ಕೊರೊನಾ ಸೋಂಕು ನಿವಾರಕ ಚೇಂಬರ್‌ ಸಿದ್ಧ

ಬೆಳಗಾವಿಯಲ್ಲಿ ತಯಾರಾಗುತ್ತಿವೆ ನೂರಾರು ಚೇಂಬರ್‌ಗಳುವಿವಿಧ ರಾಜ್ಯಗಳಿಂದಲೂ ಬಂದಿದೆ ಬೇಡಿಕೆ

Team Udayavani, Apr 8, 2020, 7:02 PM IST

08-April-17

ಬೆಳಗಾವಿ: ಯಶವಂತ ಕಾಸ್ಟಿಂಗ್‌ ಕಂಪನಿ ಸಿದ್ಧಪಡಿಸಿರುವ ಸೋಂಕು ನಿವಾರಕ ದ್ರಾವಣ ಸಿಂಪಡಿಸುವ ಚೇಂಬರ್‌.

ಬೆಳಗಾವಿ: ಕೊರೊನಾ ಸೋಂಕಿನಿಂದ ತಪ್ಪಿಸಿಕೊಳ್ಳಲು ಇಡೀ ದೇಹವನ್ನೇ ಸ್ಯಾನಿಟೈಸರ್‌ದಿಂದ ಸ್ವತ್ಛಗೊಳಿಸುವ ಸೋಂಕು ನಿವಾರಕ ಚೇಂಬರ್‌ ಬೆಳಗಾವಿಯಲ್ಲಿ ಸಿದ್ಧಗೊಳ್ಳುತ್ತಿದ್ದು, ದೇಶದ ವಿವಿಧ ಭಾಗಗಳಿಂದ ಇದಕ್ಕೆ ಬೇಡಿಕೆ ಬರುತ್ತಿದೆ. ಬೆಳಗಾವಿಯ ಯಶವಂತ ಕಾಸ್ಟಿಂಗ್‌ ಕಂಪನಿಯವರು ಈ ಸೋಂಕು ನಿವಾರಕ ಚೇಂಬರ್‌ ತಯಾರಿಸಿದ್ದು, ಈ ಚೇಂಬರ್‌ ಒಳಗೆ ಪ್ರವೇಶೀಸಿದರೆ ಮೈತುಂಬಾ ಹಾಗೂ ಬಟ್ಟೆಗಳ ಮೇಲೆ ಸ್ಯಾನಿಟೈಸರ್‌ ಸಿಂಪಡಣೆ ಆಗುತ್ತದೆ.

ದೇಶಾದ್ಯಂತ ಲಾಕ್‌ಡೌನ್‌ ಇದ್ದರೂ ಆಸ್ಪತ್ರೆಗಳು, ಪೊಲೀಸ್‌ ಠಾಣೆಗಳು ಸೇರಿದಂತೆ ಮಹತ್ವದ ಕಚೇರಿಗಳು ತೆರೆದಿವೆ. ಇಂಥ ಸ್ಥಳಗಳಿಗೆ ಹೋಗಬೇಕಾದರೆ ಆರೋಗ್ಯದ ಅಭದ್ರತೆ ಕಾಡುವುದು ಸಹಜ. ಹೀಗಾಗಿ ಹೊರ ಭಾಗದಲ್ಲಿ ಪ್ರವೇಶ ಮತ್ತು ನಿರ್ಗಮನದಲ್ಲಿ ಈ ಚೇಂಬರ್‌ ಅಳವಡಿಸಿದರೆ ಸ್ಯಾನಿಟೈಸರ್‌ ವ್ಯಕ್ತಿಗೆ ಸಿಂಪಡಣೆ ಆಗುತ್ತದೆ.

ನಿರ್ವಹಣೆ ಹೇಗೆ?: 4 ಅಡಿ ಅಗಲ, 8 ಅಡಿ ಉದ್ದ, 10 ಅಡಿ ಎತ್ತರವಾದ ಈ ಸೋಂಕು ನಿವಾರಕ ಚೇಂಬರ್‌ ಒಳ ಪ್ರವೇಶಿಸುವ ಮುನ್ನ ಸ್ಯಾನಿಟೈಸರ್‌ನಿಂದ ಕೈ ತೊಳೆದುಕೊಳ್ಳಬೇಕು. ನಂತರ ಒಳ ಪ್ರವೇಶಿಸಿದರೆ ಸ್ವಯಂಚಾಲಿತವಾಗಿ ಸೆನ್ಸರ್‌ ಮೂಲಕ ವಿದ್ಯುತ್‌ ಚಾಲಿತ ಸೋಂಕು ನಿವಾರಕ ದ್ರಾವಣ ಸಿಂಪಡಣೆ ಆರಂಭಗೊಳ್ಳುತ್ತದೆ. ಒಳಗಡೆ ಕೇವಲ 10 ಸೆಕೆಂಡ್‌ ನಿಂತರೆ ಮೈತುಂಬಾ ಸ್ಯಾನಿಟೈಸರ್‌ ಬೀಳುತ್ತದೆ. ಅಲ್ಲಿಂದ ನಿರ್ಗಮನವಾದರೆ ಸೆನ್ಸರ್‌ ಬಂದ್‌ ಆಗುತ್ತದೆ.

