ಪಂಪ್‌ವೆಲ್‌ ಬಸ್‌ ಟರ್ಮಿನಲ್‌ : ಒಂದು ದಶಕದ ಬೇಡಿಕೆ ಅನುಷ್ಠಾನದತ್ತ

Team Udayavani, May 28, 2020, 6:30 AM IST

bUS-TURMINAL

- 11 ವರ್ಷದ ಕನಸು
– 445 ಕೋ.ರೂ. ಯೋಜನೆ
– ಪ್ರಗತಿಯಲ್ಲಿ ಟೆಂಡರ್‌ ಪ್ರಕ್ರಿಯೆ

ಮಂಗಳೂರು: ಮಂಗಳೂರಿಗೆ ಸುಸಜ್ಜಿತ ಬಸ್‌ ನಿಲ್ದಾಣ ಆಗಬೇಕೆಂಬ ಸುಮಾರು 11 ವರ್ಷದ ಹಿಂದಿನ ಕನಸು ನನಸಾಗುವ ಹಂತ ತಲುಪಿದ್ದು, 445 ಕೋ.ರೂ. ವೆಚ್ಚದಲ್ಲಿ ಇಂಟಿ ಗ್ರೇಟೆಡ್‌ ಬಸ್‌ ಟರ್ಮಿನಲ್‌ ಮತ್ತು ವಾಣಿಜ್ಯ ಸಂಕೀರ್ಣ ಅಭಿವೃದ್ಧಿ ಕಾಮ ಗಾರಿಗೆ ಆರಂಭಿಕ ಚಾಲನೆ ದೊರೆತಿದೆ. ಮಂಗಳೂರಿಗೆ ಸುಸಜ್ಜಿತ ಬಸ್‌ ನಿಲ್ದಾಣ ಬೇಕು ಎಂಬ ಆಗ್ರಹದ ಮೇರೆಗೆ ಪಂಪ್‌ವೆಲ್‌ನಲ್ಲಿ ಭೂಸ್ವಾಧೀನ ಮಾಡಿ ಚರ್ಚೆ ನಡೆದರೂ ಅನುಷ್ಠಾನಕ್ಕೆ ಬರುವಲ್ಲಿ ವಿಫಲವಾಗಿತ್ತು. ಬಸ್‌ ನಿಲ್ದಾಣದ ಜಾಗವನ್ನೇ ಸ್ಥಳಾಂತರಿಸುವ ಬಗ್ಗೆಯೂ ಮಾತುಕತೆ ನಡೆದಿತ್ತು. ಬಸ್‌ ನಿಲ್ದಾಣಕ್ಕೆ ಪಂಪ್‌ವೆಲ್‌ ಜಾಗ ಅಂತಿಮ ಗೊಂಡಿರುವುದು ಗಮನಾರ್ಹ.

