ರಕ್ತ ಜೀವ ಉಳಿಸುವ ಸಂಜೀವಿನಿ

ಇಂದು ವಿಶ್ವ ರಕ್ತದಾನಿಗಳ ದಿನ

Team Udayavani, Jun 14, 2019, 5:00 AM IST

u-29

ರಕ್ತಕ್ಕೆ ಪರ್ಯಾಯ ವಸ್ತುವಿಲ್ಲ. ವಿಜ್ಞಾನ ಎಷ್ಟೇ ಮುಂದುವರಿದರೂ ರಕ್ತಕ್ಕೆ ಬದಲಿ ಸಂಯೋಜನೆಯನ್ನು ನಿರ್ಮಿಸಲು ಸಾಧ್ಯ ವಿಲ್ಲ. ಅಂತೆಯೇ ಕೃತಕ ರಕ್ತವನ್ನು ಸೃಷ್ಟಿಸಲು ಸಾಧ್ಯವಿಲ್ಲ. ಮನಷ್ಯನ ದೇಹವಿಡೀ ಸಂಚರಿಸಿ, ಜೀವವನ್ನೇ ಹಿಡಿಕೊಂಡಿರುವ ಕೆಂಪು ವರ್ಣದ ದ್ರವ ರಕ್ತ.

ದಾನಗಳಲ್ಲಿ ಶ್ರೇಷ್ಠ ದಾನ ರಕ್ತದಾನ ಎಂಬ ಮಾತಿದೆ. ಯಾವ ವ್ಯಕ್ತಿಗೆ ರಕ್ತದ ಅವಶ್ಯ ವಿದೆಯೇ ಅವರಿಗೆ ರಕ್ತವನ್ನು ನೀಡುವುದು ಪುಣ್ಯದ ಕಾರ್ಯ. ನಾವು ಕೊಡುವ ಒಂದು ಬಾಟಲ್‌ ರಕ್ತ ಒಂದು ಜೀವವನ್ನು ಉಳಿಸಲು ಸಾಧ್ಯ. ರಕ್ತದಾನ ಮಾಡುವುದರಿಂದ ಕೆಲವು ಸಮಸ್ಯೆಗಳು ಬರುತ್ತವೆ ಎಂಬ ಮೂಢ ನಂಬಿಕೆ ಇಂದಿನ ಕಾಲದಲ್ಲೂ ಇದೆ. ಇದ ರೊಂದಿಗೆ ಗೊಂದಲ, ಆತಂಕ ಕೂಡ ಇದೆ. ಆದರೆ ರಕ್ತದಾನ ಮಾಡುವುದರಿಂದ ಆರೋಗ್ಯ ವೃದ್ಧಿಸುತ್ತದೆಯೇ ಹೊರತು ಆರೋಗ್ಯ ಕೆಡುವುದಿಲ್ಲ. ರಕ್ತದಾನದ ಕುರಿ ತಾಗಿರುವ ಜನರಲ್ಲಿರುವ ಗೊಂದಲ, ಆತಂಕ ದೂರ ಗೊಳಿಸ ಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ.

ಆರೋಗ್ಯವಂತನ ದೇಹದಲ್ಲಿ ಸುಮಾರು 6 ಲೀಟರ್‌ನಷ್ಟು ರಕ್ತವಿದ್ದು, ರಕ್ತದಾನದಲ್ಲಿ ಕೇವಲ 350 ಮಿ.ಲೀ ರಕ್ತವನ್ನು ಸ್ವೀಕರಿಸ ಲಾಗು ತ್ತದೆ. ಇದರಿಂದ ದಾನಿಗಳಿಗೆ ಯಾವುದೇ ಅಪಾಯವಿಲ್ಲ. ರಕ್ತಕ್ಕೆ ವರ್ಷ ವಿಡೀ ನಿರಂತರ ಬೇಡಿಕೆ ಇರುತ್ತದೆ. ಏಕೆಂದರೆ ಅಪಘಾತಗಳು, ತುರ್ತು ಚಿಕಿತ್ಸೆ ಸಂದರ್ಭಗಳು ಬರುತ್ತಲೇ ಇರುತ್ತವೆ. ಇದರೊಂದಿಗೆ ಕ್ಯಾನ್ಸರ್‌ ರೋಗಿಗಳಿಗೆ, ಗರ್ಭಿಣಿಯರಿಗೆ, ಥ್ಯಾಲಸೀಮಿಯ, ಹಿಮೋಫೀಲಿಯಾ ಮುಂತಾದ ರೋಗಿಗಳು ರಕ್ತದಾನವನ್ನು ಅವಲಂಬಿಸಿದ್ದಾರೆ. ಒಂದು ಬಾರಿ ದಾನಿಗಳಿಂದ ಶೇಖರಿಸ್ಪಟ್ಟ ರಕ್ತದಲ್ಲಿ ಕೇವಲ 35 ದಿನಗಳ ವರೆಗೆ ಶಕ್ತಿ ಉಳಿಯುತ್ತದೆ. 35 ದಿನಗಳ ಅನಂತರ ರಕ್ತ ಉಪಯೋಗಕ್ಕೆ ಬರುವುದಿಲ್ಲ. ಹೀಗಾಗಿ ನಿರಂತರ ರಕ್ತದಾನ ಮಾಡಿದ್ದಲ್ಲಿ ಮಾತ್ರ ಜೀವ ಉಳಿಸಲು ಸಾಧ್ಯ.

