ಅವಾಂತರ ಸೃಷ್ಟಿಸಿದ ವರ್ಷಧಾರೆ


Team Udayavani, May 30, 2020, 6:01 AM IST

tree rain

ಬೆಂಗಳೂರು: ನಗರದಲ್ಲಿ ಮಳೆ ಅಬ್ಬರ ಮುಂದುವರಿದಿದ್ದು, ಮತ್ತೆ 46ಕ್ಕೂ ಅಧಿಕ ಮರ ಮತ್ತು ರೆಂಬೆಗಳು ನೆಲಕಚ್ಚಿವೆ. ಇದರಿಂದ ಹಲವು ವಾಹನಗಳು ಜಖಂಗೊಂಡಿದ್ದು, ಕೆ.ಆರ್‌. ವೃತ್ತ ಮತ್ತು ಜಯಮಹಲ್‌ನ ನಂದಿದುರ್ಗದಲ್ಲಿ ಚಲಿಸುತ್ತಿದ್ದ ಎರಡು ಆಟೋಗಳ ಮೇಲೆಯೇ ಮರದ ರೆಂಬೆ ಬಿದ್ದಿದೆ. ಅದೃಷ್ಟವಶಾತ್‌ ಯಾವುದೇ ಅನಾಹುತ ಸಂ‌ವಿಸಿಲ್ಲ.

ಮೂರು ದಿನಗಳ ಅಂತರದಲ್ಲಿ ಚಲಿಸುವ ಮೇಲೆ ರೆಂಬೆ ಬೀಳುತ್ತಿರುವುದು ಎರಡನೇ ಘಟನೆ ಇದಾಗಿದೆ. ಗಾಳಿ  ಸಹಿತ ಮಳೆ ಹಾಗೂ ಪರಿಣಾಮ ಧರೆಗುರುಳುವ ಮರಗಳಿಗೆ ಇತ್ತೀಚೆಗೆ ವಾಹನಗಳು ಜಖಂಗೊಳ್ಳುತ್ತಿರುವು  ದರಿಂದ ವಾಹನ ಸವಾರರು ಆತಂಕದಲ್ಲಿ ಸಂಚರಿಸುವಂತಾಗಿದೆ. ಮಲ್ಲೇಶ್ವರ, ಸುಬ್ರಹ್ಮಣ್ಯ ನಗರ,  ಟಿ.ಆರ್‌. ಮಿಲ್‌,  ಬಸವೇಶ್ವರನಗರ ಸೇರಿದಂತೆ ಹಲವೆಡೆ ರಸ್ತೆ ಬದಿ ನಿಂತಿದವಾಹನಗಳ ಮೇಲೆಯೇ ಮರ ಮತ್ತು ಮರದ ರೆಂಬೆಗಳು ಬಿದ್ದಿವೆ.

ಇದರಿಂದ ವಾಹನಗಳು ಜಖಂಗೊಂಡಿವೆ. ಸಂಜೆ ಕೆ.ವೃತ್ತದಲ್ಲಿ ಚಲಿಸುತ್ತಿದ್ದ ವಾಹನದ ಮೇಲೆ ರೆಂಬೆ ಬಿದ್ದಿದೆ. ಆಟೋದಲ್ಲಿ ಯಾರೂ ಹಾಗೂ ಹಿಂಭಾಗದಲ್ಲಿ ರೆಂಬೆ ಬಿದ್ದಿದ್ದರಿಂದ ಅನಾಹುತ ತಪ್ಪಿದೆ ಎಂದು ಬಿಬಿಎಂಪಿ ಅರಣ್ಯ ವಿಭಾಗದ ಸಿಬ್ಬಂದಿ ಮಾಹಿತಿ ನೀಡಿದರು. ವಿದ್ಯಾರಣ್ಯಪುರದಲ್ಲೂ ಮರದ ಕೊಂಬೆ ಬಿದ್ದು, ಆಟೋ ಜಖಂಗೊಂಡಿದೆ.  ನಗರದ ಉತ್ತರ ಭಾಗದಲ್ಲಿ ಕನಿಷ್ಠ 30ರಿಂದ ಗರಿಷ್ಠ 70 ಮಿ.ಮೀ. ಮಳೆ ದಾಖಲಾಗಿದೆ.

