Udayavni Special

ಬಜೆಟ್‌ ಘೋಷಣೆಗಷ್ಟೇ ಸೀಮಿತ ಹಂಗಾರಕಟ್ಟೆ ಬಂದರು ಅಭಿವೃದ್ಧಿ

 ಕಳೆದ ವರ್ಷ ಘೋಷಿಸಿದ್ದ 130 ಕೋಟಿ ರೂ. ಇನ್ನೂ ಸಿಕ್ಕಿಲ್ಲ!

Team Udayavani, Mar 5, 2021, 3:40 AM IST

ಬಜೆಟ್‌ ಘೋಷಣೆಗಷ್ಟೇ ಸೀಮಿತ ಹಂಗಾರಕಟ್ಟೆ ಬಂದರು ಅಭಿವೃದ್ಧಿ

ಕೋಟ: ಶತಮಾನಗಳ ಇತಿಹಾಸದ ಹಂಗಾರಕಟ್ಟೆಯ  ಬಂದರು ವ್ಯವಸ್ಥಿತವಾಗಿ ಅಭಿವೃದ್ಧಿಗೊಳ್ಳಬೇಕು ಎನ್ನುವುದು ಹಲವು ದಶಕಗಳ ಬೇಡಿಕೆ. ಹೀಗಾಗಿ ರಾಜ್ಯ ಸರಕಾರ ಕಳೆದ ಬಾರಿಯ ಬಜೆಟ್‌ನಲ್ಲಿ ಈ ಬಂದರಿನ ಅಭಿವೃದ್ಧಿಗೆ 130 ಕೋಟಿ ರೂ. ಮೀಸಲಿರಿಸಿ ಎರಡು ಕಡೆಗಳಲ್ಲಿ ಬ್ರೇಕ್‌ ವಾಟರ್‌ ನಿರ್ಮಾಣಕ್ಕೆ ಯೋಜನೆ ರೂಪಿಸಿತ್ತು. ಅನಂತರ ಸಂಬಂಧಪಟ್ಟ ಇಲಾಖೆಯಿಂದ ಸರ್ವೇ ನಡೆದು ನೀಲನಕ್ಷೆ ಸಿದ್ಧಪಡಿಸಲಾಗಿತ್ತು. ಆದರೆ ಆರ್ಥಿಕ ಮುಗ್ಗಟ್ಟಿನ ಕಾರಣ ಮೀಸಲಿರಿಸಿದ ಅನುದಾನದಲ್ಲಿ ಒಂದು ರೂಪಾಯಿಯೂ ಮಂಜೂರಾಗದೆ ಯೋಜನೆ ಬಾಕಿಯಾಗಿದೆ.

ಕೊರೊನಾ ಕಾರಣದಿಂದ ಸರಕಾರಕ್ಕೆ ಆರ್ಥಿಕ ಸಂಕಷ್ಟ ಎದುರಾದ್ದರಿಂದ ಹಣ ಹೊಂದಿಸಲು ಕಷ್ಟವಾಗಿದೆ. ಈ ಬಗ್ಗೆ  ಪ್ರಸ್ತಾವನೆ ಚಾಲ್ತಿಯಲ್ಲಿದ್ದು ಮುಂದೆ ಕೇಂದ್ರ ಸರಕಾರದ ನೆರವು ಪಡೆದು ಯೋಜನೆ ಅನುಷ್ಠಾನಗೊಳಿಸುತ್ತೇವೆ ಎನ್ನುವುದು ಸಂಬಂಧಪಟ್ಟ ಇಲಾಖೆಯ ಭರವಸೆಯ ಮಾತುಗಳಾಗಿವೆ.

