ಮುಂಬಯಿನಿಂದ ಆಗಮಿಸಿದ ವ್ಯಕ್ತಿ ತೆಕ್ಕಟ್ಟೆಯಲ್ಲಿ ಸಾವು : ಪರಿಸರದಲ್ಲಿ ಮನೆ ಮಾಡಿದ ಆತಂಕ

ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿರುವ ಅನಾರೋಗ್ಯ ಪೀಡಿತ ವ್ಯಕ್ತಿಯ ಸಾವು

Team Udayavani, Jun 19, 2020, 5:28 PM IST

ಮುಂಬಯಿನಿಂದ ಆಗಮಿಸಿದ ವ್ಯಕ್ತಿ ತೆಕ್ಕಟ್ಟೆಯಲ್ಲಿ ಸಾವು : ಪರಿಸರದಲ್ಲಿ ಮನೆ ಮಾಡಿದ ಆತಂಕ

ತೆಕ್ಕಟ್ಟೆ: ಅನಾರೋಗ್ಯದಿಂದ ಬಳಲುತ್ತಿದ್ದ ಹಾಗೂ ಮುಂಬಯಿಯಿಂದ ಊರಿಗೆ ಆಗಮಿಸಿದ್ದ ವ್ಯಕ್ತಿಯೊಬ್ಬರು ತಮ್ಮ ನಿವಾಸದಲ್ಲಿ ಮೃತಪಟ್ಟಿರುವ ಘಟನೆ ಜೂನ್ 18ರಂದು ಸಂಭವಿಸಿದೆ.

ಈ ವ್ಯಕ್ತಿ ಮುಂಬಯಿಯಿಂದ ಆಗಮಿಸಿದ ದಿನವೇ ಅನಾರೋಗ್ಯದಿಂದ ಮೃತಪಟ್ಟಿರುವುದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಕುಂದಾಪುರ ತಾಲೂಕಿನ ತೆಕ್ಕಟ್ಟೆ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿ ಮುಂಬಯಿನಿಂದ ಬಂದು ತೆಕ್ಕಟ್ಟೆಯ ತನ್ನ ನಿವಾಸದಲ್ಲಿ ಮೃತಪಟ್ಟಿದ್ದಾರೆ.

ಮುಂಬಯಿಯಲ್ಲಿದ್ದ 54 ವರ್ಷದ ಈ ವ್ಯಕ್ತಿ ಕಳೆದ ಕೆಲವು ದಿನಗಳಿಂದ ಅರಶಿನ ಕಾಮಾಲೆ (ಜಾಂಡೀಸ್) ರೋಗದಿಂದ ಬಳಲುತ್ತಿದ್ದರು ಎಂಬ ಮಾಹಿತಿ ಇದೀಗ ಲಭ್ಯವಾಗಿದೆ.

ತನ್ನ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ಈ ವ್ಯಕ್ತಿ ಪತ್ನಿ ಹಾಗೂ ಮಗಳು ಸಹಿತ ಜೂನ್ 18ರ ಮಧ್ಯಾಹ್ನದಂದು ಮುಂಬಯಿನಿಂದ ತೆಕ್ಕಟ್ಟೆಯ ತನ್ನ ನಿವಾಸಕ್ಕೆ ವಾಹನದಲ್ಲಿ ಆಗಮಿಸಿದ್ದರು.

ಮುಂಬಯಿನಿಂದ ಈ ಕುಟುಂಬ ತೆಕ್ಕೆಟ್ಟೆಗೆ ಆಗಮಿಸಿರುವ ವಿಚಾರ ತಿಳಿದು ಅನುಮಾನಗೊಂಡ ಸ್ಥಳಿಯರು ಈ ವಿಚಾರವನ್ನು ಸಂಬಂಧಪಟ್ಟ ಆರೋಗ್ಯ ಇಲಾಖೆಯ ಗಮನಕ್ಕೆ ತಂದಿದ್ದರು. ಬಳಿಕ ಕೋವಿಡ್ ವಾರಿಯರ್ಸ್ ಅವರ ಮನೆಗೆ ಬಂದು ಸೂಕ್ತ ಮಾಹಿತಿಯನ್ನು ಕಲೆ ಹಾಕಿದ್ದರು. ಆದರೆ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಈ ವ್ಯಕ್ತಿ ಗುರುವಾರ ಸಾಯಂಕಾಲ  4.30ರ ವೇಳೆಗೆ ತನ್ನ ಮನೆಯಲ್ಲಿಯೇ ಅಸುನೀಗಿದ್ದಾರೆ.