ಈ ಭಾಗದ ಹೆಬ್ಟಾಳ ಮೇಲ್ಸೇತುವೆ ಬಳಿ ಎಸ್ಟೀಮ್‌ ಮಾಲ್‌ ಎದುರು ರಸ್ತೆ ಜಲಾವೃತಗೊಂಡಿತು. ಅದೇ ರೀತಿ, ಕೆ.ಆರ್‌. ವೃತ್ತ ಒಳಗೊಂಡಂತೆ  ಪ್ರಮುಖ ಅಂಡರ್‌ಪಾಸ್‌ಗಳು, ಗ್ರೇಡ್‌ ಸಪರೇಟರ್‌ಗಳು, ಜಂಕ್ಷನ್‌ಗಳಲ್ಲಿ ನೀರು ತುಂಬಿಕೊಂಡಿದ್ದರಿಂದ ವಾಹನ ಸಂಚಾರಕ್ಕೆ ತೀವ್ರ ತಡೆಯುಂಟಾಯಿತು. ಪೀಕ್‌ ಅವರ್‌ನಲ್ಲಿ ಮಳೆ ಶುರುವಾಗಿದ್ದರಿಂದ ಹಾಗೂ ಖಾಸಗಿ ವಾಹನಗಳ  ಸಂಚಾರವೇ ಹೆಚ್ಚಿದ್ದುದರಿಂದ ವಾಹನ ಸವಾರರಿಗೆ ಇದರ ಬಿಸಿ ತುಸು ಜೋರಾಗಿಯೇ ತಟ್ಟಿತು.

ಮರಗಳು ಧರೆಗೆ – ವಿದ್ಯುತ್‌ ಕಡಿತ: ಅಲ್ಲಲ್ಲಿ ಮರ ಮತ್ತು ಮರದ ರೆಂಬೆಗಳು ಬಿದ್ದಿದ್ದರಿಂದ ಪರ್ಯಾಯ ಮಾರ್ಗಗಳಲ್ಲಿ ಸಂಚರಿಸಬೇಕಾಯಿತು. ಪರಿಣಾಮ ಅಲ್ಲೆಲ್ಲಾ ಸಂಚಾರದಟ್ಟಣೆ ಉಂಟಾಯಿತು. ನಗರಟಿ.ಆರ್‌. ಮಿಲ್‌,  ಶಿವಾಜಿನಗರ, ಪಟ್ಟೇಗಾರಪಾಳ್ಯ, ಬಸವೇಶ್ವರನಗರ, ರಾಜಾಜಿನಗರ 1ನೇ ಬ್ಲಾಕ್‌, ಮಾಗಡಿ ರಸ್ತೆ, ಜೆ.ಸಿ. ನಗರ, ಚಾಮರಾಜಪೇಟೆ, ಸೆಂಟ್‌ ಜೋಸೆಫ್ ಕಾಲೇಜು ಬಳಿ, ಲುಂಬಿನಿ ಗಾರ್ಡನ್‌, ವೆಸ್ಟ್‌ ಆಫ್ ಕಾರ್ಡ್‌ ರೋಡ್‌, ಜಿಪಿಒ, ಶೇಷಾದ್ರಿಪುರ,

ಸದಾಶಿವನಗರ, ಡಾ.ರಾಜಕುಮಾರ್‌ ರಸ್ತೆ, ಬಿಇಎಂಎಲ್‌ ಲೇಔಟ್‌ ಸೇರಿದಂತೆ ವಿವಿಧೆಡೆ ಮರ ಮತ್ತು ರೆಂಬೆಗಳು ಬಿದ್ದ ಬಗ್ಗೆ ವರದಿಯಾಗಿದೆ ಎಂದು ಬಿಬಿಎಂಪಿ ನಿಯಂತ್ರಣಾ ಕೊಠಡಿ ಮಾಹಿತಿ ನೀಡಿದೆ. ಈ ಮಧ್ಯೆ  ಬೆಸ್ಕಾಂಗೆ ಗ್ರಾಹಕರು ದೂರುಗಳ ಮಳೆಗರೆದಿದ್ದಾರೆ. ಕೆಲವೆಡೆ ವಿದ್ಯುತ್‌ ತಂತಿಗಳ ಮೇಲೆ ಮರದ ರೆಂಬೆಗಳು ಬಿದ್ದಿದ್ದರಿಂದ ನಗರದ ಹಲವು ಪ್ರದೇಶಗಳಲ್ಲಿ ಕತ್ತಲೆ ಆವರಿಸಿತ್ತು. ಗಂಟೆಗಟ್ಟಲೆ ಕರೆಂಟ್‌ ಇಲ್ಲದ್ದರಿಂದ ಸಹಾಯವಾಣಿ, ಬೆಸ್ಕಾಂ  ಕಚೇರಿಗಳಿಗೆ ನೂರಾರು ಕರೆ ಬಂದಿವೆ.

