ಏಷ್ಯಾದ ಮೊದಲ ಬಸ್‌ ಆದ್ಯತಾ ಪಥ ಸಿದ್ಧ

Team Udayavani, Jun 19, 2020, 5:24 AM IST

asia-buspath

ಬೆಂಗಳೂರು: ಬಹುನಿರೀಕ್ಷಿತ ಏಷ್ಯಾದ ಮೊದಲ “ಬಸ್‌ ಆದ್ಯತಾ ಪಥ’ (ಬಿಪಿಎಲ್‌)ದ ಲೋಕಾರ್ಪಣೆಗೆ ಕೊನೆಗೂ ಕಾಲ ಸನ್ನಿಹಿತವಾಗಿದ್ದು, ತಿಂಗಳಲ್ಲಿ ಸೆಂಟ್ರಲ್‌ ಸಿಲ್ಕ್ ಬೋರ್ಡ್‌- ಕೆ.ಆರ್‌. ಪುರ ನಡುವಿನ ಇಡೀ ಮಾರ್ಗ ಸೇವೆಗೆ  ಮುಕ್ತವಾಗಲಿದೆ. ಒಟ್ಟಾರೆ 22 ಕಿ.ಮೀ. ಉದ್ದದ ಮಾರ್ಗದಲ್ಲಿ ಬಿಬಿಎಂಪಿ ಈಗಾಗಲೇ ಅರ್ಧ ದಾರಿ ಕ್ರಮಿಸಿದ್ದು, ಸಿಲ್ಕ್ ಬೋರ್ಡ್‌ ನಿಂದ ಮಾರತ್‌ಹಳ್ಳಿವರೆಗೂ ಆದ್ಯತಾ ಪಥ ನಿರ್ಮಿಸುವ ಕಾರ್ಯ ಮುಗಿದಿದೆ.

ಉಳಿದರ್ಧ ಜೂನ್‌ ಅಂತ್ಯಕ್ಕೆ  ಅಥವಾ ಜುಲೈ ಮಧ್ಯಭಾಗದ ವೇಳೆಗೆ ಪೂರ್ಣಗೊಳಿಸುವ ಗುರಿ ಇದೆ. ಈ ನಿಟ್ಟಿನಲ್ಲಿ ಮೂರು ತಂಡಗಳು ಬೊಲಾರ್ಡ್‌ ಗಳ ಅಳವಡಿಕೆ ಮಾಡಲಾಗುತ್ತಿದೆ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಬಂದ್‌ ಆಗಿರುವ ಐಟಿ-ಬಿಟಿ ಸೇರಿದಂತೆ ಆ  ಮಾರ್ಗದ ಕಂಪನಿಗಳು ಜುಲೈ ನಂತರ ತೆರೆಯಲಿವೆ. ಆಗ, ತೀವ್ರ ಸಂಚಾರ  ದಟ್ಟಣೆ ಉಂಟಾಗಿ ಯೋಜನೆ ಅನುಷ್ಠಾನದಲ್ಲಿ ವಿಳಂಬವಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ತ್ವರಿತ  ಗತಿಯಲ್ಲಿ ನಿರ್ಮಾಣ ಕಾರ್ಯ ನಡೆದಿದ್ದು,  ತಂಡಗಳು ಹಗಲು ಮತ್ತು ರಾತ್ರಿ ಕಾರ್ಯನಿರ್ವ ಹಿಸುತ್ತಿವೆ. ದಿನಕ್ಕೆ 500ರಿಂದ 600 ಬೊಲಾರ್ಡ್‌ಗಳನ್ನು ಅಳವಡಿಸಲಾಗುತ್ತಿದೆ.