ಇದನ್ನೂ ಓದಿ: ಉಡುಪಿ ಜಿಲ್ಲೆಯಲ್ಲಿಂದು 11 ಜನರಿಗೆ ಕೋವಿಡ್-19 ಸೋಂಕು ದೃಢ, ಓರ್ವ ಸಾವು

ಮೃತದೇಹವನ್ನು ಮನೆಯಲ್ಲೇ ಇರಿಸಿದ್ದರು: ಉಡುಪಿ ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿನ ಪ್ರಕರಣಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿದೆ. ಅದರಲ್ಲೂ ಮುಂಬಯಿ ಸಹಿತ ಹೊರ ಜಿಲ್ಲೆಗಳಿಂದ ಆಗಮಿಸಿದವರಿಂದ ಜಿಲ್ಲೆಯಲ್ಲಿ ಕೋವಿಡ್ 19 ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ವಿಷಯ ಹೀಗಿದ್ದರೂ, ಮೃತ ವ್ಯಕ್ತಿ ಹಾಗೂ ಅವರ ಜತೆ ಮುಂಬಯಿ ನಗರದಿಂದ ಆಗಮಿಸಿದ ಪತ್ನಿ ಹಾಗೂ ಮಗಳ ಗಂಟಲು ದ್ರವದ ಮಾದರಿಯನ್ನು ತಪಾಸಣೆಗಾಗಿ ಲ್ಯಾಬ್‌ ಕಳುಹಿಸಲಾಗಿತ್ತು ಮಾತ್ರವಲ್ಲದೇ ವ್ಯಕ್ತಿಯ ಶವವನ್ನು ರಾತ್ರಿ ಪೂರ್ತಿ ಮನೆಯಲ್ಲೇ ಇರಿಸಲಾಗಿತ್ತು.

ಈ ಸುದ್ದಿ ಗ್ರಾಮದಲ್ಲಿ ಹರಡುತ್ತಿದ್ದಂತೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಂಭೀರ ಸ್ಥಿತಿಯಲ್ಲಿರುವ ಈ ವ್ಯಕ್ತಿ ತನ್ನ ಕುಟುಂಬದವರ ಜೊತೆ ಮುಂಬಯಿನಿಂದ ತೆಕ್ಕಟ್ಟೆಗೆ ಆಗಮಿಸುತ್ತಿರುವ ವಿಷಯ ಇಲ್ಲಿನ ಕೆಲವೇ ಮಂದಿಗೆ ಮೊದಲೇ ತಿಳಿದಿತ್ತು ಎಂಬ ಮಾತುಗಳೂ ಇದೀಗ ಕೇಳಿಬರಲಾರಂಭಿಸಿದೆ. ಆದರೆ ಈ ಕುರಿತಾಗಿ ಯಾವುದೇ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳದಿರುವ ಕುರಿತಾಗಿ ಗ್ರಾಮಸ್ಥರು ಇದೀಗ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ ಮತ್ತು ಈ ಘಟನೆ ಸುತ್ತಮುತ್ತಲಿನ ಪರಿಸರದ ನಿವಾಸಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ.


