ಉತ್ತಮ ಇಳುವರಿ ಬಂದ್ರೂ ಬಾಳೆಹಣ್ಣಿಗೆ ಬರಲಿಲ್ಲ ಬೆಲೆ

Team Udayavani, Dec 17, 2021, 10:10 AM IST

1banana

ಕಲಬುರಗಿ: ಪ್ರಸಕ್ತ ವರ್ಷ ಹೆಚ್ಚಿನ ಮಳೆ ಯಾಗಿದ್ದರಿಂದ ಬಾಳೆ ಬೆಳೆ ಉತ್ತಮವಾಗಿ ಬಂದಿದ್ದು, ಆದರೆ ಬೆಲೆ ಕುಸಿತವಾಗಿದ್ದರಿಂದ ರೈತ ಪಾತಾಳಕ್ಕೆ ಇಳಿಯುವಂತಾಗಿದೆ.

ಇದಕ್ಕೂ ಮುಂಚೆ ಕೆ.ಜಿ ಬಾಳೆಹಣ್ಣಿಗೆ 8ರಿಂದ 10ರೂ. ಬೆಲೆಯಿತ್ತು. ಆದರೆ ಈಗ ಕೆಜಿಗೆ 2ರಿಂದ 3ರೂ.ಗೂ ಯಾರೂ ಕೇಳದಂತಾಗಿದೆ. ಹೀಗಾಗಿ ಲಕ್ಷಗಟ್ಟಲೆ ಖರ್ಚು ಮಾಡಿದ ಹಣ ನೀರಲ್ಲಿ ಹೋಮ ಮಾಡಿದಂತಾಗಿದೆ.

ಕೆ.ಜಿಗೆಎರಡು ರೂ.ಗೆಬಾಳೆಹಣ್ಣುಇಳಿದಿದ್ದರಿಂದ ಅದರ ಕೂಲಿ ಖರ್ಚು ಬರೋದಿಲ್ಲ ಎಂದು ತಿಳಿದುಕೊಂಡು ಬಾಳೆಹಣ್ಣು ಹಾಗೆ ಬಿಟ್ಟಿದ್ದರಿಂದ ಬಾಳೆ ಗಿಡದಲ್ಲೇ ಕೊಳೆತು ಹಣ್ಣು ಕೊಳೆಯುತ್ತಿರುವುದರಿಂದ ಹುಳುಗಳಾಗಿದ್ದರಿಂದ ಗಬ್ಬೆದ್ದು ವಾಸನೆ ಬರುತ್ತಿರುವುದರಿಂದ ರೈತ ಹೊಲದತ್ತ ಹೆಜ್ಜೆ ಇಡದಂತಾಗಿದೆ.

ಇನ್ನು ಕೆಲವರು ಬಾಳೆಹಣ್ಣುಗಳನ್ನು ದನಕರುಗಳಿಗೆ ತಿನ್ನಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಆಳಂದ, ಅಫಜಲಪುರ, ಕಲಬುರಗಿ ತಾಲೂಕಿನಲ್ಲಿ ಬಾಳೆ ಹೆಚ್ಚಿನ ಕ್ಷೇತ್ರದಲ್ಲಿ ಬೆಳೆಯಲಾಗುತ್ತದೆ. ಜಿಲ್ಲೆಯಲ್ಲಿ ಎರಡು ಸಾವಿರಕ್ಕೂ ಅಧಿಕ ಹೆಕ್ಟೇರ್‌ದಲ್ಲಿ ಬಾಳೆ ಬೆಳೆಯಲಾಗಿದೆ. ಆಳಂದ ತಾಲೂಕಿನ ನಿಂಬಾಳ ಗ್ರಾಮದಲ್ಲಿ ನೂರಾರು ರೈತರು ಬಾಳೆ ಬೆಳೆದಿದ್ದು, ಈಗ ಬೆಲೆ ಪಾತಾಳಕ್ಕೆ ಇಳಿದಿದ್ದರಿಂದ ರೈತರೆಲ್ಲ ಕಂಗಾಲಾಗಿದ್ದಾರಲ್ಲದೇ ನಮಗೆ ಯಾರು ದಿಕ್ಕು ಎಂದು ಕಣ್ಣೀರು ಹಾಕುತ್ತಿದ್ದಾರೆ.

ಕಳೆದೆರಡು ವರ್ಷಗಳಿಂದ ಲಾಕ್‌ಡೌನ್‌ದಿಂದ ನಷ್ಟ ಅನುಭವಿಸಿದ್ದರಿಂದ ಬೆಲೆ ಇಳಿಕೆಯಿಂದ ಮತ್ತಷ್ಟು ಸಾಲ ಹೆಚ್ಚಾಗಿ ಹೊಲ ಮಾರುವ ಸ್ಥಿತಿಗೆ ಬಂದಿದ್ದೇವೆ ಎನ್ನುತ್ತಾರೆ ರೈತರು.