ಪ್ರತಿ ವರ್ಷ ಜೂ. 14ರಂದು ವಿಶ್ವ ದೆಲ್ಲೆಡೆ ವಿಶ್ವ ರಕ್ತದಾನಿಗಳ ದಿನವನ್ನು ಆಚ ರಿಸ ಲಾಗುತ್ತದೆ. 2004ರಲ್ಲಿ ಚಾಲ್ತಿಗೆ ಬಂದ ಈ ದಿನ ರಕ್ತ, ರಕ್ತದ ಉತ್ಪನ್ನಗಳ ಅಗತ್ಯದ ಕುರಿತು ಜಾಗೃತಿ ಮೂಡಿಸುತ್ತದೆ. ಇದರೊಂದಿಗೆ ಸ್ವಯಂಪ್ರೇರಿತರಾಗಿ ಜೀವ ಉಳಿಸುವ ಉಡುಗೊರೆ ರಕ್ತವನ್ನು ದಾನ ಮಾಡುವ ವ್ಯಕ್ತಿಗಳಿಗೆ ಧನ್ಯವಾದ ಈ ದಿನ ತಿಳಿಸ ಲಾಗುತ್ತದೆ. ವಿಶ್ವದ ಅರ್ಧದಷ್ಟು ರಾಷ್ಟ್ರಗಳಲ್ಲಿ ರಕ್ತದ ಕೊರತೆ ಇದೆ. ಈ ಕೊರತೆಯನ್ನು ನೀಗಿಸುವುದು ಈ ದಿನದ ಮುಖ್ಯ ಉದ್ದೇಶ.

ಪ್ರತಿ ವರ್ಷ ರಕ್ತ ಹಾಗೂ ರಕ್ತದ ಉತ್ಪನ್ನಗಳ ವರ್ಗಾವಣೆಯಿಂದಾಗಿ ಮಿಲಿಯನ್‌ಗಳಷ್ಟು ಜೀವಗಳು ಉಳಿಯುತ್ತವೆ. ರಕ್ತದಾನ ಜೀವ ಹೋಗುವ ಸ್ಥಿತಿಯಲ್ಲಿರುವ ರೋಗಿಯನ್ನು ಹೆಚ್ಚು ಕಾಲ ಬದುಕಲು ಮತ್ತು ಉನ್ನತ ಮಟ್ಟದ ಜೀವನ ಸಾಗಿಸಲು ನೆರವಾಗುತ್ತದೆ.

ಥೀಮ್‌
ಸಾರ್ವತ್ರಿಕ ಆರೋಗ್ಯ ರಕ್ಷಣೆಯನ್ನು ಸಾಧಿಸುವ ಅಂಶವಾಗಿ ರಕ್ತದಾನ ಮತ್ತು ಸುರಕ್ಷಿತ ರಕ್ತ ವರ್ಗಾವಣೆಯ ಸಾರ್ವತ್ರಿಕ ಪ್ರವೇಶ. ಆರೋಗ್ಯ ರಕ್ಷಣೆಯಲ್ಲಿ ಸುರಕ್ಷಿತ ರಕ್ತದ ಸಾರ್ವತ್ರಿಕ ಆವಶ್ಯಕತೆ ಮತ್ತು ಸಾರ್ವತ್ರಿಕ ಆರೋಗ್ಯ ರಕ್ಷಣೆಯ ಗುರಿಯನ್ನು ಸಾಧಿಸಲು ಸ್ವಯಂಪ್ರೇರಿತ ದೇಣಿಗೆಗಳು ವಹಿಸುವ ನಿರ್ಣಾಯಕ ಪಾತ್ರಗಳ ಜಾಗೃತಿ ಮೂಡಿಸಲು “ಎಲ್ಲರಿಗೂ ಸುರಕ್ಷಿತ ರಕ್ತ’ ಎಂಬ ಸ್ಲೋಗನ್‌ ಅನ್ನು ಈ ವರ್ಷದ ರಕ್ತದಾನ ದಿನದ ಥೀಮ್‌.

