ಖಾಸಗಿ ವಿಡಿಯೋ ಕಾಲ್‌: ಬೆಂಗಳೂರಿನ ಯುವತಿಗೆ ಬ್ಲ್ಯಾಕ್‌ಮೇಲ್‌, ಆರೋಪಿ ಸೆರೆ‌


Team Udayavani, Mar 31, 2022, 11:14 AM IST

rape

ಬೆಂಗಳೂರು: ಡೇಟಿಂಗ್‌ ಆ್ಯಪ್‌ನಲ್ಲಿ ಪರಿಚಯವಾದ ಯುವತಿಯ ಖಾಸಗಿ ವಿಡಿಯೋ ಇಟ್ಟಕೊಂಡು ಮೂರು ಲಕ್ಷ ರೂ.ಗೆ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ಆರೋಪಿಯನ್ನು ಕಾಡುಗೋಡಿ ಪೊಲೀಸರು ಬಂಧಿಸಿದ್ದಾರೆ.

ಕಾಡುಗೋಡಿ ನಿವಾಸಿ 35 ವರ್ಷದ ಮಹಿಳೆ ಕೊಟ್ಟ ದೂರಿನ ಆಧಾರದ ಮೇರೆಗೆ ತಮಿಳುನಾಡಿನ ಹೊಸೂರು ಮೂಲದ ಗಣೇಶ್‌ (25)ಎಂಬಾತನನ್ನು ಬಂಧಿಸಲಾಗಿದೆ. ಒಂದೂವರೆ ವರ್ಷದ ಹಿಂದೆ ಸಂತ್ರಸ್ತೆ ಡೇಟಿಂಗ್‌ ಆ್ಯಪ್‌ನಲ್ಲಿ ಖಾತೆ ತೆರೆದಿದ್ದರು. ಆಗ ಆರೋಪಿ ಗಣೇಶ್‌ ಪರಿಚಯವಾಗಿದ್ದ. ನಂತರ ಇಬ್ಬರೂ ಸ್ನೇಹಿತರಾಗಿದ್ದರು.

ಸಂತ್ರಸ್ತೆಯೊಂದಿಗೆ ಸಲುಗೆ ಬೆಳೆಸಿಕೊಂಡ ಆರೋಪಿ ಆಕೆಗೆ ವಾಟ್ಸ್‌ಆ್ಯಪ್‌ ಹಾಗೂ ವಿಡಿಯೋ ಕರೆ ಮಾಡಿ ಮಾತನಾಡುತ್ತಿದ್ದ. ಈ ವೇಳೆ ಯುವತಿ ಜತೆ ಖಾಸಗಿಯಾಗಿ ವಿಡಿಯೋ ಕಾಲ್‌ನಲ್ಲಿ ಮಾತನಾಡಿದ್ದು, ಅದನ್ನು ರೆಕಾರ್ಡ್‌ ಮಾಡಿಕೊಂಡಿದ್ದಾನೆ. ಇದೀಗ 15 ದಿನಗಳಿಂದ ಆರೋಪಿ, ಸಂತ್ರಸ್ತೆಗೆ ವಿಡಿಯೋ ಕಳುಹಿಸಿ ಮೂರು ಲಕ್ಷ ರೂ. ಕೊಡಬೇಕು. ಇಲ್ಲವಾದರೆ ಅದನ್ನು ಪತಿಗೆ ಕಳುಹಿಸುವುದಾಗಿ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದಾನೆ. ಅದರಿಂದ ಗಾಬರಿಗೊಂಡ ಮಹಿಳೆ ಕಾಡುಗೋಡಿ ಠಾಣೆಯಲ್ಲಿ ದೂರು ನೀಡಿದ್ದರು. ಈ ಸಂಬಂಧ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ವೈನ್‌ ಡೆಲಿವರಿ ಸೋಗಿನಲ್ಲಿ ಯುವತಿಗೆ ವಂಚನೆ