ಇನ್ನೂ ಹತ್ತು ಸಾವಿರ ಬೊಲಾರ್ಡ್‌ಗಳ ದಾಸ್ತಾನಿದ್ದು, 14 ಸಾವಿರ ಅಹಮದಾಬಾದ್‌ನಿಂದ ಪೂರೈಕೆ  ಆಗಲಿವೆ. ಹೆಚ್ಚು-ಕಡಿಮೆ ತಿಂಗಳ ಅಂತರದಲ್ಲಿ ಪೂರ್ಣಗೊಳ್ಳಲಿದೆ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಲಾಕ್‌ಡೌನ್‌ ಒಂದು ರೀತಿ ಬಸ್‌ ಆದ್ಯತಾ ಪಥಕ್ಕೆ ಅನುಕೂಲವೂ ಆಗಿದೆ. ಯಾಕೆಂದರೆ, ಯಾವಾಗಲೂ ವಾಹನಗಳಿಂದ ತುಂಬಿತುಳುಕುವ ರಸ್ತೆಗಳು ಈಗ  ಖಾಲಿ ಇವೆ. ಬೊಲಾರ್ಡ್‌ಗಳು, ಮಾರ್ಕಿಂಗ್‌, ಮಾರ್ಗ ದುದ್ದಕ್ಕೂ ಬರುವ ಬಡಾವಣೆಗಳಿಗೆ ದಾರಿ ಮಾಡಿಕೊಡುವುದು ಮತ್ತಿತರ ಕಾರ್ಯಗಳು ಸುಲಭವಾಗಿದೆ ಎಂದೂ ಅಧಿಕಾರಿಗಳು ತಿಳಿಸುತ್ತಾರೆ.

ಇನ್ನೂ 3ಕ್ಕೆ ವಿನ್ಯಾಸ ಸಿದ್ಧ: ಮೂರು ಕಾರಿಡಾರ್‌ಗಳನ್ನು ಆದ್ಯತೆ ಮೇರೆಗೆ ತೆಗೆದುಕೊಂಡಿದ್ದು, ಬಿಎಂಟಿಸಿ ಹಾಗೂ ನಗರ ಮತ್ತು ಭೂ ಸಾರಿಗೆ ನಿರ್ದೇಶನಾಲಯ (ಡಲ್ಟ್) ಸಂಯುಕ್ತವಾಗಿ ವಿನ್ಯಾಸ ರೂಪಿಸಿವೆ. ಕರ್ನಾಟಕ ರಸ್ತೆ  ಅಭಿವೃದಿಟಛಿ ನಿಗಮ (ಕೆಆರ್‌ಡಿಸಿಎಲ್‌) ಇದನ್ನು ಅನುಷ್ಠಾನಗೊಳಿಸಲಿದ್ದು, ಈ ಸಂಬಂಧದ ಪ್ರಸ್ತಾವನೆಯನ್ನು ನಗರಾಭಿವೃದಿಟಛಿ ಇಲಾಖೆ ಮೂಲಕ ಹಣಕಾಸು ಇಲಾಖೆಗೆ ಸಲ್ಲಿಸಲಾಗಿದೆ. ಈ ಮಧ್ಯೆ ಯೋಜನೆಗೆ ಸಂಬಂಧಿಸಿದ  ಪ್ರಾಥಮಿಕ ಕಾರ್ಯ ಕೈಗೆತ್ತಿಕೊಳ್ಳಲು ಸಿದ್ಧತೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

“ಸೆಂಟ್ರಲ್‌ ಸಿಲ್ಕ್ ಬೋರ್ಡ್‌- ಕೆ.ಆರ್‌. ಪುರ ನಡುವಿನ ಆದ್ಯತಾ ಪಥದಲ್ಲಿ ಬಸ್‌ಗಳ ಸಂಚಾರಕ್ಕೆ ಬಿಎಂಟಿಸಿ ಸಿದ್ಧವಾಗಿದೆ. ಜತೆಗೆ ಡಲ್ಟ್  ಸಹಯೋಗದಲ್ಲಿ ಹಳೆಯ ವಿಮಾನ ನಿಲ್ದಾಣ ರಸ್ತೆ, ತುಮಕೂರು ರಸ್ತೆಯ ಹೊರವರ್ತುಲ ರಸ್ತೆ, ಎಲೆಕ್ಟ್ರಾನಿಕ್‌ ಸಿಟಿ ಸೇರಿದಂತೆ ಮೂರು ಕಾರಿಡಾರ್‌ ಗಳಲ್ಲಿ ಆದ್ಯತೆ ಮೇರೆಗೆ ಬಿಪಿಎಲ್‌ ನಿರ್ಮಿಸುವ ಸಂಬಂಧ ವಿನ್ಯಾಸ ರೂಪಿಸಿ, ಅನುಷ್ಠಾನದ ಜವಾಬ್ದಾರಿ ಹೊತ್ತ ಕೆಆರ್‌ಡಿಸಿಎಲ್‌ಗೆ ನೀಡಲಾಗಿದೆ’ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ. ಶಿಖಾ ಸ್ಪಷ್ಟಪಡಿಸಿದರು.