ವಿಮಾನದಲ್ಲಿ ಕುವೈಟ್‌ಗೆ ಬಂದು ರಕ್ತ ನೀಡಿದರು
ದೇಶದಲ್ಲಿ ರಕ್ತದ ಕೊರತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದೇ ರೀತಿ ಸಂಗ್ರ ಹದ ಕೊರತೆ ಕೂಡ ಹೆಚ್ಚು ಭಾದಿಸುತ್ತಿವೆ. ಇದಕ್ಕೆ ಪೂರಕವೆಂಬಂತೆ ಬಾಂಬೆ ಬ್ಲಿಡ್‌ ಗ್ರೂಪ್‌ ಎನ್ನುವುದು ತುಂಬಾ ವಿರಳವಾದ ರಕ್ತ. ಇದು ಭಾರತದಲ್ಲಿ 7,600 ಜನರಲ್ಲಿ ಒಂದಿಬ್ಬರಲ್ಲಿ ಮಾತ್ರ ಕಂಡು ಬರುತ್ತದೆ.  ಇದು ಮೊದಲ ಬಾರಿ ಮುಂಬೈನಲ್ಲಿ ಪತ್ತೆಯಾಗಿದ್ದರಿಂದ ಇದನ್ನು ಬಾಂಬೆ ಬ್ಲಿಡ್‌ ಎಂದು ಕರೆಯಲಾಗುತ್ತದೆ.

ಈ ಬ್ಲಿಡ್‌ ಗ್ರೂಪ್‌ನ ಸಮಸ್ಯೆ ಒಂದು ಬಾರಿ ಉಡುಪಿ ಮೂಲದ ಗರ್ಭಿಣಿ ವಿನುತಾ ಅವರಿಗೂ ಉಂಟಾಗಿತ್ತು. ಆಕೆ ಕುವೈಟ್‌ನ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ನಾರ್ಮಲ್‌ ಡೆಲಿವರಿ ಆಗಲು ಸಾಧ್ಯವಿಲ್ಲ ಸಿಸೇರಿಯನ್‌ ಮಾಡಬೇಕು ಎಂದು ವೈದ್ಯರು ಹೇಳಿದ್ದ ಕಾರಣ ಆಕೆಗೆ ಬಾಂಬೆ ಬ್ಲಿಡ್‌ ಗ್ರೂಪ್‌ನ ಆವಶ್ಯಕತೆ ಇತ್ತು. ಆಕೆಯ ಗಂಡ ದಯಾನಂದ ಗೌಡ (ಮೂಲತಃ ಮಂಗಳೂರಿನ ದೇರಳಕಟ್ಟೆಯವರು) ಬ್ಲಿಡ್‌ ಬ್ಯಾಂಕ್‌ಗೆ ತೆರಳಿ ವಿಚಾರಿಸಿದಾಗ ಅಲ್ಲಿ ಸಿಗದ ಕಾರಣ ಅವರು ಪರಿಚಯಸ್ಥರಿಗೆ, ಫೇಸ್‌ ಬುಕ್‌, ವಾಟ್ಸಪ್‌ಗಳಲ್ಲಿ ಈ ವಿಚಾರವನ್ನುಶೇರ್‌ ಮಾಡಿದರು. ಅನಂತರ ಈ ವಿಷಯ ಬ್ಲಿಡ್‌ ಡೋನರ್ಸ್‌ ಫೋರಮ್‌, ಕೇರಳದ ಗ್ರೂಪ್‌ನಲ್ಲಿ ಚರ್ಚೆಯಾಗಿ ನಿಧೀಶ್‌ ಎನ್ನುವವರು ವಿಷಯ ತಿಳಿದು ಕತಾರ್‌ನಿಂದ ಬರುವುದಾಗಿ ತಿಳಿಸಿದರು. ಅನಂತರ ಅಲ್ಲೇ ಒಂದು ವೈದ್ಯಕೀಯ ರಕ್ತ ಪರೀಕ್ಷೆ ನಡೆಸಿ ಅಲ್ಲಿಂದ ಮರು ದಿನ ತುರ್ತು ವಿಮಾನದಲ್ಲಿ ಕುವೈಟ್‌ಗೆ ಬಂದು ರಕ್ತ ನೀಡಿದರು.

