30ರಂದು ಡಿಸಿ ಕಚೇರಿ ಎದುರು ಧರಣಿ: ಮಹಾಂತೇಶ್‌


Team Udayavani, Jun 28, 2020, 11:33 AM IST

28-June-04

ದಾವಣಗೆರೆ: ಕೆ. ಮಹಾಂತೇಶ್‌ ಸುದ್ದಿಗೋಷ್ಠಿ ನಡೆಸಿದರು

ದಾವಣಗೆರೆ: ಸಂಘಟಿತ ಮತ್ತು ಅಸಂಘಟಿತ ವಲಯದ ಕಾರ್ಮಿಕರಿಗೆ ಕೋವಿಡ್‌-19 ಪರಿಹಾರಕ್ಕೆ ಒತ್ತಾಯಿಸಿ ಜೂ. 30 ರಂದು ದಾವಣಗೆರೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ. ಮಹಾಂತೇಶ್‌ ತಿಳಿಸಿದ್ದಾರೆ.

ಕೋವಿಡ್ ವೈರಸ್‌ ಹರಡುವಿಕೆ ತಡೆಗಟ್ಟುವ ಹಿನ್ನೆಲೆಯಲ್ಲಿ ಮಾ. 22 ರಿಂದ ಏಕಾಏಕಿ ಲಾಕ್‌ಡೌನ್‌ನಿಂದ ಸಂಘಟಿತ ಮತ್ತು ಅಸಂಘಟಿತ ವಲಯದ ಲಕ್ಷಾಂತರ ಕಾರ್ಮಿಕರು ಸಮಸ್ಯೆ ಅನುಭವಿಸುತ್ತಿದ್ದಾರೆ. ಸರ್ಕಾರ ಎಲ್ಲರಿಗೂ ಕೋವಿಡ್‌-19 ಪರಿಹಾರ ನೀಡಬೇಕು. ಕೋವಿಡ್  ನಿಯಂತ್ರಣ, ಚಿಕಿತ್ಸೆಗೆ ಸಂಬಂಧಿಸಿದಂತೆ ನೀಡಿರುವ ಅನುದಾನ ಮತ್ತು ವೆಚ್ಚದ ರಾಜ್ಯ ಸರ್ಕಾರ ಕೂಡಲೇ ಶ್ವೇತಪತ್ರ ಹೊರಡಿಸಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಕೇಂದ್ರ, ರಾಜ್ಯ ಸರ್ಕಾರ ಯಾವುದೇ ಪೂರ್ವಸಿದ್ಧತೆ, ಮುನ್ನೆಚ್ಚರಿಕ ಕ್ರಮ ಇಲ್ಲದೆ ಏಕಾಏಕಿ ಲಾಕ್‌ಡೌನ್‌ ಮಾಡಿರುವ ಪರಿಣಾಮ 8 ಕೋಟಿಯಷ್ಟು ನಿರ್ಮಾಣ ವಲಯ ಕಾರ್ಮಿಕರು ಒಳಗೊಂಡಂತೆ 15 ಕೋಟಿ ಅಂದರೆ ಯುರೋಪಿನ ಕೆಲ ದೇಶಗಳ ಜನಸಂಖ್ಯೆಯಷ್ಟು ಜನರು ನಿರುದ್ಯೋಗಿಗಳಾಗಿದ್ದಾರೆ. ಕರ್ನಾಟಕದ ಮೂವರು ಸೇರಿದಂತೆ 627 ಜನರ ವಲಸೆ ಕಾರ್ಮಿಕರು ಮೃತಪಟ್ಟಿದ್ದಾರೆ. ಕೇಂದ್ರ, ರಾಜ್ಯ ಸರ್ಕಾರ ತೊಂದರೆಯಲ್ಲಿರುವ ಕಾರ್ಮಿಕರಿಗೆ ಪರಿಹಾರ ಮಾತ್ರವಲ್ಲ ಪರ್ಯಾಯ ಉದ್ಯೋಗವಕಾಶವನ್ನೂ ಮಾಡಿಲ್ಲ ಎಂದು ದೂರಿದರು.

ಕೋವಿಡ್‌-19 ಪರಿಹಾರ ಎಂದು 20 ಲಕ್ಷ ಕೋಟಿ ಪ್ಯಾಕೇಜ್‌ ಘೋಷಣೆ ಎನ್ನುವುದು ದೇಶಕ್ಕೆ ಮಾಡಿರುವ ಮಹಾಮೋಸ. ಜನರ, ಕಾರ್ಮಿಕರ ಹಣವನ್ನೇ ಅವರಿಗೆ ನೀಡಲಾಗುತ್ತಿದೆ. ಈಗಲಾದರೂ ಕೇಂದ್ರ, ರಾಜ್ಯ ಸರ್ಕಾರ ತಮ್ಮ ಸ್ವಂತ ಅನುದಾನವನ್ನು ಕೋವಿಡ್ ನಿಯಂತ್ರಣ, ಚಿಕಿತ್ಸೆಗೆ ನೀಡಬೇಕು ಎಂದರು.

