ಪ್ರವೀಣ್‌ ನೆಟ್ಟಾರು ಹಂತಕರು ಕೇರಳದಲ್ಲಿ: ಪತ್ತೆ ಕಾರ್ಯಕ್ಕೆ ಸವಾಲು

Team Udayavani, Aug 1, 2022, 6:58 AM IST

ಪ್ರವೀಣ್‌ ನೆಟ್ಟಾರು ಹಂತಕರು ಕೇರಳದಲ್ಲಿ: ಪತ್ತೆ ಕಾರ್ಯಕ್ಕೆ ಸವಾಲುಪ್ರವೀಣ್‌ ನೆಟ್ಟಾರು ಹಂತಕರು ಕೇರಳದಲ್ಲಿ: ಪತ್ತೆ ಕಾರ್ಯಕ್ಕೆ ಸವಾಲು

ಪುತ್ತೂರು: ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್‌ ನೆಟ್ಟಾರು ಹತ್ಯೆ ನಡೆದು ವಾರ ಸಮೀಪಿಸುತ್ತಿದ್ದರೂ ಪ್ರಮುಖ ಆರೋಪಿಗಳ ಪತ್ತೆ ಕಾರ್ಯದಲ್ಲಿ ಪೊಲೀಸ್‌ ಇಲಾಖೆ ನಿರೀಕ್ಷಿತ ಪ್ರಗತಿ ಸಾಧಿಸಿಲ್ಲ.

ಸುರತ್ಕಲ್‌ನ ಫಾಝಿಲ್‌ ಪ್ರಕರಣದಲ್ಲಿ ಹಂತಕರ ಸುಳಿವು ಲಭಿಸಿದೆ. ಆದರೆ ಪ್ರವೀಣ್‌ ಪ್ರಕರಣದಲ್ಲಿ ಹಂತಕರ ಜಾಡು ಪತ್ತೆಯಾಗಿರುವ ಬಗ್ಗೆ ಪೊಲೀಸ್‌ ಇಲಾಖೆ ಇನ್ನೂ ಬಹಿರಂಗಪಡಿಸಿಲ್ಲ. ಕೇರಳದ ಕಣ್ಣೂರು ಪರಿಸರದಲ್ಲಿ ಹಂತಕರಿರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಶೀಘ್ರವಾಗಿ ಪ್ರಕರಣ ಭೇದಿಸುವುದು ಕೂಡ ಸಾಧ್ಯವಾಗುತ್ತಿಲ್ಲ ಎನ್ನುವ ಮಾಹಿತಿ ಲಭಿಸಿದೆ. ಹತ್ಯೆಗೆ ಏನು ಕಾರಣ? ಪ್ರಮುಖ ಆರೋಪಿಗಳು ಯಾರು? ಎಂದು ಕಂಡುಹಿಡಿಯಲು ತನಿಖಾ ತಂಡಕ್ಕೆ ಸವಾಲಾಗಿದೆ ಅನ್ನುತ್ತಿದೆ ಚಿತ್ರಣ.

ಬೀದಿದೀಪ ಆರಿಸಿದ್ದರು
ಪ್ರವೀಣ್‌ ಹತ್ಯೆಗೆ ಮೊದಲು ಮಾಸ್ತಿಕಟ್ಟೆ ಪರಿಸರದ ಬೀದಿ ದೀಪಗಳನ್ನು ಆರಿಸಲಾಗಿತ್ತು ಅನ್ನುವ ಅಂಶ ಬೆಳಕಿಗೆ ಬಂದಿದೆ. ಹಂತಕರು ಮಾಸ್ತಿಕಟ್ಟೆ ಪೆಟ್ರೋಲ್‌ ಬಂಕ್‌ಗೆ ಬರುವ ಮೊದಲೇ ಕೊಲೆಯ ಸೂತ್ರಧಾರರು ಬಂದಿದ್ದು, ಕೃತ್ಯ ಎಸಗುವ ಸ್ವಲ್ಪ ಮೊದಲೇ ದೀಪ ಆರಿಸಿ ಹಂತಕರಿಗೆ ಸಹಕರಿಸಿರಬಹುದು ಎನ್ನಲಾಗಿದೆ. ಕೊಲೆ ದೃಶ್ಯ ಸಿಸಿ ಕೆಮರಾ ದಲ್ಲಿ ದಾಖಲಾಗಬಾರದು ಎಂಬ ಕಾರಣಕ್ಕೆ ಈ ತಂತ್ರ ಹೂಡಿರುವ ಸಾಧ್ಯತೆಯಿದೆ.