ಇತಿಹಾಸ
ಪ್ರತಿ ವರ್ಷ ಕಾರ್ಲ್ ಲ್ಯಾಂಡ್‌ಸ್ಟೆನರ್‌ ಎಂಬವರ ಜನ್ಮ ವಾರ್ಷಿಕೋತ್ಸದಂದು ರಕ್ತದಾನಿಗಳ ದಿನವನ್ನಾಗಿ ಆಚರಿಸಲಾಗುತ್ತದೆ (ಜೂನ್‌ 14 1868). ಕಾರ್ಲ್ ಆಸ್ಟ್ರಿಯಾದ ಜೀವಶಾಸ್ತ್ರಜ್ಞ. 1900ರಲ್ಲಿ ರಕ್ತದ ಗುಂಪುಗಳ ಸಮೂಹವನ್ನು ಗುರುತಿಸಿ ಆಧುನಿಕ ರಕ್ತದ ಗುಂಪುಗಳ ವರ್ಗೀಕರಣವನ್ನು ಅಭಿವೃದ್ದಿ ಪಡಿಸಿ ಪ್ರಮುಖ ರಕ್ತದ ಗುಂಪುಗಳನ್ನು ಪ್ರತ್ಯೇಕಿಸಿದರು. ರಕ್ತ ವರ್ಗಾವಣಾ ವಿಜ್ಞಾನದಲ್ಲಿ ಅವರ ನೊಬಲ್‌ ಪ್ರಶಸ್ತಿ ಪಡೆದ ವಿಜ್ಞಾನಿ. ಅವರು ರಕ್ತವನ್ನು ಎ, ಬಿ, ಒ ಎಂಬ ಗುಂಪುಗಳಾಗಿ ವಿಂಗಡಿಸಿದರು. ಹೀಗಾಗಿ ಇವರ ಜನ್ಮ ದಿನವನ್ನು ವಿಶ್ವ ರಕ್ತದಾನಿಗಳ ದಿನವನ್ನಾಗಿ ಆಚರಿಸಲ್ಪಡುತ್ತಿದೆ. ಭಾರತದಲ್ಲಿ ಪ್ರತಿವರ್ಷ ಅಕ್ಟೋಬರ್‌ ಒಂದರಂದು ರಾಷ್ಟ್ರೀಯ ರಕ್ತದಾನ ದಿನವನ್ನಾಗಿ ಆಚರಿಸಲಾಗುತ್ತದೆ.

ಈ ಬಾರಿ ಅಭಿಯಾನದ ಉದ್ದೇಶಗಳು
– ರಕ್ತದಾನ ಮಾಡುವ ಮತ್ತು ದಾನ ಮಾಡಲು ಜನರನ್ನು ಪ್ರೋತ್ಸಾಹಿಸುವ ವ್ಯಕ್ತಿಗಳಿಗೆ ಧನ್ಯವಾದ ತಿಳಿಸುವುದು.
– ವರ್ಷಪೂರ್ತಿ ರಕ್ತದಾನದ ಆವಶ್ಯಕತೆಗಳನ್ನು ವಿವರಿಸಲು, ಸಾಕಷ್ಟು ಪೂರೈಕೆಗಳನ್ನು ನಿರ್ವಹಿಸಲು ಮತ್ತು ಸುರಕ್ಷಿತ ರಕ್ತದಾನಕ್ಕೆ ಸಾರ್ವತ್ರಿಕ ಮತ್ತು ಸಕಾಲಿಕ ಪ್ರವೇಶವನ್ನು ಸಾಧಿಸುವುದು.
– ದಾನಿಯ ಆರೋಗ್ಯ ಮತ್ತು ದಾನಿಯ ಆರೈಕೆಯ ಬಗ್ಗೆ ಗಮನಹರಿಸುವುದು
– ಸುರಕ್ಷಿತ ರಕ್ತ ವರ್ಗಾವಣೆಯ ಸಾರ್ವತ್ರಿಕ ಪ್ರವೇಶದ ಅಗತ್ಯವನ್ನು ಪ್ರದರ್ಶಿಸಲು ಮತ್ತು ಪರಿಣಾಮಕಾರಿ ಆರೋಗ್ಯ ಆರೈಕೆಯ ನಿಬಂಧನೆಯಲ್ಲಿ ಪಾತ್ರದ ಬಗ್ಗೆ ಸಮರ್ಥನೆಯನ್ನು ಒದಗಿಸುವುದು ಮತ್ತು ಸಾರ್ವತ್ರಿಕ ಆರೋಗ್ಯ ರಕ್ಷಣೆಯ ಗುರಿಯನ್ನು ಸಾಧಿಸುವುದು.
– ರಕ್ತದ ಆವಶ್ಯಕತೆಯ ಕುರಿತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ರಾಷ್ಟ್ರೀಯ, ಪ್ರಾದೇಶಿಕ, ಜಾಗತಿಕ ಹಂತಗಳಲ್ಲಿ ಬೆಂಬಲವನ್ನು ಅಭಿವೃದ್ಧಿ ಪಡಿಸುವುದು.

