ಬೆಳ್ಳಾರೆ: ರಿಪೇರಿಗೆ ಬಂದಿದ್ದ ಮೊಬೈಲ್ ಸ್ಫೋಟ
Team Udayavani, Jun 22, 2022, 12:26 AM IST
ಸುಳ್ಯ: ಮೊಬೈಲ್ ಅಂಗಡಿಗೆ ರಿಪೇರಿಗೆ ಬಂದಿದ್ದ ಮೊಬೈಲ್ ಸ್ಫೋಟಗೊಂಡಿರುವ ಘಟನೆ ಜೂ. 20ರಂದು ಬೆಳ್ಳಾರೆಯ ಮೊಬೈಲ್ ಅಂಗಡಿಯೊಂದರಲ್ಲಿ ನಡೆದಿದೆ.
ಬೆಳ್ಳಾರೆಯ ಕೆಳಗಿನಪೇಟೆಯಲ್ಲಿ ಕಾರ್ಯಾಚರಿಸುತ್ತಿರುವ ಮೊಬೈಲ್ ಶೋರೂಂನಲ್ಲಿ ರಿಪೇರಿಗೆಂದು ಬಂದಿದ್ದ ರೆಡ್ಮಿ ಆ್ಯಂಡ್ರಾಯ್ಡ ಮೊಬೈಲ್ ಫೋನ್ ಆಕಸ್ಮಿಕವಾಗಿ ಸ್ಫೋಟಗೊಂಡು, ಬೆಂಕಿ ಹೊತ್ತಿಕೊಂಡು ಸುಟ್ಟು ಕರಕಲಾಗಿದೆ. ಘಟನೆಯ ದೃಶ್ಯಾವಳಿ ಸಂಸ್ಥೆಯ ಸಿಸಿ ಕೆಮರಾದಲ್ಲಿ ಸೆರೆಯಾಗಿದೆ.
ಗ್ರಾಹಕಿಯೋರ್ವರು ತಂದಿದ್ದ ಮೊಬೈಲ್ ಇದಾಗಿದ್ದು ಬ್ಯಾಟರಿ ಸಮಸ್ಯೆ ಇರುವುದಾಗಿ ತಿಳಿಸಿ ರಿಪೇರಿಗೆ ನೀಡಿದ್ದರು.
ಘಟನೆಯಲ್ಲಿ ಯಾವುದೇ ಅಪಾಯ ಸಂಭವಿಸಿಲ್ಲ.
ಎರಡನೇ ಘಟನೆ
ಇತ್ತೀಚೆಗೆ ಬೆಳ್ಳಾರೆಯಲ್ಲಿ ಹೊಟೇಲ್ಗೆ ಬಂದಿದ್ದ ಯುವತಿಯ ಮೊಬೈಲ್ ಸ್ಫೋಟಗೊಂಡ ಘಟನೆ ನಡೆದಿತ್ತು. ಇದೀಗ ಬೆಳ್ಳಾರೆಯಲ್ಲಿ ಎರಡನೇ ಬಾರಿಗೆ ಮೊಬೈಲ್ ಸ್ಫೋಟಗೊಂಡ ಘಟನೆ ನಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ
Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?
Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!