ಬಹುನಿರೀಕ್ಷೆಯ ಯೋಜನೆ :  ಬ್ರಹ್ಮಾವರ ತಾಲೂಕು ವ್ಯಾಪ್ತಿಗೆ ಒಳಪಡುವ ಹಂಗಾರಕಟ್ಟೆ  ಬಂದರು ಪ್ರಾಚೀನ ಕಾಲದಲ್ಲಿ  ಪ್ರಮುಖ ವ್ಯಾಪಾರ ತಾಣವಾಗಿ ಪ್ರಸಿದ್ಧಿ ಪಡೆದಿತ್ತು. ಕೋಡಿಕನ್ಯಾಣ, ಕೋಡಿಬೆಂಗ್ರೆ ಈ ಮೂರು ಬಂದರುಗಳು ಪರಸ್ಪರ ಒಂದಕ್ಕೊಂದು ಹೊಂದಿಕೊಂಡಿದ್ದು ಒಂದೇ ಅಳಿವೆ ಇವುಗಳಿಗೆ ಸಂಪರ್ಕ ಬೆಸೆಯುತ್ತದೆ. ಅಳಿವೆಗೆ ಬ್ರೇಕ್‌ ವಾಟರ್‌ ತಡೆಗೋಡೆ ಇಲ್ಲದಿರುವುದು ಇಲ್ಲಿನ ಪ್ರಮುಖ ಸಮಸ್ಯೆಯಾಗಿದ್ದು ಬೋಟ್‌ ಸಂಚಾರ ಅಸಾಧ್ಯವಾಗಿದೆ. ಉಬ್ಬರ- ಇಳಿತವನ್ನು  ಗಮನಿಸಿ  ಜಟ್ಟಿಯಿಂದ ಹೊರ ಹೋಗಬೇಕಿದೆ. ಹೀಗಾಗಿ ಮೀನುಗಾರಿಕೆ ಅವಧಿ ಆರಂಭಗೊಂಡು ಎರಡು-ಮೂರು ತಿಂಗಳು ಕಳೆದರೂ ಇಲ್ಲಿನ ಬೋಟ್‌ಗಳಿಗೆ ಮೀನುಗಾರಿಕೆಗೆ ತೆರಳಲು ಸಾಧ್ಯವಾಗುತ್ತಿರಲಿಲ್ಲ.  ಮಳೆಗಾಲದಲ್ಲಿ ಆಳೆತ್ತರದ ಅಲೆಗಳು ತೀರ ಪ್ರದೇಶಕ್ಕೆ ಅಪ್ಪಳಿಸಿ ವ್ಯಾಪಕ ಹಾನಿಯಾಗುತ್ತಿತ್ತು.  ಹೀಗಾಗಿ 130 ಕೋಟಿ ರೂ. ಮೊತ್ತದಲ್ಲಿ ಕೋಡಿಬೆಂಗ್ರೆ, ಕೋಡಿಕನ್ಯಾಣ ಎರಡು ಕಡೆಗಳಲ್ಲಿ  ಸಂಪೂರ್ಣವಾಗಿ ಬ್ರೇಕ್‌ ವಾಟರ್‌ ಕಾಮಗಾರಿಗೆ ಮೀಸಲಿರಿಸಿ  ಮೂರು  ಕಿರು ಬಂದರುಗಳ ಸಮಸ್ಯೆ ಏಕ ಕಾಲದಲ್ಲಿ ಪರಿಹರಿಸುವ ನಿರೀಕ್ಷೆ ಇತ್ತು. ಆದರೆ ಈ   ಕನಸು ನನಸಾಗಿಲ್ಲ.

ಸಮಸ್ಯೆ ಜೀವಂತ  ;

ಕಳೆದ ಬಜೆಟ್‌ನಲ್ಲಿ ಘೋಷಣೆಯಾದಂತೆ ಅನುದಾನ ಮಂಜೂರಾಗಿ ಕಾಮಗಾರಿ ಆರಂಭಗೊಂಡಿದ್ದರೆ ಕೋಡಿಬೆಂಗ್ರೆಯಲ್ಲಿ 100ಕ್ಕೂ ಹೆಚ್ಚು ಬೋಟ್‌ಗಳು, ಹಂಗಾರಕಟ್ಟೆಯಲ್ಲಿ 150, ಕೋಡಿಕನ್ಯಾಣದಲ್ಲಿ 200ಕ್ಕೂ ಹೆಚ್ಚು ಬೋಟ್‌ಗಳ ಮೀನುಗಾರಿಕೆಗೆ ಅನುಕೂಲವಾಗುತಿತ್ತು ಹಾಗೂ ಮಲ್ಪೆಯ ಬಂದರನ್ನು ಆಶ್ರಯಿಸಿರುವ ಈ ಭಾಗದ ಸುಮಾರು 600ಕ್ಕೂ ಹೆಚ್ಚು ಬೋಟ್‌ಗಳಿಗೆ ಅನುಕೂಲವಾಗುತಿತ್ತು. ಆದರೆ ಈಗ ಸಮಸ್ಯೆಗಳು ಪರಿಹಾರವಾಗದೆ ಜೀವಂತವಾಗಿವೆ.