ಕೋವಿಡ್ ನಿಯಂತ್ರಣ, ಚಿಕಿತ್ಸೆಗೆ ಅಮೆರಿಕಾ ಜಿಡಿಪಿಯಲ್ಲಿ ಶೇ.14, ಜಪಾನ್‌ ಶೇ.21, ಜರ್ಮನಿ ಶೇ. 10, ಫ್ರಾನ್ಸ್‌ ಶೇ.11 ಮೀಸಲಿಟ್ಟಿವೆ. ಜಿಡಿಪಿಯ ಶೇ.10 ರಷ್ಟು ಭಾಗವನ್ನು ಕೊರೊನಾ ನಿಯಂತ್ರಣ, ಚಿಕಿತ್ಸೆಗೆ ಮೀಸಲಿಡಲಾಗಿದೆ ಎನ್ನುವ ಕೇಂದ್ರದ ಸರ್ಕಾರದ ಮಾತು ಬರೀ ಸುಳ್ಳು. ಶೇ.1ಕ್ಕಿಂತಲೂ ಕಡಿಮೆ ಹಣ ಖರ್ಚು ಮಾಡಲಾಗುತ್ತಿದೆ. ರಾಜ್ಯ ಸರ್ಕಾರವೂ ಸಹ ಕೋವಿಡ್ ನಿಯಂತ್ರಣ, ಚಿಕಿತ್ಸೆಗೆ ಹಣ ಬಿಡುಗಡೆ ಮಾಡಿಯೇ ಇಲ್ಲ. ಸಂಘಟಿತ ಮತ್ತು ಅಸಂಘಟಿತ ವಲಯದ ಕಾರ್ಮಿಕರಿಗೆ ಕೋವಿಡ್‌-19 ಪರಿಹಾರಕ್ಕೆ ಒತ್ತಾಯಿಸಿ ಜು. 3 ರಂದು ಜೆಸಿಟಿಯು ನೇತೃತ್ವದಲ್ಲಿ ರಾಜ್ಯದ್ಯಾಂತ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.

ಸಿಐಟಿಯುನ ಕೆ.ಎಚ್‌. ಆನಂದರಾಜ್‌, ಶ್ರೀನಿವಾಸಮೂರ್ತಿ, ಹೊನ್ನೂರು ತಿಮ್ಮಣ್ಣ, ಎ. ಗುಡ್ಡಪ್ಪ, ಎ.ಎಂ. ರುದ್ರಸ್ವಾಮಿ, ಹನುಮಂತ ನಾಯ್ಕ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

ಟಾಪ್ ನ್ಯೂಸ್

congress

ವೀಕೆಂಡ್ ಕರ್ಫ್ಯೂ ವಾಪಸ್ : ಟ್ವೀಟ್ ಮೂಲಕ ಕಾಂಗ್ರೆಸ್ ಆಕ್ರೋಶ

nirani

ಹೌದು,ನಾನು ಸೂಟ್ ಹೊಲಿಸಿಕೊಂಡಿದ್ದೇನೆ:ಯತ್ನಾಳ್ ಗೆ ನಿರಾಣಿ ತಿರುಗೇಟು

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 427 ಅಂಕ ಇಳಿಕೆ; ನಿಫ್ಟಿ 17,600 ಅಂಕಗಳ ಮಟ್ಟಕ್ಕೆ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 427 ಅಂಕ ಇಳಿಕೆ; ನಿಫ್ಟಿ 17,600 ಅಂಕಗಳ ಮಟ್ಟಕ್ಕೆ

