ಎಪಿಎಂಸಿಯಲ್ಲಿ ಜಾನುವಾರು ಸಂತೆ

ಎಪಿಎಂಸಿ ಪ್ರಾರಂಭಕ್ಕೆ ಮಾಜಿ ಸಚಿವ ದಿ| ವೈಜನಾಥ ಪಾಟೀಲ ಕೊಡುಗೆ ಅಪಾರವಾಗಿದೆ

Team Udayavani, Aug 26, 2021, 6:27 PM IST

ಎಪಿಎಂಸಿಯಲ್ಲಿ ಜಾನುವಾರು ಸಂತೆ

ಚಿಂಚೋಳಿ: ತಾಲೂಕಿನ ರೈತರ ಜೀವನಾಡಿ ಬೃಹತ್‌ ಮಧ್ಯಮ ಕೆಳದಂಡೆ ಮುಲ್ಲಾಮಾರಿ ನೀರಾವರಿ ಯೋಜನೆ ಪ್ರಾರಂಭವಾಗಿ ಅನೇಕ ವರ್ಷಗಳು ಕಳೆದರೂ ಹೊಲಗಳಿಗೆ ಸಮರ್ಪಕವಾಗಿ ನೀರು ತಲುಪುತ್ತಿಲ್ಲ ಎಂದು ಶಾಸಕ ಡಾ| ಅವಿನಾಶ ಜಾಧವ ಅಸಮಾಧಾನ ವ್ಯಕ್ತಪಡಿಸಿದರು.

ಪಟ್ಟಣದ ಎಪಿಎಂಸಿ ಪ್ರಾಂಗಣದಲ್ಲಿ ಬುಧವಾರ ಜಾನುವಾರುಗಳ ಸಂತೆ ಉದ್ಘಾಟಿಸಿ ಮಾತನಾಡಿದ ಅವರು, ಕೆಳದಂಡೆ ಮುಲ್ಲಾಮಾರಿ, ಚಂದ್ರಂಪಳ್ಳಿ ನೀರಾವರಿ ಯೋಜನೆ, ಸಣ್ಣ ನೀರಾವರಿ ಕೆರೆಗಳು ಮಾಜಿ ಮುಖ್ಯಮಂತ್ರಿ ದಿ| ವೀರೇಂದ್ರ ಪಾಟೀಲ 1991-92 ನಿರ್ಮಿಸಿಕೊಟ್ಟಿದ್ದಾರೆ. ಆದರೂ ಹೊಲಗಳಿಗೆ ನೀರು ತಲುಪುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಹಿಂದುಳಿದ ತಾಲೂಕಿನಲ್ಲಿ ರೈತರು ಬೆಳೆದ ಆಹಾರ ಧಾನ್ಯಗಳನ್ನು ಮಾರಾಟ ಮಾಡಿಕೊಳ್ಳಲು ಮಾಜಿ ಸಚಿವ ದಿ| ವೈಜನಾಥ ಪಾಟೀಲ ನಡೆಸಿದ ಹೋರಾಟದ ಪ್ರತಿಫಲವಾಗಿ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾರಂಭ ಆಗಿದೆ. ರೈತರ ದುಡಿಮೆಯಿಂದಲೇ ನಾವೆಲ್ಲರೂ ಅನ್ನ ತಿನ್ನುತ್ತಿದ್ದೇವೆ ಎನ್ನುವುದನ್ನು ಯಾರೂ ಮರೆಯುವಂತಿಲ್ಲ ಎಂದರು.

