Udayavni Special

ಯಾದಗಿರಿ ಜಿಲ್ಲಾಡಳಿತದಿಂದ ನಿಯಮ ಇನ್ನಷ್ಟು ಬಿಗಿ

ಆದೇಶ ಪಾಲಿಸಲು ಕಟ್ಟುನಿಟ್ಟಿನ ಸೂಚನೆಸಂಜೆ 4ರ ವರೆಗೆ ಮಾತ್ರ ತರಕಾರಿ-ದಿನಸಿ ಲಭ್ಯ ಜಿಲ್ಲಾದ್ಯಂತ ಎಲ್ಲೆಡೆ ಕಟ್ಟೆಚ್ಚರ

Team Udayavani, Apr 7, 2020, 12:13 PM IST

07-April-05

ಯಾದಗಿರಿ: ಜಿಲ್ಲಾ ಕೇಂದ್ರದಲ್ಲಿ ತಳ್ಳುಗಾಡಿಗಳಲ್ಲಿ ತರಕಾರಿ ಮಾರುತ್ತಿದ್ದ ವ್ಯಾಪಾರಿಗಳು ಸಂಜೆ 4 ಗಂಟೆ ಸುಮಾರಿಗೆ ವ್ಯಾಪಾರ ಬಂದ್‌ ಮಾಡಿದರು.

ಯಾದಗಿರಿ: ಕೊರೊನಾ ಪರಿಣಾಮಕಾರಿಯಾಗಿ ತಡೆಗಟ್ಟಲು ಜಿಲ್ಲಾಡಳಿತ ಅಗತ್ಯ ಮುನ್ನೆಚ್ಚರಿಕೆ ಕ್ರಮ ವಹಿಸಿದ್ದು, ಹಂತ ಹಂತವಾಗಿ ನಿಯಮ ಬಿಗಿಗೊಳಿಸಿದೆ. ಇದೀಗ ಏ.6ರಿಂದ ಕೆಲವು ನಿಯಮಗಳನ್ನು ಪರಿಷ್ಕರಿಸಿ ಜಿಲ್ಲಾಡಳಿತ ಕಟ್ಟುನಿಟ್ಟಾಗಿ ಪಾಲಿಸುವಂತೆ ಆದೇಶ ಹೊರಡಿಸಿದೆ. ಜಿಲ್ಲೆಯಾದ್ಯಂತ ಬೆಳಗ್ಗೆ 4ರಿಂದ ಸಂಜೆ 4 ಗಂಟೆಯವರೆಗೆ ಮಾತ್ರ ದಿನಬಳಕೆಯ ದಿನಸಿ, ತರಕಾರಿ, ಹಣ್ಣು-ಹಂಪಲುಗಳ ಅಂಗಡಿಗಳು ತೆರೆದಿರಲಿವೆ. ಇತರೆ ಅಂಗಡಿ-ಮುಂಗಟ್ಟುಗಳನ್ನು ತೆರೆಯುವುದನ್ನು ನಿಷೇಧಿ ಸಲಾಗಿದೆ.

ಕಲಬುರಗಿ ಜಿಲ್ಲೆಯಲ್ಲಿ ಕೋವಿಡ್‌-19ಗೆ ಒಬ್ಬರು ಮೃತಪಟ್ಟು ಹಾಗೂ ನಾಲ್ವರಲ್ಲಿ ಸೋಂಕು ಕಂಡುಬಂದಿರುವ ಹಿನ್ನೆಲೆಯಲ್ಲಿ ಹಾಗೂ ಜಿಲ್ಲೆಯ ನೆರೆ ರಾಜ್ಯಗಳ ಜಿಲ್ಲೆಗಳಲ್ಲಿ ಕೋವಿಡ್‌-19 ಕೊರೊನಾ ವೈರಾಣು ಸೋಂಕು ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವುದರಿಂದ ಏ.14ರ ಮಧ್ಯರಾತ್ರಿಯವರೆಗೆ ಜಿಲ್ಲೆಯ ಸಾರ್ವಜನಿಕರು ಅನುಸರಿಸಬೇಕಾದ ಅನುಸರಣ ಕ್ರಮಗಳನ್ನು ವಿಧಿಸಲಾಗಿದೆ.

