ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಪಿ. ಮೋಹನದಾಸ ಶೆಟ್ಟಿ ನಿಧನ
Team Udayavani, Dec 27, 2022, 12:09 PM IST
ಶಿರ್ವ: ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಕುಪ್ಪೆಪದವು ಕಡೆಗುಂಡ್ಯಗುತ್ತು ಪಿ. ಮೋಹನದಾಸ ಶೆಟ್ಟಿ (82) ಅವರು ಡಿ. 26 ರಂದು ಶಿರ್ವ ಪಾದೂರು ಕೊಲ್ಲಬೆಟ್ಟು ಗುತ್ತುವಿನ ಸ್ವಗೃಹದಲ್ಲಿ ನಿಧನ ಹೊಂದಿದರು.
ಮೃತರು ಪತ್ನಿ, ಪುತ್ರ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಎಡಪದವು ವಿದ್ಯಾವರ್ಧಕ ಪ.ಪೂ. ಕಾಲೇಜಿನಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸುಮಾರು 32 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಅವರು ನಿವೃತ್ತಿ ಬಳಿಕ ವಿಶ್ರಾಂತ ಜೀವನ ನಡೆಸುತ್ತಿದ್ದರು. ಮೃತರ ನಿಧನಕ್ಕೆ ಮೂಡುಬಿದಿರೆಯ ಆಳ್ವಾಸ್ ಫೌಂಡೇಶನ್ನ ಡಾ| ಎಂ. ಮೋಹನ ಆಳ್ವ , ಉದಯವಾಣಿಯ ಉಪಾಧ್ಯಕ್ಷ ರಾಮಚಂದ್ರ ಮಿಜಾರು ಸಹಿತ ಗಣ್ಯರು ಸಂತಾಪ ಸೂಚಿಸಿದ್ದಾರೆ.