ಅಖಂಡ ಶ್ರೀನಿವಾಸ ಮೂರ್ತಿಗೆ ಬಿಜೆಪಿಯಿಂದ ಸಂಪೂರ್ಣ ಬೆಂಬಲ: ನಳಿನ್ ಕುಮಾರ್
Team Udayavani, Nov 12, 2020, 11:27 AM IST
ಉಡುಪಿ: ಪುಲಕೇಶಿ ನಗರ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆ ಮೇಲೆ ನಡೆದ ದಾಳಿ ಪ್ರಕರಣದ ಆರೋಪಿ ಸಂಪತ್ ರಾಜ್ ನಾಪತ್ತೆ ವಿಚಾರದಲ್ಲಿ ಕಾಂಗ್ರೆಸ್ ಕೈವಾಡವಿದೆ. ಆದರೆ ಅಖಂಡ ಶ್ರೀನಿವಾಸ ಮೂರ್ತಿ ಅವರಿಗೆ ಬಿಜೆಪಿಯು ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಖಂಡ ಶ್ರೀನಿವಾಸ ಮೂರ್ತಿ ವಿಚಾರದಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರು ಉತ್ತರ ನೀಡಬೇಕು. ಘಟನೆಯಲ್ಲಿ ಸಂಪತ್ ರಾಜ್ ವಿರುದ್ಧ ಅಖಂಡ ಶ್ರೀನಿವಾಸ ಮೂರ್ತಿ ಅವರೇ ದೂರು ನೀಡಿದ್ದಾರೆ. ಆದರೆ ಈಗ ಸಂಪತ್ ರಾಜ್ ನಾಪತ್ತೆಯಾಗಿದ್ದಾರೆ. ಆದರೆ ಅವರು ನಾಪತ್ತೆಯಾಗಿಲ್ಲ, ಮನೆಯಲ್ಲಿದ್ದಾರೆ ಎಂದು ಡಿ ಕೆ ಶಿವಕುಮಾರ್ ಹೇಳಿದ್ದಾರೆ. ಡಿ ಕೆ ಶಿವಕುಮಾರ್ ಅವರಿಗೆ ನೈತಿಕತೆ ಇದ್ದರೆ ಸಂಪತ್ ರಾಜ್ ಗೆ ಶರಣಾಗಲು ಹೇಳಬೇಕಿತ್ತು ಎಂದು ಹೇಳಿದರು.
ಅಖಂಡ ಶ್ರೀನಿವಾಸ್ ಮೂರ್ತಿ ಅವರಿಗೆ ಬಿಜೆಪಿ ಬೆಂಬಲ ನೀಡಲಿದೆ. ರಾಜಕೀಯವಾಗಿ ಬೆಂಬಲ ನೀಡವುದಿಲ್ಲ. ಅವರನ್ನು ಖಂಡಿತವಾಗಿಯೂ ಬಿಜೆಪಿಗೆ ಸೇರಿಸಿಕೊಳ್ಳುವುದಿಲ್ಲ. ಆದರೆ ಒಬ್ಬ ಶಾಸಕನಿಗೆ ಹೀಗೆ ಆದರೆ ಸಾಮಾನ್ಯರ ಗತಿಯೇನು ಎಂದು ನಳಿನ್ ಹೇಳಿದರು.
ಇದನ್ನೂ ಓದಿ:ಉಪಚುನಾವಣೆ ಫಲಿತಾಂಶದ ಬಗ್ಗೆ ಅನುಮಾನ! ಕಾಂಗ್ರೆಸ್ ನಿಂದ ವಿಸ್ತೃತ ತನಿಖೆ :ಡಿಕೆಶಿ
ಸೀಟ್ ಗೆ ಟವಲ್ ಹಾಕಲು ಆರಂಭ
ಉಪಚುನಾವಣೆಯ ವಿಚಾರದಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಶಿರಾ ಮತ್ತು ಆರ್.ಆರ್. ನಗರದಲ್ಲಿ ನಾವು ವ್ಯವಸ್ಥಿತ ರೀತಿಯಲ್ಲಿ ಚುನಾವಣೆ ಎದುರಿಸಿದ್ದೇವೆ. ಆದರೆ ಕಾಂಗ್ರೆಸ್ ನಲ್ಲಿ ಡಿ ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ವೈಯಕ್ತಿತ ಪ್ರತಿಷ್ಟೆಯಿಂದ ಸೋಲುವಂತೆ ಮಾಡಿದ್ದರು. ಆರ್.ಆರ್.ನಗರದಲ್ಲಿ ಕಾಂಗ್ರೆಸ್ ಸೋಲುಬೇಕೆಂದು ಸಿದ್ದರಾಮಯ್ಯ, ಶಿರಾದಲ್ಲಿ ಸೋಲಬೇಕೆಂದು ಡಿಕೆ ಶಿವಕುಮಾರ್ ಬಯಸಿದ್ದರು ಎಂದು ಹೇಳಿದರು.
ಕಾಂಗ್ರೆಸ್ ನಲ್ಲಿ ನಾಯಕನ ಸೀಟ್ ಗೆ ಟವೆಲ್ ಹಾಕಲು ಈಗಾಗಲೇ ಆರಂಭವಾಗಿದೆ. ಕಾಂಗ್ರೆಸ್ ನಲ್ಲಿ ಒಳ ರಾಜಕಾರಣ ಮಾಡಿದ್ದೇ ಅವರ ಸೋಲಿಗೆ ಕಾರಣ ಎಂದು ನಳಿನ್ ಅಭಿಪ್ರಾಯಪಟ್ಟರು.
ಸಂಪುಟ: ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಮಾಡುವ ಬಗ್ಗೆ ಮುಖ್ಯಮಂತ್ರಿಗಳು ನಿರ್ಧಾರ ಮಾಡುತ್ತಾರೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ರಾಜ್ಯಸಭೆ, ಪರಿಷತ್ ಅಭ್ಯರ್ಥಿ ಆಯ್ಕೆಗೆ ಇಂದು ದಿಲ್ಲಿಗೆ: ಸಿದ್ದರಾಮಯ್ಯ
ಬಿಬಿಎಂಪಿ ಚುನಾವಣೆಗೆ ಸುಪ್ರೀಂ ಸೂಚನೆ; ಸ್ಥಳೀಯ ಸಂಸ್ಥೆಗಳ ಆಡಳಿತವನ್ನು ಸರಕಾರ ನಡೆಸುವಂತಿಲ್ಲ
ಇಂದು, ನಾಳೆ ಎಸ್ಐ ಮತ್ತು ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆ: ತೀವ್ರ ನಿಗಾ
ಜಿ.ಪಂ., ತಾ.ಪಂ. ಚುನಾವಣೆ ಶೀಘ್ರ ನಡೆಸಲಿ: ಸಲೀಂ ಅಹ್ಮದ್
ಅಡಿಕೆ ಎಲೆ ಹಳದಿ ರೋಗ: ಸರಕಾರದ ನಿರ್ಲಕ್ಷ್ಯ: ಹರಿಪ್ರಸಾದ್