ಹಲಾಲ್‌- ಜಟ್ಕಾ ವಿವಾದ?
ಹಲಾಲ್‌, ಜಟ್ಕಾವೇ ಹತ್ಯೆಗೆ ಕಾರಣವಾಯಿತು ಎಂಬ ಗುಮಾನಿ ಪೊಲೀಸರಿಗೆ ಕಾಡುತ್ತಿದ್ದರೂ ಸ್ಥಳೀಯವಾಗಿ ಇಂತಹ ಅನುಮಾನಗಳಿಲ್ಲ. ಏಕೆಂದರೆ ಬೆಳ್ಳಾರೆಯಲ್ಲಿ ಪ್ರವೀಣ್‌ ಮಾತ್ರವಲ್ಲದೆ ಇನ್ನಿತರ ಕೆಲವು ಹಿಂದೂಗಳು ಚಿಕನ್‌ ಸೆಂಟರ್‌ ನಡೆಸುತ್ತಿದ್ದರು. ಪ್ರವೀಣ್‌ ಅಂಗಡಿಗಿಂತ ಹೆಚ್ಚಿನ ವ್ಯಾಪಾರ ಬೇರೆ ಅಂಗಡಿಗಳಿಗಿತ್ತು. ಹಾಗಾಗಿ ಈ ವಿಷಯದಲ್ಲಿ ಪ್ರವೀಣ್‌ ಹತ್ಯೆ ಆಗಿರಲಾರದು ಎನ್ನುವ ಅಭಿಪ್ರಾಯ ಸ್ಥಳೀಯವಾಗಿ ಕಂಡು ಬರುತ್ತಿದೆ. ಇದು ಮಸೂದ್‌ ಕೊಲೆಗೆ ಪ್ರತೀಕಾರದ ಕೃತ್ಯ ಎನ್ನುವುದರಲ್ಲಿ ಅನುಮಾನ ಇಲ್ಲ ಅನ್ನುವುದು ಸ್ಥಳೀಯರ ಅಭಿಪ್ರಾಯ.

ಕೋಳಿ ಅಂಗಡಿಯವ ಗುರಿ
ಹಂತಕರು ಕೋಳಿ ಅಂಗಡಿ
ಮಾಲಕನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದರು. ಪ್ರವೀಣ್‌ ಬದಲಾಗಿ ಬೆಳ್ಳಾರೆಯ ಇನ್ನೋರ್ವ ಕೋಳಿ ಅಂಗಡಿಯಾತನ ಮೇಲೆ ಅವರ ಕಣ್ಣಿತ್ತು. ಆತ ಸಿಗದಿದ್ದರೆ ಎರಡನೇ ಆಯ್ಕೆ ಪ್ರವೀಣ್‌ ಮೇಲಿತ್ತು. ಮೊದಲನೆಯಾತ ಆ ದಿನ ಸ್ಥಳದಲ್ಲಿ ಇಲ್ಲದ ಕಾರಣ ಹಂತಕರು ಪ್ರವೀಣ್‌ ಕತ್ತಿಗೆ ಮಚ್ಚು ಬೀಸಿ¨ªಾರೆ ಎನ್ನಲಾಗಿದೆ. ಮಚ್ಚು ಬೀಸಿದ ತಂಡದಲ್ಲಿ ಕೇರಳದ ಚಿಕನ್‌ ಸೆಂಟರ್‌ನವನು ಸೇರಿ¨ªಾನೆ ಎನ್ನುವ ಮಾಹಿತಿ ಲಭಿಸಿದೆ.

ಬಾಡಿಗೆ ಮನೆಯಲ್ಲಿ ಸಂಚು
ಪೊಲೀಸ್‌ ಕಸ್ಟಡಿಯಲ್ಲಿರುವ ಆರೋಪಿ ಶಫೀಕ್‌ನ ಬಾಡಿಗೆ ಮನೆಯಲ್ಲಿ ಕೊಲೆಗೆ ಸಂಚು ರೂಪಿಸಲಾಗಿತ್ತೇ ಎನ್ನುವ ಬಗ್ಗೆ ಪೊಲೀಸ್‌ ತಂಡ ವಿಚಾರಣೆ ನಡೆಸುತ್ತಿದೆ. ಶಫೀಕ್‌ ಕುಟುಂಬವು ಒಂದು ವರ್ಷದಿಂದ ಬೆಳ್ಳಾರೆ ಮೇಲಿನ ಪೇಟೆಯ ವಾಣಿಜ್ಯ ಸಂಕೀರ್ಣದ ವಸತಿಗೃಹದಲ್ಲಿ ಬಾಡಿಗೆ ಆಧಾರದಲ್ಲಿ ವಾಸಿಸುತ್ತಿತ್ತು. ಹತ್ಯೆಗೆ ಕೆಲ ದಿನಗಳ ಹಿಂದೆ ಹಂತಕರು ಈ ಮನೆಗೆ ಬಂದಿದ್ದು ಇಲ್ಲೇ ಕೊಲೆಗೆ ರೂಪರೇಖೆ ಹಾಕಿದ್ದರು ಎಂಬ ಅನುಮಾನ ಮೂಡಿದ್ದು ಹೀಗಾಗಿ ಈ ದೃಷ್ಟಿಕೋನದಿಂದ ತನಿಖೆ ನಡೆಯುತ್ತಿದೆ.

ಟಾಪ್ ನ್ಯೂಸ್

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.