ಈ ಹಿಂದೆ ಕೊರೊನಾ ವೈರಸ್‌ ಸೋಂಕಿನಿಂದಾಗಿ ಸಂಭವಿಸಬಹುದಾದ ಅನಾಹುತ ತಡೆಗಟ್ಟಲು ಮತ್ತು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಮಾ.21ರಿಂದ 31ರ ವರೆಗೆ ಕೈಗೊಳ್ಳಲಾಗಿದ್ದ ಕ್ರಮಗಳನ್ನು ಏ.14ರ ಮಧ್ಯರಾತ್ರಿಯವರೆಗೆ ಮುಂದುವರಿಸಲಾಗಿದೆ. ಪೆಟ್ರೋಲ್‌ ಬಂಕ್‌ಗಳು ಖಾಸಗಿ ವಾಹನಗಳಿಗೆ ಬೆಳಗ್ಗೆ 4 ಗಂಟೆಯಿಂದ ಸಂಜೆ 4ರ ವರೆಗೆ ಮಾತ್ರ ಇಂಧನ ವಿತರಿಸಬೇಕು. ಸರಕು ಸಾಗಾಣಿಕೆ ವಾಹನಗಳಿಗೆ ಈ ಆದೇಶ ಅನ್ವಯವಾಗುವುದಿಲ್ಲ.
ಸಾರ್ವಜನಿಕರಿಗೆ ಅಗತ್ಯ ವಸ್ತುಗಳ ಖರೀದಿಗೆ ಪ್ರತಿ ಮನೆಯಿಂದ ಓರ್ವ ಆರೋಗ್ಯವಂತ ವ್ಯಕ್ತಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಗುಂಪುಗೂಡದೇ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.

ಸಮಯ ನಿಗದಿಪಡಿಸಲಾಗಿದ್ದರೂ ನಿಷೇಧಾಜ್ಞೆ ಸಮಯದಲ್ಲಿ ಸಾರ್ವಜನಿಕರು ವಿನಾಕಾರಣ ತಿರುಗಾಡುವುದು, ಗುಂಪುಗೂಡುವಂತಿಲ್ಲ. ಅಂಗಡಿ ಮುಂದೆ ಜನಸಂದಣಿ ಸೇರದಂತೆ ವ್ಯಕ್ತಿಯಿಂದ ವ್ಯಕ್ತಿಗೆ 1 ಮೀ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಗುರುತು ಮಾಡುವ ಬಗ್ಗೆ ಕ್ರಮ ವಹಿಸುವುದು. ಇಲ್ಲದಿದ್ದಲ್ಲಿ ಅಂತಹ
ಅಂಗಡಿ ಮಾಲೀಕರನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುವುದು. ಈ ಆದೇಶವು ಆಸ್ಪತ್ರೆ ಸೇವೆಗಳು, ಪಶು ಆಸ್ಪತ್ರೆಗಳು, ಔಷಧ ಅಂಗಡಿಗಳು, ಸಿಲಿಂಡರ್‌ ವಿತರಣಾ ವ್ಯವಸ್ಥೆ, ದಿನ ಪತ್ರಿಕೆಗಳ ವಿತರಣೆ, ಬ್ಯಾಂಕ್‌/ಎ.ಟಿ.ಎಂ. ಗಳು, ಗೃಹ ಬಳಕೆಯ ಇಂಧನದ ಟ್ಯಾಂಕರ್‌ ಗಳು, ಪಡಿತರ ವಿತರಣೆ ಹಾಗೂ ಶವ ಸಂಸ್ಕಾರ ಇತ್ಯಾದಿ ಸೇವೆಗಳು ಹಾಗೂ ತುರ್ತು ಸೇವೆಗಳಿಗೆ ಅನ್ವಯವಾಗಲ್ಲ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.