virat kohli

ಶೂನ್ಯಕ್ಕೆ ಔಟಾಗಿ ಮತ್ತೊಂದು ದಾಖಲೆ ಪಟ್ಟಿಗೆ ಸೇರಿದ ವಿರಾಟ್ ಕೊಹ್ಲಿ

yatnal

ನಮಗೆ ದಿಲ್ಲಿಗೆ ಹೋಗುವ ಚಟ ಇದೆ;ಯುಗಾದಿ ಹೊತ್ತಿಗೆ ಬದಲಾವಣೆ: ಯತ್ನಾಳ್

ಕೋವಿಡ್ 19: ಶಾಲೆಗಳಿಗೆ ನಿಯಮ ಪ್ರಕಟಿಸಿದ ರಾಜ್ಯ ಸರ್ಕಾರ

ಕೋವಿಡ್ 19: ಶಾಲೆಗಳಿಗೆ ನಿಯಮ ಪ್ರಕಟಿಸಿದ ರಾಜ್ಯ ಸರ್ಕಾರ

ನಿಮಗೆ ಬೇರೆ ಮುಖ ಕಾಣಿಸುತ್ತಿದೆಯೇ..ಉತ್ತರಪ್ರದೇಶದಲ್ಲಿ ನಾನೇ ಸಿಎಂ ಅಭ್ಯರ್ಥಿ: ಪ್ರಿಯಾಂಕಾ

ನಿಮಗೆ ಬೇರೆ ಮುಖ ಕಾಣಿಸುತ್ತಿದೆಯೇ..ಉತ್ತರಪ್ರದೇಶದಲ್ಲಿ ನಾನೇ ಸಿಎಂ ಅಭ್ಯರ್ಥಿ: ಪ್ರಿಯಾಂಕಾಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

davanagere news

ಜಯದೇವ ಆಸ್ಪತ್ರೆ ಸ್ಥಾಪನೆ ಪ್ರಕ್ರಿಯೆ ಶುರು

davanagere news

ವಸತಿ ಸೌಲಭ್ಯ: ಮರು ಭೂಸ್ವಾಧೀನ ಪ್ರಸ್ತಾವನೆ ಸಲ್ಲಿಸಿ

davanagere news

ವೇಮನ ಜಯಂತಿ ಸರಳ ಆಚರಣೆ

honnali news

ಗ್ರಾಮೀಣ ಪ್ರದೇಶದ ಪ್ರತಿ ಮನೆಗೆ ನಲ್ಲಿಸಂಪರ್ಕ: ರೇಣು

davanagere news

979 ಸೋಂಕಿತರಿಗೆ ಹೋಂ ಐಸೋಲೇಷನ್‌

MUST WATCH

udayavani youtube

ತ್ಯಾಜ್ಯದಿಂದ ಗೊಬ್ಬರ ಹಲವು ಲಾಭ

udayavani youtube

ವಿದ್ಯುತ್ ದರ ಏರಿಕೆ ಅನಿವಾರ್ಯ: ಇಂಧನ ಸಚಿವ ಸುನಿಲ್ ಕುಮಾರ್

udayavani youtube

ಸಿಮೆಂಟ್ ರಿಂಗ್ ಬಳಸಿ ಯಶಸ್ವಿ ದಾಳಿಂಬೆ ಕೃಷಿ

udayavani youtube

‘ಅಮರ್ ಜವಾನ್ ಜ್ಯೋತಿ’ ರಾಷ್ಟ್ರೀಯ ಯುದ್ಧ ಸ್ಮಾರಕ ಜ್ವಾಲೆಯೊಂದಿಗೆ ವಿಲೀನಗೊಳ್ಳಲಿದೆ|

udayavani youtube

ನಿಯಮ ಉಲ್ಲಂಘಿಸಿದ ಬಿಜೆಪಿ ವಿರುದ್ಧವೂ ಪ್ರಕರಣ ದಾಖಲಾಗಬೇಕು: ಡಿಕೆಶಿ ಎಚ್ಚರಿಕೆ

ಹೊಸ ಸೇರ್ಪಡೆ

ದ್ವೇಷ-ಅಸೂಯೆಯಿಂದ ಸಾಧನೆ ಅಸಾಧ್ಯ

ದ್ವೇಷ-ಅಸೂಯೆಯಿಂದ ಸಾಧನೆ ಅಸಾಧ್ಯ

ಪಾಠ-ಪಠ್ಯಕ್ರಮದೊಂದಿಗೆ ಸಂಶೋಧನೆಗೂ ಮಹತ್ವ ನೀಡಿ

ಪಾಠ-ಪಠ್ಯಕ್ರಮದೊಂದಿಗೆ ಸಂಶೋಧನೆಗೂ ಮಹತ್ವ ನೀಡಿ

ವೈದ್ಯರು-ಶುಶ್ರೂಷಾ ಸಿಬ್ಬಂದಿಗೆ ಐಸಿಯು ತರಬೇತಿ

ವೈದ್ಯರು-ಶುಶ್ರೂಷಾ ಸಿಬ್ಬಂದಿಗೆ ಐಸಿಯು ತರಬೇತಿ

1-ddsad

ಉಡುಪಿ:ಹಿಜಾಬ್ ವಿವಾದ; ಪ್ರಾಂಶುಪಾಲರ ವಿರುದ್ದ ಕಾನೂನು ಹೋರಾಟದ ಎಚ್ಚರಿಕೆ

ಗುಳೇದಗುಡ್ಡ ಖಣಕ್ಕೆ ಬೇಕು ಮಾರುಕಟ್ಟೆ ಸೌಲಭ್ಯ

ಗುಳೇದಗುಡ್ಡ ಖಣಕ್ಕೆ ಬೇಕು ಮಾರುಕಟ್ಟೆ ಸೌಲಭ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.