ದ.ಕ ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ವಿತರಣೆ ಅಭಿಯಾನಕ್ಕೆ ಕೋಟ ಶ್ರೀನಿವಾಸ ಪೂಜಾರಿ ಚಾಲನೆ
Team Udayavani, Jan 16, 2021, 1:08 PM IST
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ನೀಡುವ ಅಭಿಯಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಚಾಲನೆ ನೀಡಿದರು.
ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಚಾಲನೆ ನೀಡಿ ಮಾತನಾಡಿದ ಅವರು,ಕೋವಿಡ್ ರೋಗಕ್ಕೆ ದೇಸೀಯ ಲಸಿಕೆ ನೀಡುತ್ತಿರುವುದು ಖುಷಿಯ ವಿಚಾರ. ಲಸಿಕೆ ಬಂತು ಎಂಬ ಮಾತ್ರಕ್ಕೆ ಕೋವಿಡ್ ನಿಯಮಗಳನ್ನು ಪಾಲನೆ ಮಾಡಲು ಮರೆಯದಿರಿ ಎಂದರು.
ಕಾರ್ಯಕ್ರಮದಲ್ಲಿ ನೂತನ ಸಚಿವ ಎಸ್.ಅಂಗಾರ, ಶಾಸಕರಾದ ವೇದವ್ಯಾಸ ಕಾಮತ್, ಡಾ.ಭರತ್ ಶೆಟ್ಟಿ, ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ, ದ.ಕ. ಜಿ.ಪಂ. ಸಿಇಒ ಸೆಲ್ವಮಣಿ, ಮೇಯರ್ ದಿವಾಕರ ಪಾಂಡೇಶ್ವರ, ದ.ಕ. ಡಿಎಚ್ಒ ರಾಮಚಂದ್ರ ಬಾಯಾರಿ ಸೇರಿದಂತೆ ಮತ್ತಿತರರು ಇದ್ದರು.
ಮೊದಲ ಹಂತದಲ್ಲಿ ಜಿಲ್ಲೆಯ ಎಲ್ಲಾ ತಾಲೂಕು ಮತ್ತು ಜಿಲ್ಲಾ ಆರೋಗ್ಯ ಕೇಂದ್ರದಲ್ಲಿ ಲಸಿಕೆ ನೀಡಲಾಗುತ್ತದೆ. ಮೊದಲ ದಿನ ಒಂದು ಕೇಂದ್ರದಲ್ಲಿ 100 ಮಂದಿಯಂತೆ 6 ಕೇಂದ್ರದಲ್ಲಿ 600 ಮಂದಿಗೆ ಲಸಿಕೆ ನೀಡಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಅಂತಾರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಹೇಳಿದ ಆಸ್ಟ್ರೇಲಿಯದ ಆರೋನ್ ಫಿಂಚ್
ಬೆಳ್ತಂಗಡಿ: ಉಜಿರೆ ಲಾಡ್ಜ್ ಗಳ ಮೇಲೆ ಏಕಕಾಲದಲ್ಲಿ ಎಸ್.ಪಿ. ನೇತೃತ್ವದಲ್ಲಿ ದಾಳಿ
ಮಂಗಳವಾರದ ರಾಶಿ ಭವಿಷ್ಯ: ಈ ರಾಶಿ ಅವರಿಗಿಂದು ಗೃಹ ಆಸ್ತಿ ಸಂಬಂಧ ಚಿಂತೆ ಎದುರಾದೀತು
ಜೋಶಿ ಅವರು ದೇಶಸ್ಥರಲ್ಲ ಅವರು ಮಾಧ್ವ ಸಂಪ್ರದಾಯಕ್ಕೆ ಸೇರಿದವರು: ಅಶೋಕ್ ಹಾರನಹಳ್ಳಿ
ಸ್ಪಿನ್ ಎದುರಿಸುವುದೇ ಕಠಿನ ಸವಾಲು: ಉಸ್ಮಾನ್ ಖ್ವಾಜಾ