ಹೊಟ್ಟೆಯಲ್ಲಿ104 ಕ್ಯಾಪ್ಸುಲ್ಸ್ !: 13.7 ಕೋಟಿ ಮೌಲ್ಯದ ಕೊಕೇನ್ ವಶ
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿದೇಶಿ ಪ್ರಜೆ ಬಂಧನ
Team Udayavani, Sep 23, 2022, 10:15 PM IST
ದೇವನಹಳ್ಳಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಘಾನಾ ದೇಶದಿಂದ ಆಗಮಿಸಿದ್ದ ವ್ಯಕ್ತಿಯೊಬ್ಬನು ಮಾದಕ ವಸ್ತುವನ್ನು ಕಳ್ಳ ಸಾಗಣೆ ಮಾಡುತ್ತಿದ್ದ ಖಚಿತ ಮಾಹಿತಿಯ ಆಧಾರದ ಮೇಲೆ ವಾಯು ಗುಪ್ತಚರ ದಳದ ಅಧಿಕಾರಿಗಳು ಹಾಗೂ ಬೆಂಗಳೂರು ಕಸ್ಟಮ್ಸ್ ಸಿಬಂದಿ ಜಂಟಿ ಕಾರ್ಯಾಚರಣೆ ನಡೆಸಿದಾಗ 1.2 ಕೆ.ಜಿ ಕೊಕೇನ್ ಮಾದಕ ವಸ್ತು ಪತ್ತೆಯಾಗಿದೆ.
ಇದನ್ನೂ ಓದಿ: ದೇವನಹಳ್ಳಿ ವಿಮಾನ ನಿಲ್ದಾಣ: ಲಗೇಜ್ ಬ್ಯಾಗ್ ಚಕ್ರದಲ್ಲಿ ಚಿನ್ನ ಸಾಗಣೆ !
ಬಂಧಿತನನ್ನು ಆಸ್ಪತ್ರೆಗೆ ದಾಖಲಿಸಿ ತೀವ್ರ ವೈದ್ಯಕೀಯ ಪರೀಕ್ಷೆಗೆ ಗುರಿಯಾಗಿಸಿದ ಹಿನ್ನಲೆಯಲ್ಲಿ ಆತನ ಹೊಟ್ಟೆಯಲ್ಲಿ ಒಟ್ಟು 104 ಕ್ಯಾಪ್ಸುಲ್ಸ್ ಮಾತ್ರೆಗಳಿದ್ದು, ಅವುಗಳಲ್ಲಿ ಕೊಕೇನ್ ತುಂಬಿಕೊಂಡು ಕಳ್ಳ ಸಾಗಣೆಗೆ ಯತ್ನಿಸುತ್ತಿದ್ದ ಎಂದು ತಿಳಿದು ಬಂದಿದೆ.
104 ಕ್ಯಾಪ್ಸುಲ್ಸ್ ಮಾತ್ರೆಗಳಿಂದ ಒಟ್ಟು 1.2 ಕೆ.ಜಿಯಷ್ಟು ಕೊಕೇನ್ ಶೇಖರಣೆಯಾಗಿದ್ದು, ಇದರ ಮೌಲ್ಯವು 13.7 ಕೋಟಿ ರೂಪಾಯಿಯಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ
Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ
Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
ಗ್ಯಾರಂಟಿಗಳಿಂದ ಜನ ಭ್ರಷ್ಟರಾಗುತ್ತಾರೆ ಎನ್ನಲಾಗದು: ಹೈಕೋರ್ಟ್ ತೀರ್ಪು