ರಕ್ತದಾನದ ಕೆಲವು ಘೋಷ ವಾಕ್ಯಗಳು
1 ಪ್ರತಿಯೊಬ್ಬ ರಕ್ತದಾನಿಯೂ ಜೀವ ರಕ್ಷಕನೇ.
2 ರಕ್ತ ನೀಡಿ ಜೀವ ಉಳಿಸಿ
3 ಒಬ್ಬ ತಾಯಿಯ ಕಣ್ಣೀರು ಮಗುವಿನ ಜೀವವನ್ನು ಉಳಿಸದಿರಬಹುದು. ಆದರೆ ನಿಮ್ಮ ರಕ್ತದಾನ ಒಂದು ಜೀವವನ್ನು ಉಳಿಸುತ್ತದೆ.
4 ನಿಮ್ಮ ರಕ್ತ ಒಂದು ಕುಟುಂಬದ ನಗುವನ್ನು ಉಳಿಸಬಹುದು
5 ರಕ್ತ ಮತ್ತೆ ನಿಮ್ಮಲ್ಲಿ ಸೃಷ್ಟಿಯಾಗಬಹುದು. ಆದರೆ ಹೋದ ಜೀವ ಮತ್ತೆ ಬರಲಾರದು: ರಕ್ತದಾನ ಮಾಡಿ ಜೀವ ಉಳಿಸಿ
6 ಒಬ್ಬರಿಗೆ ಆಹಾರ ನೀಡಿ ದಿನವಿಡೀ ಖುಷಿಯಾಗಿರಿ: ರಕ್ತದಾನ ಮಾಡಿ ಜೀವನವಿಡೀ ಹೆಮ್ಮೆ ಪಡಿ.

ಜಾಗೃತಿ ಅಭಿಯಾನ
ರಕ್ತ ದಾನದ ಮಹತ್ವವನ್ನು ಸಾರುವ ಸಲುವಾಗಿ ದೇಶದಲ್ಲಿ ಹಲವಾರು ಜಾಗೃತಿ ಕಾರ್ಯಕ್ರಮಗಳು ನಡೆಯುತ್ತವೆ ಆದರೆ ಇಲ್ಲೊಬ್ಬರು ಕೇರಳದ 33 ವರ್ಷದ ಯುವಕ ಕಿರಣ್‌ ಭಾರತಾದ್ಯಂತ 6 ಸಾವಿರ ಕಿ.ಮೀ. ಪ್ರಯಾಣ ಮಾಡಿತಿರುವನಂತಪುರ, ಕರ್ನಾಟಕ, ರಾಜಸ್ಥಾನ, ಜಮ್ಮು, ಶ್ರೀನಗರ, ಕನ್ಯಾಕುಮಾರಿ ಸಹಿತ ಹಲವೆಡೆ ಸಂಚರಿಸಿ ರಕ್ತದಾನದ ಮೂಲಕ ಜೀವ ಕಾಪಾಡಬಹುದು ಎಂಬ ಸಂದೇಶವನ್ನು ಸಾರಿದ್ದಾರೆ. ಕ್ಯಾನ್ಸರ್‌ನಿಂದ ತಾಯಿಯನ್ನು ಕಳೆದುಕೊಂಡ ಅವರು ಸಿಂಪ್ಲಿ ಬ್ಲಿಡ್‌ ಎಂಬ ರಕ್ತದಾನದ ಆನ್‌ಲೈನ್‌ ವೇದಿಕೆಯನ್ನು ರಚಿಸಿದ್ದಾರೆ. ಪಯಣದುದ್ದಕ್ಕೂ ಅವರ ಜನರಿಗೆ ರಕ್ತದಾನದ ಮಹತ್ವ ತಿಳಿಸುವ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.