ಹೆಚ್ಚಿದ ಬೇಡಿಕೆ: ಈ ಚೇಂಬರ್‌ಗೆ ಮುಂಬೈ, ಪುಣೆ, ಕೊಲ್ಲಾಪುರ, ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ, ಧಾರವಾಡ, ದಾವಣಗೆರೆ ಸೇರಿದಂತೆ ಅನೇಕ ಕಡೆಗಳಿಂದ ಬೇಡಿಕೆ ಬರುತ್ತಿದೆ. ಸದ್ಯ 120ಕ್ಕೂ ಹೆಚ್ಚು ಚೆಂಬರ್‌ಗಳ ಬೇಡಿಕೆ ಬಂದಿದೆ. ರಾಜ್ಯ ಸರ್ಕಾರವೇ 100ಕ್ಕೂ ಹೆಚ್ಚು ಚೇಂಬರ್‌ಗಳನ್ನು ಕೊಡುವಂತೆ ಹೇಳಿದೆ. ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಈ ಚೇಂಬರ್‌ ಅಳವಡಿಸುವ ಸಾಧ್ಯತೆ ಇದೆ.

ಮುಂದಿನ ದಿನಗಳಲ್ಲಿ ಆಸ್ಪತ್ರೆಗಳು, ಪೊಲೀಸ್‌ ಠಾಣೆಗಳು, ಶಾಪಿಂಗ್  ಮಾಲ್‌ಗ‌ಳು, ಚಲನಚಿತ್ರ ಮಂದಿರಗಳು, ಮಲ್ಟಿಪ್ಲೆಕ್ಸ್‌ಗಳು, ಅಪಾರ್ಟ್‌ಮೆಂಟ್‌ಗಳು, ಹೌಸಿಂಗ್‌ ಕಾಲೋನಿಗಳು, ಸರ್ಕಾರಿ ಕಚೇರಿಗಳಲ್ಲಿ ಈ ಚೇಂಬರ್‌ಗಳಿಗೆ ಬೇಡಿಕೆ ಹೆಚ್ಚಾಗಲಿದೆ. ಹೀಗಾಗಿ ಇದರ ಉತ್ಪಾದನೆಯನ್ನೂ ಹೆಚ್ಚಿನ ಪ್ರಮಾಣದಲ್ಲಿ ಮಾಡಲಾಗುವುದು ಎನ್ನುತ್ತಾರೆ ಕಂಪನಿ ಮಾಲೀಕ ಧೀರೆನ್‌ ಉಪಾಧ್ಯೆ. ಇದಕ್ಕೆ ಪಾಲಿಕಾಬೋìನೇಟೆಡ್‌ ಸೀಟ್‌ಗಳನ್ನು ಬಳಸಲಾಗುತ್ತದೆ. ಬೇರೆ ಸೀಟ್‌ಗಳನ್ನು ಬಳಸಿದರೆ ಸ್ಯಾನಿಟಸರ್‌ ಕೂಡಲೇ ಕರಗಿ ಹೋಗುತ್ತದೆ. ಒಂದು ಚೇಂಬರ್‌ ತಯಾರಿಸಲು 4-5 ಜನ ಬೇಕಾಗುತ್ತಾರೆ. ದಿನಾಲು 6-7 ಚೇಂಬರ್‌ಗಳು ತಯಾರಾಗುತ್ತಿವೆ. ಬೆಳಗಾವಿ ಜಿಲ್ಲಾಡಳಿತ 15 ಚೇಂಬರ್‌ ಗಳಿಗಾಗಿ ಆರ್ಡರ್‌ ಮಾಡಿದೆಂದು ಮಾಹಿತಿ ನೀಡಿದರು. ಶಾಸಕ ಅಭಯ ಪಾಟೀಲ, ಡಿಸಿ ಡಾ| ಬೊಮ್ಮನಹಳ್ಳಿ, ಜಿಪಂ ಸಿಇಒ ಡಾ| ರಾಜೇಂದ್ರ ಕೆ.ವಿ. ಚೇಂಬರ್‌ ಮಾದರಿ ವೀಕ್ಷಿಸಿದ್ದಾರೆ.

ಹೆಚ್ಚಿನ ಪ್ರಮಾಣದಲ್ಲಿ ಜನರು ಸೇರುವ ಸ್ಥಳಗಳಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಿಸುವ ಚೇಂಬರ್‌ ಅಭಿವೃದ್ಧಿ ಪಡಿಸಲಾಗಿದೆ. ನಿತ್ಯ ಬೇಡಿಕೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ಮೊದಲು ಆಸ್ಪತ್ರೆಗಳು, ಸಕಾರಿ ಕಚೇರಿಗಳು, ಪೊಲೀಸ್‌ ಠಾಣೆಗಳಿಗೆ ಆದ್ಯತೆ ನೀಡಿ ಪೂರೈಸಲಾಗುವುದು. ಜನದಟ್ಟಣೆ ಹೆಚ್ಚಾಗಿ ಇರುವ ಕಡೆಗಳಲ್ಲಿ ಉಪಯುಕ್ತವಾಗಿದೆ.
ಧೀರೆನ್‌ ಉಪಾಧ್ಯೆ,
ಮಾಲೀಕರು, ಯಶವಂತ ಕಾಸ್ಟಿಂಗ್‌ ಕಂಪನಿ

ಭೈರೋಬಾ ಕಾಂಬಳೆ

ಟಾಪ್ ನ್ಯೂಸ್

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

ಚನ್ನಮ್ಮನ ಕಿತ್ತೂರು: ಮಹಾನ್‌ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ

ಚನ್ನಮ್ಮನ ಕಿತ್ತೂರು: ಮಹಾನ್‌ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.