುತಾತ್ಮ

dk shi 2

ಮಸೀದಿ ಕುರಿತು ತಾಂಬೂಲ ಪ್ರಶ್ನೆ; ಬಿಜೆಪಿ ಈ ರಾಜ್ಯವನ್ನು ಕೊಲ್ಲುತ್ತಿದೆ :ಡಿಕೆಶಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

guddali-pooje

ವಿವಿಧ ಕಾಮಗಾರಿಗಳ ಉದ್ಘಾಟನೆ, ಗುದ್ದಲಿ ಪೂಜೆ

kadri

ಕದ್ರಿ ಶೌಚಾಲಯಕ್ಕೆ ಮತ್ತೆ ಬೀಗ!

krishnapura

ಬೀಳುವ ಸ್ಥಿತಿಯಲ್ಲಿ ಕೃಷ್ಣಾಪುರ ಸರಕಾರಿ ಶಾಲೆ

road-repair

ಬೀಬಿ ಅಲಬಿ ರಸ್ತೆ; ‘ಸ್ಮಾರ್ಟ್‌’ಗಾಗಿ ಅಗೆದು ಪ್ರಯಾಣಕ್ಕೆ ಅಧ್ವಾನ!

messy-water

ರಸ್ತೆಯಲ್ಲೇ ಗಲೀಜು ನೀರು; ತ್ವರಿತವಾಗಲಿ ಕಾಮಗಾರಿ

MUST WATCH

udayavani youtube

ಮಳಲಿ ಮಸೀದಿಯಲ್ಲಿ ದೇವರ ಸಾನಿಧ್ಯ ಗೋಚರ

udayavani youtube

‘ನನಗೆ ಏಳೂವರೆ ಶನಿ ಉಂಟು!’

udayavani youtube

SSLC ಸಾಧಕರಿಗೆ ಉದಯವಾಣಿ ಸನ್ಮಾನ

udayavani youtube

ಉಡುಪಿ : ಹಲವು ಸಂಶಯಗಳನ್ನು ಹುಟ್ಟು ಹಾಕಿದ ಯುವಜೋಡಿ ಸಾವು ಪ್ರಕರಣ

udayavani youtube

ವೈದ್ಯರ ನಿರ್ಲಕ್ಷದಿಂದ ನೆಲದ ಮೇಲೆ ನರಳಾಡಿದ ಗರ್ಭಿಣಿ

ಹೊಸ ಸೇರ್ಪಡೆ

18

ಸಾಮಾನ್ಯ ಕಾರ್ಯಕರ್ತೆಗೆ ಮೇಲ್ಮನೆ ಗೌರವ

fire-fighters

ಅತಿವೃಷ್ಟಿಯಲ್ಲಿ ಆಪದ್ಭಾಂಧವನಾದ ಅಗ್ನಿಶಾಮಕ ದಳ!

2024ರ ಚುನಾವಣೆ “ಕೈ”ಗೆ ದುಬಾರಿಯಾಗಲಿದೆಯೇ: ಐದು ತಿಂಗಳಲ್ಲಿ ಘಟಾನುಘಟಿಗಳ ರಾಜೀನಾಮೆ

2024ರ ಚುನಾವಣೆ “ಕೈ”ಗೆ ದುಬಾರಿಯಾಗಲಿದೆಯೇ: ಐದು ತಿಂಗಳಲ್ಲಿ ಘಟಾನುಘಟಿಗಳ ರಾಜೀನಾಮೆ

Untitled-1

ಶಿಥಿಲಗೊಂಡ ಸರಕಾರಿ ಶಾಲೆಗಳ ಅಭಿವೃದ್ಧಿಪಡಿಸಿ

huvinahadagali

ರೈತರ ಹೊಲಗಳಿಗೆ ಕಲುಷಿತ ನೀರು ತಡೆಗೆ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.