Moodbidri: ಸರಕಾರಿ ಜಾಗದಲ್ಲಿ ಫಲವೀವ ಮರಗಿಡ ಸರ್ವ ನಾಶ!

ಸ್ವಾತಂತ್ರ್ಯ ಲಭಿಸಿ 60 ವರ್ಷಗಳು ಸಂದ ಸವಿನೆನಪಿಗೆ ಗಿಡ ನಾಟಿ

Team Udayavani, Dec 4, 2023, 11:42 AM IST

4-moodbidri

ಮೂಡುಬಿದಿರೆ: ಸರಕಾರಿ ಜಾಗದಲ್ಲಿ ನೆಟ್ಟ, ಬೆಳೆಸಿದ ಫಲವೀವ ಗಿಡ ಮರಗಳನ್ನು ನಾಶ ಮಾಡಿದ ಪರಿಸರ ವಿರೋಧಿ, ಅಮಾನವೀಯ ಕೃತ್ಯ ಮೂಡುಬಿದಿರೆ ಸ್ವರಾಜ್ಯ ಮೈದಾನದಲ್ಲಿ ನಡೆದಿದೆ. ಈ ಕೃತ್ಯ ಗೈದವರಾರೆಂಬುದು ಇನ್ನೂ ರಹಸ್ಯವಾಗಿದೆ.

ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 60 ವರ್ಷಗಳು ಸಂದ ಸವಿನೆನಪಿಗೆ 2007ರ ಆಗಸ್ಟ್‌ ತಿಂಗಳಲ್ಲಿ ಮೂಡುಬಿದಿರೆಯ ಸ್ವರಾಜ್ಯ ಮೈದಾನದ ಅನತಿ ದೂರದಲ್ಲಿ ವಾಸವಾಗಿರುವ ಪರಿಸರ ಪ್ರೇಮಿಯೊಬ್ಬರು ಮೈದಾನವನ್ನು ಆವರಿಸಿಕೊಂಡು ಸಾಗುವ ರಸ್ತೆಯುದ್ದಕ್ಕೂ 60 ಪೇರಳೆ ಗಿಡಗಳನ್ನು ನೆಟ್ಟಿದ್ದರು. ಗಿಡಗಳನ್ನು ಸಿದ್ಧಪಡಿಸಿದ್ದೂ ಅವರೇ, 60 ಹೊಂಡಗಳನ್ನು ನಿರ್ಮಿಸಿದ್ದೂ ಅವರೇ.

ಜಾನುವಾರುಗಳ ಕಾಟವಿಲ್ಲದೆ ಬೆಳೆಸಬಹುದಾದ ಪೇರಳೆ ಗಿಡ ಬಿಡುವ ಕಾಯಿ, ಹಣ್ಣು ದೇಶದ ಎಲ್ಲ ಹಣ್ಣುಗಳಿಗಿಂತ ಮಿಗಿಲಾದ ಪೌಷ್ಟಿಕಾಂಶ ಹೊಂದಿರುವುದು ಗಮನಾರ್ಹ ಎಂದು ಕೃಷಿ ಋಷಿ ಡಾ| ಎಲ್‌.ಸಿ. ಸೋನ್ಸರೂ ಈ ಪರಿ(ಯ)ಸರ ಪ್ರೇಮವನ್ನು ಶ್ಲಾಘಿಸಿದ್ದರು. ಈ ಮಧ್ಯೆ ಸಾಮಾಜಿಕ ಅರಣ್ಯ ವಿಭಾಗದವರೂ ರೆಂಜೆ, ಹಲಸು ಮೊದಲಾದ ಗಿಡಗಳನ್ನು ನೆಟ್ಟು ಬೆಳೆಸಿದರು.

