
ಕುಂದಾಪುರ: ವಿದ್ಯಾರ್ಥಿ ಆತ್ಮಹತ್ಯೆ; ನಾವುಂದ ಕಡಲ ತೀರದಲ್ಲಿ ಮೃತ ದೇಹ ಪತ್ತೆ
Team Udayavani, Sep 9, 2022, 11:41 AM IST

ಸಾಂದರ್ಭಿಕ ಚಿತ್ರ
ಉಪ್ಪುಂದ: ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿರುವುದಕ್ಕೆ ವಿದ್ಯಾರ್ಥಿಯೋರ್ವ ಮನನೊಂದು ರಾಷ್ಟ್ರೀಯ ಹೆದ್ದಾರಿ 66ರ ಸಂಗಮ್ ಸೇತುವೆ ಮೇಲಿಂದ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಮಧ್ಯಾಹ್ನ ನಡೆದಿದ್ದು, ಯುವಕನ ಮೃತ ದೇಹ ನಾವುಂದ ಕಡಲ ತೀರದಲ್ಲಿ ಶುಕ್ರವಾರ ಬೆಳಗ್ಗೆ ಪತ್ತೆಯಾಗಿದ್ದು, ಬೈಂದೂರು ಪೋಲಿಸ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿರುವುದಕ್ಕೆ ವಿದ್ಯಾರ್ಥಿಯೋರ್ವ ಮನನೊಂದು ರಾಷ್ಟ್ರೀಯ ಹೆದ್ದಾರಿ 66ರ ಸಂಗಮ್ ಸೇತುವೆ ಮೇಲಿಂದ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ನಡೆದಿತ್ತು.
ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಕುಂದಾಪುರದ ವಡೇರ ಹೋಬಳಿ ಜೆ.ಎಲ್.ಬಿ. ರಸ್ತೆ ನಿವಾಸಿ ರಘುವೀರ್ ಶೆಟ್ಟಿ ಎಂಬುವರ ಮಗ ಸಾಯಿಷ್ ಶೆಟ್ಟಿ ಎಂದು ಗುರುತಿಸಲಾಗಿದೆ.
ಸಾಯಿಷ್ ಶೆಟ್ಟಿ ಶಿವಮೊಗ್ಗದ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದು, ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವ ನಿರೀಕ್ಷೆ ಹೊಂದಿದ್ದ ಆದರೆ ಫಲಿತಾಂಶದಲ್ಲಿ ತೀರಾ ಕಡಿಮೆ ಅಂಕ ಬಂದಿರುವುದು ತಿಳಿದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ.
ಮಧ್ಯಾಹ್ನದ ವೇಳೆಗೆ ಸೈಕಲ್ಲಿನಲ್ಲಿ ಸೇತುವೆ ಬಳಿ ಬಂದ ಸಾಯಿಷ್ ಶೆಟ್ಟಿ ಸೈಕಲ್ ಹಾಗೂ ಮೊಬೈಲನ್ನು ಸೇತುವೆ ಬದಿಯಲ್ಲಿ ಇಡುತ್ತಿದ್ದಾಗ ಸ್ಥಳೀಯರು ಕೆಲವರು ನೋಡಿದ್ದಾರೆ. ನೋಡ ನೋಡುತ್ತಿದ್ದಂತೆ ನದಿಗೆ ಹಾರಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan

ಯಾರು ಬೇಕಾದರೂ ಸುಲಭವಾಗಿ ನಂದಿ ಬಟ್ಟಲು ಹೂವಿನಿಂದ ಸುಂದರ ಹಾರ ತಯಾಸಬಹುದು
ಹೊಸ ಸೇರ್ಪಡೆ

ಮಹಾದಾಯಿ ವಿವಾದ: “ದುರ್ಯೋಧನನಂತೆ ಕರ್ನಾಟದ ಧೋರಣೆ’

ಪ್ರವೀಣ್ ನೆಟ್ಟಾರ್ ಪ್ರಕರಣದಲ್ಲಿ ಪಿಎಫ್ಐ ಹೇಗೆ ಪ್ಲ್ಯಾನ್ ಮಾಡಿತ್ತು?: ಎನ್ಐಎ ವರದಿಯಲ್ಲೇನಿದೆ?

ಮಧುಗಿರಿ: ಲೋಕೋಪಯೋಗಿ ಇಲಾಖೆ ಅಧಿಕಾರಿ ನೇಣಿಗೆ ಶರಣು

ಸೆಲ್ಫಿ ತೆಗೆಯಲು ಪ್ರಯತ್ನಿಸಿದ ಅಭಿಮಾನಿಯ ಮೊಬೈಲ್ ಫೋನ್ ಎಸೆದ ರಣಬೀರ್ ಕಪೂರ್ ವಿಡಿಯೋ ವೈರಲ್!

ಬಿಬಿಸಿ ಡಾಕ್ಯುಮೆಂಟರಿ ಪ್ರದರ್ಶಿಸಲು ಮುಂದಾದ ಯೂನಿರ್ವಸಿಟಿಗಳ ವಿದ್ಯುತ್ ಸರಬರಾಜು ಸ್ಥಗಿತ…