Bantwal ಸ್ಕೂಟರ್ನಲ್ಲಿ ಇಟ್ಟಿದ್ದ ಲಕ್ಷ ರೂ. ಕಳವು
Team Udayavani, Oct 8, 2023, 12:28 AM IST
ಬಂಟ್ವಾಳ: ಬಿ.ಸಿ.ರೋಡಿನ ತಾಲೂಕು ಆಡಳಿತ ಸೌಧದ ಬಳಿ ನಿಲ್ಲಿಸಲಾಗಿದ್ದ ಸ್ಕೂಟರ್ನ ಸೀಟಿನಡಿ ಲಾಕ್ ಮಾಡಿ ಇಡಲಾಗಿದ್ದ 1 ಲಕ್ಷ ರೂ. ಕಳವಾಗಿರುವ ಘಟನೆ ಅ. 6ರಂದು ನಡೆದಿದೆ.
ನರಿಕೊಂಬು ಕೋಡಿಮಜಲು ನಿವಾಸಿ ಪ್ರಕಾಶ್ ಅವರು ಅ. 6ರ ಬೆಳಗ್ಗೆ ಬಿ.ಸಿ.ರೋಡಿನ ಬ್ಯಾಂಕೊಂದರಿಂದ 1.40 ಲಕ್ಷ ರೂ. ಡ್ರಾ ಮಾಡಿ ತಂದು ಸ್ಕೂಟರ್ನ ಸೀಟಿನಡಿಯಲ್ಲಿಟ್ಟು ಲಾಕ್ ಮಾಡಿದ್ದರು. ಆದರೆ ಮಧ್ಯಾಹ್ನ ಬಂದು ನೋಡಿದಾಗ ಅದರಿಂದ 1 ಲಕ್ಷ ರೂ. ಕಳವಾಗಿತ್ತು. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.