ಚಿಂಚೋಳಿ-ಕಾಳಗಿ ತಾಲೂಕಿನಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಕಚೇರಿ ಕಟ್ಟಡಕ್ಕಾಗಿ ವಿಶೇಷ ಅನುದಾನ ನೀಡುವಂತೆ ಸಚಿವ ಎಸ್‌.ಟಿ. ಸೋಮಶೇಖರ, ಕೃಷಿ ಸಚಿವ ಬಿ.ಸಿ. ಪಾಟೀಲ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು. ಚಿಂಚೋಳಿ ಸಕ್ಕರೆ ಕಾರ್ಖಾನೆ 55 ಕೋಟಿ ರೂ.ಗಳಿಂದ 37 ಕೋಟಿ ರೂ. ವರೆಗೆ ಬಿಡ್ಡಿಂಗ್‌ ಆಗಿದೆ. ಇದನ್ನು ಪ್ರಾರಂಭಿಸುವ ಕುರಿತು ಎಲ್ಲ ಪ್ರಯತ್ನ ನಡೆಯುತ್ತಿವೆ. ಐನಾಪುರ ಏತನೀರಾವರಿ ಯೋಜನೆ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ರೈತ ಮುಖಂಡ ಬಾಬುರಾವ್‌ ಪಾಟೀಲ ಮಾತನಾಡಿ, ಎಪಿಎಂಸಿಗೆ ಮೂಲ ಸೌಕರ್ಯಗಳನ್ನು ನೀಡುವುದು ಅಗತ್ಯವಾಗಿದೆ. ದನಗಳ ಸಂತೆಯಿಂದ ಪ್ರತ್ಯೇಕವಾಗಿ ಉದ್ಯೋಗ ಸೃಷ್ಟಿ ಆಗುವುದರಿಂದ ಜನರಿಗೆ ಉದ್ಯೋಗ ಸಿಗುತ್ತವೆ. ಪಂಜಾಬ್‌ ರಾಜ್ಯ ದೇಶದಲ್ಲಿಯೇ ಆಹಾರ ಉತ್ಪಾದನೆ ಮತ್ತು ಪ್ರತಿ 10 ಕಿ.ಮೀ ಅಂತರದಲ್ಲಿ ಎಪಿಎಂಸಿ ಮತ್ತು ಬ್ಯಾಂಕ್‌ ಪ್ರಾರಂಭಿಸಿರುವುದರಿಂದ ರೈತರಿಗೆ ಅನುಕೂಲವಿದೆ ಎಂದು ಹೇಳಿದರು.

ಭಾಕ್ರಾನಂಗಲ್‌ ನೀರಾವರಿ ಯೋಜನೆಯಿಂದ ಅಲ್ಲಿನ ರೈತರು ಹೈನುಗಾರಿಕೆಯಲ್ಲಿ ಹೆಚ್ಚಿನ ಅಭಿವೃದ್ಧಿ ಕಾಣುತ್ತಿದ್ದಾರೆ. ಹಿಂದುಳಿದ ಪ್ರದೇಶದ ರೈತರಿಗೆ ಮೂಲ ಸೌಕರ್ಯ, ಮಾರ್ಗದರ್ಶನ, ಶಿಕ್ಷಣ, ಕೈಗಾರಿಕೆ ಸ್ಥಾಪಿಸಲು ಅವಕಾಶ ಸಿಕ್ಕಿಲ್ಲ. ಆದ್ದರಿಂದ ಇಲ್ಲಿನ ರೈತರು ನೀರು ಬಳಕೆ ಮಾಡಿಕೊಳ್ಳಲು ಆಗುತ್ತಿಲ್ಲ. ಅಲ್ಲದೇ ರೈತರಿಗೆ ಸಮರ್ಪಕ ಸಾಲ-ಸೌಲಭ್ಯ ಸಿಗುತ್ತಿಲ್ಲ ಎಂದರು. ಹಿರಿಯ ಧುರೀಣ ರಮೇಶ ಯಾಕಾಪುರ ಮಾತನಾಡಿ, ತಾಲೂಕಿನಲ್ಲಿ ಅಭಿವೃದ್ಧಿ ಕಾರ್ಯ ಸಾಧನೆ ಮಾಡಿದವರನ್ನು ನಾವೆಲ್ಲರೂ ನೆನಪಿಸಿಕೊಳ್ಳಬೇಕು.

ಎಪಿಎಂಸಿ ಪ್ರಾರಂಭಕ್ಕೆ ಮಾಜಿ ಸಚಿವ ದಿ| ವೈಜನಾಥ ಪಾಟೀಲ ಕೊಡುಗೆ ಅಪಾರವಾಗಿದೆ. ಎಪಿಎಂಸಿ ಕಚೇರಿ ಕಟ್ಟಡಕ್ಕಾಗಿ 3ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು. ಕಲಬುರಗಿ ಎಪಿಎಂಸಿ ವಿಭಾಗೀಯ ವ್ಯವಸ್ಥಾಪಕ ಚಂದ್ರಕಾಂತ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ರೈತ ಮುಖಂಡ ರಮೇಶ ಧುತ್ತರಗಿ, ಗುಂಡಪ್ಪ ಸರಡಗಿ ಮಾತನಾಡಿದರು.