ವಿಳಂಬವಾದ ಗಂಟಲು ದ್ರವ ಪರೀಕ್ಷೆ:
ಜೂ.18 ರಂದು ಇಲ್ಲಿಗೆ ಆಗಮಿಸಿದ್ದ ಮೃತ ವ್ಯಕ್ತಿ ಹಾಗೂ ಅವರ ಪತ್ನಿ ಹಾಗೂ ಮಗಳ ಗಂಟಲು ದ್ರವ ಮಾದರಿಗಳನ್ನು ಕೋವಿಡ್ 19 ಸೋಂಕು ಪತ್ತೆ ಪರೀಕ್ಷೆಗಾಗಿ ಲ್ಯಾಬ್‌ ಗೆ ಕಳುಹಿಸಲಾಗಿದೆ. ಆದರೆ ಈ ವರದಿ ಇನ್ನೂ ಬರದೇ ಇರುವುದರಿಂದ ಮತ್ತು ಅನಾರೋಗ್ಯಪೀಡಿತ ಈ ವ್ಯಕ್ತಿ ದಿಢೀರನೆ ಮೃತಪಟ್ಟಿರುವ ವಿಚಾರವನ್ನು ಕುಂಭಾಸಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಶೋಭಾ ಅವರು  ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತಂದು ಬಳಿಕ ಈ ಮೃತದೇಹವನ್ನು ಇಂದು (ಶುಕ್ರವಾರ) ಉಡುಪಿಗೆ ರವಾನಿಸಲಾಗಿದೆ.

ತುರ್ತುಸಭೆ: ಈ ಘಟನೆಯ ಕುರಿತು ಗ್ರಾಮಸ್ಥರಿಂದ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದ್ದಂತೆ ಕೋವಿಡ್ 19 ಕಾರ್ಯಪಡೆಯ ಸದಸ್ಯರು ಜೂ.19 ರಂದು  ಕುಂಭಾಸಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಶೋಭಾ ಅವರ ಅಧ್ಯಕ್ಷತೆಯಲ್ಲಿ ತುರ್ತುಸಭೆ ಕರೆಯುವ ಮೂಲಕ ಮುಂದೆ ಅನುಸರಿಸಬಹುದಾದ ಕ್ರಮಗಳ ಬಗ್ಗೆ ಚರ್ಚಿಸಲಾಯಿತು.

ಈ ಸಂದರ್ಭದಲ್ಲಿ ತೆಕ್ಕಟ್ಟೆ ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಪಿಡಿಒ ಮಾಧವ, ಕಾರ್ಯದರ್ಶಿ ಚಂದ್ರ, ಆಶಾಕಾರ್ಯಕರ್ತರಾದ ಚಂದ್ರಕಲಾ, ಸುಹಾಸಿನಿ ಉಪಸ್ಥಿತರಿದ್ದರು.


ಮೃತ ವ್ಯಕ್ತಿಯ ಮನೆ ಸೀಲ್‌ ಡೌನ್‌:
ಮೃತ ವ್ಯಕ್ತಿ ಅನಾರೋಗ್ಯಪೀಡಿತರಾಗಿದ್ದ ಕಾರಣ ಮತ್ತು ಈ ಕುಟುಂಬ ಕೋವಿಡ್ 19 ಹಾಟ್ ಸ್ಪಾಟ್ ಮುಂಬಯಿಯಿಂದ ಆಗಮಿಸಿದ್ದ ಕಾರಣ ಈ ಮನೆಯನ್ನು ಜಿಲ್ಲಾಡಳಿತ ಇದೀಗ ಸೀಲ್ ಡೌನ್ ಮಾಡಿದೆ. ಮೃತ ವ್ಯಕ್ತಿಯ ಪತ್ನಿ ಮತ್ತು ಮಗಳು ಈ ಮನೆಯಲ್ಲೇ ಕ್ವಾರೆಂಟೈನ್ ಆಗಿದ್ದು ಅವರ ತಪಾಸಣಾ ವರದಿಯನ್ನು ನಿರೀಕ್ಷಿಸಲಾಗುತ್ತಿದೆ.