ಬಿಪಿಎಲ್‌ಗೆ ಸಕಾಲ; ಸಿಎಫ್ಬಿ: “ಬಸ್‌ ಆದ್ಯತಾ ಪಥಗಳ ನಿರ್ಮಾಣಕ್ಕೆ ಇದು ಸಕಾಲ. ಹೇಗೆಂದರೆ ಒಂದೆಡೆ ವಾಹನಗಳ ದಟ್ಟಣೆ ಇಲ್ಲ. ಮತ್ತೂಂದೆಡೆ ಜಾಗತಿಕವಾಗಿ ಪರಿಸರ ಪ್ರಜ್ಞೆ ಜಾಗೃತವಾಗಿದೆ. ಲಾಕ್‌ ಡೌನ್‌ನಿಂದ ವಾಯುಮಾಲಿನ್ಯ  ಸಾಕಷ್ಟು ಪ್ರಮಾಣದಲ್ಲಿ ತಗ್ಗಿದೆ. ಇದಕ್ಕೆ ಕಾರಣ ತಾವು ಬಳಸುವ ವಾಹನಗಳು ಎಂಬುದು ಮನದಟ್ಟಾಗಿದೆ. 6 ತಿಂಗಳು ಅಥವಾ ವರ್ಷದ ನಂತರ ಜನ ಸಮೂಹ ಸಾರಿಗೆಯತ್ತ ಜನ ಮುಖಮಾಡುತ್ತಾರೆ ಎಂದು ಸಿಟಿಜನ್‌ ಫಾರ್‌  ಬೆಂಗಳೂರು ಸಹ ಸಂಸ್ಥಾಪಕ ಶ್ರೀನಿವಾಸ್‌ ಅಲವಿಲ್ಲಿ ತಿಳಿಸಿದರು.

ಯಶಸ್ಸಿಗೆ ಬೇಕು ಉತ್ತೇಜನ: ಬಸ್‌ ಆದ್ಯತಾ ಪಥ ನಿರ್ಮಿಸಿದರೆ ಸಾಲದು. ಅದರ ಯಶಸ್ಸು ಪ್ರಯಾಣಿಕರ ಮೇಲೆ ನಿಂತಿದೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರನ್ನು ಸೆಳೆಯುವ ಪ್ರಯತ್ನಗಳು ಬಿಎಂಟಿಸಿಯಿಂದ ನಡೆಯಬೇಕಿದೆ. ಈ ನಿಟ್ಟಿನಲ್ಲಿ  ದ್ದೇಶಿತ ಪಥಗಳಲ್ಲಿ ಪ್ರಯಾಣ  ದರ ಕಡಿಮೆ ಮಾಡಬೇಕು. ಫ್ಲ್ಯಾಟ್‌ ಫೇರ್‌ (ಉದಾ: ನಿಗಿದತ ಅಂತರಕ್ಕೆ 10 ರೂ. ಅಥವಾ 20 ರೂ. ನಿಗದಿಪಡಿಸುವುದು) ನಿಗದಿಪಡಿಸಬೇಕು. ಫ್ರೀಕ್ವೆನ್ಸಿಗಳ ನಿರ್ವಹಣೆ ವ್ಯವಸ್ಥಿತವಾಗಿ ಆಗಬೇಕು. ಆ  ಮೂಲಕ ಸಮಯ ಉಳಿತಾಯದ ಮನವರಿಕೆ ಮಾಡಿಕೊಡಬೇಕು. ಇದಕ್ಕೆ ಪೂರಕವಾಗಿ ಸರ್ಕಾರ ಪ್ರಯಾಣ ದರ ಇಳಿಕೆಯಿಂದಾಗುವ ಹೊರೆ ತಗ್ಗಿಸಲು ಅನುದಾನ ನೀಡಬೇಕು. ಡೀಸೆಲ್‌ ಮೇಲಿನ ಸೆಸ್‌ನಿಂದ ವಿನಾಯ್ತಿ ನೀಡುವುದು ಸೇರಿದಂತೆ ಹಲವು ಉತ್ತೇಜಕ ಕಾರ್ಯಗಳಾಗಬೇಕೆಂದು ತಜ್ಞರು ಅಭಿಪ್ರಾಯಪಡುತ್ತಾರೆ.

