ಭೀಮಾ ಕೋರೆಗಾಂವ್‌ ಹೋರಾಟ ಸ್ಮರಣೀಯ

Team Udayavani, Jan 3, 2022, 10:41 AM IST

5korengov

ಜೇವರ್ಗಿ: ಪ್ರತಿವರ್ಷ ಜನವರಿ 1 ಜಗತ್ತಿಗೆ ಹೊಸ ವರ್ಷದ ಸಂಭ್ರಮದ ದಿನವಾದರೆ ಭಾರತದ ದಲಿತರ ಪಾಲಿಗೆ ಮಹಾರಾಷ್ಟ್ರದ ಪೇಶ್ವೆಗಳ ವಿರುದ್ಧ ಮಹಾರ್‌ ಸೈನಿಕರು ಕೆಚ್ಚೆದೆಯ ಹೋರಾಟ ನಡೆಸಿ ದಿಗ್ವಿಜಯ ಸಾಧಿಸಿದ ದಿನ ಎಂದು ಕಲಬುರಗಿ ಸಾಹಿತಿ ವಿಠಲ್‌ ವಗ್ಗನ್‌ ಹೇಳಿದರು.

ಪಟ್ಟಣದ ಡಾ| ಬಾಬಾ ಸಾಹೇಬ್‌ ಅಂಬೇಡ್ಕರ್‌ ಪುತ್ಥಳಿ ಬಳಿ ದಲಿತ ಸಮನ್ವಯ ಸಮಿತಿ ವತಿಯಿಂದ ಶನಿವಾರ ಆಯೋಜಿಸಿದ್ದ 204ನೇ ಭೀಮಾ ಕೋರೇಗಾಂವ್‌ ವಿಜಯೋತ್ಸವ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ಬಾಬಾ ಸಾಹೇಬರ ಬದುಕಿನ ಪ್ರೇರಣೆಗಳಲ್ಲಿ ಭೀಮಾ ಕೋರೆಗಾಂವ್‌ ಹೋರಾಟವೂ ಒಂದಾಗಿದೆ. 1817 ಡಿಸೆಂಬರ್‌ 31ನೇ ತಾರೀಖು ರಾತ್ರಿ ಪೂಣಾ ಬಳಿಯ ಸಿರೂರುನಿಂದ ಮಹಾರ್‌ ಸೈನಿಕರು ಹೊರಡುತ್ತಾರೆ. ಇಡೀ ರಾತ್ರಿ ಸತತವಾಗಿ 27 ಕಿಲೋಮೀಟರ್‌ ನಡೆದು ಮಾರನೇ ದಿನ ಅಂದರೆ 1818 ಜನವರಿ 01ರಂದು ಪೂಣಾ ನಗರದಿಂದ 15ಕಿ. ಮೀ ದೂರದಲ್ಲಿರುವ ಭೀಮಾ ನದಿ ತೀರದಲ್ಲಿರುವ ಕೋರೇಗಾಂವ್‌ ಎನ್ನುವ ಸ್ಥಳವನ್ನು ಸಿದ್ಧನಾಯಕನ ಪಡೆ ತಲುಪುತ್ತದೆ.

ಇಡೀ ರಾತ್ರಿ ನಿದ್ದೆಯಿಲ್ಲದೇ 27 ಕಿ.ಮೀ ದೂರ ನಡೆದುಕೊಂಡು ಬಂದಿದ್ದ ಮಹಾರ್‌ ಪಡೆ ನಿದ್ದೆ, ಅನ್ನ, ನೀರು ಯಾವುದನ್ನು ಬಯಸದೇ ಬೆಳಗ್ಗೆ 9 ಗಂಟೆಗೆ ಪೇಶ್ವೆ ಸೈನಿಕರ ಮೇಲೆ ಎರಗುತ್ತದೆ. 20 ಸಾವಿರ ಅಶ್ವದಳ, ಎಂಟು ಸಾವಿರ ಕಾಲ್ದಳ ಸೇರಿ ಒಟ್ಟು 28 ಸಾವಿರ ಪೇಶ್ವೆ ಸೈನಿಕರು ಮೂರು ದಿಕ್ಕಿನಿಂದ ಮಹಾರ್‌ ಯೋಧರಿಗೆ ಎದುರಾಗುತ್ತಾರೆ. ಸತತವಾಗಿ 12 ಗಂಟೆ ಕಾಲ ನಡೆದ ಘೋರ ಯುದ್ಧದಲ್ಲಿ ಪೇಶ್ವೆ ಸೈನ್ಯ ಧೂಳಿಪಟವಾಗುತ್ತದೆ. ಸಾವಿರಾರು ಸೈನಿಕರು ಯುದ್ಧ ಭೂಮಿಯಲ್ಲಿ ಕೊನೆಯುಸಿರು ಎಳೆಯುತ್ತಾರೆ. ಕೊನೆಗೆ ಮಹಾರ್‌ ಸೈನಿಕರು ವಿಜಯಶಾಲಿಗಳಾಗುತ್ತಾರೆ ಎಂದು ಇತಿಹಾಸದ ಪುಟಗಳನ್ನು ತೆರೆದಿಟ್ಟರು.