ಈ ಗಿಡಗಳು ಬೆಳೆಯುತ್ತಿದ್ದಂತೆ ಕೆಲವು ಪ್ರಾಕೃತಿಕವಾಗಿ, ಕೆಲವು ಕುಚೇಷ್ಟೆಯ, ವಿಘ್ನಸಂತೋಷಿಗಳಿಂದಾಗಿ ನಾಶವಾದವು. ಮೈದಾನ ವಿಸ್ತರಣೆಯಾಗುವಾಗ ಇನ್ನೂ ಕೆಲವು ಗಿಡಗಳು ತಮ್ಮ ಅಸ್ತಿತ್ವವನ್ನೇ ತ್ಯಾಗಮಾಡಿ ಕೊಳ್ಳಬೇಕಾಗಿ ಬಂದಿತು. ಅಂತೂ ಇಂತೂ ದಶಕ ಕಳೆಯು ವಾಗ ಕೆಲವಾದರೂ ಗಿಡಗಳು ಫಲಬಿಡ ತೊಡಗಿ ದವು. ಪುರಸಭೆಯ ಕಡೆಯಿಂದ ಗ್ರಾಸ್‌ ಕಟ್ಟಿಂಗ್‌ ಕಾರ್ಯ ವರ್ಷಂಪ್ರತಿ ನಡೆದಾಗಲೂ ಅದೆಷ್ಟೋ ಪೇರಳೆ ಗಿಡಗಳು ಅಸುನೀಗಿದವು.

ನ. 30 ರಂದೇನಾಯಿತು?

ನವೆಂಬರ್‌ 30ರಂದು ಈ ಹಾದಿಯಲ್ಲಿ ಜೆಸಿಬಿಯೊಂದು ಆಗಮಿಸಿ 16 ವರ್ಷ ಪ್ರಾಯದ, ಕಾಯಿ ಬಿಡುತ್ತಲಿದ್ದ ಪೇರಳೆ ಗಿಡಗಳನ್ನು, ಸಾಮಾಜಿಕ ಅರಣ್ಯ ಇಲಾಖೆ ಯವರು ನೆಟ್ಟು ಬೆಳೆಸಿದ್ದ, ಸಾಧಾರಣ 15-16 ವರ್ಷಗಳ ಹರೆಯದ ಹಲಸು, ಹೆಬ್ಬಲಸು ಗಿಡಗಳನ್ನು ಸಮೂಲ ಮಗುಚಿ ಹಾಕಿ ಬದಿಗೆ ದೂಡಿ ಹಾಕುವ, ಕಾನೂನು ಭಂಜಕ ಕಾರ್ಯ ನಡೆದೇ ಹೋಯಿತು.

ಪರಿಶೀಲಿಸಿದಾಗ ತಿಳಿದುಬಂದದ್ದು

ರಾಜೀವಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯದ ಕ್ರೀಡಾಕೂಟ ನ. 28 ರಿಂದ 30ರ ವರೆಗೆ ನಡೆದ ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯ ಕ್ರೀಡಾ ಕೂಟದವರು ಈ ಕೃತ್ಯ ಮಾಡಿಲ್ಲ.

ಡಿ. 1ರಂದು ಇದೇ ಮೈದಾನದಲ್ಲಿ ನಡೆದ, ಮಂಗಳೂರು ವೃತ್ತ ಅರಣ್ಯ ಇಲಾ ಖೆಯ ಕ್ರೀಡಾಕೂಟದವರ ಕೆಲಸವಂತೂ ಅಲ್ಲ. ಪುರಸಭೆ ಮುಖ್ಯಾಧಿಕಾರಿ ಇಂದು ಎಂ. ಅವರು ಹೇಳುವ ಪ್ರಕಾರ, “ಪುರಸಭೆಯ ಜೆಸಿಬಿಯ ಮೂಲಕ ಗುರುವಾರ ಯಾವುದೇ ಕೆಲಸ ಮಾಡಿಸಿಲ್ಲ’. ಹಾಗಾದರೆ ಇದನ್ನು ಯಾರು ಮಾಡಿದ್ದು ಎಂಬುದೇ ರಹಸ್ಯ.

ಪರಿಶೀಲಿಸಿ ಕ್ರಮ:

ಗಿಡ ತೆರವು ಬಗ್ಗೆ ಕೆಲಸದ ಒತ್ತಡದ ಕಾರಣ ಕಳೆದೆರಡು ದಿನಗಳಿಂದ ಸ್ಥಳ ಪರಿಶೀಲನೆ ನಡೆಸಲಾಗಿಲ್ಲ. ಸೋಮವಾರ ಪರಿಶೀಲನೆ ನಡೆಸಲಾಗುವುದು. ಬಳಿಕ ಮುಂದಿನ ಅಗತ್ಯ ಕ್ರಮದ ಬಗ್ಗೆ ಚಿಂತಿಸಲಾಗುವುದು. -ಇಂದು ಎಂ.,

ಮುಖ್ಯಾಧಿಕಾರಿ,

ಮೂಡುಬಿದಿರೆ ಪುರಸಭೆ

ಟಾಪ್ ನ್ಯೂಸ್

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ, ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ

Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.