ಎಪಿಎಂಸಿ ಅಧ್ಯಕ್ಷ ಅಶೋಕ ಪಡಶೆಟ್ಟಿ, ಪುರಸಭೆ ಅಧ್ಯಕ್ಷೆ ಜಗದೇವಿ ಗಡಂತಿ, ಉಪಾಧ್ಯಕ್ಷ ಶಬ್ಬೀರ ಅಹೆಮದ್‌, ನಿರ್ದೇಶಕರಾದ ಅಜೀತ್‌ ಪಾಟೀಲ, ರೇವಣಸಿದ್ಧಪ್ಪ ಪೂಜಾರಿ, ಚಂದ್ರಶೇಖರ ಕಂಬದ, ಚಂದ್ರು ಚೆಂಗು, ರಮೇಶ ಪಡಶೆಟ್ಟಿ, ಗೌರಿಶಂಕರ ಉಪ್ಪಿನ, ಸಂತೋಷ ಗಡಂತಿ, ಕಾರ್ಯದರ್ಶಿ ಉನ್ನಿಮಣಿ, ಪ್ರೇಮಸಿಂಗ್‌ ಜಾಧವ, ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ಜಗದೀಶಸಿಂಗ್‌ ಠಾಕೂರ, ಅಶೋಕ ಚವ್ಹಾಣ, ರಾಜು ಪವಾರ, ಭೀಮಶೆಟ್ಟಿ ಮುರುಡಾ, ಭೀಮಶೆಟ್ಟಿ ಜಾಬಶೆಟ್ಟಿ ಇನ್ನಿತರರು ಭಾಗವಹಿಸಿದ್ದರು. ಉಪಾಧ್ಯಕ್ಷ ಅಣ್ಣಾರಾವ್‌ ಪೆದ್ದಿ ಸ್ವಾಗತಿಸಿದರು, ಚಂದ್ರಶೇಖರಯ್ಯ ಕಂಬದ ವಂದಿಸಿದರು.

ಟಾಪ್ ನ್ಯೂಸ್

Untitled-2

ಪಾದಯಾತ್ರೆಯಿಂದ ಆರಂಭವಾಯಿತು ಲಕ್ಷದೀಪೋತ್ಸವ

say no to lockdown

ಒಮಿಕ್ರಾನ್: “ಬಲಿಷ್ಠರಾಗಿದ್ದೇವೆ, ಲಾಕ್ ಡೌನ್ ಬೇಡ” ಎನ್ನುತ್ತಿರುವ ನೆಟ್ಟಿಗರು

ಈಶ್ವರಪ್ಪ

ಹೈಕಮಾಂಡ್ ನಿಂದ ಸಚಿವರ ರಹಸ್ಯ ವರದಿ ವಿಚಾರ ನನಗೆ ಗೊತ್ತಿಲ್ಲ: ಈಶ್ವರಪ್ಪ

ಕುತೂಹಲ ಮೂಡಿಸಿದ ಪ್ರಧಾನಿ ಮೋದಿ-ದೇವೇಗೌಡರ ಭೇಟಿ

ಕುತೂಹಲ ಮೂಡಿಸಿದ ಪ್ರಧಾನಿ ಮೋದಿ-ದೇವೇಗೌಡರ ಭೇಟಿ

corona-positive

ತುಮಕೂರಿನಲ್ಲಿ ಕೇರಳದಿಂದ ಬಂದ ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ದೃಢ

ಸಚಿವ ಅಶೋಕ್

ಕೋವಿಡ್ ಹೆಚ್ಚಾದರೆ ಹಿಂದೆ ಇದ್ದ ನಿಯಮಗಳೇ ಜಾರಿ: ಸಚಿವ ಅಶೋಕ್

ಭಾರತದಲ್ಲಿ ಈವರೆಗೆ ಒಮಿಕ್ರಾನ್ ವೈರಸ್ ಪತ್ತೆಯಾಗಿಲ್ಲ; ಕೇಂದ್ರ ಸಚಿವ ಮಾಂಡವೀಯಾ

ಭಾರತದಲ್ಲಿ ಈವರೆಗೆ ಒಮಿಕ್ರಾನ್ ವೈರಸ್ ಪತ್ತೆಯಾಗಿಲ್ಲ; ಕೇಂದ್ರ ಸಚಿವ ಮಾಂಡವೀಯಾಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಈಶ್ವರಪ್ಪ