ಮನೆ ಸೀಲ್ ಡೌನ್ ಸಂದರ್ಭದಲ್ಲಿ ಕುಂಭಾಸಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಶೋಭಾ, ಆಶಾ ಕಾರ್ಯಕರ್ತೆಯರಾದ ಚಂದ್ರಕಲಾ, ಸುಹಾಸಿನಿ, ಕೋಟ ಪೊಲೀಸ್‌ ಸಿಬಂದಿ ರಾಜು ಮತ್ತಿತರರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

ಎಂಟು ದಿನಗಳಿಂದ ಶಾಲೆಗೆ ಹೋಗದಿದ್ದರೂ ಪಾಸಿಟಿವ್ ವರದಿ; ಆರೋಗ್ಯ ಸಿಬ್ಬಂದಿ ಎಡವಟ್ಟು ಬಹಿರಂಗ

ಎಂಟು ದಿನಗಳಿಂದ ಶಾಲೆಗೆ ಹೋಗದಿದ್ದರೂ ಪಾಸಿಟಿವ್ ವರದಿ; ಆರೋಗ್ಯ ಸಿಬ್ಬಂದಿ ಎಡವಟ್ಟು ಬಹಿರಂಗ

1-sddsa

ಕುತೂಹಲಕ್ಕೆ ಎಡೆಮಾಡಿದ ಆರ್.ವಿ.ದೇಶಪಾಂಡೆಯವರ ರಾಜಕೀಯ ನಡೆ

‘ವರದ’ನಿಗೆ ಮುರಳಿ ಸಾಥ್‌: ಓಂ ಹರಿ ಹರಿ ಓಂ ಹಾಡು ಬಂತು

‘ವರದ’ನಿಗೆ ಮುರಳಿ ಸಾಥ್‌: ಓಂ ಹರಿ ಹರಿ ಓಂ ಹಾಡು ಬಂತು

PM Modi pay tribute to Subhas Chandra Bose on birth anniversary

ಸುಭಾಷ್ ಚಂದ್ರ ಬೋಸ್ ಸಾಧನೆ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆ: ಪ್ರಧಾನಿ ಮೋದಿ

1-fsfdf

ಭಾರತದ ಅತಿ ಎತ್ತರದ ವ್ಯಕ್ತಿ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆ

Imran Tahir played a blinder for World Giants

ಇಮ್ರಾನ್ ತಾಹಿರ್ ಸ್ಪೋಟಕ ಬ್ಯಾಟಿಂಗ್

1death

ಸಾಗರ: 5 ವರ್ಷದ ಮಗು ಹೃದಯಾಘಾತದಿಂದ ಸಾವುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಎಸೆಸೆಲ್ಸಿ ಫ‌ಲಿತಾಂಶ ವೃದ್ಧಿ: 4 ಹಂತಗಳ ಕಾರ್ಯಕ್ರಮ