ಎಲ್ಲೆಲ್ಲಿ ಟ್ರಾಫಿಕ್‌ ಜಾಮ್‌?: ಭಾರೀ ಮಳೆಗೆ ನಗರದ ಬಹುತೇಕ ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ. ಶಿವಾನಂದ ವೃತ್ತ, ಮೆಜೆಸ್ಟಿಕ್‌, ಯಶವಂತಪುರ, ನಾಗವಾರ, ಮೈಸೂರು ರಸ್ತೆ, ಎಲೆಕ್ಟ್ರಾನಿಕ್‌ ಸಿಟಿ, ಹೊಸೂರು ರಸ್ತೆ, ವಿಮಾನ  ನಿಲ್ದಾಣ ರಸ್ತೆ, ಕೆ.ಆರ್‌. ವೃತ್ತ, ಮಾರುಕಟ್ಟೆ ಎಂ.ಜಿ.ರಸ್ತೆ ಸೇರಿ ಸಾಕಷ್ಟು ಪ್ರದೇಶಗಳಲ್ಲಿ ಭಾರೀ ಸಂಚಾರ ಠಾಣೆ ಉಂಟಾಗಿತ್ತು. ಪರಿಣಾಮ ಸಂಚಾರ ನಿರ್ವಹಣೆಗೆ ಪೊಲೀಸರು ಹರಸಾಹಸ ಪಟ್ಟರು. ಶಿವಾನಂದ ವೃತ್ತದ ಕೆಳ ಭಾಗದಲ್ಲಿ ನೀರು  ಬಿದ್ದು, ಅದರ ಮಧ್ಯೆಯೇ ಸವಾರರು ವಾಹನ ಚಲಾಯಿಸಿದರು.

ಟಾಪ್ ನ್ಯೂಸ್

ಬಳ್ಳಾರಿ: ಆಫ್ರಿಕಾದಿಂದ ಬಂದ ಇಬ್ಬರು ಕ್ವಾರಂಟೈನ್ ಗೆ: ಡಾ. ಜನಾರ್ಧನ್

ಬಳ್ಳಾರಿ: ಆಫ್ರಿಕಾದಿಂದ ಬಂದ ಇಬ್ಬರು ಕ್ವಾರಂಟೈನ್ ಗೆ: ಡಾ. ಜನಾರ್ಧನ್

ರೂಪಾಂತರಿ ವೈರಸ್ ಗೆ ಆಹ್ವಾನ! ದಕ್ಷಿಣ ಆಫ್ರಿಕಾದಿಂದ 1 ಸಾವಿರ ಪ್ರಯಾಣಿಕರು ಮುಂಬಯಿಗೆ ಆಗಮನ?

ರೂಪಾಂತರಿ ವೈರಸ್ ಗೆ ಆಹ್ವಾನ! ದಕ್ಷಿಣ ಆಫ್ರಿಕಾದಿಂದ 1 ಸಾವಿರ ಪ್ರಯಾಣಿಕರು ಮುಂಬಯಿಗೆ ಆಗಮನ?

Untitled-2

ಸದ್ಯಕ್ಕೆ ಲಾಕ್ ಡೌನ್ ಮಾಡುವ ಉದ್ದೇಶ ಸರ್ಕಾರದ ಮುಂದಿಲ್ಲ: ಸಿಎಂ ಬೊಮ್ಮಾಯಿ ಸ್ಪಷ್ಟನೆ

5banahatti

ಕಾಂಗ್ರೆಸ್ ಜಾತಿಯ ಟ್ರಂಪ್ ಕಾರ್ಡ್ ಬಳಸಿ ಮತ ಕೇಳುತ್ತಿದ್ದಾರೆ: ಬನಹಟ್ಟಿ

ಹೂಡಿಕೆದಾರರಲ್ಲಿ ಹುಮ್ಮಸ್ಸು: ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 500ಕ್ಕೂ ಅಧಿಕ ಅಂಕ ಏರಿಕೆ

ಹೂಡಿಕೆದಾರರಲ್ಲಿ ಹುಮ್ಮಸ್ಸು: ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 500ಕ್ಕೂ ಅಧಿಕ ಅಂಕ ಏರಿಕೆ

ಒಮಿಕ್ರಾನ್ ಆತಂಕ: ಭಾರತದಲ್ಲಿ 6,990 ಕೋವಿಡ್ ಪ್ರಕರಣ ಪತ್ತೆ, 3.4 ಕೋಟಿ ಮಂದಿ ಚೇತರಿಕೆ

ಒಮಿಕ್ರಾನ್ ಆತಂಕ: ಭಾರತದಲ್ಲಿ 6,990 ಕೋವಿಡ್ ಪ್ರಕರಣ ಪತ್ತೆ, 3.4 ಕೋಟಿ ಮಂದಿ ಚೇತರಿಕೆ

4nandibetta

ಚಿಕ್ಕಬಳ್ಳಾಪುರ: 3 ತಿಂಗಳ ಬಳಿಕ ಸಾರ್ವಜನಿಕರಿಗೆ ನಂದಿಬೆಟ್ಟ ಪ್ರವೇಶಕ್ಕೆ ಮುಕ್ತಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

covid

ಹೊಸ ವರ್ಷಾಚರಣೆಗೆ ಬೀಳುತ್ತಾ ಬ್ರೇಕ್‌?

