ಜಿಲ್ಲಾ ಶಸಸ್ತ್ರ ಮೀಸಲು ಪಡೆ ಅಧಿಕಾರಿಗೆ ಸೋಂಕು ದೃಢ: ಶಿರ್ವ ಬಲ್ಲಾಡಿ ಸೀಲ್ ಡೌನ್
Team Udayavani, Jun 3, 2020, 12:50 PM IST
ಶಿರ್ವ: ಉಡುಪಿ ಜಿಲ್ಲಾ ಶಸಸ್ತ್ರ ಮೀಸಲು ಪಡೆಯ ಅಧಿಕಾರಿಯೋರ್ವರಿಗೆ ಕೋವಿಡ್ -19 ಸೋಂಕು ದೃಢವಾದ ಹಿನ್ನಲೆಯಲ್ಲಿ ಅವರು ವಾಸಿಸುತ್ತಿದ್ದ ಶಿರ್ವ ಬಲ್ಲಾಡಿ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದೆ.
ಜೂನ್ ಒಂದರಂದು ಈ ಅಧಿಕಾರಿಗೆ ಕೋವಿಡ್ ಸೋಂಕು ತಾಗಿರುವ ವರದಿ ಪಾಸಿಟಿವ್ ಬಂದಿತ್ತು. ಆದರೆ ಈಗ ಮತ್ತೆ ಮರು ಪರೀಕ್ಷೆಗೆ ಕಳುಹಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಅಧಿಕಾರಿಗಳು ಇಂದು ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಯ ಮನೆ ಮತ್ತು ಹತ್ತಿರದ ಇನ್ನೊಂದು ಮನೆಯನ್ನು ಸೀಲ್ ಡೌನ್ ಮಾಡಿದ್ದಾರೆ.
ಬಲ್ಲಾಡಿ ಪ್ರದೇಶ ಕಂಟೈನ್ ಮೆಂಟ್ ಪ್ರದೇಶವಾಗಿದ್ದು, ಸಂಪೂರ್ಣ ಶಿರ್ವ ಗ್ರಾಮವನ್ನು ಬಫರ್ ಜೋನ್ ಎಂದು ಘೋಷಿಸಲಾಗಿದೆ. ಗ್ರಾಮಸ್ಥರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಲಾಗಿದೆ.
ಸ್ಥಳಕ್ಕೆ ಕಾಪು ಕಂದಾಯ ಪರಿವೀಕ್ಷಕ ರವಿಶಂಕರ್, ಶಿರ್ವ ಸಮುದಾಯ ಪ್ರಾಥಮಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸಂತೋಷ್ ಕುಮಾರ್ ಬೈಲೂರು, ಡಾ ಸುಬ್ರಹ್ಮಣ್ಯ ರಾವ್, ಶಿರ್ವ ಗ್ರಾಮದ ಪಿಡಿಓ ಅನಂತ ಪದ್ಮನಾಭ, ವಿಎ ವಿಜಯ್, ಪಿಎಸ್ ಐ ಶ್ರೀಶೈಲ ಮುರಗೋಡ ಮತ್ತು ಆಾಶಾ ಕಾರ್ಯಕರ್ತೆಯರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.