ಬಾಳೆಹಣ್ಣು ವರ್ಷದುದ್ದಕ್ಕೂ ಮಾರು ಕಟ್ಟೆಯಲ್ಲಿ ದೊರಕುತ್ತದೆ. ರೈತರ ಬಳಿ ಎರಡು ರೂ. ಕೆ.ಜಿಗೆ ಕೇಳದಂತಾದರೂ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಮಾತ್ರ ಕಡಿಮೆ ಬೆಲೆಗೆ ಸಿಗುತ್ತಿಲ್ಲ. ಮಾರುಕಟ್ಟೆಯಲ್ಲಿ 30ರಿಂದ 40ರೂ.ಗೆ ಮಾರಾಟವಾಗುತ್ತಿದೆ. ಆದರೆ ಇಲ್ಲಿ ರೈತರು ಹಾಗೂ ಗ್ರಾಹಕರು ಇಬ್ಬರೂ ಶೋಷಣೆಗೆ ಒಳಗಾಗುವಂತಾಗಿದೆ. ಈಗಂತೂ ಲಾಕ್‌ಡೌನ್‌ ಇಲ್ಲ. ಮಾರುಕಟ್ಟೆ ಯಥಾಸ್ಥಿತಿಯಲ್ಲಿದೆ. ಆದರೆ ಬೆಲೆ ಏಕೆ ಕುಸಿತವಾಗಿದೆ ಎಂಬುದೇ ತಿಳಿಯದಂತೆ ಆಗಿದೆ.

ಶಾಲೆಯಲ್ಲಿ ಬಾಳೆಹಣ್ಣು

ಮಕ್ಕಳಲ್ಲಿ ಪೌಷ್ಟಿಕಾಂಶ ಕಡಿಮೆಯಿದೆ ಎನ್ನುವ ಕಾರಣದ ಹಿನ್ನೆಲೆಯಲ್ಲಿ ದರ ಹೆಚ್ಚಳವಾಗಬೇಕಿತ್ತು. ಆದರೆ ಉಲ್ಟಾ ಎನ್ನುವಂತೆ ಬೆಲೆ ಕುಸಿತವಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಬಾಳೆ ಹಣ್ಣು ಬೆಳೆಗಾರರಿಂದ ನೇರವಾಗಿ ಖರೀದಿ ಮಾಡಿದರೆ ಸ್ವಲ್ಪ ಪ್ರಮಾಣದಲ್ಲಾದರೂ ರೈತರಿಗೆ ಉತ್ತಮ ಬೆಲೆ ಸಿಗಬಹುದು ಎನ್ನಲಾಗುತ್ತಿದೆ. ಆದರೆ ಆ ರೀತಿ ಆಗುತ್ತಿಲ್ಲ. ಹೀಗಾಗಿ ಬಾಳೆ ಬೆಳೆದ ರೈತರು ತಲೆಮೇಲೆ ಕೈಹೊತ್ತು ಕುಳಿತುಕೊಳ್ಳುವಂತೆ ಆಗಿದೆ.

ತೋಟಗಾರಿಕೆ ಬೆಳೆಗಳಿಗೂ ಕನಿಷ್ಟ ಬೆಂಬಲ ಬೆಲೆ (ಎಂಎಸ್‌ಪಿ) ನಿಗದಿ ಮಾಡಬೇಕೆನ್ನುತ್ತಾರೆ ನಿಂಬಾಳದಲ್ಲಿನ ಬಾಳೆಬೆಳೆದ ಗಿರಿ ಪಾಟೀಲ, ಬಾಬು ಪುರಾಣಿಕಮಠ, ಶರಣಪ್ಪ ವಡ್ಡಳ್ಳಿ, ನಿಂಗಯ್ಯ ಹಿರೇಮಠ.

