ಕುಂದ್ರುಕೋಡಿ: ತೆರವಾಗದ ಟಿ.ಸಿ.ಯಿಂದ ಸಮಸ್ಯೆ ಗಂಭೀರ

ಹೆಚ್ಚುತ್ತಲಿದೆ ಶಾರ್ಟ್‌ ಸರ್ಕ್ನೂಟ್ ಬೆಂಕಿ ಕಿಡಿ

Team Udayavani, Jun 8, 2019, 6:00 AM IST

g-19

ಜಾಲ್ಸೂರು: ಮನೆಯ ಪಕ್ಕದಲ್ಲಿ ಅಳವಡಿಸಿರುವ ಟ್ರಾನ್ಸ್‌ ಫಾರ್ಮರ್‌ ತೆರವುಗೊಳಿಸಲು ಮೆಸ್ಕಾಂಗೆ ಮನವಿ ಸಲ್ಲಿಸಿದ್ದರೂ ಇನ್ನೂ ಟಿಸಿ ತೆರವುಗೊಂಡಿಲ್ಲ. ಮಳೆಗಾಲದಲ್ಲಿ ಗಾಳಿ, ಗುಡುಗುಗಳಿಗೆ ಬೆಂಕಿ ಕಿಡಿ ಬರುತ್ತಿದ್ದು, ಮನೆಯೊಳಗಿರಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಜಾಲ್ಸೂರು ಗ್ರಾಮದ ಕುಂದ್ರುಕೋಡಿಯ ಕೆ. ನಾರ್ಣಪ್ಪ ಅವರ ಮನೆ ಸಮೀಪ ಮೆಸ್ಕಾಂ ಟಿ.ಸಿ.ಯೊಂದನ್ನು ಅಳವಡಿಸಿದೆ. ಯಾವುದೇ ಮುನ್ಸೂಚನೆ ಕೊಡದೆ ಹಾಕಲಾಗಿರುವ ಈ ಟಿ.ಸಿ. ಮನೆಯಿಂದ ಗರಿಷ್ಠ 6 ಮೀ. ಅಂತರದಲ್ಲಿದೆ. ಟಿ.ಸಿ. ತೆರವಿಗೆ ಕಳೆದ ಒಂದು ವರ್ಷದಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಕೊಟ್ಟರೂ ಸ್ಪಂದಿಸುತ್ತಿಲ್ಲ ಎನ್ನುವುದು ನಾರ್ಣಪ್ಪ ಅವರ ಅಳಲು. ಈ ಹಿಂದೆ ಅಳವಡಿಸಿದ್ದ ಸ್ಥಳದಿಂದ ಟಿ.ಸಿ. ತೆರವುಗೊಳಿಸಿ ಇಲ್ಲಿಗೆ ವರ್ಗಾಯಿಸಿದ್ದಾರೆ. ಮೊದಲಿನ ಟಿ.ಸಿ. 15 ಮೀಟರ್‌ ದೂರದಲ್ಲಿತ್ತು. ಅಲ್ಲಿ ಜನವಸತಿ ಇರಲಿಲ್ಲ. ಈಗ ನಾರ್ಣಪ್ಪ ಅವರ ಮನೆಯ ಪಕ್ಕದಲ್ಲೇ ಹಾಕಿದ್ದಾರೆ. ಮೊದಲು ಟಿ.ಸಿ. ಇದ್ದ ಸ್ಥಳದಲ್ಲಿ ಕಟ್ಟಡವೊಂದು ನಿರ್ಮಾಣವಾಗಿದೆ.

ಟ್ರಾನ್‌ ಫಾರ್ಮರ್‌ನಲ್ಲಿ ಆಗಾಗ ಬೆಂಕಿ ಕಿಡಿ ಕಾಣಿಸಿಕೊಳ್ಳುತ್ತಿದ್ದು, ಮಳೆಗಾಲದಲ್ಲಿ ಅಪಾಯದ ತೀವ್ರತೆ ಹೆಚ್ಚಾಗುವ ಸಾಧ್ಯತೆಯಿದೆ. ಕಳೆದ ಸುರಿದ ಮಳೆಗೆ ಬೆಂಕಿ ಕಿಡಿ ಕಾಣಿಸಿಕೊಂಡಿದೆ ಎಂದು ಸ್ಥಳೀಯರು ಹೇಳುತ್ತಾರೆ. ನಾರ್ಣಪ್ಪ ದಂಪತಿ ಜಾಲ್ಸೂರಿನ ಮುಖ್ಯ ಪೇಟೆಯಲ್ಲಿ ಟೈಲರಿಂಗ್‌ ಕೆಲಸ ಮಾಡುತ್ತಿದ್ದಾರೆ. ಬೆಳಗಿನ ಹೊತ್ತಲ್ಲಿ ಮನೆಯಲ್ಲಿ ಯಾರೂ ಇರುವುದಿಲ್ಲ. ಈ ಭಾಗದಲ್ಲಿ ಕಾಲನಿ ಮಕ್ಕಳು ಹೊರಗಡೆ ಆಟವಾಡುತ್ತಾರೆ. ಅನಾಹುತ ಸಂಭವಿಸಿದರೆ ಗಮನಿಸುವವರಿಲ್ಲ. ಟಿ.ಸಿ. ಹಾಕುವ ಮೊದಲು ಆ ಜಾಗದಲ್ಲಿ ಮನೆಗೆ ಮಾರ್ಗ ಮಾಡುವ ಯೋಚನೆಯಿತ್ತು. ಆದರೆ ಅದನ್ನು ಅನುಷ್ಠಾನಕ್ಕೆ ತರುವ ಮೊದಲೇ ಟಿ.ಸಿ. ಅಳವಡಿಸಿದ್ದಾರೆ. ಇನ್ನೂ ಮಳೆಗಾಲದಲ್ಲಿ ತೊಂದರೆ ಯಾಗಬಹುದು. ಸಮಸ್ಯೆಯ ತೀವ್ರತೆ ಅಧಿಕಾರಿಗಳಿಗೆ ಮನದಟ್ಟಾಗಿ ಪರಿಹಾರ ಕಂಡರೆ ಅನುಕೂಲ ಎಂದು ನಾರ್ಣಪ್ಪ ದಂಪತಿ ಹೇಳುತ್ತಾರೆ.