ಆನ್‌ಲೈನ್‌ ಮೂಲಕ ವೈನ್‌ ಆರ್ಡರ್‌ ಮಾಡಿದ್ದ ಯುವತಿಯೊಬ್ಬರ ಬಳಿ ಡೆಲಿವರಿ ಶುಲ್ಕ ಪಡೆಯುವ ನೆಪದಲ್ಲಿ ಸೈಬರ್‌ ವಂಚಕರು 49 ಸಾವಿರ ರೂ. ದೋಚಿದ್ದಾರೆ. ಈ ಸಂಬಂಧ ಲಾಲ್‌ಬಾಗ್‌ ರಸ್ತೆಯ 22 ವರ್ಷದ ಯುವತಿ ಕೇಂದ್ರ ವಿಭಾಗದ ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ವಂಚನೆಗೊಳಗಾದ ಯುವತಿ ಮಾ.26ರರಂದು ವೈನ್ಸ್‌ ಹೋಮ್‌ ಡೆಲಿವರಿ ಎಂಬ ಆನ್‌ಲೈನ್‌ ವಹಿವಾಟಿನಲ್ಲಿ ವೈನ್ಸ್‌ ಬುಕ್‌ ಮಾಡಿದ್ದು, ಆನ್‌ಲೈನ್‌ ಮೂಲಕ 540 ರೂ. ಶುಲ್ಕವನ್ನು ಪಾವತಿಸಿದ್ದರು. ಕೆಲ ಹೊತ್ತಿನ ಬಳಿಕ ಸೈಬರ್‌ ವಂಚಕ ಯುವತಿಗೆ ಕರೆ ಮಾಡಿ, ಡೆಲಿವರಿ ಮಾಡಿದ ಶುಲ್ಕ 10 ರೂ. ಪಾವತಿಸಬೇಕಂದು ಹೇಳಿದ್ದಾನೆ. ಜತೆಗೆ ಶುಲ್ಕ ಪಾವತಿಯಾಗಲು ಒಟಿಪಿ ನೀಡಬೇಕು ಎಂದು ಯುವತಿ ಯಿಂದ ಒಟಿಪಿ ಪಡೆದುಕೊಂಡಿದ್ದ. ಆದಾದ ಕೆಲ ನಿಮಿಷಗಳಲ್ಲೇ ಯುವತಿಯ ಬ್ಯಾಂಕ್‌ ಖಾತೆಯಿಂದ 49,326 ರೂ. ಅನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ.

ಹಣ ಕಡಿತವಾದ ಸಂದೇಶ ಬಂದ ಕೂಡಲೇ ಕೇಂದ್ರ ವಿಭಾಗದ ಸೆನ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ವಂಚನೆಗೊಳಗಾದವರ ಖಾತೆಯ ವಿವರ ನೀಡುವಂತೆ ಮಂಗಳವಾರ ಬ್ಯಾಂಕ್‌ಗೆ ಪತ್ರ ಬರೆದಿದ್ದಾರೆ.

ಟಾಪ್ ನ್ಯೂಸ್

ಪುರುಷರ ಹಾಕಿಯಲ್ಲಿ ರಜತ; ಆಸ್ಟ್ರೇಲಿಯ ವಿರುದ್ಧ ಫೈನಲ್‌ನಲ್ಲಿ ಭಾರತಕ್ಕೆ 7-0 ಸೋಲು

ಪುರುಷರ ಹಾಕಿಯಲ್ಲಿ ರಜತ; ಆಸ್ಟ್ರೇಲಿಯ ವಿರುದ್ಧ ಫೈನಲ್‌ನಲ್ಲಿ ಭಾರತಕ್ಕೆ 7-0 ಸೋಲು

NIA

ಭಾರತದಲ್ಲಿ ‘ಜಿಹಾದ್’ ಪ್ರಚಾರ: ಇಬ್ಬರು ಬಾಂಗ್ಲಾದೇಶಿ ಪ್ರಜೆಗಳ ಬಂಧನ

ಮಳೆಗಾಲದ ವಿಧಾನ ಮಂಡಲ ಅಧಿವೇಶನ ಅನುಮಾನ

ಮಳೆಗಾಲದ ವಿಧಾನ ಮಂಡಲ ಅಧಿವೇಶನ ಅನುಮಾನ

1-wwwqewq

ವಿವಾದಾತ್ಮಕ ಕಾರ್ಯಕ್ರಮ: ರಾಜಶ್ರೀ ಚೌಧರಿ ಬೋಸ್ ಪೊಲೀಸ್ ವಶಕ್ಕೆ

ಉಪ ಲೋಕಾಯುಕ್ತ ನೇಮಕ: ರಾಜ್ಯ ಸರಕಾರಕ್ಕೆ ಹೈಕೋರ್ಟ್‌ ನೋಟಿಸ್‌

ಉಪ ಲೋಕಾಯುಕ್ತ ನೇಮಕ: ರಾಜ್ಯ ಸರಕಾರಕ್ಕೆ ಹೈಕೋರ್ಟ್‌ ನೋಟಿಸ್‌

ಸಹಾಯಕ ಪ್ರಾಧ್ಯಾಪಕ ಪರೀಕ್ಷೆ ಅಕ್ರಮ: ಆರೋಪ ಪಟ್ಟಿ ಸಲ್ಲಿಕೆ

ಸಹಾಯಕ ಪ್ರಾಧ್ಯಾಪಕ ಪರೀಕ್ಷೆ ಅಕ್ರಮ: ಆರೋಪ ಪಟ್ಟಿ ಸಲ್ಲಿಕೆ

ಧ್ವಜಾರೋಹಣಕ್ಕೆ ಜಿಲ್ಲೆ ನಿಗದಿ: ವಿಜಯನಗರಕ್ಕೆ ಆನಂದ್‌ ಸಿಂಗ್‌

ಧ್ವಜಾರೋಹಣಕ್ಕೆ ಜಿಲ್ಲೆ ನಿಗದಿ: ವಿಜಯನಗರಕ್ಕೆ ಆನಂದ್‌ ಸಿಂಗ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