ತಂತ್ರಜ್ಞಾನಗಳನ್ನು ಉತ್ತಮ ಕೆಲಸಗಳಿಗೆ ಬಳಸಬಹುದೆಂಬುದಕ್ಕೆ ಕೆಲವು ಸಂಘಟನೆಗಳು ಮಾದರಿ ಯಾಗುತ್ತವೆ. ರಕ್ತದ ತುರ್ತು ಆವಶ್ಯಕತೆಯಿದ್ದರೆ ಕೆಲವು ಸಂಘಟನೆಗಳು ವಾಟ್ಸಾಪ್‌ ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣಗಳ ಮೂಲಕ ಸಂದೇಶವನ್ನು ಹರಿಯಬಿಟ್ಟು ರಕ್ತದಾನಿಗಳನ್ನು ಗುರುತಿಸುತ್ತಾರೆ. ಇದರಿಂದ ಎಷ್ಟೋ ಜೀವಗಳು ಉಳಿಸಿದ ಘಟನೆಗಳಿವೆ.

ರಕ್ತದಾನದಿಂದ ದಾನಿಗೇನು ಲಾಭ?
– ಉತ್ತಮ ಆರೋಗ್ಯ ಕಾಪಾಡಬಹುದು.
– ಜ್ಞಾಪಕ ಶಕ್ತಿ ವೃದ್ಧಿಸುತ್ತದೆ.
– ದೇಹದಲ್ಲಿನ ಕೊಬ್ಬಿನ ಅಂಶ ಕಡಿಮೆ ಯಾಗುವುದರಿಂದ ಹೃದಯಾಘಾತ ಸಾಧ್ಯತೆ ಶೇ. 80 ರಷ್ಟು ಕಡಿಮೆ.
– ಮಧುಮೇಹ, ರಕ್ತದೊತ್ತಡ ತಡೆಯಲು ಸಹಕಾರಿ.
– ವ್ಯಕ್ತಿ ಚುರುಕಾಗಿ ಕಾರ್ಯ ನಿರ್ವಹಿಸಲು ಪ್ರೇರಣೆ ನೀಡುತ್ತದೆ.