ಶಾಸಕರಿಗೂ ದೂರು
ಕುಂದ್ರುಕೋಡಿಯಲ್ಲಿ ಅಳವಡಿಸಿರುವ ಟಿ.ಸಿ. ತೆರವುಗೊಳಿಸಲು ಮೆಸ್ಕಾಂಗೆ ಪತ್ರ ಬರೆಯಲಾಗಿದೆ. ಫೋನ್‌ ಮೂಲಕ ಸುಳ್ಯ ಶಾಸಕರಿಗೆ ಮನವಿ ಮಾಡಿದ್ದಾರೆ. ಜಾಲ್ಸೂರು ಗ್ರಾ.ಪಂ.ಗೂ ದೂರು ಕೊಡಲಾಗಿದೆ. ವಿಭಾಗೀಯ ಅಭಿಯಂತರು, ಮೆಸ್ಕಾಂ ಉಪವಿಭಾಗ ಸುಳ್ಯ, ಅಧೀಕ್ಷಕ ಎಂಜಿನಿಯರ್‌ ವಿದ್ಯುತ್‌ ನಿರ್ವಹಣೆ ಮತ್ತು ಪಾಲನೆ ವೃತ್ತ ಮಂಗಳೂರು, ಕಾರ್ಯಪಾಲಕ ಅಭಿಯಂತರು ಮೆಸ್ಕಾಂ ಮಂಗಳೂರು, ಇ.ಇ. ಪುತ್ತೂರು ಮೆಸ್ಕಾಂ, ಎ.ಇ. ಸುಳ್ಯ ಮೆಸ್ಕಾಂ, ಜೆ.ಇ.ಸುಳ್ಯ ಮೆಸ್ಕಾಂ ಇವರಿಗೆ ಮನವಿ ಸಲ್ಲಿಸಲಾಗಿದೆ. ಆದರೂ ತೆರವುಗೊಳಿಸಿಲ್ಲ.

ಟಿ.ಸಿ. ತೆರವುಗೊಳಿಸಲು ಮೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ತೆರವುಗೊಳಿಸುವ ಭರವಸೆ ನೀಡಿದ್ದರು. ಕಳೆದ ಶನಿವಾರ ಕೆಲಸಗಾರರು ಟಿ.ಸಿ. ತೆರವುಗೊಳಿಸಲು ಆಗಮಿಸಿದ್ದಾರೆ. ಬೇರೆ ಜಾಗಕ್ಕೆ ವರ್ಗಾವಣೆ ಮಾಡಲು ಕೇಳಿದಾಗ ಜಾಗದ ಮಾಲಕರು ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ತೆರವುಗೊಳಿಸಲು ಸಾಧ್ಯವಾಗಲಿಲ್ಲ. ಅಧಿಕಾರಿಗಳಿಂದ ಧನಾತ್ಮಕ ಪ್ರತಿಕ್ರಿಯೆ ದೊರತಿದ್ದರೂ, ಯಾವುದೇ ಪ್ರಯೋಜನವಾಗಲಿಲ್ಲ. ಟ್ರಾನ್ಸ್‌ಫಾರ್ಮರ್‌ ಇದುವರೆಗೆ ತೆರವುಗೊಳಿಸಲಿಲ್ಲ ಎಂದು ನಾರ್ಣಪ್ಪ ಹೇಳಿದ್ದಾರೆ. ಮಳೆಗಾಲದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಈ ನಿಟ್ಟಿನಲ್ಲಿ ಮೆಸ್ಕಾಂ ತತ್‌ಕ್ಷಣ ಕಾರ್ಯಪ್ರರ್ವತ್ತರಾಗಬೇಕಿದೆ.

ಸ್ಥಳಕ್ಕೆ ಭೇಟಿ ನೀಡಿದ ಮೆಸ್ಕಾಂ

ಶೀಘ್ರ ಟಿ.ಸಿ. ತೆರವು
ಟಿ.ಸಿ. ಸ್ಥಳ ಬದಲಿಕೆಗೆ ಸ್ಥಳೀಯರ ಆಕ್ಷೇಪವಿದೆ. ಹೀಗಾಗಿ ಬೇರೆ ಜಾಗವನ್ನು ನೋಡಿ ತೆರವು ಕಾರ್ಯ ಮಾಡಬೇಕಿದೆ. ಆದಷ್ಟು ಬೇಗ ಟಿ.ಸಿ. ಅಲ್ಲಿಂದ ತೆರವುಗೊಳಿಸಲಾಗುವುದು. – ಹರೀಶ್‌ ಎ.ಇ. ಮೆಸ್ಕಾಂ, ಸುಳ್ಯ

ಶಿವಪ್ರಸಾದ್‌ ಮಣಿಯೂರು

ಟಾಪ್ ನ್ಯೂಸ್

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.