ಕಣ್ಣಂಗಾರು ಬೈಪಾಸ್ ಮತ್ತು ಹೆಜಮಾಡಿ ಕೋಡಿಯಲ್ಲಿ 14 ಜನರಿಗೆ ಸೋಂಕು ದೃಢ
Team Udayavani, Jun 27, 2020, 2:00 PM IST
ಪಡುಬಿದ್ರಿ: ಇಲ್ಲಿನ ನಡ್ಸಾಲು ಗ್ರಾಮದ ಕಣ್ಣಂಗಾರು ಬೈಪಾಸ್ ಮತ್ತು ಹೆಜಮಾಡಿ ಕೋಡಿಯಲ್ಲಿ ಒಟ್ಟು 14 ಜನರಿಗೆ ಕೋವಿಡ್-19 ಸೋಂಕು ತಾಗಿರುವುದು ಇಂದು ದೃಢವಾಗಿದೆ.
ನಡ್ಸಾಲು ಗ್ರಾಮದ ಕಣ್ಣಂಗಾರು ಬೈಪಾಸ್ ನ ಸಹೋದರರಿಬ್ಬರಿಗೆ ಈ ಮೊದಲು ಕೋವಿಡ್-19 ಸೋಂಕು ಪತ್ತೆಯಾಗಿತ್ತು. ಹೆಜಮಾಡಿ ಕೋಡಿಯ ವ್ಯಕ್ತಿಯೂ ಜ್ವರ ಕಂಡು ಬಂದ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ. ಪರೀಕ್ಷೆ ವೇಳೆ ಈತನಿಗೂ ಕೋವಿಡ್-19 ಸೋಂಕು ಇರುವುದು ದೃಢವಾಗಿತ್ತು.
ಸದ್ಯ ಕಣ್ಣಂಗಾರು ಬೈಪಾಸ್ ಸಹೋದರರ ಸಂಪರ್ಕಕ್ಕೆ ಬಂದಿರುವ ನಾಲ್ಕು ಮಂದಿಗೆ ಸೋಂಕು ತಾಗಿರುವುದು ದೃಢವಾಗಿದೆ. ಇವರು ತಮ್ಮ ಪ್ರಯಾಣದ ಮಾಹಿತಿಯನ್ನು ಸರಿಯಾಗಿ ನೀಡದೇ ಸೋಂಕು ಹರಡಲು ಕಾರಣವಾಗಿದ್ದಾರೆ ಎನ್ನಲಾಗಿದೆ.
ಈ ಸಹೋದರರು ತಾವು ಎಲ್ಲಿಗೂ ಪ್ರಯಾಣ ಬೆಳೆಸಿಲ್ಲವೆಂದು ಮೊದಲಿನಿಂದಲೂ ಪ್ರತಿಪಾದಿಸುತ್ತಾ ಬಂದಿದ್ದರು. ಆದರೆ ಕಾಲ್ ಡಿಟೇಲ್ಸ್ ಪರಿಶೀಲನೆಗೆ ಒಳಪಡಿಸಿದಾಗ ಇವರಲ್ಲಿ ಒಬ್ಬಾತ ಪಾಣೆಮಂಗಳೂರು, ಬಿಸಿ ರೋಡ್, ಬಂಟ್ವಾಳ, ಉಳ್ಳಾಲಗಳಿಗೆ ಹೋಗಿಬಂದಿರುವ ವಿವರ ಲಭ್ಯವಾಗಿದೆ ಎಂದು ವರದಿಯಾಗಿದೆ. ಸದ್ಯ ಈ ಸಹೋದರರ ಮನೆಯಲ್ಲಿ 69 ವರ್ಷದ ಪುರುಷ, 62 ವರ್ಷ ಮತ್ತು 31 ವರ್ಷದ ಮಹಿಳೆ, 1 ವರ್ಷ ಏಳು ತಿಂಗಳ ಹೆಣ್ಣು ಮಗು ಸೋಂಕಿಗೀಡಾಗಿದ್ದಾರೆ.
ಹೆಜಮಾಡಿ ಕೋಡಿಯ ಯುವಕ ಇತ್ತೀಚೆಗೆ ಕೇರಳದ ಕೊಚ್ಚಿನ್ ನಿಂದ ಆಗಮಿಸಿದ್ದ. ನಂತರ ಜ್ವರ ಕಾಣಿಸಿಕೊಂಡ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ. ಅಲ್ಲಿ ಆತನಿಗೆ ಸೋಂಕು ಇರುವುದು ದೃಢವಾಗಿತ್ತು. ಸದ್ಯ ಆತನ ಸಂಪರ್ಕದಿಂದ 10 ಮಂದಿಗೆ ಕೋವಿಡ್-19 ಸೋಂಕು ದೃಢವಾಗಿದೆ. ಒಂದು ವರ್ಷದ ಇಬ್ಬರು ಮಕ್ಕಳು, 12 ವರ್ಷದ ಬಾಲಕಿ, 27 ವರ್ಷದ ಯುವಕ, 45 ವರ್ಷ, 23 ವರ್ಷ, 56 ವರ್ಷ, 33 ವರ್ಷ, 22 ವರ್ಷ, 32 ವರ್ಷದ ಮಹಿಳೆಯರಿಗೆ ಕೋವಿಡ್-19 ಸೋಂಕು ದೃಢವಾಗಿದೆ..
ಸೋಂಕನ್ನು ಹರಡಲು ಕಾರಣರಾದವರ ವಿರುದ್ಧ ಎಫ್ಐಆರ್ ದಾಖಲಿಸಲು ಆರೋಗ್ಯ ಇಲಾಖೆ ಚಿಂತನೆ ನಡೆಸಿದ್ದು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಲಾಗಿದೆ ಎಂದು ವರದಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ವರ್ಷದೊಳಗೆ 3.55 ಕೋಟಿ ವೆಚ್ಚದ ರಾಜಕಾಲುವೆ ನಿರ್ಮಾಣ ಭರವಸೆ : ಎಸ್.ಜಯರಾಂ
ಹಿಪ್ಹಾಪ್ ನೃತ್ಯದ ಜೊತೆ ಹೈಬ್ರಿಡ್ ಭರತನಾಟ್ಯ : ನೆಟ್ಟಿಗರಿಂದ ಭಾರಿ ಮೆಚ್ಚುಗೆ
ರೆನ್ಯೂ ಪವರ್ನಿಂದ 7 ವರ್ಷದಲ್ಲಿ 50 ಸಾವಿರ ಕೋಟಿ ರೂ. ಹೂಡಿಕೆಗೆ ಒಪ್ಪಂದ : ಸಿಎಂ ಬೊಮ್ಮಾಯಿ
ಶಿರಸಿ: ಚಾಲಿ ಅಡಿಕೆ ಕಳ್ಳತನ ಪ್ರಕರಣ; ಮತ್ತೋರ್ವ ಆರೋಪಿ ಬಂಧನ, ಆಟೋ ರಿಕ್ಷಾ ವಶಕ್ಕೆ
ಶಿಕ್ಷಣವನ್ನು ಕೇಸರೀಕರಣಗೊಳಿಸಲು ಹೊರಟಿದೆ ಬಿಜೆಪಿ : ಪ್ರಿಯಾಂಕ್ ಖರ್ಗೆ ಆರೋಪ