ಎಸೆಸೆಲ್ಸಿ ಫ‌ಲಿತಾಂಶ ವೃದ್ಧಿ: 4 ಹಂತಗಳ ಕಾರ್ಯಕ್ರಮ

ಒಡಿಶಾದಲ್ಲಿ ವಿಷಾಹಾರ ಸೇವಿಸಿದ್ದ ಕಾರ್ಕಳದ ಯುವಕ ಸಾವು

ಒಡಿಶಾದಲ್ಲಿ ವಿಷಾಹಾರ ಸೇವಿಸಿದ್ದ ಕಾರ್ಕಳದ ಯುವಕ ಸಾವು

ಚಳಿ ಮುಗಿಯುವವರೆಗೆ ಎಚ್ಚರ ಅಗತ್ಯ: ತಜ್ಞ ವೈದ್ಯರ ಸಲಹೆ

ಚಳಿ ಮುಗಿಯುವವರೆಗೆ ಎಚ್ಚರ ಅಗತ್ಯ: ತಜ್ಞ ವೈದ್ಯರ ಸಲಹೆ

ಪಶ್ಚಿಮ ಘಟ್ಟದ ತಪ್ಪಲು ಗ್ರಾಮಗಳಲ್ಲಿ ಮುನ್ನೆಚ್ಚರಿಕೆ ಅಗತ್ಯ

ಪಶ್ಚಿಮ ಘಟ್ಟದ ತಪ್ಪಲು ಗ್ರಾಮಗಳಲ್ಲಿ ಮುನ್ನೆಚ್ಚರಿಕೆ ಅಗತ್ಯ

ನಗರ ಯೋಜನ ಪ್ರಾಧಿಕಾರದ ಮಾಸ್ಟರ್‌ ಪ್ಲ್ಯಾನ್ ಇನ್ನೂ ಇಲ್ಲ!

ನಗರ ಯೋಜನ ಪ್ರಾಧಿಕಾರದ ಮಾಸ್ಟರ್‌ ಪ್ಲ್ಯಾನ್ ಇನ್ನೂ ಇಲ್ಲ!

MUST WATCH

udayavani youtube

ಮಧ್ವರಾಜ್ ಮನದಾಳದ ಮಾತು

udayavani youtube

ಫಾರ್ಮ್‌ಹೌಸ್‌ನಲ್ಲಿ ಸಿನಿಮಾ ತಾರೆಯರ ಶವ ಸಮಾಧಿ ಆರೋಪ ! ನ್ಯಾಯಾಲಯದ ಮೊರೆ ಸಲ್ಲು

udayavani youtube

ಅಮಿತ್ ಶಾರಿಂದ ಮನೆ ಮನೆ ಪ್ರಚಾರ

udayavani youtube

ಗಣರಾಜ್ಯೋತ್ಸವ paradeಗಾಗಿ ಭಾರತೀಯ ನೌಕಾಪಡೆ ಉತ್ಸಾಹದಿಂದ ತಯಾರಿ ನಡೆಸುತ್ತಿದೆ

udayavani youtube

Viral Video: ನೀರಿನಲ್ಲಿ ಮುಳುಗುತ್ತಿದ್ದ ಜಿಂಕೆ ಮರಿಯನ್ನು ರಕ್ಷಿಸಿದ ನಾಯಿ

ಹೊಸ ಸೇರ್ಪಡೆ

6protest

ಅಬಕಾರಿ ಅಧಿಕಾರಿಯ ವರ್ತನೆಗೆ ಭೀಮನಹಳ್ಳಿ ಗ್ರಾಮಸ್ಥರ ಆಕ್ರೋಶ

ಎಂಟು ದಿನಗಳಿಂದ ಶಾಲೆಗೆ ಹೋಗದಿದ್ದರೂ ಪಾಸಿಟಿವ್ ವರದಿ; ಆರೋಗ್ಯ ಸಿಬ್ಬಂದಿ ಎಡವಟ್ಟು ಬಹಿರಂಗ

ಎಂಟು ದಿನಗಳಿಂದ ಶಾಲೆಗೆ ಹೋಗದಿದ್ದರೂ ಪಾಸಿಟಿವ್ ವರದಿ; ಆರೋಗ್ಯ ಸಿಬ್ಬಂದಿ ಎಡವಟ್ಟು ಬಹಿರಂಗ

5farmer

ವಿದ್ಯುತ್‌ ತಂತಿ ತಗುಲಿ ರೈತ ಸಾವು

1-sddsa

ಕುತೂಹಲಕ್ಕೆ ಎಡೆಮಾಡಿದ ಆರ್.ವಿ.ದೇಶಪಾಂಡೆಯವರ ರಾಜಕೀಯ ನಡೆ

‘ವರದ’ನಿಗೆ ಮುರಳಿ ಸಾಥ್‌: ಓಂ ಹರಿ ಹರಿ ಓಂ ಹಾಡು ಬಂತು

‘ವರದ’ನಿಗೆ ಮುರಳಿ ಸಾಥ್‌: ಓಂ ಹರಿ ಹರಿ ಓಂ ಹಾಡು ಬಂತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.