ಯೋಜನೆಯ ಚರ್ಚೆ
ಸುಮಾರು 20 ಎಕರೆ ಪ್ರದೇಶದಲ್ಲಿ “ಸಮಗ್ರ ಟ್ರಾನ್ಸ್‌ಪೊರ್ಟ್‌ ಹಬ್‌’ ನಿರ್ಮಾಣಕ್ಕೆ 2009ರಲ್ಲಿ ಮಂಗಳೂರು ಮಹಾ ನಗರಪಾಲಿಕೆ ಯೋಜನೆ ರೂಪಿ ಸಿತ್ತು. ಇದಕ್ಕೆ ಸಂಬಂಧಿಸಿ 2009ರಲ್ಲಿ 7.23 ಎಕರೆ ಖಾಸಗಿ ಜಮೀನು ಸ್ವಾಧೀನಪಡಿಸಲಾಗಿತ್ತು. ಇದರ ಸುತ್ತ ಇರುವ ಸರಕಾರಿ ಜಾಗದ ಪರಂಬೋಕು ಹಾಗೂ ಖಾಸಗಿ ಸ್ವಾಮ್ಯದ ಸುಮಾರು 4 ಎಕ್ರೆ ಜಮೀನು ಕೂಡ ಕಾದಿರಿಸಲಾಗಿತ್ತು. 2ನೇ ಹಂತದಲ್ಲಿ 11.59 ಎಕರೆ ಖಾಸಗಿ ಜಮೀನು ಸ್ವಾಧೀನ ಮಾಡಲಾಗಿತ್ತು. ಆದರೆ 2014ರಲ್ಲಿ ಆಗಿನ ಸಚಿವ ರಮಾನಾಥ ರೈ ಮತ್ತು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ 2ನೇ ಹಂತದ ಭೂಸ್ವಾಧೀನ ಪ್ರಕ್ರಿಯೆಯನ್ನು ಸಂಪೂರ್ಣ ಕೈಬಿಡಲು ಮನಪಾಕ್ಕೆ ಸೂಚನೆ ನೀಡಿ, 2017ರಲ್ಲಿ ಕೈಬಿಡಲಾಗಿತ್ತು. ಈ ಮಧ್ಯೆ ಪಡೀಲ್‌ನಲ್ಲಿ ದ.ಕ. ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ನಿರ್ಮಾಣ ನಡೆಯುತ್ತಿದ್ದು, ಅದೇ ಪರಿಸರದಲ್ಲಿ ಬಸ್‌ ನಿಲ್ದಾಣ ನಿರ್ಮಾಣ ವಾದರೆ ಸಾರ್ವಜನಿಕರಿಗೆ ಉಪಯೋಗ ವಾಗುತ್ತದೆ ಹಾಗೂ ಮಂಗಳೂರು ಜಂಕ್ಷನ್‌ ರೈಲು ನಿಲ್ದಾಣ ಕೂಡ ಸನಿಹ ದಲ್ಲಿಯೇ ಇರುವ ಹಿನ್ನೆಲೆಯಲ್ಲಿ ಬಸ್‌ ನಿಲ್ದಾಣವನ್ನು ಪಡೀಲ್‌ಗೆ ಶಿಫ್ಟ್‌ ಮಾಡುವುದು ಉತ್ತಮ ಎಂಬ ಮಾತು ಚರ್ಚೆಗೆ ಬಂದಿತ್ತು.

3 ವರ್ಷಗಳೊಳಗೆ ಪೂರ್ಣ
ವಾಣಿಜ್ಯ ಕೇಂದ್ರ ಮಂಗಳೂರಿನಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆಯನ್ನು ಕಡಿಮೆ ಮಾಡಲು ಬದಲಿ ಬಸ್‌ ನಿಲ್ದಾಣ ಅವಶ್ಯ ಎನ್ನುವುದು ಸಾರ್ವ ಜನಿಕರ ಬೇಡಿಕೆ. ಇದೀಗ ಯೋಜನೆ ಯನ್ನು ಸ್ಮಾರ್ಟ್‌ಸಿಟಿ ಅಡಿಯಲ್ಲಿ ಅನು ಷ್ಠಾನಗೊಳಿಸಗುತ್ತಿದೆ. ಈ ಕಾಮಗಾರಿಗೆ ಈಗ ಟೆಂಡರ್‌ ಆಹ್ವಾನಿ ಸಲಾಗಿದ್ದು, ಜುಲೈ ಕೊನೆಯವರೆಗೆ ಅವಕಾಶವಿದೆ.