ಮೈಕ್‌ ಮೂಲಕ ಜಾಗೃತಿ: ಜಿಲ್ಲಾಡಳಿತ ನಿಯಮಗಳನ್ನು ಸಾರ್ವಜನಿಕರು ಪಾಲಿಸುವ ನಿಟ್ಟಿನಲ್ಲಿ ಅಧಿ ಕಾರಿಗಳು ವಾಹನದಲ್ಲಿ ಮೈಕ್‌ ಮೂಲಕ ಜಾಗೃತಿ ಮೂಡಿಸಿದರು. ಪೆಟ್ರೋಲ್‌ ಬಂಕ್‌ನಲ್ಲಿ ಸಂಜೆ 4 ಗಂಟೆವರೆಗೆ ಮಾತ್ರ ಇಂಧನ ವಿತರಿಸುವಂತೆ ಸೂಚಿಸಿದರು. ತರಕಾರಿ ಮಾರಾಟ ಸ್ಥಳಕ್ಕೆ ತೆರಳಿ ತಿಳಿಸಿದ ಬಳಿಕ ಎಲ್ಲಾ ತರಕಾರಿ ಮಾರಾಟಗಾರರು ತಳ್ಳುಗಾಡಿಗಳನ್ನು ಬಂದ್‌ ಮಾಡುತ್ತಿರುವುದು ಕಂಡು ಬಂತು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕಿಕ್‌ಗೆ ನಲುಗಿದ ಬ್ರೆಜಿಲ್‌;ಸೋಂಕಿತರ ಲೆಕ್ಕದಲ್ಲಿ 2ನೇ ಸ್ಥಾನಕ್ಕೇರಿದ ಲ್ಯಾಟಿನ್‌ ಅಮೆರಿಕ ದೇಶ

ಕಿಕ್‌ಗೆ ನಲುಗಿದ ಬ್ರೆಜಿಲ್‌

ಲಾಕ್‌ಡೌನ್‌ ನಲ್ಲಿ ಕಳೆದ ಆಧಾರ್‌ ಪಡೆಯೋದು ಹೇಗೆ?

ಲಾಕ್‌ಡೌನ್‌ ನಲ್ಲಿ ಕಳೆದ ಆಧಾರ್‌ ಪಡೆಯೋದು ಹೇಗೆ?

ಬೆಂಗಳೂರಿಗಿಂತ ಧರ್ಮಶಾಲಾ ಸುರಕ್ಷಿತ ತಾಣ

ಬೆಂಗಳೂರಿಗಿಂತ ಧರ್ಮಶಾಲಾ ಸುರಕ್ಷಿತ ತಾಣ

ಕೋವಿಡ್- 19 ಸೇನಾನಿಗಳ ಸುರಕ್ಷೆಗೆ ಇನ್ನಷ್ಟು ಆದ್ಯತೆ ಬೇಕು

ಕೋವಿಡ್- 19 ಸೇನಾನಿಗಳ ಸುರಕ್ಷೆಗೆ ಇನ್ನಷ್ಟು ಆದ್ಯತೆ ಬೇಕು

ಜಾಗತಿಕ ಉತ್ಪಾದನಾ ಕೇಂದ್ರವಾಗಬಲ್ಲದೇ ಭಾರತ?

ಜಾಗತಿಕ ಉತ್ಪಾದನಾ ಕೇಂದ್ರವಾಗಬಲ್ಲದೇ ಭಾರತ?

ಮಹಾದಾಯಿ ಹುಲಿಗಳ ಸಾವಿಗೆ ವಿಷ ಕಾರಣ!

ಮಹಾದಾಯಿ ಹುಲಿಗಳ ಸಾವಿಗೆ ವಿಷ ಕಾರಣ!