ಹೈಕಮಾಂಡ್ ನಿಂದ ಸಚಿವರ ರಹಸ್ಯ ವರದಿ ವಿಚಾರ ನನಗೆ ಗೊತ್ತಿಲ್ಲ: ಈಶ್ವರಪ್ಪ

11police’

ಅಬಕಾರಿ ದಾಳಿ: 1 ಲಕ್ಷ ಮೌಲ್ಯದ ಮದ್ಯ ಜಪ್ತಿ

10crop

ಬೆಳೆ ಹಾನಿ; ಎಕರೆಗೆ 40 ಸಾವಿರ ನೀಡಲು ರೈತರ ಆಗ್ರಹ

8bankloan

ಸಾಲ ಪಡೆಯಲು ಜನಜಂಗುಳಿ

7devolop

ವಿಜ್ಞಾನ ಬೆಳವಣಿಗೆಗೆ ಕೊಡುಗೆ ನೀಡಿ: ಅಗಸರ

MUST WATCH

udayavani youtube

ಈ ನೀರು ಕುಡಿದ್ರೆ ಕೊರೋನಾ, ಓಮಿಕ್ರಾನ್ ಅಲ್ಲ ಇನ್ನೂ ಅಪಾಯಕಾರಿ ರೋಗ ಬರಬಹುದು

udayavani youtube

‘Car’bar with Merwyn Shirva | Episode 1

udayavani youtube

ಭಾರತ – ನ್ಯೂಜಿಲ್ಯಾಂಡ್ ಟೆಸ್ಟ್ ಪಂದ್ಯ ಡ್ರಾ : ಜಯದ ಸನಿಹದಲ್ಲಿದ್ದ ಟೀಂ ಇಂಡಿಯಾಗೆ ನಿರಾಸೆ

udayavani youtube

ಫ್ರೆಂಡ್ ಪೆನ್ಸಿಲ್ ಕದ್ದ ಎಂದು ಪೊಲೀಸ್ ಠಾಣೆಗೆದೂರು ದಾಖಲಿಸಲು ಹೋದ ಪುಟ್ಟ ವಿದ್ಯಾರ್ಥಿಗಳು!

udayavani youtube

ಕಟ್ಟಡ ತೆರವಿಗೆ ಕೂಡಿ ಬರದ ಗಳಿಗೆ : ಅವಘಡ ಸಂಭವಿಸುವ ಮೊದಲು ಎಚ್ಚೆತ್ತುಕೊಳ್ಳಿ

ಹೊಸ ಸೇರ್ಪಡೆ

ಪಣಜಿ: ಸಾಮ್ರಾಟ್ ಸ್ಟೂಡೆಂಟ್ ಆಫ್ ದಿ ಇಯರ್ ಪ್ರಶಸ್ತಿ ಪಡೆದ ಉತ್ತರ ಕನ್ನಡದ ವಿದ್ಯಾರ್ಥಿನಿ

ಪಣಜಿ: ಸಾಮ್ರಾಟ್ ಸ್ಟೂಡೆಂಟ್ ಆಫ್ ದಿ ಇಯರ್ ಪ್ರಶಸ್ತಿ ಪಡೆದ ಉತ್ತರ ಕನ್ನಡದ ವಿದ್ಯಾರ್ಥಿನಿ

21protest

ಸರ್ಕಾರದ ವಿರುದ್ದ ವಿದ್ಯಾರ್ಥಿಗಳ ತೀವ್ರ ಆಕ್ರೋಶ

ನಮ್ಮ ಮೆಟ್ರೋ

ಮೆಟ್ರೋ ಸೇವೆಯಲ್ಲಿ ವ್ಯತ್ಯಯ

Untitled-2

ಪಾದಯಾತ್ರೆಯಿಂದ ಆರಂಭವಾಯಿತು ಲಕ್ಷದೀಪೋತ್ಸವ

say no to lockdown

ಒಮಿಕ್ರಾನ್: “ಬಲಿಷ್ಠರಾಗಿದ್ದೇವೆ, ಲಾಕ್ ಡೌನ್ ಬೇಡ” ಎನ್ನುತ್ತಿರುವ ನೆಟ್ಟಿಗರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.