ನಿಮಗಿದು ಗೊತ್ತಿದೆಯೇ ?
18ರಿಂದ 60 ವರ್ಷಗಳೊಳಗಿನ ಆರೋಗ್ಯವಂತ ಪುರುಷರು 3 ಮತ್ತು ಮಹಿಳೆಯರು 6 ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು.
ರಕ್ತದಾನಿಯು ಕನಿಷ್ಠ 45 ಕೆ.ಜಿ.ಗಿಂತ ಹೆಚ್ಚು ತೂಕ ಹೊಂದಿರಬೇಕು. ಅಲ್ಲದೆ ರಕ್ತದಲ್ಲಿ 12.5 ಗ್ರಾಂಗಿಂತ ಅಧಿಕ ಪ್ರಮಾಣದ ಹಿಮೋಗ್ಲೊಬಿನ್‌ ಅಂಶ ಹೊಂದಿರುವುದು ಅಗತ್ಯ.
45ರಿಂದ 60 ಕೆ.ಜಿ. ಭಾರದ ವ್ಯಕ್ತಿಯಿಂದ 350 ಎಂಎಲ್‌ ಮತ್ತು 60ಕ್ಕಿಂತ ಅಧಿಕ ತೂಕದವರಿಂದ 450 ಎಂಎಲ್‌ ರಕ್ತ ದಾನವಾಗಿ ಪಡೆಯಬಹುದು.
ರಕ್ತದಾನ ಮಾಡಿದ 24 ಗಂಟೆಗಳಲ್ಲಿ ದಾನ ಮಾಡಿದ ಪ್ರಮಾಣದ ರಕ್ತ ಮತ್ತೆ ಉತ್ಪತ್ತಿಯಾಗುತ್ತದೆ.
ರಕ್ತವನ್ನು ವ್ಯಕ್ತಿಯ ದೇಹದಿಂದ ಸಂಗ್ರಹಿಸಿದ 35ರಿಂದ 40 ದಿನಗಳೊಳಗೆ ಬಳಕೆ ಮಾಡಬೇಕು.
ರಕ್ತದಾನ ಎಂಬುದು 10ರಿಂದ 15 ನಿಮಿಷಗಳ ಪ್ರಕ್ರಿಯೆ. ಅದರಿಂದ ಸುಧಾರಿಸಿಕೊಳ್ಳಲು ವ್ಯಕ್ತಿಗೆ ಸಾಮಾನ್ಯವಾಗಿ 20 ನಿಮಿಷ ಸಾಕು.
ರಕ್ತದಲ್ಲಿ ನಾಲ್ಕು ಘಟಕಗಳಿರುತ್ತವೆ. ಅವುಗಳೆಂದರೆ ಕೆಂಪು ರಕ್ತಕಣ, ಬಿಳಿ ರಕ್ತಕಣ, ಪ್ಲೇಟ್ಲೆಟ್ಸ್‌, ಪ್ಲಾಸ್ಮಾ.
ರಕ್ತಕಣಗಳು ಆರೋಗ್ಯವಂತ ಅಸ್ಥಿಮಜ್ಜೆಯಿಂದ ಉತ್ಪಾದಿಸಲ್ಪಡುತ್ತವೆ.
ರಕ್ತದಿಂದ ಬೇರ್ಪಡಿಸಲ್ಪಟ್ಟ ಪ್ಲೇಟ್ಲೆಟ್ಸ್‌ಗಳನ್ನು 5 ದಿನಗಳೊಳಗೆ ಉಪಯೋಗಿಸಬೇಕಿದೆ.
ಸಾಮಾನ್ಯವಾಗಿ ಆಸ್ಪತ್ರೆಗೆ ದಾಖಲಾಗುವ ಪ್ರತಿ 10 ರೋಗಿಗಳಲ್ಲಿ ಓರ್ವರಿಗೆ ರಕ್ತದ ಆವಶ್ಯಕತೆ ಇರುತ್ತದೆ.
ಓರ್ವ ಆರೋಗ್ಯವಂತನ ದೇಹದಲ್ಲಿ 5ರಿಂದ 6 ಲೀಟರ್‌ಗಳಷ್ಟು ರಕ್ತ ಇರುತ್ತದೆ. ಅಂದರೆ ದೇಹದ ತೂಕದ ಶೇ. 7ರಷ್ಟು.
ದೇಶದಲ್ಲಿ ಪ್ರತಿ ವರ್ಷ ಸುಮಾರು 5 ಸಾವಿರ ಕೋಟಿಯಷ್ಟು ರಕ್ತದ ಆವಶ್ಯಕತೆ ಇರುತ್ತದೆ. ಆದರೆ ಲಭ್ಯವಿರುವುದು ಸುಮಾರು 2.5 ಕೋಟಿ ಯುನಿಟ್‌ಗಳಷ್ಟು ಮಾತ್ರ.
ಭಾರತದಲ್ಲಿ ಪ್ರತಿ 2 ಸೆಕೆಂಡ್‌ಗಳಿಗೆ ಓರ್ವನಿಗೆ ರಕ್ತದ ಆವಶ್ಯಕತೆ ಇರುತ್ತದೆ.
ಎಬಿ ಪಾಸಿಟಿವ್‌ ಪ್ಲಾಸ್ಮಾ ಗುಂಪಿನ ರಕ್ತವನ್ನು ಎಲ್ಲ ಗುಂಪಿನ ರಕ್ತಗಳೊಂದಿಗೆ ಹೊಂದಿಕೆ ಮಾಡಿಕೊಳ್ಳಬಹುದು.
ಒ ಪಾಸಿಟಿವ್‌ ರಕ್ತದ ಗುಂಪು ಹೊಂದಿರುವವರನ್ನು Universal Donors ಎಂದು ಕರೆಯುತ್ತಾರೆ. ಯಾಕೆಂದರೆ ಈ ರಕ್ತದ ಗುಂಪಿನವರ ಕೆಂಪು ರಕ್ತಕಣಗಳನು ಇತರೆ ಯಾವುದೇ ಗುಂಪಿನವರಿಗೂ ಕೊಡಬಹುದು.
ಎಬಿ ಪಾಸಿಟಿವ್‌ ರಕ್ತದ ಗುಂಪಿನವರನ್ನು Universal Recipient ಎನ್ನುತ್ತಾರೆ. ಯಾಕೆಂದರೆ ಈ ಗುಂಪಿನವರು ಇತರೆ ಯಾವುದೇ ಗುಂಪಿನವರ ರಕ್ತವನ್ನು ಬೇಕಾದರೂ ಪಡೆದುಕೊಳ್ಳಬಹುದು.