ಆದ್ಯತಾ ಪಥಗಳ ವಿವರ: 12 ಅಧಿಕ ವಾಹನದಟ್ಟಣೆ ಇರುವ ಕಾರಿಡಾರ್‌ಗಳಲ್ಲಿ ಬಸ್‌ ಆದ್ಯತಾ ಪಥಗಳ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ಬಳ್ಳಾರಿ ರಸ್ತೆ, ಹಳೆಯ ಮದ್ರಾಸ್‌ ರಸ್ತೆ, ಹಳೆಯ ವಿಮಾನ ನಿಲ್ದಾಣ ರಸ್ತೆ, ಸರ್ಜಾಪುರ ರಸ್ತೆ,  ಹೊಸೂರು ರಸ್ತೆ, ಬನ್ನೇರುಘಟ್ಟ ರಸ್ತೆ, ಮೈಸೂರು ರಸ್ತೆ, ಮಾಗಡಿ ರಸ್ತೆ, ತುಮಕೂರು ರಸ್ತೆ, ಕನಕಪುರ ರಸ್ತೆ, ವೆಸ್ಟ್‌ ಆಫ್ ಕಾರ್ಡ್‌ ರೋಡ್‌, ಹೊರವರ್ತುಲ ರಸ್ತೆ. ಈ ಪೈಕಿ ಹೊರವರ್ತುಲ ರಸ್ತೆಯಲ್ಲಿ ಈಗಾಗಲೇ ಕಾಮಗಾರಿ ನಡೆದಿದೆ.  ತುಮಕೂರು ರಸ್ತೆ, ಹಳೆಯ ಮದ್ರಾಸ್‌ ರಸ್ತೆ, ಹೊಸೂರು ರಸ್ತೆಗೆ ವಿನ್ಯಾಸ ಸಿದ್ಧಗೊಂಡಿದೆ.

ಲಾಕ್‌ಡೌನ್‌ನಿಂದ ಬಸ್‌ ಆದ್ಯತಾ ಪಥ ಕಾಮಗಾರಿಗೆ ತುಸು ಹಿನ್ನಡೆ ಉಂಟಾಗಿತ್ತು. ಪಥ ನಿರ್ಮಾಣಕ್ಕೆ ಅಗತ್ಯ ಇರುವ ಬೊಲಾರ್ಡ್‌ಗಳು ಲೂಧಿಯಾನದಿಂದ ಬರಬೇಕಿತ್ತು. ಈಗ ನಿರ್ಬಂಧ ಸಡಿಲಿಕೆ ಆಗಿರುವುದರಿಂದ ಸಮಸ್ಯೆ  ಬಗೆಹರಿದಂತಾಗಿದೆ. ತಿಂಗಳಾಂತ್ಯಕ್ಕೆ ಕಾಮಗಾರಿ ಪೂರ್ಣಗೊಳ್ಳಲಿದೆ.
-ಬಿ.ಎಚ್‌. ಅನಿಲ್‌ ಕುಮಾರ್‌, ಆಯುಕ್ತರು, ಬಿಬಿಎಂಪಿ

* ವಿಜಯಕುಮಾರ್‌ ಚಂದರಗಿ

ಟಾಪ್ ನ್ಯೂಸ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ

Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.