ಯೋಜನೆಯ ಅನುಷ್ಠಾನಕ್ಕೆ ಬದ್ಧವಾಗಿದ್ದು ರಾಜ್ಯದ ಆರ್ಥಿಕ ಹೊರೆ ತಗ್ಗಿಸುವ ಸಲುವಾಗಿ ಕೇಂದ್ರದ ನೆರವಿನೊಂದಿಗೆ ಉದ್ದೇಶಿತ ಕಾಮಗಾರಿ ಯನ್ನು ಕೈಗೊಳ್ಳುವ ಯೋಜನೆ ಇದೆ. ಶೀಘ್ರ ಕೇಂದ್ರಕ್ಕೆ ಮನವಿ ಸಲ್ಲಿಸಿ ಕೇಂದ್ರ-ರಾಜ್ಯಗಳ ಜಂಟಿ ಅನುದಾನದಲ್ಲಿ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ಬಜೆಟ್‌ನಲ್ಲಿ ಘೋಷಣೆಯಾಗಿ ಬಾಕಿಯಾದ ಎಲ್ಲ ಯೋಜನೆಗಳನ್ನು ಇದೇ ಮಾದರಿಯಲ್ಲಿ ಅನುಷ್ಠಾನಿಸಲಾಗುವುದು.ಎ.ರಾಮಾಚಾರ್ಯ, ನಿರ್ದೇಶಕರು ರಾಜ್ಯ ಮೀನುಗಾರಿಕೆ ಇಲಾಖೆ

 

ರಾಜೇಶ್‌ ಗಾಣಿಗ ಅಚ್ಲಾಡಿ

ಟಾಪ್ ನ್ಯೂಸ್

18-8

ವಿಶ್ವ ಪುಸ್ತಕ ದಿನಾಚರಣೆ : ಅಮೇಜಾನ್ ಕಿಂಡಲ್ ನೀಡುತ್ತಿದೆ ವಿಶೇಷ ಕೊಡುಗೆ..!

nhfh

ಆಕ್ಸಿಜನ್ ಕೊರತೆಯಿಂದ 6 ಜನ ಕೋವಿಡ್ ಸೋಂಕಿತರ ದುರ್ಮರಣ

dr.rajkumar

ಅಣ್ಣಾವ್ರ ಚಿತ್ರಗಳಲ್ಲಿ ಕನ್ನಡ ಸಾಹಿತ್ಯದ ಕಂಪು

ಲಕಜಹಗ್ರೆಡ

ನಾಳೆ ಬೆಂಗಳೂರಿಗೆ ಪ್ರತ್ಯೇಕ ಕಠಿಣ ನಿಯಮ ಜಾರಿ: ಆರ್ ಅಶೋಕ್

COVID-19 crisis: Kapil Sibal asks PM Narendra Modi to declare National Health Emergency

ಕೋವಿಡ್ 19 : ರಾಷ್ಟ್ರೀಯ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿ : ಕಪಿಲ್ ಸಿಬಲ್

ghfgfg

24 ಗಂಟೆಯಲ್ಲಿ 25,000 ಕೋವಿಡ್ ಪ್ರಕರಣ : ದೆಹಲಿಯಲ್ಲಿ ಬೆಡ್‍,ಆಕ್ಸಿಜನ್ ಅಭಾವ ಮುಂದುವರಿಕೆ

ಗದಸಸದದ್

ಮೊಬೈಲ್ ಖರೀದಿಸಲು ಹಣ ಕೊಡದಿದ್ದಕ್ಕೆ ಅಜ್ಜಿಯ ಕುತ್ತಿಗೆ ಹಿಸುಕಿ ಕೊಂದ ಮೊಮ್ಮಗ!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Article About Koti Chennaya Theame Park