ಸೊನ್ನ ಎಸ್‌.ಜಿ.ಎಸ್‌.ವಿ ಪ.ಪೂ ಕಾಲೇಜಿನ ಉಪನ್ಯಾಸಕ ನಿಜಲಿಂಗ ದೊಡ್ಮನಿ ಮಾತನಾಡಿ, ಜ. 1ರಂದು ಶೋಷಿತರ ಆತ್ಮಗೌರವ ತಲೆ ಎತ್ತಿದ ದಿನವೆಂದೇ ಖ್ಯಾತಿ ಪಡೆದಿದೆ ಎಂದು ಹೇಳಿದರು.

ಜಿಪಂ ಮಾಜಿ ಸದಸ್ಯರಾದ ಚಂದ್ರಶೇಖರ ಹರನಾಳ, ಮರೆಪ್ಪ ಬಡಿಗೇರ, ಶಾಂತಪ್ಪ ಕೂಡಲಗಿ, ಮುಖಂಡರಾದ ವರಜ್ಯೋತಿ ಬಂತೇಜಿ ಅಣದೂರ, ಭೀಮರಾಯ ನಗನೂರ, ಮಲ್ಲಣ್ಣ ಕೊಡಚಿ, ಶಾಂತಪ್ಪ ಯಲಗೊಡ, ಪ್ರಭಾಕರ ಸಾಗರ, ಸಿದ್ರಾಮ ಕಟ್ಟಿ, ಪುಂಡಲಿಕ್‌ ಗಾಯಕ್ವಾಡ, ದೌಲಪ್ಪ ಮದನ್‌, ಶ್ರೀಹರಿ ಕರಕಿಹಳ್ಳಿ, ಮಲ್ಲಿಕಾರ್ಜುನ ಕಟ್ಟಿ, ಮಲ್ಲಿಕಾರ್ಜುನ ಬಿಲ್ಲಾಡ, ಮಹೇಶ ಕೋಕಿಲೆ, ಸುಬಾಷ ಆಲೂರ, ಜಗದೇವಿ ಜಟ್ನಾಕರ, ಶಿವಶರಣ ಮಾರಡಗಿ, ಗುರಣ್ಣ ಐನಾಪುರ, ಬಸವರಾಜ ಹೆಗಡೆ, ಭಾಗಣ್ಣ ಸಿದ್ನಾಳ, ರಾಜಶೇಖರ ಶಿಲ್ಪಿ, ಸಂಗು ಕಟ್ಟಿಸಂಗಾವಿ, ಸಂಗು ಹರನೂರ, ಭಾಗಣ್ಣ ರದ್ದೇವಾಡಗಿ, ಬಾಗಣ್ಣ ಕೋಳಕೂರ, ರಾಜು ಹಾಲಗಡ್ಲಾ, ಶಿವು ಹೆಗಡೆ, ಭಾಗಪ್ಪ ಸೊನ್ನ, ಸುರೇಶ ಕಡಿ ಇದ್ದರು. ಪ್ರಭಾಕರ ಸಾಗರ ಪ್ರಾಸ್ತಾವಿಕ ಮಾತನಾಡಿದರು, ಮಹೇಶ ಕೋಕಿಲೆ ಸ್ವಾಗತಿಸಿದರು, ಶರಣಪ್ಪ ಬಡಿಗೇರ ನಿರೂಪಿಸಿದರು, ರವಿ ಕುರಳಗೇರಾ ವಂದಿಸಿದರು.

ಟಾಪ್ ನ್ಯೂಸ್

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

varun gandhi

BJP; ರಾಯ್‌ಬರೇಲಿಯಲ್ಲಿ ಸ್ಪರ್ಧಿಸಲು ವರುಣ್‌ ಗಾಂಧಿ ನಕಾರ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

1-ewewqewq

Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.