16

ಸುಶಿಕ್ಷಿತರಲ್ಲಿಯೇ ಹೆಚ್ಚುತ್ತಿದೆ ವರದಕ್ಷಿಣೆ ಪಿಡುಗು

tdy-3

ಕೆಎಎಸ್‌ ಕನಸು ಕಂಡವಳಿಗೆ 59 ಲಕ್ಷ ರೂ. ವಂಚನೆ

tdy-2

ಪ್ರಾಣಿ ಪಕ್ಷಿಗಳಿಗೂ ಉಂಟು ಆಶ್ರಯ ತಾಣ

ಸೋಮವಾರದ ರಾಶಿ ಫಲ… ಇಲ್ಲಿವೆ ನಿಮ್ಮ ಗ್ರಹಬಲ

ಸೋಮವಾರದ ರಾಶಿ ಫಲ… ಇಲ್ಲಿವೆ ನಿಮ್ಮ ಗ್ರಹಬಲ

Minister Ashwattha Narayan Padayatra in Subrahmanya Nagar Ward

ಸುಬ್ರಹ್ಮಣ್ಯ ನಗರ ವಾರ್ಡ್ ನಲ್ಲಿ ಸಚಿವ ಅಶ್ವತ್ಥ ನಾರಾಯಣ ಪಾದಯಾತ್ರೆ

MUST WATCH

udayavani youtube

ಆಟಿಯ ಹುಣ್ಣಿಮೆ ದಿನದಂದು ಹೊಸ್ತಿಲು ಬರೆಯುವ ಹಿನ್ನೆಲೆ ನಿಮಗೆ ಗೊತ್ತೇ ?

udayavani youtube

ತುಂಬಿ ಹರಿಯುತ್ತಿದೆ ಬಾರೇಹಳ್ಳ ಚೆಕ್ ಡ್ಯಾಂ… ನೋಡಲು ಅದೆಷ್ಟು ಸುಂದರ…

udayavani youtube

ಮಾನ ಮರ್ಯಾದೆ ಇದೆಯೇನ್ರಿ…? ಅಧಿಕಾರಿಗಳ ವಿರುದ್ಧ ಬೈರತಿ ಬಸವರಾಜ್ ಗರಂ

udayavani youtube

ಅಕ್ರಮ ಗೋಹತ್ಯೆ ತಡೆಯಲು ಯೋಗಿ ಮಾದರಿಗೆ ಮುಂದಾದ ಚಿಕ್ಕಮಗಳೂರು ನಗರಸಭೆ

udayavani youtube

ಜೆಸ್ಕಾಂ ಅಧಿಕಾರಿಗಳೇ ಇಲ್ಲಿ ಗಮನಿಸಿ.. ಮನೆಯ ಮಾಳಿಗೆ ತಾಗುತ್ತಿವೆ ವಿದ್ಯುತ್ ತಂತಿಗಳು!

ಹೊಸ ಸೇರ್ಪಡೆ

ಪುರುಷರ ಹಾಕಿಯಲ್ಲಿ ರಜತ; ಆಸ್ಟ್ರೇಲಿಯ ವಿರುದ್ಧ ಫೈನಲ್‌ನಲ್ಲಿ ಭಾರತಕ್ಕೆ 7-0 ಸೋಲು

ಪುರುಷರ ಹಾಕಿಯಲ್ಲಿ ರಜತ; ಆಸ್ಟ್ರೇಲಿಯ ವಿರುದ್ಧ ಫೈನಲ್‌ನಲ್ಲಿ ಭಾರತಕ್ಕೆ 7-0 ಸೋಲು

NIA

ಭಾರತದಲ್ಲಿ ‘ಜಿಹಾದ್’ ಪ್ರಚಾರ: ಇಬ್ಬರು ಬಾಂಗ್ಲಾದೇಶಿ ಪ್ರಜೆಗಳ ಬಂಧನ

ಮಳೆಗಾಲದ ವಿಧಾನ ಮಂಡಲ ಅಧಿವೇಶನ ಅನುಮಾನ

ಮಳೆಗಾಲದ ವಿಧಾನ ಮಂಡಲ ಅಧಿವೇಶನ ಅನುಮಾನ

1-wwwqewq

ವಿವಾದಾತ್ಮಕ ಕಾರ್ಯಕ್ರಮ: ರಾಜಶ್ರೀ ಚೌಧರಿ ಬೋಸ್ ಪೊಲೀಸ್ ವಶಕ್ಕೆ

ಉಪ ಲೋಕಾಯುಕ್ತ ನೇಮಕ: ರಾಜ್ಯ ಸರಕಾರಕ್ಕೆ ಹೈಕೋರ್ಟ್‌ ನೋಟಿಸ್‌

ಉಪ ಲೋಕಾಯುಕ್ತ ನೇಮಕ: ರಾಜ್ಯ ಸರಕಾರಕ್ಕೆ ಹೈಕೋರ್ಟ್‌ ನೋಟಿಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.