ಕಡಲೆ ಕಾಯಿ

ಗರಿಬಿಚ್ಚಿಕೊಂಡ ಹಳ್ಳಿ ಸೊಗಡು

ಪತ್ನಿಯನ್ನು ಕೊಂದಿದ್ದವನ ಶವ ಆಂಧ್ರದಲ್ಲಿ ಪತ್ತೆ

ಪತ್ನಿಯನ್ನು ಕೊಂದಿದ್ದವನ ಶವ ಆಂಧ್ರದಲ್ಲಿ ಪತ್ತೆ..!

fake marks cards

ನಕಲಿ ಅಂಕಪಟ್ಟಿ ದಂಧೆ: ನಾಲ್ವರು ವಶಕ್ಕೆ

ವರ್ಕ್‌ ಫ್ರಂ ಹೋಮ್‌ಗೆ ವಿದಾಯ

ವರ್ಕ್‌ ಫ್ರಂ ಹೋಮ್‌ಗೆ ವಿದಾಯ

MUST WATCH

udayavani youtube

‘Car’bar with Merwyn Shirva | Episode 1

udayavani youtube

ಭಾರತ – ನ್ಯೂಜಿಲ್ಯಾಂಡ್ ಟೆಸ್ಟ್ ಪಂದ್ಯ ಡ್ರಾ : ಜಯದ ಸನಿಹದಲ್ಲಿದ್ದ ಟೀಂ ಇಂಡಿಯಾಗೆ ನಿರಾಸೆ

udayavani youtube

ಫ್ರೆಂಡ್ ಪೆನ್ಸಿಲ್ ಕದ್ದ ಎಂದು ಪೊಲೀಸ್ ಠಾಣೆಗೆದೂರು ದಾಖಲಿಸಲು ಹೋದ ಪುಟ್ಟ ವಿದ್ಯಾರ್ಥಿಗಳು!

udayavani youtube

ಕಟ್ಟಡ ತೆರವಿಗೆ ಕೂಡಿ ಬರದ ಗಳಿಗೆ : ಅವಘಡ ಸಂಭವಿಸುವ ಮೊದಲು ಎಚ್ಚೆತ್ತುಕೊಳ್ಳಿ

udayavani youtube

ನೋಂದಣೆ ಕಚೇರಿಗೆ ವಕೀಲರು ಬರದಂತೆ ಅಧಿಕಾರಿಗಳ ತಾಕೀತು : ಪ್ರತಿಭಟನೆಗಿಳಿದ ವಕೀಲರು

ಹೊಸ ಸೇರ್ಪಡೆ

ಬಳ್ಳಾರಿ: ಆಫ್ರಿಕಾದಿಂದ ಬಂದ ಇಬ್ಬರು ಕ್ವಾರಂಟೈನ್ ಗೆ: ಡಾ. ಜನಾರ್ಧನ್

ಬಳ್ಳಾರಿ: ಆಫ್ರಿಕಾದಿಂದ ಬಂದ ಇಬ್ಬರು ಕ್ವಾರಂಟೈನ್ ಗೆ: ಡಾ. ಜನಾರ್ಧನ್

ರೂಪಾಂತರಿ ವೈರಸ್ ಗೆ ಆಹ್ವಾನ! ದಕ್ಷಿಣ ಆಫ್ರಿಕಾದಿಂದ 1 ಸಾವಿರ ಪ್ರಯಾಣಿಕರು ಮುಂಬಯಿಗೆ ಆಗಮನ?

ರೂಪಾಂತರಿ ವೈರಸ್ ಗೆ ಆಹ್ವಾನ! ದಕ್ಷಿಣ ಆಫ್ರಿಕಾದಿಂದ 1 ಸಾವಿರ ಪ್ರಯಾಣಿಕರು ಮುಂಬಯಿಗೆ ಆಗಮನ?

8bankloan

ಸಾಲ ಪಡೆಯಲು ಜನಜಂಗುಳಿ

Untitled-2

ಸದ್ಯಕ್ಕೆ ಲಾಕ್ ಡೌನ್ ಮಾಡುವ ಉದ್ದೇಶ ಸರ್ಕಾರದ ಮುಂದಿಲ್ಲ: ಸಿಎಂ ಬೊಮ್ಮಾಯಿ ಸ್ಪಷ್ಟನೆ

7devolop

ವಿಜ್ಞಾನ ಬೆಳವಣಿಗೆಗೆ ಕೊಡುಗೆ ನೀಡಿ: ಅಗಸರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.