ಇಂದಿನಿಂದ ದೇಶೀಯ ವಿಮಾನಯಾನ

ಇಂದಿನಿಂದ ದೇಶೀಯ ವಿಮಾನಯಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಯಾದಗಿರಿಯಲ್ಲಿ ರಸ್ತೆಗಿಳಿಯದ ಜನ

ಯಾದಗಿರಿಯಲ್ಲಿ ರಸ್ತೆಗಿಳಿಯದ ಜನ

ಯಾದಗಿರಿ ಸಂಜೆ ಮತ್ತೆ 18 ಜನರಲ್ಲಿ ಸೋಂಕು ಪತ್ತೆ

ಯಾದಗಿರಿ ಸಂಜೆ ಮತ್ತೆ 18 ಜನರಲ್ಲಿ ಸೋಂಕು ಪತ್ತೆ

ಯಾದಗಿರಿಗೆ ಸಂಡೇ ಶಾಕ್…! ಮತ್ತೆ ಆರು ಜನರಲ್ಲಿ ಸೋಂಕು ಪತ್ತೆ

ಯಾದಗಿರಿಗೆ ಸಂಡೇ ಶಾಕ್…! ಮತ್ತೆ ಆರು ಜನರಲ್ಲಿ ಸೋಂಕು ಪತ್ತೆ

ಶಹಾಪುರ ಕ್ವಾರಂಟೈನ್‌ನಲ್ಲಿಯೇ ಕೋವಿಡ್ ಮಹಾ ಸ್ಫೋಟ

ಶಹಾಪುರ ಕ್ವಾರಂಟೈನ್‌ನಲ್ಲಿಯೇ ಕೋವಿಡ್ ಮಹಾ ಸ್ಫೋಟ

ಯಾದಗಿರಿ ಕೋವಿಡ್-19 ಮಹಾಸ್ಪೋಟ: 72 ಹೊಸ ಸೋಂಕು ಪ್ರಕರಣ ಪತ್ತೆ

ಯಾದಗಿರಿ ಕೋವಿಡ್-19 ಮಹಾಸ್ಪೋಟ: 72 ಹೊಸ ಸೋಂಕು ಪ್ರಕರಣ ಪತ್ತೆ

MUST WATCH

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

udayavani youtube

ಈ ಮನೆಯಲ್ಲಿದೆ ಬೀದಿನಾಯಿಗಳಿಗೆ ಪ್ರೀತಿಯ ಆಸರೆ | Udayvani

udayavani youtube

Karnataka : A Farmer who quits Private Job & became Successful in Agriculture

udayavani youtube

MOTHERSDAY ಪ್ರಯುಕ್ತ ನಾಡಿನ ಎಲ್ಲಾ ಅಮ್ಮಂದಿರಿಗೆ ಶುಭಾಶಯವನ್ನು ಕೋರಿದ SHINE SHETTY

ಹೊಸ ಸೇರ್ಪಡೆ

ಬೈಲಹೊಂಗಲದಲ್ಲಿ ಉತ್ತಮ ಪ್ರತಿಕ್ರಿಯೆ

ಬೈಲಹೊಂಗಲದಲ್ಲಿ ಉತ್ತಮ ಪ್ರತಿಕ್ರಿಯೆ

ಮಂಗಳೂರು: ಇಂದಿನಿಂದ ದೇಶೀಯ ಯಾನ

bidi haavali

ನಾಯಿಗಳ ಹಾವಳಿ ತಪ್ಪಿಸಲು ಆಗ್ರಹ

ಆಯುರ್ವೇದದಿಂದ ಕೋವಿಡ್  ತಡೆ ಸಾಧ್ಯ

ಆಯುರ್ವೇದದಿಂದ ಕೋವಿಡ್ ತಡೆ ಸಾಧ್ಯ

ಸಂಪೂರ್ಣ ಲಾಕ್‌ಡೌನ್ ಉಡುಪಿ ನಾಗರಿಕರಿಂದ ಉತ್ತಮ ಸ್ಪಂದನೆ

ಸಂಪೂರ್ಣ ಲಾಕ್‌ಡೌನ್ ಉಡುಪಿ ನಾಗರಿಕರಿಂದ ಉತ್ತಮ ಸ್ಪಂದನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.