ಗತಕಾಲದ ವೈಭವ ಸಾರುವ ಕೋಟಿ ಚೆನ್ನಯ ಥೀಮ್ ಪಾರ್ಕ್

5 ವರ್ಷಗಳಲ್ಲಿ ಚಿರತೆಗಳ ಸಂಖ್ಯೆ ದುಪ್ಪಟ್ಟು : ದೇಶದಲ್ಲೇ ಕರ್ನಾಟಕ ದ್ವಿತೀಯ

5 ವರ್ಷಗಳಲ್ಲಿ ಚಿರತೆಗಳ ಸಂಖ್ಯೆ ದುಪ್ಪಟ್ಟು : ದೇಶದಲ್ಲೇ ಕರ್ನಾಟಕಕ್ಕೆ ದ್ವಿತೀಯ ಸ್ಥಾನ

ಮುನಿಯಾಲು ಪೇಟೆಯಲ್ಲಿ ಶೌಚಾಲಯದ ಕೊರತೆ : ದಶಕಗಳ ಮನವಿಗೆ ಸಿಕ್ಕಿಲ್ಲ ಸ್ಪಂದನೆ

ಮುನಿಯಾಲು ಪೇಟೆಯಲ್ಲಿ ಶೌಚಾಲಯದ ಕೊರತೆ : ದಶಕಗಳ ಮನವಿಗೆ ಸಿಕ್ಕಿಲ್ಲ ಸ್ಪಂದನೆ

ಕೆಲಾ: ಮಣ್ಣಿನ ರಸ್ತೆಗೆ ಇನ್ನೂ ಒದಗಿ ಬರದ ಡಾಮರು ಭಾಗ್ಯ

ಕೆಲಾ: ಮಣ್ಣಿನ ರಸ್ತೆಗೆ ಇನ್ನೂ ಒದಗಿ ಬರದ ಡಾಮರು ಭಾಗ್ಯ

ದೊಡ್ಡಣಗುಡ್ಡೆ ಶಾಲೆ ವಿದ್ಯಾರ್ಥಿಗಳಿಗೆ ಸಾವಿರ ರೂ. ಬಾಂಡ್‌

ದೊಡ್ಡಣಗುಡ್ಡೆ ಶಾಲೆ ವಿದ್ಯಾರ್ಥಿಗಳಿಗೆ ಸಾವಿರ ರೂ. ಬಾಂಡ್‌

MUST WATCH

udayavani youtube

ಕಡಿಮೆ ಭೂಮಿಯಲ್ಲಿ ಲಾಭದಾಯಕ ಕೈತೋಟ

udayavani youtube

ಕುಂಭಮೇಳ ಈಗ ಸಾಂಕೇತಿಕವಾಗಿರಲಿ: ಪ್ರಧಾನಿ ಮೋದಿ

udayavani youtube

COVID 2ನೇ ಅಲೆ ಎಚ್ಚರ ತಪ್ಪಬೇಡಿ

udayavani youtube

ಮನೆಯಂಗಳದಲ್ಲಿ ವೀಳ್ಯದೆಲೆ ಬೆಳೆದು ಯಶಸ್ಸು ಕಂಡ ನಿವೃತ ಅಧ್ಯಾಪಕ

udayavani youtube

ಕುದ್ರೋಳಿ ಗಣೇಶ್ ವಿಸ್ಮಯ ಜಾದೂ

ಹೊಸ ಸೇರ್ಪಡೆ

18-8

ವಿಶ್ವ ಪುಸ್ತಕ ದಿನಾಚರಣೆ : ಅಮೇಜಾನ್ ಕಿಂಡಲ್ ನೀಡುತ್ತಿದೆ ವಿಶೇಷ ಕೊಡುಗೆ..!

nhfh

ಆಕ್ಸಿಜನ್ ಕೊರತೆಯಿಂದ 6 ಜನ ಕೋವಿಡ್ ಸೋಂಕಿತರ ದುರ್ಮರಣ

dr.rajkumar

ಅಣ್ಣಾವ್ರ ಚಿತ್ರಗಳಲ್ಲಿ ಕನ್ನಡ ಸಾಹಿತ್ಯದ ಕಂಪು

The Isaac Library Burning Secret CC Camera

ಇಸಾಕ್‌ ಲೈಬ್ರರಿ ಭಸ್ಮ ರಹಸ್ಯ ಬಿಚ್ಚಿಟ್ಟ ಸಿಸಿ ಕ್ಯಾಮರಾ

ಲಕಜಹಗ್ರೆಡ

ನಾಳೆ ಬೆಂಗಳೂರಿಗೆ ಪ್ರತ್ಯೇಕ ಕಠಿಣ ನಿಯಮ ಜಾರಿ: ಆರ್ ಅಶೋಕ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.