ಬಸ್‌ ನಿಲ್ದಾಣದಲ್ಲಿ ಏನೇನಿರಲಿದೆ?
180 ಬಸ್‌ ಬೇಗಳೊಂದಿಗೆ ಬಸ್‌ ಟರ್ಮಿನಲ್‌, ಖಾಸಗಿ ಮತ್ತು ಕೆಎಸ್‌ಆರ್‌ಟಿಸಿ ಸೇವೆ ಮತ್ತು ದೂರದ ಪ್ರಯಾಣದ ಬಸ್‌ ವ್ಯವಸ್ಥೆಯೂ ಇಲ್ಲಿ ಲಭ್ಯವಿರಲಿದೆ. ಇದು ರಾಜ್ಯದಲ್ಲೇ ವಿನೂತನ ಮಾದರಿ ಬಸ್‌ ನಿಲ್ದಾಣ ಕಲ್ಪನೆ. ಸುಮಾರು 10 ಲಕ್ಷ ಚದರ ಅಡಿ ವಿಸ್ತೀರ್ಣದ ಶಾಪಿಂಗ್‌ ಮಾಲ್‌, ಕಚೇರಿ ಸ್ಥಳ, ನಗರದ ಜನರಿಗಾಗಿ ಮಲ್ಟಿ-ಲೆವೆಲ್‌ ಕಾರ್‌ ಪಾರ್ಕಿಂಗ್‌ ವ್ಯವಸ್ಥೆ ಇರಲಿದೆ. ಇವೆಲ್ಲವೂ ಆದ ಬಳಿಕ ಪಿಪಿಪಿ ಮಾಡೆಲ್‌ನ ಗುತ್ತಿಗೆ ಪಡೆದವರು 40 ವರ್ಷಗಳ ಕಾಲ ಅದನ್ನು ನಿರ್ವಹಿಸಿ ಅನಂತರ ನಿಲ್ದಾಣವನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಸಲಿದ್ದಾರೆ.

 ಶೀಘ್ರ ಟೆಂಡರ್‌ ಪೂರ್ಣ
ಪಂಪ್‌ವೆಲ್‌ನಲ್ಲಿ ಇಂಟಿಗ್ರೇಟೆಡ್‌ ಟ್ರಾನ್ಸ್‌ಪೊàರ್ಟ್‌ ಹಬ್‌ ನಿರ್ಮಾಣದ ಯೋಜನೆಗೆ ಸಚಿವ ಸಂಪುಟ ಅನುಮೋದನೆ ದೊರಕಿದ್ದು, ಟೆಂಡರ್‌ ಪ್ರಕ್ರಿಯೆ ಆರಂಭವಾಗಿದೆ. ಮುಂದಿನ ಕೆಲವೇ ತಿಂಗಳಿನಲ್ಲಿ ಈ ತಾಂತ್ರಿಕ ಪ್ರಕ್ರಿಯೆ ಮುಗಿದು ಕಾಮಗಾರಿ ಆರಂಭವಾಗಲಿದೆ. ಮೂರು ವರ್ಷಗಳೊಳಗೆ ಸುಸಜ್ಜಿತ ಬಸ್‌ನಿಲ್ದಾಣ ರೂಪುಗೊಳ್ಳಲಿದೆ.
 - ಮೊಹಮ್ಮದ್‌ ನಝೀರ್‌ , ವ್ಯವಸ್ಥಾಪಕ ನಿರ್ದೇಶಕ, ಮಂಗಳೂರು ಸ್ಮಾರ್ಟ್‌ಸಿಟಿ ಲಿ.

ಟಾಪ್ ನ್ಯೂಸ್

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

1-wewqewq

T20 World Cup; ಯುವರಾಜ್‌ ಸಿಂಗ್‌ ರಾಯಭಾರಿ: ಐಸಿಸಿ ಘೋಷಣೆ 

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

1-ewewqe

IPL; ಕೆಕೆಆರ್‌ ನೀಡಿದ 262 ರನ್ ಗುರಿ ತಲುಪಿ ದಾಖಲೆ ಬರೆದ ಪಂಜಾಬ್

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!

Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

1-wewqewq

T20 World Cup; ಯುವರಾಜ್‌ ಸಿಂಗ್‌ ರಾಯಭಾರಿ: ಐಸಿಸಿ ಘೋಷಣೆ 

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

1-ewewqe

IPL; ಕೆಕೆಆರ್‌ ನೀಡಿದ 262 ರನ್ ಗುರಿ ತಲುಪಿ ದಾಖಲೆ ಬರೆದ ಪಂಜಾಬ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.