ಯಾರೆಲ್ಲ ರಕ್ತದಾನ ಮಾಡಬಾರದು?
ಅನಾರೋಗ್ಯ ಪೀಡಿತರು, ಸಾಂಕ್ರಾಮಿಕ ರೋಗಗಳಿಂದ ಬಳಲುತ್ತಿರುವವರು.
ಮಧುಮೇಹ, ಅಧಿಕ ರಕ್ತದೊತ್ತಡ ಕಾಯಿಲೆ ಇರುವವರು.
ಹಿಮೋಗ್ಲೋಬಿನ್‌ ಕೊರತೆ ಇರುವವರು.
ಗರ್ಭಿಣಿಯರು, ಎದೆಹಾಲು ಉಣಿಸುತ್ತಿರುವವರು.
ಋತುಸ್ರಾವದ ಸಮಯದಲ್ಲಿ ಮಹಿಳೆಯರು.
ಮಾದಕ ವ್ಯಸನ, ಮದ್ಯಪಾನಗೈದಿರುವವರು.
ಎಚ್‌ಐವಿ/ಸೋಂಕಿತರು.
ಟೈಫಾಯ್ಡ, ರಕ್ತಹೀನತೆ, ಮಲೇರಿಯಾ, ರೇಬಿಸ್‌ ಲಸಿಕೆ ಹಾಕಿಸಿಕೊಂಡವರು.
ದೊಡ್ಡ ಪ್ರಮಾಣದ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರೆ 6 ಮತ್ತು ಚಿಕ್ಕ ಪ್ರಮಾಣದ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರೆ 3 ತಿಂಗಳುಗಳ ಕಾಲ ರಕ್ತದಾನ ಮಾಡಬಾರದು.
ಮೈ ಮೇಲೆ ಹಚ್ಚೆ ಹಾಕಿಸಿಕೊಂಡವರು, ಬದಲಿ ರಕ್ತ ಪಡೆದವರು 6 ತಿಂಗಳುಗಳ ಕಾಲ ರಕ್ತದಾನ ಮಾಡಬಾರದು.

ಹೊಸ ರಕ್ತ ಉತ್ಪಾದನೆ
ರಕ್ತ ದಾನ ಮಾಡುವುದರಿಂದ ದಾನಿಯ ದೇಹದಲ್ಲಿ ಹೊಸ ರಕ್ತ ಉತ್ಪಾದನೆಯಾಗುತ್ತದೆ. ಒಮ್ಮೆ ರಕ್ತದಾನ ಮಾಡಿದವರು 6 ತಿಂಗಳ ಅನಂತರವೇ ಮತ್ತೆ ರಕ್ತ ದಾನ ಮಾಡ ಬೇಕು. ಆಗದಾನಿಗಳು ಆರೋಗ್ಯವಾಗಿರಲು ಸಾಧ್ಯ.
-ಡಾ| ರೋಹಿಣಿ, ವೈದ್ಯರು

ಒಂದು ದಿನದ ಆಚರಣೆಯಲ್ಲ
ರಕ್ತ ದಾನ ಒಂದು ದಿನದ ಆಚರಣೆಯಲ್ಲ, ಅದು ಪ್ರತಿ ಕ್ಷಣದ ಆಚರಣೆ. ಅದರ ಗಂಭಿರತೆ ವೈದ್ಯಕೀಯ ಕ್ಷೇತ್ರಕ್ಕೆ ಅರಿವಾಗಿದ್ದು ಅದು ಜನಸಾಮಾನ್ಯರಿಗೂ ಅರಿವಾಗಬೇಕು. ರಕ್ತವನ್ನು ಹೃದಯದಿಂದ ಹೃದಯಕ್ಕೆ ಹರಿಸಬೇಕು, ಇದು ಮಾನವ ಧರ್ಮ.
-ಡಾ| ಅಣ್ಣಯ್ಯ ಕುಲಾಲ್‌, ವೈದ್ಯರು

ರಮ್ಯಾ ಕೆದಿಲಾಯ, ಗಣೇಶ ಕುಳಮರ್ವ, ಶಿವ ಸ್ಥಾವರಮಠ, ಪ್ರೀತಿ ಭಟ್‌ ಗುಣವಂತೆ, ಸುಶ್ಮಿತಾ ಶೆಟ್ಟಿ ಸಿರಿಬಾಗಿಲು

ಟಾಪ್ ನ್ಯೂಸ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್‌ಕುಮಾರ್‌

ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್‌ಕುಮಾರ್‌

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.