ನೇರವಾಗಿ ಖರೀದಿ ಮಾಡಿದರೆ ಸ್ವಲ್ಪ ಪ್ರಮಾಣದಲ್ಲಾದರೂ ರೈತರಿಗೆ ಉತ್ತಮ ಬೆಲೆ ಸಿಗಬಹುದು ಎನ್ನಲಾಗುತ್ತಿದೆ. ಆದರೆ ಆ ರೀತಿ ಆಗುತ್ತಿಲ್ಲ. ಹೀಗಾಗಿ ಬಾಳೆ ಬೆಳೆದ ರೈತರು ತಲೆಮೇಲೆ ಕೈಹೊತ್ತು ಕುಳಿತುಕೊಳ್ಳುವಂತೆ ಆಗಿದೆ. ತೋಟಗಾರಿಕೆ ಬೆಳೆಗಳಿಗೂ ಕನಿಷ್ಟ ಬೆಂಬಲ ಬೆಲೆ (ಎಂಎಸ್‌ಪಿ) ನಿಗದಿ ಮಾಡಬೇಕೆನ್ನುತ್ತಾರೆ. ನಿಂಬಾಳದಲ್ಲಿನ ಬಾಳೆಬೆಳೆದ ಗಿರಿ ಪಾಟೀಲ, ಬಾಬು ಪುರಾಣಿಕಮಠ, ಶರಣಪ್ಪ ವಡ್ಡಳ್ಳಿ, ನಿಂಗಯ್ಯ ಹಿರೇಮಠ.

ಬಾಳೆಬೆಳೆ ವಿಸ್ತಾರ ಸ್ವಲ್ಪಹೆಚ್ಚಳವಾಗಿದೆ. ಜತೆಗೆ ಬೇರೆ ರಾಜ್ಯಗಳಿಗೆ ಸಾಗಾಣೆ ಆಗುತ್ತಿತ್ತು. ಆದರೆ ಮೊದಲಿನ ಹಾಗೆ ಸಾಗಾಣಿಕೆ ಆಗುತ್ತಿಲ್ಲ. ಇಷ್ಟು ದಿನ 10ರಿಂದ 12ರೂಗೆಕೆ.ಜಿ ಬಾಳೆಹಣ್ಣು ಮಾರಾಟವಾಗಿದೆ. ಆದರೀಗ ದರಕಡಿಮೆಯಾಗಿದೆ ಎಂಬುದು ಗಮನಕ್ಕೆ ಬಂದಿದೆ. 2ರಿಂದ 3ರೂ ಕೆ.ಜಿ ಆಗಿರುವುದು ಗಮನಕ್ಕೆ ಬಂದಿಲ್ಲ. ಎಪಿಎಂಸಿಯಲ್ಲಿ ದರದಕುರಿತು ವಿಚಾರಿಸಲಾಗುವುದು. -ಪ್ರಭುರಾಜಎಚ್‌.ಎಸ್‌., ಉಪನಿರ್ದೇಶಕ, ತೋಟಗಾರಿಕೆ ಇಲಾಖೆ

ಎರಡು ವರ್ಷ ಲಾಕ್‌ ಡೌನ್‌ದಿಂದ ಮೊದಲೇ ನಷ್ಟ ಅನುಭವಿಸಿದ್ದೇವೆ. ಈಗ ಬೆಲೆ ಕುಸಿತದಿಂದ ದಿಕ್ಕೇ ತೋಚದಂತಾಗಿದೆ. ಹೆಚ್ಚುತ್ತಿರುವ ಸಾಲದಿಂದ ಹೊಲ ಮಾರುವ ಸ್ಥಿತಿ ನಿರ್ಮಾಣವಾಗಿದೆ. -ಮಲ್ಲಿನಾಥ ಪಾಗಾ, ಬಾಳೆ ಬೆಳೆದ ರೈತ, ನಿಂಬಾಳ

-ಹಣಮಂತರಾವ ಭೈರಾಮಡಗಿ

ಟಾಪ್ ನ್ಯೂಸ್

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು

BSYಗೆ ಮೋದಿ ಬಗ್ಗೆ ಗೌರವ ಇದ್ದರೆ ಮಗನಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ

BSYಗೆ ಮೋದಿ ಬಗ್ಗೆ ಗೌರವ ಇದ್ದರೆ ಮಗನಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ

Kohli IPL 2024

IPL; 10 ಸೀಸನ್‌, 400 ರನ್‌: ಕೊಹ್ಲಿ ಸಾಧನೆ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

1-wewqewq

T20 World Cup; ಯುವರಾಜ್‌ ಸಿಂಗ್‌ ರಾಯಭಾರಿ: ಐಸಿಸಿ ಘೋಷಣೆ 

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

1-ewewqewq

Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ

yatnal

Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು

BSYಗೆ ಮೋದಿ ಬಗ್ಗೆ ಗೌರವ ಇದ್ದರೆ ಮಗನಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ

BSYಗೆ ಮೋದಿ ಬಗ್ಗೆ ಗೌರವ ಇದ್ದರೆ ಮಗನಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ

Kohli IPL 2024

IPL; 10 ಸೀಸನ್‌, 400 ರನ್‌: ಕೊಹ್ಲಿ ಸಾಧನೆ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.